ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮೆಟ್ರೋದೊಳಗೆ ಊಟ ಮಾಡಿದ ಮಹಿಳೆಗೆ ಬಿತ್ತು ಭಾರೀ ದಂಡ; ಏನಿದು ಘಟನೆ?

ಇತ್ತೀಚೆಗೆ ಬೆಂಗಳೂರು ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕಳೊಬ್ಬಳು ಊಟ ಮಾಡಿದ್ದು, ಇದನ್ನು ಸಹ ಪ್ರಯಾಣಿಕರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವೈರಲ್(Viral Video) ಆಗಿದೆ. ಹೀಗಾಗಿ ಮಹಿಳೆಗೆ ಭದ್ರತಾ ಸಿಬ್ಬಂದಿ 500ರೂ. ದಂಡ ವಿಧಿಸಿದ್ದಾರೆ.

ಮೆಟ್ರೋದೊಳಗೆ ಊಟ ಮಾಡಿ ದಂಡ ತೆತ್ತ ಮಹಿಳೆ!

Profile pavithra Apr 28, 2025 4:48 PM

ಬೆಂಗಳೂರು: ಮೆಟ್ರೋದಲ್ಲಿ ಡ್ಯಾನ್ಸ್‌ ಮಾಡುವುದು, ಜಗಳವಾಡುವುದು, ಹೊಡೆದಾಡಿಕೊಳ್ಳುವುದು ಈ ತರಹದ ಸುದ್ದಿಗಳು ಆಗಾಗ ವೈರಲ್‌ ಆಗುತ್ತಿರುತ್ತದೆ. ಇದೀಗ ಬೆಂಗಳೂರು ಮೆಟ್ರೋದಲ್ಲಿ ಊಟ ಮಾಡಿದ್ದ ಮಹಿಳಾ ಪ್ರಯಾಣಿಕಳೊಬ್ಬಳ ವಿಡಿಯೊವೊಂದು ವೈರಲ್‌ ಆಗಿದೆ. ಅರೇ... ಅದರಲ್ಲಿ ಏನು ವಿಶೇಷ ಅಂದುಕೊಳ್ಳುತ್ತಿದ್ದೀರಾ...? ಅದೇನಂದ್ರೆ, ಮೆಟ್ರೋದಲ್ಲಿ ಊಟ ಮಾಡಿದ ಮಹಿಳೆಗೆ ಭಾರೀ ದಂಡ ವಿಧಿಸಲಾಗಿದೆಯಂತೆ. ಶನಿವಾರ (ಏಪ್ರಿಲ್ 26) ಮಾದಾವರ ನಿಲ್ದಾಣದಿಂದ ಮಾಗಡಿ ರಸ್ತೆಗೆ ಪ್ರಯಾಣಿಸಲು ಮೆಟ್ರೋ ಹತ್ತಿದ್ದ ಮಹಿಳಾ ಪ್ರಯಾಣಿಕಳು ಮೆಟ್ರೋದಲ್ಲಿ ಕುಳಿತು ಊಟ ಮಾಡುವುದನ್ನು ಸಹ ಪ್ರಯಾಣಿಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ವೈರಲ್(Viral Video) ಆಗಿದೆ. ಹೀಗಾಗಿ ಮಹಿಳೆಗೆ 500ರೂ ದಂಡ ವಿಧಿಸಲಾಗಿದೆ.

ವೈರಲ್ ಆದ ವಿಡಿಯೊದಲ್ಲಿ ಮಹಿಳೆ ಮೆಟ್ರೋದೊಳಗಿನ ಸೀಟ್‌ನಲ್ಲಿ ಕುಳಿತು ಊಟ ಮಾಡುವುದು ಸೆರೆಯಾಗಿದೆ. ಮೆಟ್ರೋ ನಿಯಮಗಳ ಉಲ್ಲಂಘನೆಯನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಮಾದಾವರ ನಿಲ್ದಾಣದಲ್ಲಿ ಮಹಿಳೆಯನ್ನು ನಿಲ್ಲಿಸಿ ದಂಡ ವಿಧಿಸಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಕಸವನ್ನು ಕಡಿಮೆ ಮಾಡಲು ಮೆಟ್ರೋ ಆವರಣದಲ್ಲಿ ಆಹಾರ ಮತ್ತು ಪಾನೀಯಗಳ ಸೇವನೆಗೆ ಅನುಮತಿ ನೀಡಿಲ್ಲ ,ಪ್ರಯಾಣಿಕರು ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಮೆಟ್ರೋ ಅಧಿಕಾರಿ ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋ ಪ್ರತಿಬಾರಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿರುತ್ತದೆ. ಈ ಹಿಂದೆ ನಿಲ್ದಾಣದಲ್ಲಿ ಯುವಕ ಯುವತಿಯರಿಬ್ಬರು ಸಾರ್ವಜನಿಕವಾಗಿಯೇ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೆಟ್ರೋ ಹತ್ತಲು ಸಾಲಿನಲ್ಲಿ ನಿಂತಿರುವ ಜೋಡಿ ಅಸಭ್ಯವಾಗಿ ವರ್ತಿಸಿದ್ದರಂತೆ. ಇವರಿಬ್ಬರ ಈ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದರು. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಫ್ಲ್ಯಾಟ್ ಫಾರ್ಮ್ -3ಯಲ್ಲಿ ಈ ಘಟನೆ ನಡೆದಿದೆಯಂತೆ.

ಈ ಸುದ್ದಿಯನ್ನೂ ಓದಿ:Viral Video: ನೋಡೋಕೆ ಹೈ-ಫೈ ರೆಸ್ಟೋರೆಂಟ್‍... ಒಳಗೆ ಹೋದ್ರೆ ಎಲ್ಲಿ ನೋಡಿದ್ರಲ್ಲಿ ಜಿರಳೆ- ಶಾಕಿಂಗ್‌ ವಿಡಿಯೊ ಇಲ್ಲಿದೆ

ಹಾಗೇ ಮತ್ತೊಂದು ಘಟನೆಯಲ್ಲಿ ಚಲಿಸುತ್ತಿದ್ದ ಬೆಂಗಳೂರು ಮೆಟ್ರೋದಲ್ಲಿ ಯುವಕ- ಯುವತಿ ಪರಸ್ಪರ ಬಿಗಿದಪ್ಪಿದ್ದ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದರು. ಮೆಟ್ರೋ ರೈಲಿನಲ್ಲಿ ಯುವಕ-ಯುವತಿಯರಿಬ್ಬರು ಪರಸ್ಪರ ಆಲಂಗಿಸಿಕೊಂಡು ಮುತ್ತಿಟ್ಟುಕೊಂಡಿದ್ದರು. ಇದನ್ನು ಸಹಪ್ರಯಾಣಿಕರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಅವರ ಈ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.