ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS: ಐಪಿಎಲ್‌ ಫೈನಲ್‌ಗೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

RCB vs PBKS Match Preview: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಜೂನ್‌ 3 ರಂದು ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಆರ್‌ಸಿಬಿ ಹಾಗೂ ಪಿಬಿಕೆಎಸ್‌ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI ಅನ್ನು ಇಲ್ಲಿ ವಿವರಿಸಲಾಗಿದೆ.

ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI

Profile Ramesh Kote Jun 2, 2025 9:44 PM

ಅಹಮದಾಬಾದ್‌: ಚೊಚ್ಚಲ ಕಪ್‌ ಗೆಲ್ಲುವ ಉತ್ಸಾಹದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB) ತಂಡ ಜೂನ್‌ 3 ರಂದು ಇಲ್ಲಿನ ನರೇಂದ್ರ ಮೋಡಿ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಫೈನಲ್‌ನಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿದೆ. ಅದೇ ರೀತಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ತಂಡ ಕೂಡ ಲೀಗ್‌ ಹಂತದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದು ಇದೀಗ ಚೊಚ್ಚಲ ಐಪಿಎಲ್‌ ಟ್ರೋಫಿಯನ್ನು ಗೆಲ್ಲಲು ಎದುರು ನೋಡುತ್ತಿದೆ. ಟೂರ್ನಿಯ ನಾಕ್‌ಔಟ್‌ ಹಂತದಲ್ಲಿ ಈ ಎರಡೂ ತಂಡಗಳು ಎರಡನೇ ಬಾರಿ ಕಾದಾಟ ನಡೆಸಲಿವೆ. ಮೊದಲನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಆರ್‌ಸಿಬಿ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು.

ಪ್ರಸಕ್ತ ಟೂರ್ನಿಯಲ್ಲಿ ಆರ್‌ಸಿಬಿ ಹಾಗೂ ಪಿಬಿಕೆಎಸ್‌ ತಂಡಗಳು ಒಟ್ಟು ಮೂರು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ, ಪಂಜಾಬ್‌ ತಂಡ ಒಂದರಲ್ಲಿ ಗೆದ್ದಿದೆ. ಹಾಗಾಗಿ ಶ್ರೇಯಸ್‌ ಅಯ್ಯರ್‌ ಪಡೆಯ ಎದುರು ಆರ್‌ಸಿಬಿ ಮೇಲುಗೈ ಸಾಧಿಸಿದೆ. ಸತತ 18 ವರ್ಷಗಳಲ್ಲಿ ಈ ಎರಡೂ ತಂಡಗಳು ಆಡಿಕೊಂಡು ಬರುತ್ತಿವೆ. ಆದರೆ, ಒಂದೇ ಒಂದು ಬಾರಿಯೂ ಕಪ್‌ ಗೆದ್ದಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಈ ಬಾರಿ ಹೊಸ ತಂಡ ಚಾಂಪಿಯನ್‌ ಆಗುವುದು ಅತ್ಯಂತ ವಿಶೇಷವಾಗಿದೆ.

IPL 2025 Final: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?

ಅಂದ ಹಾಗೆ ಮೊದನೇ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಎದುರು ಸೋತಿದ್ದ ಪಂಜಾಬ್‌ ಕಿಂಗ್ಸ್‌ ತಂಡ, ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ಸ್‌ ಪಂಜಾಬ್‌ ಕಿಂಗ್ಸ್‌ ಎದುರು 5 ವಿಕೆಟ್‌ಗಳ ರೋಚಕ ಗೆಲುವು ಪಡೆದಿತ್ತು. ನಾಯಕ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಗೆಲುವಿನ ರೂವಾರಿಯಾಗಿದ್ದರು. ಇದೀಗ ಅದೇ ಲಯವನ್ನು ಆರ್‌ಸಿಬಿ ವಿರುದ್ಧ ಮುಂದುವರಿಸಲು ಪಿಬಿಕೆಎಸ್‌ ಎದುರು ನೋಡುತ್ತಿದೆ. ಆದರೆ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿರುವ ಆರ್‌ಸಿಬಿಯನ್ನು ಫೈನಲ್‌ನಲ್ಲಿ ಮಣಿಸುವುದು ಪಂಜಾಬ್ ಕಿಂಗ್ಸ್‌ಗೆ ಕಷ್ಟ ಸಾಧ್ಯ.

ಲಿಯಾಮ್‌ ಲಿವಿಂಗ್‌ಸ್ಟೋನ್‌ ಔಟ್‌, ಟಿಮ್‌ ಡೇವಿಡ್‌ ಇನ್‌

ಗಾಯದಿಂದಾಗಿ ಕಳೆದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಟೀಮ್‌ ಡೇವಿಡ್‌ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯಕ್ಕೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಹಾಗಾಗಿ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರು ಆಸೀಸ್‌ ಆಲ್‌ರೌಂಡರ್‌ಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗಬಹುದು. ಇನ್ನುಳಿದಂತೆ ಮೊಲದನೇ ಕ್ವಾಲಿಫೈಯರ್‌ ಆಡಿದ್ದ ಅದೇ ಆಟಗಾರರು ಮುಂದುವರಿಯಬಹುದು.

RCB vs PBKS Final: ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲಲಿ; ಎಚ್‌ಡಿಕೆ, ಡಿಕೆಶಿ ಸೇರಿ ಹಲವು ಗಣ್ಯರಿಂದ ಶುಭ ಹಾರೈಕೆ

2025ರ ಐಪಿಎಲ್‌ ಫೈನಲ್‌ಗೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ xi

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ರಜತ್‌ ಪಾಟಿದಾರ್‌ (ನಾಯಕ), ಲಿಯಾಮ್‌ ಲಿವಿಂಗ್‌ಸ್ಟೋನ್‌/ಟಿಮ್‌ ಡೇವಿಡ್‌, ಜಿತೇಶ್‌ ಶರ್ಮಾ (ವಿ.ಕೀ), ರೊಮ್ಯಾರಿಯೊ ಶೆಫರ್ಡ್‌, ಕೃಣಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌, ಜಾಶ್‌ ಹೇಝಲ್‌ವಿಡ್‌, ಸುಯಶ್‌ ಶರ್ಮಾ

ಇಂಪ್ಯಾಕ್ಟ್‌ ಪ್ಲೇಯರ್‌: ಮಯಾಂಕ್‌ ಅಗರ್ವಾಲ್‌

ಪಂಜಾಬ್‌ ಕಿಂಗ್ಸ್‌: ಪ್ರಿಯಾಂಶ್‌ ಆರ್ಯ, ಜಾಶ್ ಇಂಗ್ಲಿಸ್‌ (ವಿ.ಕೀ), ಶ್ರೇಯಸ್‌ ಅಯ್ಯರ್‌ (ನಾಯಕ), ನೆಹಾಲ್‌ ವಧೇರಾ, ಮಾರ್ಕಸ್‌ ಸ್ಟೋಯ್ನಿಸ್‌‌, ಶಶಾಂಕ್‌ ಸಿಂಗ್‌, ಅಝಮತ್‌ವುಲ್ಲಾ ಒಮರ್ಜಾಯ್‌, ಕೈಲ್‌ ಜೇಮಿಸನ್‌, ವೈಶಾಖ್‌ ವಿಜಯ್‌ಕುಮಾರ್‌, ಅರ್ಷದೀಪ್‌ ಸಿಂಗ್‌ ಸಿಂಗ್‌, ಯುಜ್ವೇಂದ್ರ ಚಹಲ್‌

ಇಂಪ್ಯಾಕ್ಟ್‌ ಪ್ಲೇಯರ್‌: ಪ್ರಬ್‌ಸಿಮ್ರಾನ್‌ ಸಿಂಗ್‌

RCB vs PBKS Final: ಫೈನಲ್‌ ಕಂಟಕದಿಂದ ಪಾರಾಗಿ ಕಪ್‌ ಗೆಲ್ಲಲಿ ಆರ್‌ಸಿಬಿ

ಪಂದ್ಯದ ವಿವರ

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌

ಫೈನಲ್‌ ಪಂದ್ಯ

ದಿನಾಂಕ: ಜೂನ್‌ 2025

ಸಮಯ: ಸಂಜೆ 07:30ಕ್ಕೆ

ಸ್ಥಳ: ನರೇಂದ್ರ ಮೋದಿ ಕ್ರೀಡಾಂಗಣ, ಅಹಮಾದಾಬಾದ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ ಹಾಟ್‌ಸ್ಟಾರ್‌