Elon Musk: ತಾರಕಕ್ಕೇರಿದ ಟ್ರಂಪ್ ಜೊತೆಗಿನ ಮುಸುಕಿನ ಗುದ್ದಾಟ! ಹೊಸ ಪಕ್ಷ ರಚನೆಯ ಎಚ್ಚರಿಕೆ ಕೊಟ್ಟ ಮಸ್ಕ್
2017 ರಲ್ಲಿ ರಿಪಬ್ಲಿಕನ್ನರು ಅಂಗೀಕರಿಸಿದ ಟ್ರಂಪ್ ಅವರ ತೆರಿಗೆ ಕಡಿತಗಳ ವಿಸ್ತರಣೆ ಮಸೂದೆಯನ್ನು ಸೋಮವಾರ ಅಂಗೀಕರಿಸಲು ಪ್ರಯತ್ನಿಸಿದಾಗ ಯುಎಸ್ ಸೆನೆಟ್‌ನಲ್ಲಿನ ಶಾಸಕರು ಇಕ್ಕಟ್ಟಿಗೆ ಸಿಲುಕಿಕೊಂಡರು. ಯಾಕೆಂದರೆ ಯುಎಸ್ ಸೆನೆಟ್ ಶ್ವೇತಭವನದಲ್ಲಿ ಸೋಮವಾರ ಮಂಡಿಸಿದ ಬೃಹತ್ ತೆರಿಗೆ ಮತ್ತು ವಲಸೆ ಮಸೂದೆಯನ್ನು ಟೆಸ್ಲಾ ಸಿಇಒ ವಿರೋಧಿಸಿದ್ದಾರೆ.


ವಾಷಿಂಗ್ಟನ್: ಟೆಸ್ಲಾ ಸಿಇಒ ಎಲಾನ್ ಮಸ್ಕ್ (Tesla CEO Elon Musk) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ನಡುವೆ ಉಂಟಾಗಿರುವ ತೆರಿಗೆ ಮಸೂದೆ (One Big Beautiful Bill) ಸಮರ ಈಗ ತಾರಕಕ್ಕೇರಿದೆ. ಮಸ್ಕ್ ಈಗ ಟ್ರಂಪ್ ಗೆ ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಬಜೆಟ್ ಮಸೂದೆಯನ್ನು ಬೆಂಬಲಿಸುವ ಶಾಸಕರನ್ನು ಪದಚ್ಯುತಗೊಳಿಸುವುದಾಗಿ ಮಸ್ಕ್ ಪ್ರತಿಜ್ಞೆ ಮಾಡಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಅವರು, ಈ ಮಸೂದೆಯು ದೇಶದ ಸಾಲದ ಹೊರೆಯನ್ನು 3.3 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
2017 ರಲ್ಲಿ ರಿಪಬ್ಲಿಕನ್ನರು ಅಂಗೀಕರಿಸಿದ ಟ್ರಂಪ್ ಅವರ ತೆರಿಗೆ ಕಡಿತಗಳ ವಿಸ್ತರಣೆ ಮಸೂದೆಯನ್ನು ಸೋಮವಾರ ಅಂಗೀಕರಿಸಲು ಪ್ರಯತ್ನಿಸಿದಾಗ ಯುಎಸ್ ಸೆನೆಟ್‌ನಲ್ಲಿನ ಶಾಸಕರು ಇಕ್ಕಟ್ಟಿಗೆ ಸಿಲುಕಿಕೊಂಡರು. ಯಾಕೆಂದರೆ ಯುಎಸ್ ಸೆನೆಟ್ ಶ್ವೇತಭವನದಲ್ಲಿ ಸೋಮವಾರ ಮಂಡಿಸಿದ ಬೃಹತ್ ತೆರಿಗೆ ಮತ್ತು ವಲಸೆ ಮಸೂದೆಯನ್ನು ಟೆಸ್ಲಾ ಸಿಇಒ ವಿರೋಧಿಸಿದ್ದಾರೆ. ಶಾಸಕರು ಸೆನೆಟ್‌ನಲ್ಲಿ ಟ್ರಂಪ್ ಅವರ ಖರ್ಚು ಮಸೂದೆಯನ್ನು ಅಂಗೀಕರಿಸಿದರೆ ಡೆಮೋಕ್ರಾಟ್ ರಿಪಬ್ಲಿಕನ್ ಯುನಿ ಪಾರ್ಟಿಗೆ ಪರ್ಯಾಯವಾಗಿ ಅಮೆರಿಕನ್ ಪಾರ್ಟಿ ಎಂಬ ಹೊಸ ಪಕ್ಷ ರಚಿಸುವುದಾಗಿ ಮಸ್ಕ್ ಎಚ್ಚರಿಸಿದ್ದಾರೆ.
ಈ ಹುಚ್ಚು ಖರ್ಚು ಮಸೂದೆ ಅಂಗೀಕಾರವಾದರೆ ಮರುದಿನ ಅಮೆರಿಕ ಪಕ್ಷ ರಚನೆಯಾಗುತ್ತದೆ. ನಮ್ಮ ದೇಶಕ್ಕೆ ಡೆಮೋಕ್ರಾಟ್ ರಿಪಬ್ಲಿಕನ್ ಯುನಿ ಪಾರ್ಟಿಗೆ ಪರ್ಯಾಯ ಬೇಕಿದೆ. ಇದರಿಂದ ಜನರಿಗೆ ನಿಜವಾಗಿಯೂ ಧ್ವನಿ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಏನಿದು ಟ್ರಂಪ್ ಅವರ 'ಒನ್ ಬಿಗ್ ಬ್ಯೂಟಿಫುಲ್ ಬಿಲ್'?
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ "ಒನ್ ಬಿಗ್ ಬ್ಯೂಟಿಫುಲ್ ಬಿಲ್" ಮೊದಲ ಅವಧಿಯ ತೆರಿಗೆ ಕಡಿತವನ್ನು 4.5 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸಲು ಯೋಜನೆ ರೂಪಿಸಿದೆ. ಈ ಮೂಲಕ ಮಿಲಿಟರಿಗೆ ಹೆಚ್ಚಿನ ವೆಚ್ಚ ಮಾಡಲು ಟ್ರಂಪ್ ಬಯಸಿದ್ದಾರೆ. ಇದರ ಮೂಲಕ ಅವರು ವಲಸೆ ಬಂದಿರುವವರ ಸಾಮೂಹಿಕ ಗಡೀಪಾರು ಮತ್ತು ಗಡಿ ಭದ್ರತೆಗಾಗಿ ಹೆಚ್ಚಿನ ಹಣಕಾಸು ಒದಗಿಸಲು ಬಯಸಿದ್ದಾರೆ. ಆದರೆ ಇದು 2026ರಲ್ಲಿ ಮಧ್ಯಂತರ ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ದವಾಗಿರುವ ಸೆನೆಟರ್‌ಗಳಿಗೆ ಸಂಕಷ್ಟ ತಂದೊಡ್ಡಿದೆ.
ಈ ಮಸೂದೆ ಅಂಗೀಕಾರದ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್, ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವುದಾಗಿ ಹೇಳಿ ಇದೀಗ ಇತಿಹಾಸದಲ್ಲಿಯೇ ಅತಿದೊಡ್ಡ ಸಾಲ ಹೆಚ್ಚಳದ ಮಸೂದೆ ಪರ ಮತ ಚಲಾಯಿಸಿರುವ ಪ್ರತಿಯೊಬ್ಬ ಸದಸ್ಯರು ನಾಚಿಕೆಯಿಂದ ತಲೆ ತಗ್ಗಿಸಬೇಕು. ಇವರೆಲ್ಲ ಮುಂದಿನ ವರ್ಷ ಚುನಾವಣೆಯಲ್ಲಿ ತಮ್ಮ ಅಧಿಕಾರವನ್ನು ಕಳೆದುಕೊಳ್ಳುವಂತೆ ನಾನು ಮಾಡುತ್ತೇನೆ. ಹುಚ್ಚುತನದ ಖರ್ಚು ಮಸೂದೆ ಅಂಗೀಕಾರವಾದ ಮರುದಿನವೇ ಹೊಸ ಪಕ್ಷ ರಚನೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಮಸ್ಕ್ ಅವರ ಈ ಹೇಳಿಕೆಯು ಯುಎಸ್ ಅಧ್ಯಕ್ಷರೊಂದಿಗೆ ಅವರ ಸಂಬಂಧ ಬಿರುಕು ಬಿಟ್ಟಿರುವುದನ್ನು ಸ್ಪಷ್ಟಪಡಿಸಿದೆ. ಈ ಸಂದೇಶದ ಮೂಲಕ ಅವರು ಸೆನೆಟ್ ಸದಸ್ಯರಿಗೆ ಬಹಿರಂಗವಾಗಿಯೇ ಟ್ರಂಪ್ ಮಸೂದೆ ಪರ ಮತ ಚಲಾಯಿಸದಂತೆ ಬೆದರಿಕೆಯೊಡ್ಡಿದ್ದಾರೆ.
ಟ್ರಂಪ್ ಜೊತೆಗಿನ ಭಿನ್ನಾಭಿಪ್ರಾಯದ ಬಳಿಕ ಬಹುತೇಕ ಸುಮ್ಮನಿದ್ದ ಮಸ್ಕ್, ಕಳೆದ ವಾರಾಂತ್ಯದಲ್ಲಿ ತೀವ್ರ ಚರ್ಚೆಯನ್ನು ಪ್ರಾರಂಭಿಸಿದರು. ಟ್ರಂಪ್ ಅವರ ಬಜೆಟ್ ಮಸೂದೆಯನ್ನು ತೀವ್ರವಾಗಿ ಟೀಕಿಸಿರುವ ಮಸ್ಕ್, ಇದು ಖರ್ಚು ಹೆಚ್ಚಿಸಿ ಕೆಲಸವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ.
Every member of Congress who campaigned on reducing government spending and then immediately voted for the biggest debt increase in history should hang their head in shame!
— Elon Musk (@elonmusk) June 30, 2025
And they will lose their primary next year if it is the last thing I do on this Earth.
ಟ್ರಂಪ್ ಅವರ ಹೊಸ ಮಸೂದೆಯನ್ನು ಬೆಂಬಲಿಸುವ ಶಾಸಕರು ನಾಚಿಕೆಯಿಂದ ತಲೆ ತಗ್ಗಿಸಬೇಕು. ಒಂದು ವೇಳೆ ನಾನು ಈ ಭೂಮಿಯ ಮೇಲೆ ಮಾಡುವ ಕೊನೆಯ ಕೆಲಸ ಇದಾಗಿದ್ದರೆ ಮುಂದಿನ ವರ್ಷ ಅವರು ತಮ್ಮ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.
ಬಳಿಕ ಅವರು ಹೊಸ ರಾಜಕೀಯ ಪಕ್ಷ ರಚಿಸುವುದಾಗಿ ಕರೆ ನೀಡಿದ್ದಾರೆ. ವಾಸ್ತವವಾಗಿ ಜನರ ಬಗ್ಗೆ ಕಾಳಜಿ ವಹಿಸುವ ಹೊಸ ರಾಜಕೀಯ ಪಕ್ಷಕ್ಕೆ ಸಮಯ ಈಗ ಎಂದು ಅವರು ಬರೆದಿದ್ದಾರೆ. ಟ್ರಂಪ್ ಪರ ರಾಜಕೀಯ ಪ್ರಚಾರಕ್ಕೆ 277 ಮಿಲಿಯನ್ ಡಾಲರ್ ಕೊಡುಗೆ ನೀಡಿದ ಅನಂತರ ಮಸ್ಕ್ ಯುಎಸ್ ಅಧ್ಯಕ್ಷರು ಮತ್ತು ಅವರ ಆಡಳಿತದ ಪ್ರಮುಖ ಭಾಗವಾಗಿದ್ದರು.
ಇದನ್ನೂ ಓದಿ: BBK 12: ಪ್ರೆಸ್ಮೀಟ್ ಬೆನ್ನಲ್ಲೇ ಹೊರಬಿತ್ತು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವವರ ಲಿಸ್ಟ್
ಟ್ರಂಪ್ ಮತ್ತು ಮಸ್ಕ್ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಏಕೆ?
ಸರ್ಕಾರಿ ದಕ್ಷತೆ ಇಲಾಖೆಯ (DOGE) ಮಾಜಿ ಮುಖ್ಯಸ್ಥ ಮಸ್ಕ್ ಅವರು ಈ ಮಸೂದೆಯ ಕರಡನ್ನು ತೀವ್ರವಾಗಿ ಟೀಕಿಸಿದರು. ಇದು ಸಂಪೂರ್ಣವಾಗಿ ಹುಚ್ಚುತನ ಮತ್ತು ವಿನಾಶಕಾರಿ ಎಂದು ಬಣ್ಣಿಸಿದ್ದಾರೆ. ಈ ಮಸೂದೆಯು ಅಮೆರಿಕದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ನಾಶಪಡಿಸುತ್ತದೆ ಮತ್ತು ನಮ್ಮ ದೇಶಕ್ಕೆ ಅಪಾರ ಹಾನಿಯನ್ನುಂಟು ಮಾಡುತ್ತದೆ ಎಂದು ಮಸ್ಕ್ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು.
ಮಸೂದೆಯ ಬಗ್ಗೆ ಮಸ್ಕ್ ಅವರ ಟೀಕೆಗೆ ಟ್ರಂಪ್ ಅವರ ಪ್ರತಿಕ್ರಿಯೆ ಇಬ್ಬರ ನಡುವೆ ದ್ವೇಷವನ್ನು ಹುಟ್ಟುಹಾಕಿತು. ಇಬ್ಬರೂ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪರಸ್ಪರ ನಿಂದಿಸಿದರು. ಬಜೆಟ್ ಕಚೇರಿಯ ಅಂದಾಜಿನ ಪ್ರಕಾರ ಈ ಮಸೂದೆಯಿಂದ ಮುಂದಿನ ದಶಕದಲ್ಲಿ ಸುಮಾರು 3.3 ಟ್ರಿಲಿಯನ್ ಡಾಲರ್ ಹಣದ ಕೊರತೆ ಉಂಟಾಗುತ್ತದೆ. ಆದರೆ ಅನುಮೋದಿತ ಮಸೂದೆಯು ಮುಂದಿನ ದಶಕದಲ್ಲಿ 2.4 ಟ್ರಿಲಿಯನ್ ಡಾಲರ್ ಅನ್ನು ಉಳಿತಾಯ ಮಾಡುತ್ತದೆ ಎಂದು ಹೇಳಿದೆ.