Akshaya Trutiya Special: ಅಕ್ಷಯ ತೃತೀಯಾಗೆ ಎಂಟ್ರಿ ನೀಡಿದ ಕಂಟೆಂಪರರಿ ಡೈಮಂಡ್ ಜ್ಯುವೆಲರಿಗಳು
Akshaya Trutiya Special: ಈ ಬಾರಿ ಅಕ್ಷಯ ತೃತೀಯಾಗೆ ಮಧ್ಯಮ ವರ್ಗದವರು ಕೊಳ್ಳಬಹುದಾದ ಬೆಲೆಯಲ್ಲಿ ಕಂಟೆಂಪರರಿ ವಿನ್ಯಾಸದ ಡೈಮಂಡ್ ಆಭರಣಗಳು ಜ್ಯುವೆಲರಿ ಲೋಕದಲ್ಲಿ ಕಾಲಿಟ್ಟಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಅಕ್ಷಯ ತೃತೀಯಾಗೆ (Akshaya Trutiya Special) ವೈವಿಧ್ಯಮಯ ಕಂಟೆಪರರಿ ಡಿಸೈನ್‌ನ ಡೈಮಂಡ್ ಜ್ಯುವೆಲರಿಗಳು ಎಂಟ್ರಿ ನೀಡಿವೆ. ಖುಷಿಯ ವಿಚಾರವೆಂದರೇ, ಶ್ರೀಮಂತರು ಮಾತ್ರವಲ್ಲ, ಮಧ್ಯಮ ವರ್ಗದವರು, ಕಾರ್ಪೋರೇಟ್ ಕ್ಷೇತ್ರದವರೂ ಖರೀದಿಸಿ ಧರಿಸಬಹುದಾದಂತಹ ವಿನ್ಯಾಸದಲ್ಲಿ ಕಂಟೆಂಪರರಿ ವಿನ್ಯಾಸದ ಫ್ಯಾಷನ್ ಡೈಮಂಡ್ ಜುವೆಲರಿಗಳು ಈ ಸೀಸನ್‌ನಲ್ಲಿ ಎಂಟ್ರಿ ನೀಡಿವೆ. ಸಿಂಪಲ್ ಸ್ಟಡ್ಸ್, ಅನಿಮಲ್, ಬರ್ಡ್ಸ್ ಇಯರಿಂಗ್ಸ್ ಹಾಗೂ ಅನ್ ಕಟ್ ಡೈಮಂಡ್ ರಿಂಗ್ಸ್ ಹಾಗೂ ಪೆಂಡೆಂಟ್‌ಗಳು ಮಹಿಳೆಯರ ಮನಸೆಳೆದಿವೆ.
ಎಲ್ಲಾ ಸಂದರ್ಭಗಳಲ್ಲೂ ಧರಿಸಬಹುದಾದಂತಹ ವಜ್ರದ ಹರಳುಗಳಿರುವ ಹೊಳೆಯುವ ಲೇಯರ್ ಡಿಸೈನ್‌ನ ನೆಕ್ಲೇಸ್, ಬಳೆಗಳು, ಪೆಂಡೆಂಟ್‌ಗಳು, ಚೈನ್‌ಗಳು ಈ ಬಾರಿ ಈ ಸೀಸನ್ ಹಾಗೂ ಜನರೇಷನ್‌ನವರಿಗೆ ಹೊಂದುವಂತಹ ವಿನ್ಯಾಸದಲ್ಲಿ ಆಗಮಿಸಿವೆ ಎನ್ನುತ್ತಾರೆ ವಜ್ರಾಭರಣ ಡಿಸೈನರ್ ರಾಶಿ ಜೈನ್. ಅವರು ಹೇಳುವಂತೆ, ಇಂದು ವಜ್ರಾಭರಣಗಳ ಖರೀದಿ ಕಷ್ಟವೇನಿಲ್ಲ! ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ, ಟ್ರೆಂಡಿ ಚಿನ್ನಾಭರಣಗಳನ್ನು ಖರೀದಿಸುವಂತೆ ಇವನ್ನೂ ಕೂಡ ಅತಿ ಸುಲಭವಾಗಿ ಖರೀದಿಸಬಹುದು ಎನ್ನುತ್ತಾರೆ.

ಟ್ರೆಡಿಷನಲ್ ಪ್ಲಸ್ ಕಂಟೆಂಪರರಿ
ಇದೀಗ ಟ್ರೆಡಿಷನಲ್ ಲುಕ್ ಜತೆಗೆ ಈ ಜನರೇಷನ್‌ಗೆ ಹೊಂದುವಂತಹ ಕಂಟೆಂಪರರಿ ಡಿಸೈನ್‌ನ ವಜ್ರದ ಆಭರಣಗಳು ಬಂದಿವೆ. ಇವು ಸಿಂಪಲ್ ಡಿಸೈನ್‌ನಲ್ಲಿ ದೊರೆಯುತ್ತಿವೆ.

ಶ್ರೀಮಂತರ ಚಾಯ್ಸ್‌ನಲ್ಲಿ ಆ್ಯಂಟಿಕ್ ಡೈಮಂಡ್
ಶ್ರೀಮಂತರ ಚಾಯ್ಸ್‌ನಲ್ಲಿರುವ ಐಷಾರಾಮಿ ಲುಕ್ ನೀಡುವಂತಹ ಆ್ಯಂಟಿಕ್ ಡೈಮಂಡ್ ಆಭರಣಗಳನ್ನು ಹೆಚ್ಚಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಸಾಮಾನ್ಯವಾಗಿ ಏಳು ರೀತಿಯ ಆಕಾರದ ವಜ್ರದ ಆಭರಣಗಳು (ಕಟ್ ಡೈಮಂಡ್) ಲಭ್ಯ. ಇನ್ನು ರೌಂಡ್, ಮಾಕ್ವಿಸ್, ಪ್ರಿನ್ಸೆಸ್, ಹೃದಯಾಕಾರ, ಅಂಡಾಕಾರ, ಪಚ್ಚೆ, ಪಿಯರ್, ಹೆಸರಿನವುಗಳು ಲಭ್ಯ. ಗಾಢ ನೀಲಿ, ರಿಚ್ ರೆಡ್, ಪಿಂಕ್, ಹಳದಿ ಮತ್ತು ಹಸಿರು ಬಣ್ಣದ ವಜ್ರದ ಆಭರಣಗಳು ಫ್ಯಾನ್ಸಿ ಆಭರಣಗಳಾಗಿ ಗುರುತಿಸಿಕೊಂಡಿವೆ ಎನ್ನುತ್ತಾರೆ ಜ್ಯುವೆಲರಿ ಮಾರಾಟಗಾರರು.

ಕಂಟೆಂಪರರಿ ವಿನ್ಯಾಸ
ನವೀನ ರೀತಿಯಲ್ಲಿ ವಿನ್ಯಾಸಗೊಳಿಸಿದ ವಜ್ರದ ಆಭರಣಗಳು ಈಗ ಫ್ಯಾಷನ್ ಜ್ಯುವೆಲರಿಯಾಗಿಯೂ ಬದಲಾಗಿದೆ. ಸಮಕಾಲೀನ, ನವೀನ ಮತ್ತು ಬಹುವಿನ್ಯಾಸದ ಆಭರಣಗಳು ಮಹಿಳೆಯರಿಗೆ ನಯಾ ಲುಕ್ ನೀಡುತ್ತವೆ.

ವಜ್ರದ ಆಭರಣ ಪ್ರಿಯರಿಗೆ ಇಲ್ಲಿವೆ ಸಿಂಪಲ್ ಟಿಪ್ಸ್
- ವಜ್ರದ ಆಭರಣಗಳನ್ನು ಖರೀದಿಸುವಾಗ ಕಟ್, ಕಲರ್, ಕ್ಲಾರಿಟಿ, ಆಕಾರವನ್ನು ಗುರುತಿಸಿ ಖರೀದಿಸಬೇಕಾಗುತ್ತದೆ. ಅವುಗಳಿಗೆ ಅನುಗುಣವಾಗಿಯೇ ಬೆಲೆಯೂ ನಿರ್ಧರಿಸಲ್ಪಡುತ್ತದೆ.
- ವಜ್ರಾಭರಣಗಳನ್ನು ಕೊಳ್ಳುವಾಗ ಸರ್ಟಿಫಿಕೇಟ್ ಮರೆಯದೇ ತೆಗೆದುಕೊಳ್ಳಿ.
- ವ್ರಜಾಭರಣಗಳ ರಿಸೇಲ್ ವ್ಯಾಲ್ಯೂ ತಿಳಿದುಕೊಳ್ಳಿ.
- ವಜ್ರಾಭರಣ ನಿರ್ವಹಣೆ ತಿಳಿದುಕೊಳ್ಳಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Akshaya Trutiya Special: ಅಕ್ಷಯ ತೃತೀಯಾ ಪ್ರಯುಕ್ತ ಬಂಗಾರ ಖರೀದಿಸುವವರು ತಿಳಿದುಕೊಳ್ಳಬೇಕಾದ ಅಂಶಗಳಿವು