Summer Fashion: ಸಮ್ಮರ್ ಸೀಸನ್‌ಗೆ ತಕ್ಕಂತೆ ಬದಲಾಗುವುದು ಅಗತ್ಯ ಎಂದ ರಾಕುಲ್ ಪ್ರೀತ್ ಸಿಂಗ್
Summer Fashion: ಬೇಸಿಗೆಯ ಹವಮಾನಕ್ಕೆ ತಕ್ಕಂತೆ ಬದಲಾಗುವುದು ಅಗತ್ಯ. ಫ್ಯಾಷನ್‌ವೇರ್‌ಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮಾತ್ರವಲ್ಲ, ದಿನಚರಿ ಹಾಗೂ ಡಯಟ್‌ನಲ್ಲೂ ಸಾಕಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.


-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಯಾ ಸೀಸನ್‌ಗೆ ತಕ್ಕಂತೆ ಬದಲಾಗುವುದು ಅತ್ಯಗತ್ಯ ಎನ್ನುತ್ತಾರೆ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್. ಅವರ ಪ್ರಕಾರ, ಆಯಾ ಸೀಸನ್‌ಗಳಲ್ಲಿ ನಮ್ಮ ಔಟ್‌ಫಿಟ್‌ಗಳಲ್ಲಿ ಬದಲಾವಣೆ ತರುವುದು ಮಾತ್ರವಲ್ಲ, ದಿನನಿತ್ಯದ ಡಯಟ್ ಹಾಗೂ ಆರೈಕೆಯಲ್ಲೂ ಕೊಂಚ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ. ಮಾಧ್ಯಮಗಳಿಗೆ ಲೈಫ್‌ಸ್ಟೈಲ್ ಕುರಿತಂತೆ ನೀಡಿದ ಸಂದರ್ಶನವೊಂದರಲ್ಲಿ ಸಮ್ಮರ್ ಸೀಸನ್ ಫ್ಯಾಷನ್ (Summer Fashion), ಲೈಫ್‌ಸ್ಟೈಲ್ ಕುರಿತಂತೆ ಹಂಚಿಕೊಂಡಿದ್ದಾರೆ. ಸಮ್ಮರ್‌ನಲ್ಲಿ ಗ್ಲಾಮರಸ್ ಉಡುಪುಗಳನ್ನು ಧರಿಸಲು ಹೆಚ್ಚು ಅವಕಾಶ ಸಿಗುತ್ತದೆ. ಹಾಗಾಗಿ ನಾನಂತೂ ಈ ಸೀಸನ್‌ನಲ್ಲಿ ಸಾಕಷ್ಟು ಗ್ಲಾಮರಸ್ ಲುಕ್ ನೀಡುವ ಮಿನಿ, ಮೈಕ್ರೋ, ಶಾರ್ಡ್ಸ್, ಕಟೌಟ್, ಬಾರ್ಡಟ್ ಸೇರಿದಂತೆ ನಾನಾ ಬಗೆಯ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಅದರಲ್ಲೂ ಬ್ರಿಥೆಬಲ್ ಉಡುಗೆಗಳಿಗೆ ಪ್ರಾಮುಖ್ಯತೆ ನೀಡುತ್ತೇನೆ ಎಂದಿದ್ದಾರೆ ರಾಕುಲ್.

ಸನ್‌ನಿಂದ ಸಂರಕ್ಷಣೆ
ನಾನಂತೂ ಹೊರಗಡೆ ಹೋಗುವಾಗ ಕ್ಯಾಪ್, ಕಾಟನ್ ಸ್ಕಾರ್ಫ್, ಸನ್‌ಗ್ಲಾಸ್ ಹಾಗೂ ಕಾಟನ್ ಡ್ರೆಸ್‌ಗೆ ಪ್ರಾಮುಖ್ಯತೆ ನೀಡುತ್ತೇನೆ. ಇನ್ನು, ಸನ್‌ಸ್ಕ್ರೀನ್ ಲೋಷನ್ ಲೇಪಿಸದೇ ಹೊರಗೆ ನಾನು ಹೋಗುವುದೇ ಇಲ್ಲ ಎನ್ನುತ್ತಾರೆ ರಕುಲ್.

ಸಮ್ಮರ್ ಫಿಟ್ನೆಸ್
ಸಮ್ಮರ್‌ನಲ್ಲಿ ದೇಹವನ್ನು ಫಿಟ್ ಆಗಿರಿಸಿಕೊಳ್ಳುವುದು ಅತಿ ಸುಲಭ. ಹಾಗಾಗಿ, ನಾನು ಎಲ್ಲೆ ಇದ್ದರೂ ಫಿಟ್ನೆಸ್‌ಗೆ ಹೆಚ್ಚು ಸಮಯ ವ್ಯಯ ಮಾಡುತ್ತೇನೆ. ಹೆಚ್ಚು ಹೆಚ್ಚಾಗಿ ನೀರನ್ನು ಕುಡಿಯುತ್ತೇನೆ. ಇದು ದೇಹವನ್ನು ಸಮತೋಲನದಲ್ಲಿಡುತ್ತದೆ ಎಂದಿದ್ದಾರೆ ರಕುಲ್.
ಈ ಸುದ್ದಿಯನ್ನೂ ಓದಿ | Funky Jewel Fashion: ಗಾಳಿಯಲ್ಲಿ ಹಾರುವ ಬಣ್ಣ ಬಣ್ಣದ ಫೆದರ್ ಆಕ್ಸೆಸರೀಸ್
ರಾಕುಲ್ ಟ್ರಾವಲ್ ಟಿಪ್ಸ್
- ಆದಷ್ಟೂ ಲೂಸಾದ ಔಟ್‌ಫಿಟ್ ಆಯ್ಕೆ ಮಾಡಿ.
- ಈ ಸೀಸನ್‌ನಲ್ಲಿ ಹೆಚ್ಚು ಆಕ್ಸೆಸರೀಸ್ ಧರಿಸಬೇಡಿ.
- ಸಂಜೆ ವೇಳೆ ಆದಷ್ಟೂ ಓಡಾಡುವುದನ್ನು ಫಿಕ್ಸ್ ಮಾಡಿಕೊಳ್ಳಿ.
- ಸನ್‌ಸ್ಕ್ರೀನ್ ಹಾಗೂ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)