Sreeleela: ಮುದ್ದಾದ ಹೆಣ್ಣು ಮಗುವಿನ ಜೊತೆ ಪೋಸ್ಟ್ ಹಂಚಿಕೊಂಡ ನಟಿ ಶ್ರೀಲೀಲಾ
ಕನ್ನಡದ ಕಿಸ್ ಸಿನಿಮಾ ಮೂಲಕ ಸಿನಿ ಇಂಡಸ್ಟ್ರಿಗೆ ಕಾಲಿಟ್ಟ ನಟಿ ಶ್ರೀಲೀಲಾ ಇದೀಗ ಸಿನಿಮಾ ಇಂಡಸ್ಟ್ರಿಯ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಟಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಕೂಡ ಗುರುತಿಸಿಕೊಂಡಿರುವ ನಟಿ ಶ್ರೀಲೀಲಾ ಕೇವಲ ಸಿನಿಮಾವಲ್ಲದೇ ವೈಯಕ್ತಿಕ ಜೀವನದಲ್ಲೂ ಸದಾ ಸುದ್ದಿಯಲ್ಲಿ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಶ್ರೀ ಲೀಲಾ ಇದೀಗ ಹೆಣ್ಣು ಮಗುವೊಂದನ್ನು ಮುದ್ದಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.



ನಟಿ ಶ್ರೀಲೀಲಾ ಅವರು ಹಂಚಿಕೊಂಡಿರುವ ಎರಡು ಪೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ. ಚಿತ್ರದಲ್ಲಿ ನಟಿ ಪುಟ್ಟ ಹೆಣ್ಣು ಮಗು ಜೊತೆ ಕಾಣಿಸಿಕೊಂಡಿದ್ದಾರೆ. ಇನ್ನೂ ಮಗುವಿನ ಬಗ್ಗೆ ಅವರು ಹೆಚ್ಚಾಗಿ ಬಹಿರಂಗಪಡಿಸಲಿಲ್ಲ. ಆದರೆ ಪುಟ್ಟ ಮಗು ತನ್ನ ಮನೆಗೆ ಹೊಸ ಸದಸ್ಯರಂತೆ ಸೇರ್ಪಡೆಯಾಗಿದೆ ಎಂದು ಬರೆದುಕೊಂಡಿದ್ದಾರೆ..

ನಟಿ ಶ್ರೀ ಲೀಲಾ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿವೆ. ಶ್ರೀಲೀಲಾ ಈ ಮಗುವನ್ನು ಮನೆಯ ಹೊಸ ಸದಸ್ಯೆ ಎಂದು ಬಣ್ಣಿಸಿದ್ದಾರೆ. ಶ್ರೀಲೀಲಾ ಮಗುವನ್ನು ಪ್ರೀತಿಯಿಂದ ಅಪ್ಪಿಕೊಳ್ಳುವುದನ್ನು ಕಾಣಬಹುದು

ಮೊದಲ ಚಿತ್ರದಲ್ಲಿ ನಟಿ ಹೆಣ್ಣು ಮಗುವಿನ ಕೆನ್ನೆಗೆ ಪ್ರೀತಿಯಿಂದ ಮುತ್ತಿಡುವುದನ್ನು ಕಾಣಬಹುದು. ಎರಡನೇ ಫೋಟೋದಲ್ಲಿ, ನಟಿ ಶ್ರೀ ಲೀಲಾ ಜೊತೆ ಮಗು ಕ್ಯೂಟ್ ಸ್ಮೈಲ್ ಮಾಡಿದೆ. ಈ ಫೋಟೋ ಹಂಚಿಕೊಂಡು ನಟಿ, ನಮ್ಮ ಮನೆಯಲ್ಲಿ ಹೊಸ ಸದಸ್ಯೆಯ ಸೇರ್ಪಡೆ, ನಮ್ಮ ಮನಸ್ಸನ್ನು ಸೆರೆಹಿಡಿಯುತ್ತಿದ್ದಾರೆ ಎಂದು ಕ್ಯಾಪ್ಚನ್ ಬರೆದುಕೊಂಡಿದ್ದಾರೆ.

ಈಗಾಗಲೇ ನಟಿ ಶ್ರೀ ಲೀಲಾ 21 ನೇ ವಯಸ್ಸಿನಲ್ಲಿ, ಅನಾಥಾಶ್ರಮದಿಂದ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. ಇದೀಗ ನಟಿ ಮೂರನೇ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆಯೇ ಎಂಬ ಪ್ರಶ್ನೆಯು ಅಭಿಮಾನಿಗಳನ್ನು ಕಾಡುತ್ತಿದ್ದು ಇನ್ನೂ ಮಗುವಿನ ಬಗ್ಗೆ ಹೆಚ್ಚಾಗಿ ನಟಿ ಬಹಿರಂಗಪಡಿಸಲಿಲ್ಲ.

ಈ ಪೋಸ್ಟ್ ಇದೀಗ ಅವರ ಅಭಿಮಾನಿಗಳ ಮನ ಗೆದ್ದಿದ್ದು ನಟಿಯ ಬಗ್ಗೆ ಮೆಚ್ಚುಗೆಯ ಕಮೆಂಟ್ ಮಾಡಿದ್ದಾರೆ. ಹೆಚ್ಚಿನ ಫಾಲೋವರ್ಸ್ ಕಾಮೆಂಟ್ ನಲ್ಲಿ ಹೃದಯದ ಎಮೋಜಿಗಳು ಮತ್ತು ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಫೋಟೋಗೆ ಅಭಿಮಾನಿ ಯೊಬ್ಬರು ಇಬ್ಬರಿಗೂ ಯಾರ ದೃಷ್ಟಿ ತಾಕದಿರಲಿ ಎಂದು ಕಮೆಂಟ್ ಮಾಡದ್ದಾರೆ. ಮತ್ತೊಬ್ಬರು ಮಗುವಿನೊಂದಿಗೆ ಮತ್ತಷ್ಟು ಮುದ್ದಾಗಿ ಕಾಣುತ್ತೀರಿ ಎಂದು ಬರೆದುಕೊಂಡಿದ್ದಾರೆ.

ಕಿಸ್' ಸಿನಿಮಾ ಮೂಲಕ ಸಿನಿ ಪ್ರಯಣ ಆರಂಭ ಮಾಡಿದ ನಟಿ ಕನ್ನಡ ಮತ್ತು ತೆಲುಗು ಚಿತ್ರೋದ್ಯಮಗಳಲ್ಲಿ ಮಿಂಚುತ್ತಿದ್ದಾರೆ. ನಟಿ ಮುಂಬರುವ ರವಿತೇಜ ಅವರ ಮಾಸ್ ಜತಾರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಅದರ ಜೊತೆ ಆಶಿಕಿ' ಚಿತ್ರದ ಮುಂದುವರಿದ ಭಾಗದಲ್ಲಿ ಕಾರ್ತಿಕ್ ಆರ್ಯನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ನಟಿಯ ಈ ಫೋಟೋಗಳು ಬಹಳಷ್ಟು ವೈರಲ್ ಆಗುತ್ತಿದ್ದು, ನಟಿಯ ಈ ಪೋಸ್ಟ್ ಗೆ ಅಭಿಮಾನಿಗಳು ಮೆಚ್ಚುಗೆ ನೀಡಿದ್ದಾರೆ