ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ತಾಯಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡವನನ್ನು ಕೊಚ್ಚಿ ಕೊಂದರು

Murder Case: ಶಿವಮೊಗ್ಗದ ಕುಂಸಿಯ ಮಲ್ಲೇಶಪ್ಪ ಎಂಬವರ ಎರಡನೇ ಪತ್ನಿಯ ಜೊತೆ ಕೊಲೆಯಾದ ವ್ಯಕ್ತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದರಿಂದ ಮಲ್ಲೇಶಪ್ಪನ ಇಬ್ಬರು ಮಕ್ಕಳು ವ್ಯಗ್ರರಾಗಿದ್ದರು. ನಿನ್ನೆ ಇಬ್ಬರೂ ಸೇರಿಕೊಂಡು ವಸಂತನನ್ನು ಕೊಚ್ಚಿ ಕೊಂದಿದ್ದಾರೆ.

ತಾಯಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡವನನ್ನು ಕೊಚ್ಚಿ ಕೊಂದರು

ಕೊಲೆಯಾದ ವಸಂತ

ಹರೀಶ್‌ ಕೇರ ಹರೀಶ್‌ ಕೇರ Jul 1, 2025 7:28 AM

ಶಿವಮೊಗ್ಗ: ತಮ್ಮ ತಾಯಿ ಜೊತೆ ಅನೈತಿಕ ಸಂಬಂಧ (illicit relationship) ಹೊಂದಿದ್ದ ವ್ಯಕ್ತಿಯನ್ನು ಮಕ್ಕಳಿಬ್ಬರು ಸೇರಿಕೊಂಡು ಬರ್ಬರವಾಗಿ ಕೊಲೆ (Murder Case) ಮಾಡಿದ್ದಾರೆ. ಶಿವಮೊಗ್ಗ (Shivamogga) ತಾಲೂಕಿನ ಕುಂಸಿಯ ಕುಂಬೇಶ್ವರ್ ಬೀದಿಯಲ್ಲಿ ವಾಸು ಅಲಿಯಾಸ್ ವಸಂತ್ (35) ಎಂಬವನನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುಂಸಿ ಪಟ್ಟಣದ ಕುಂಬೇಶ್ವರ ಬೀದಿಯಿಂದ ಎಕೆ ಕಾಲನಿಯ ವರೆಗೆ ಅಟ್ಟಾಡಿಸಿಕೊಂಡು ಆಕಾಶ್ ಮತ್ತು ಹರೀಶ್ ಎಂಬ ಸಹೋದರರಿಬ್ಬರು ಸೇರಿ ನಿನ್ನೆ (ಜೂನ್ 29) ವಸಂತನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

ಮಲ್ಲೇಶಪ್ಪ ಮತ್ತು ಆತನ ಮೊದಲ ಪತ್ನಿ ಮೃತಪಟ್ಟ ಬಳಿಕ ಮಲ್ಲೇಶಪ್ಪನ 2ನೇ ಹೆಂಡತಿಯೊಂದಿಗೆ ಕೊಲೆಯಾದ ವಸಂತ ಸಂಬಂಧ ಇಟ್ಟುಕೊಂಡಿದ್ದ. ನಿನ್ನೆ ಕುಡಿದು ಹೋಗಿ ಮಹಿಳೆ ಮನೆ ಬಳಿ ಕೂಗಾಡಿ ಗಲಾಟೆ ಮಾಡಿದ್ದ. ಇದು ಮೃತ ಮಲ್ಲೇಶಪ್ಪನ ಮೊದಲ ಹೆಂಡತಿ ಮಗ ಹರೀಶ್ ಮತ್ತು 2ನೇ ಪತ್ನಿಯ ಪುತ್ರ ಆಕಾಶ್ ಆಕ್ರೋಶಕ್ಕೆ ಕಾರಣವಾಗಿತ್ತು. ವಸಂತನ ಹತ್ಯೆಗೆ ಸ್ಕೆಚ್ ಹಾಕಿದ ಇವರು ಅದರಂತೆ ನಿನ್ನೆ ರಾತ್ರಿ ಆತನಿಗೆ ಮದ್ಯ ಕುಡಿಸಿ ನಂತರ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ವಸಂತನ ಕೊಲೆ ಮಾಡಿದ ಬಳಿಕ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಕುಂಸಿ ಠಾಣೆಯ ಸಿಪಿಐ ದೀಪಕ್ ನೇತೃತ್ವದ ತಂಡವು ಅರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಒಂದು ವಾರದ ಹಿಂದೆ ಶಿವಮೊಗ್ಗ ನಗರದ ಬೊಮ್ಮಕಟ್ಟೆಯಲ್ಲಿ ಸ್ನೇಹಿತನ ಪತ್ನಿ ಜೊತೆ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಯುವಕನ ಮರ್ಡರ್ ಆಗಿತ್ತು. ಪತಿಯು ಅನೈತಿಕ ಸಂಬಂಧ ಹೊಂದಿದ್ದ ಸ್ನೇಹಿತನನ್ನು ಕೊಲೆ ಮಾಡಿ ಜೈಲುಪಾಲಾಗಿದ್ದ. ಇದೀಗ ಮತ್ತದೇ ಅನೈತಿಕ ಸಂಬಂಧದ ವಿಚಾರವಾಗಿ ಮತ್ತೊಂದು ಕೊಲೆಯಾಗಿದೆ.

ಇದನ್ನೂ ಓದಿ: Triple Murder Case: ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ