ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ತಾಂಡವ್ ಲೈಫ್ ಚೇಂಜ್: ಬಂಪರ್ ಆಫರ್ ಕೊಟ್ಟ ಆದೀಶ್ವರ್ ಕಾಮತ್

ಭಾಗ್ಯ ಲಕ್ಷ್ಮೀ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಒಂದುಕಡೆ ಆದೀಶ್ವರ್-ತಾಂಡವ್ ಜೊತೆಯಾಗಿದ್ದು ಮುಂದೇನಾಗುತ್ತೆ ಎಂಬುದು ನೋಡಬೇಕಿದೆ. ಮತ್ತೊಂದೆಡೆ ಈ ಮದುವೆ ನಿಲ್ಲಿಸಲು ಮೀನಾಕ್ಷಿ-ಕನ್ನಿಕಾ ಮಾಡಿರುವ ತುಲಭಾರ ಪ್ಲ್ಯಾನ್ಗೆ ಭಾಗ್ಯ ಮನೆಯವರು ಏನು ಯೋಜನೆ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ತಾಂಡವ್ ಲೈಫ್ ಚೇಂಜ್: ಬಂಪರ್ ಆಫರ್ ಕೊಟ್ಟ ಆದೀ

Bhagya lakshmi serial

Profile Vinay Bhat Jul 1, 2025 12:03 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್ ನೀಡಲಾಗಿದೆ. ಒಂದುಕಡೆ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ಕಾರ್ಯ ಭರ್ಜರಿಯಿಂದ ಸಾಗುತ್ತಿದ್ದರೆ, ಮತ್ತೊಂದೆಡೆ ಆದೀಶ್ವರ್ ಕಾಮತ್ ಹಾಗೂ ಭಾಗ್ಯ ಗಂಡ ತಾಂಡವ್​ನ ಭೇಟಿ ಆಗಿದೆ. ಒಂದು ಪ್ರಾಜೆಕ್ಟ್ ವಿಚಾರವಾಗಿ ಇವರಿಬ್ಬರೂ ಜೊತೆಯಾಗಿದ್ದಾರೆ. ತಾಂಡವ್​ಗೆ ಆದೀ ಬಹುದೊಡ್ಡ ಆಫರ್ ಕೊಟ್ಟಿದ್ದು, ಇದರಿಂದ ದುಡ್ಡಿನ ಮಳೆ ಸುರಿಯಲಿದೆ. ಆದರೆ, ತಾಂಡವ್ ಭಾಗ್ಯಾಳ ಗಂಡ ಎಂಬ ವಿಚಾರ ಆದೀಶ್ವರ್​ಗೆ ಇನ್ನೂ ತಿಳಿದಿಲ್ಲ.

ಈ ಹಿಂದೆ ತಾಂಡವ್ ಕೆಲಸ ಇಲ್ಲದೆ ತನ್ನದೇ ಒಂದು ಬ್ಯುಸಿನೆಸ್ ಪ್ಲ್ಯಾನ್ ಮಾಡಿ ಪಾರ್ಟ್ನರ್​ಗಾಗಿ ಹುಡುಕುತ್ತಾ ಇದ್ದ. ಆದರೆ, ಇದು ದೊಡ್ಡ ಪ್ರಾಜೆಕ್ಟ್ ಆದ ಕಾರಣ ಇದಕ್ಕೆ ಇನ್​ವೆಸ್ಟ್ ಮಾಡಲು ತುಂಬಾ ಹಣ ಬೇಕು. ಹೀಗಾಗಿ ಯಾರೂ ಮುಂದುಬರಲಿಲ್ಲ. ಅನೇಕ ಕಡೆಗಳಲ್ಲಿ ತನ್ನ ಪ್ಲ್ಯಾನ್ ಬಗ್ಗೆ ಹೇಳಿಕೊಂಡಿದ್ದರೂ ಯಾರೂ ಈ ಸಾಹಸಕ್ಕೆ ಕೈ ಹಾಕಲಿಲ್ಲ. ಕೊನೆಯದಾಗಿ ಆದೀ ಕಂಪನಿಗೆ ತಾಂಡವ್ ಈ ಪ್ಲ್ಯಾಬ್ ಹಿಡಿದುಕೊಂಡು ಹೋಗಿದ್ದಾನೆ.

ಇಲ್ಲಿ ತನ್ನ ಬ್ಯುಸಿನೆಸ್ ಪ್ಲ್ಯಾನ್ ಬಗ್ಗೆ ಪಿಪಿಟಿ ಮೂಲಕ ತೋರಿಸುತ್ತಿದ್ದಾನೆ. ಆದರೆ, ಆದೀ ಕಂಪನಿಯ ಇತರೆ ಪಾರ್ಟ್ನರ್ಸ್ ಇದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ. ಇದು ತುಂಬಾ ರಿಸ್ಕ್ ಪ್ಲ್ಯಾನ್.. ಹಣ ರಿಟರ್ನ್ ಬಂದಿಲ್ಲ ಎಂದಾದರೆ ಎಲ್ಲವೂ ಫ್ಲಾಫ್ ಆಗುತ್ತೆ.. ಇದು ವರ್ಕ್ ಆಗಲ್ಲ ಎಂದು ಹೇಳುತ್ತಾರೆ. ಅಷ್ಟೊತ್ತಿಗೆ ಅಲ್ಲಿಗೆ ಆದೀಶ್ವರ್ ಕಾಮತ್ ಎಂಟ್ರಿ ಆಗುತ್ತದೆ. ತಾಂಡವ್​ನ ಬ್ಯುಸಿನೆಸ್ ಪ್ಲ್ಯಾನ್ ಕೇಳಿ ವಾವ್.. ಬ್ರಿಲಿಯೆಂಟ್.. ನಿಜವಾಗ್ಲೂ ಈ ಐಡಿಯಾ ತುಂಬಾ ಚೆನ್ನಾಗಿದೆ.. ನಾನು ಈ ಪ್ರಾಜೆಕ್ಟ್​ನ ತೆಗೋತ ಇದ್ದಾನೆ ಎಂದು ಎಂದು ಆದೀ ಹೇಳುತ್ತಾನೆ.

ಖಂಡಿತವಾಗ್ಲೂ ನಾನು ಈ ಐಡಿಯಾನ ತೆಗೋತ ಇದ್ದೇನೆ ಎಂದು ಆದೀ ಹೇಳಿದಾಗ ಇತರೆ ಪಾರ್ಟ್ನರ್ಸ್ ಆದೀ ಅವರೇ ಇದು ತುಂಬಾ ರಿಸ್ಕ್ ಇದೆ.. ತುಂಬಾನೇ ಕಾಸ್ಟ್ ಆಗುತ್ತೆ ಇದಕ್ಕೆ.. ಎಲ್ಲಾದರು ಇದು ಕ್ಲಿಕ್ ಆಗಿಲ್ಲ ಅಂದ್ರೆ ಎಲ್ಲ ಹೋದಂಗೆ ಎಂದು ಹೇಳುತ್ತಾರೆ. ಇದಕ್ಕೆ ಆದೀ, ವರ್ಕ್ ಆದ್ರೆ ನಮ್ಮ ಪ್ರಾಫಿಟ್ ಡಬಲ್ ಆಗುತ್ತೆ.. ಇಂತ ಟ್ಯಾಲೆಂಟ್​ಗೆ ನಾವು ಸಪೋರ್ಟ್ ಮಾಡಬೇಕು.. ಐಡಿಯಾ ಚೆನ್ನಾಗಿದ್ರೆ ನಾವು ತೆಗೋಬೇಕು.. ಯಾರು ಏನೇ ಹೇಳಿದ್ರು ನಾನು ಈ ಪ್ರಾಜೆಕ್ಟ್ ತೆಗೋತೀನಿ. ತಾಂಡವ್ ಅವ್ರೇ.. ನಿಮ್ಮ ಫೈಲ್ ಎಲ್ಲ ನನ್ಗೆ ಕೊಡಿ ಡೀಪ್ ಆಗಿ ಸ್ಟಡಿ ಮಾಡಬೇಕು.. ನಿಮ್ಗೆ ರಿಟರ್ನ್ ಕಾಲ್ ಮಾಡುತ್ತೇನೆ.. ತುಂಬಾ ದಿನ ಆದ ನಂತ್ರ ನಿಮ್ಮಂತ ಟ್ಯಾಲೆಂಟ್​ನ ನೋಡ್ತಾ ಇದ್ದೇನೆ ಎಂದು ಹೇಳಿದ್ದಾನೆ.



ಮತ್ತೊಂದೆಡೆ ಪೂಜಾ-ಕಿಶನ್ ಮದುವೆಗೆ ಎಲ್ಲರ ಎದುರು ಮೀನಾಕ್ಷಿ ಒಪ್ಪಿಗೆ ಸೂಚಿಸಿದ್ದಾಳೆ. ಆದರೆ, ಇದೊಂದು ಪ್ಲ್ಯಾನ್ ಅಷ್ಟೆ. ಈ ಮದುವೆ ನಿಲ್ಲಿಸಯೇ ತೀರುತ್ತೇನೆ ಎಂದು ಮೀನಾಕ್ಷಿ ಹೇಳಿದ್ದಾಳೆ. ಇದಕ್ಕಾಗಿ ಕನ್ನಿಕಾ ಜೊತೆ ಸೇರಿ ಒಂದೊಂದೆ ಪ್ಲ್ಯಾನ್ ಹೆಣೆಯುತ್ತಿದ್ದಾರೆ. ಮೊದಲಿಗೆ ಭಾಗ್ಯ ಮನೆಗೆ ಇವರಿಬ್ಬರು ಬಂದು ನಮ್ಮದೊಂದು ಹರಕೆ ಇದೆ.. ಕಿಶನ್​ನ ತುಲಾಭಾರ ಆಗಬೇಕು.. ಇದನ್ನ ಹುಡುಗಿ ಮನೆಯವರೇ ಮಾಡಬೇಕು.. ಅಷ್ಟೇ ಅಲ್ಲ ಇದು ಚಿನ್ನದಲ್ಲಿ ಆಗಬೇಕು ಎಂದು ಹೇಳಿದ್ದಾರೆ. ಇದನ್ನು ಕೇಳಿ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ.

ಅಷ್ಟೊಂದು ಚಿನ್ನ ಎಲ್ಲಿಂದ ತರೋದು.. ಹೇಗೆ ಹಣ ಗೂಡಿಸುವುದು ಎಂದು ಭಾಗ್ಯ ಮನೆಯವರಿಗೆ ಟೆನ್ಶನ್ ಶುರುವಾಗಿದೆ. ಆದರೆ, ಇದಕ್ಕೆ ಸುಂದರಿ ಒಂದು ಪ್ಲ್ಯಾನ್ ಮಾಡಿದ್ದಾಳೆ. ಪೂಜಾ ಕರೆದುಕೊಂಡು ಚಿನ್ನದಂತೆ ಕಾಣುವ ಪಾತ್ರೆಯನ್ನು ತಯಾರು ಮಾಡುವ ಅಂಗಡಿಗೆ ಕರೆದುಕೊಂಡು ಬಂದಿದ್ದಾಳೆ. ಇಲ್ಲಿ ತುಲಾಭಾರಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಅತ್ತ ಒಲ್ಲದ ಮನಸ್ಸಿನಿಂದ ಪೂಜಾ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ.

ಸದ್ಯ ಭಾಗ್ಯ ಲಕ್ಷ್ಮೀ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಒಂದುಕಡೆ ಆದೀಶ್ವರ್-ತಾಂಡವ್ ಜೊತೆಯಾಗಿದ್ದು ಮುಂದೇನಾಗುತ್ತೆ ಎಂಬುದು ನೋಡಬೇಕಿದೆ. ಮತ್ತೊಂದೆಡೆ ಈ ಮದುವೆ ನಿಲ್ಲಿಸಲು ಮೀನಾಕ್ಷಿ-ಕನ್ನಿಕಾ ಮಾಡಿರುವ ತುಲಭಾರ ಪ್ಲ್ಯಾನ್​ಗೆ ಭಾಗ್ಯ ಮನೆಯವರು ಏನು ಯೋಜನೆ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

BBK 12: ಮುಂದಿನ 4 ಸೀಸನ್ ಮಾತ್ರವಲ್ಲ: ಬಿಗ್ ಬಾಸ್​ನಲ್ಲಿ ಕಿಚ್ಚನ ನಿರೂಪಣೆ ಎಷ್ಟು ಸೀಸನ್ ವರೆಗೆ ಇರುತ್ತೆ ಗೊತ್ತೇ?