Viral Video: ಪ್ರಾಣ ಉಳಿಸಿದವನು ಎದುರಿಗೆ ಬಂದಾಗ ಈ ಚಿಂಪಾಂಜಿ ಮಾಡಿದ್ದೇನು? ಹೃದಯಸ್ಪರ್ಶಿ ವಿಡಿಯೊ ವೈರಲ್
ಚಿಂಪಾಂಜಿಯೊಂದು ಹಲವಾರು ವರ್ಷಗಳ ಹಿಂದೆ ತನ್ನನ್ನು ರಕ್ಷಿಸಿದವನನ್ನು ತನ್ನ ತೋಳುಗಳಿಂದ ಅಪ್ಪಿಕೊಂಡ ವಿಡಿಯೊವೊಂದು ವೈರಲ್(Viral Video)ಆಗಿದೆ. ಈ ಹೃದಯಸ್ಪರ್ಶಿ ವಿಡಿಯೊ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೊ ಸಾಕಷ್ಟು ವ್ಯೂವ್ಸ್ ಗಳಿಸಿದ್ದು, ನೆಟ್ಟಿಗರು ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ.


ಸಾಮಾನ್ಯವಾಗಿ ಸಾಕುಪ್ರಾಣಿಗಳು ಊಟ ಹಾಕಿದ ಮಾಲೀಕನಿಗೆ ತಮ್ಮ ನಿಷ್ಕಲ್ಮಶ ಪ್ರೀತಿಯನ್ನು ತೋರಿಸುತ್ತವೆ. ಅದರಲ್ಲೂ ನಾಯಿ ಎಲ್ಲಾ ಪ್ರಾಣಿಗಳಿಗಿಂತ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚಿಂಪಾಂಜಿಯ ವಿಡಿಯೊವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿಂಪಾಂಜಿ(chimpanzee)ಯೊಂದು ಹಲವಾರು ವರ್ಷಗಳ ಹಿಂದೆ ತನ್ನನ್ನು ರಕ್ಷಿಸಿದವನನ್ನು ನೋಡಿ ಖುಷಿಯಿಂದ ತನ್ನ ತೋಳುಗಳಿಂದ ಅವನನ್ನು ಅಪ್ಪಿಕೊಂಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಇದನ್ನು ನೋಡಿ ಪ್ರಾಣಿ ಪ್ರಿಯರ ಕಣ್ಣಂಚು ಒದ್ದೆಯಾಗಿದೆ.
ವೈರಲ್ ಆದ ವಿಡಿಯೊದಲ್ಲಿ ಚಿಂಪಾಂಜಿ ಮತ್ತು ಅದರ ರಕ್ಷಕನ ಪುನರ್ಮಿಲನವನ್ನು ತೋರಿಸಲಾಗಿದೆ. ಆತ ವರ್ಷಗಳ ಹಿಂದೆ ಆ ಚಿಂಪಾಂಜಿಯನ್ನು ರಕ್ಷಿಸಿದ್ದನು. ಈಗ ಕೈಯಲ್ಲೊಂದಿಷ್ಟು ಹಣ್ಣುಗಳನ್ನು ಹಿಡಿದುಕೊಂಡು ಅದನ್ನು ಭೇಟಿ ಮಾಡಲು ಬಂದಾಗ ಚಿಂಪಾಂಜಿಯು ದೊಡ್ಡ ನಗುವಿನೊಂದಿಗೆ ಆ ವ್ಯಕ್ತಿಯನ್ನು ತನ್ನ ತೋಳುಗಳಿಂದ ಅಪ್ಪಿಕೊಂಡಿತ್ತು.
ವಿಡಿಯೊ ಇಲ್ಲಿದೆ ನೋಡಿ...
Chimp’s heartfelt reaction on seeing the caretaker who rescued him years ago pic.twitter.com/M4uwWofwdu
— Nature is Amazing ☘️ (@AMAZlNGNATURE) June 29, 2025
ಈ ವಿಡಿಯೊವನ್ನು @AMAZlNGNATURE ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೊ ಈಗಾಗಲೇ ಸಾಕಷ್ಟು ವ್ಯೂವ್ಸ್ ಗಳಿಸಿದೆ ಮತ್ತು ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಈ ಅದ್ಭುತ ವಿಡಿಯೊ ನೋಡಿ ಪ್ರಾಣಿ ಪ್ರಿಯರು ಮನಸೋತಿದ್ದು, ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕೆಲವು ನೆಟ್ಟಿಗರು ಕಾಮೆಂಟ್‌ಗಳಲ್ಲಿ ಚಿಂಪಾಂಜಿಗಳು ಮತ್ತು ಅವುಗಳ ಕೇರ್‌ಟೇಕರ್‌ಗಳ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.ಜನರ ಮೇಲೆ ಕಲ್ಲು ಎಸೆದಿದ್ದಕ್ಕಾಗಿ ತಾಯಿ ಚಿಂಪಾಂಜಿ ತನ್ನ ಮಗುವನ್ನು ಹೊಡೆದ ವಿಡಿಯೊವೊಂದನ್ನು ಒಬ್ಬರು ಹಂಚಿಕೊಂಡಿದ್ದಾರೆ.
ಮಹಿಳೆಯ ಬ್ಯಾಗ್ ಎಗರಿಸಿದ ಕೋತಿ
ಇತ್ತೀಚೆಗೆ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ವೈರಲ್ ವೀಡಿಯೊವೊಂದರಲ್ಲಿ, ಕೋತಿಯೊಂದು ಮಹಿಳೆಯೊಬ್ಬಳಿಂದ ಪರ್ಸ್ ಕಸಿದುಕೊಂಡು ಒಳಗೆ ಇಟ್ಟಿದ್ದ ವಸ್ತುವನ್ನು ತನ್ನದೆಂಬಂತೆ ನೋಡುತ್ತಿತ್ತು. ಕೋತಿ ಆಹಾರವನ್ನು ಹುಡುಕುತ್ತಾ ಪರ್ಸ್‌ನಿಂದ ಒಂದೊಂದೇ ವಸ್ತುಗಳನ್ನು ಹೊರತೆಗೆದಿದೆ. ಆಗ ಮಹಿಳೆ ಅದು ತನ್ನ ಬ್ಯಾಗ್ ಎಂದು ಹೇಳಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿತ್ತು.
Viral Video: ಹರಿದ್ವಾರದ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ ಪಟಪಟನೆ ಮಾತನಾಡಿದ ಕೋತಿ; ಕ್ಯೂಟ್ ವಿಡಿಯೊ ನೋಡಿ
ಮೃಗಾಲಯದಲ್ಲಿ ಸಿಗರೇಟ್ ಸೇದಿದ ಚಿಂಪಾಂಜಿ
ಇತ್ತೀಚೆಗೆ ಚೀನಾದ ಗುವಾಂಗ್ಕ್ಸಿ ಪ್ರದೇಶದ ನಾನಿಂಗ್ ಮೃಗಾಲಯದಲ್ಲಿ ಚಿಪ್ಪಾಂಜಿಯೊಂದು ಮನುಷ್ಯರಂತೆ ಸಿಗರೇಟ್ ಸೇದಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ ಬಂಡೆಗಳ ಕೆಳಗೆ ಕುಳಿತಿರುವ ಚಿಂಪಾಂಜಿಯೊಂದು ಕೈಯಲ್ಲಿ ಸಿಗರೇಟು ಹಿಡಿದುಕೊಂಡು ಧೂಮಪಾನ ಮಾಡಿದೆ. ಅದು ಮನುಷ್ಯರಂತೆ ಹೊಗೆಯನ್ನು ಉಗುಳುತ್ತಾ ಸಿಗರೇಟು ಸೇದುವುದನ್ನು ನೋಡಿದವರು ಆಶ್ಚರ್ಯಗೊಂಡಿದ್ದಾರೆ. ಈ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.