ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stars Holiday Fashion: ಅಲ್ಟ್ರಾ ಮಾಡರ್ನ್ ಹುಡುಗಿಯರ ಹಾಲಿಡೇ ಫ್ಯಾಷನ್ ಸೇರಿದ ಕ್ರೊಶೆಟ್ ಕೋ ಆರ್ಡ್ ಸೆಟ್!

Stars Holiday Fashion: ಅಲ್ಟ್ರಾ ಮಾಡರ್ನ್ ಹುಡುಗಿಯರ ಹಾಗೂ ಸೆಲೆಬ್ರೆಟಿಗಳ ಹಾಲಿ ಡೇ ಫ್ಯಾಷನ್‌ಗೆ ಕ್ರೊಶೆಟ್ ಕೋ ಆರ್ಡ್ ಸೆಟ್ ಸೇರಿದೆ. ಗ್ಲಾಮರಸ್ ಲುಕ್ ಬಯಸುವವರನ್ನು ಸವಾರಿ ಮಾಡತೊಡಗಿದೆ. ಏನಿದು ಕ್ರೊಶೆಟ್ ಕೋ ಆರ್ಡ್ ಸೆಟ್ ಫ್ಯಾಷನ್? ಇಲ್ಲಿದೆ ಡಿಟೇಲ್ಸ್.

ಹುಡುಗಿಯರ ಹಾಲಿಡೇ ಫ್ಯಾಷನ್ ಸೇರಿದ ಕ್ರೊಶೆಟ್ ಕೋ ಆರ್ಡ್ ಸೆಟ್

ಚಿತ್ರಗಳು: ಚಾಹತ್ ಖನ್ನಾ, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕ್ರೊಶೆಟ್ ಕೋ ಆರ್ಡ್ ಸೆಟ್ ಫ್ಯಾಷನ್ (Crochet Coord Set ) ಹಾಲಿಡೇ ಫ್ಯಾಷನ್‌ನಲ್ಲಿ ಹಂಗಾಮ ಎಬ್ಬಿಸಿದೆ. ಹೌದು, ಅಲ್ಟ್ರಾ ಮಾಡರ್ನ್ ಹುಡುಗಿಯರ ಹಾಗೂ ಸೆಲೆಬ್ರೆಟಿಗಳ ಹಾಲಿ ಡೇ ಫ್ಯಾಷನ್‌ಗೆ (Stars Holiday Fashion) ಕ್ರೊಶೆಟ್ ಕೋ ಆರ್ಡ್ ಸೆಟ್ ಸೇರಿದ್ದು, ಗ್ಲಾಮರಸ್ ಲುಕ್ ಬಯಸುವವರನ್ನು ಸವಾರಿ ಮಾಡತೊಡಗಿದೆ. ಫ್ಯಾಷನ್ ಲೋಕದ ಮಾಡೆಲ್‌ಗಳ ಲಿಸ್ಟ್‌ನಲ್ಲಿ ಮಾತ್ರವಲ್ಲ, ಸ್ಟಾರ್‌ಗಳ ವೆಕೇಷನ್ ಹಾಗೂ ಹಾಲಿಡೇ ಫ್ಯಾಷವೇರ್‌ಗಳ ಲಿಸ್ಟ್‌ಗೆ ಸೇರಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ನೋಡಲು ವುಲ್ಲನ್‌ನಂತೆ ಕಾಣುವ ಕೈಗಳಿಂದ ಹೆಣೆಯಲಾದ ಉಡುಗೆಗಳಿವು. ಇವನ್ನು ಒಳ ಉಡುಪುಗಳ ಮೇಲೆ ಧರಿಸಲಾಗುತ್ತದೆ. ಅದರಲ್ಲೂ ಬೀಚ್‌ಸೈಡ್, ಬೀಚ್ ಪಾರ್ಟಿಗಳಲ್ಲಿ ಅತಿ ಹೆಚ್ಚಾಗಿ ಧರಿಸಲಾಗುತ್ತದೆ. ಒಂದೇ ರೀತಿಯ ಮಾನೋಕ್ರೋಮ್ ವರ್ಣದ ಕ್ರಾಪ್ ಟಾಪ್ ಅಥವಾ ಟಾಪ್ ಜತೆಗೆ ಶಾರ್ಟ್ಸ್ ಇಲ್ಲವೇ ಪ್ಯಾಂಟ್ ಅದರೊಂದಿಗೆ ಜಾಕೆಟ್‌ನಂತ ಕೋಟ್ ಹೀಗೆ ಸೆಟ್‌ನೊಂದಿಗೆ ಇವು ದೊರೆಯುತ್ತವೆ.

ತಕ್ಷಣಕ್ಕೆ ನೋಡಲು ಉಲ್ಲನ್‌ನಿಂದ ಸಿದ್ಧಪಡಿಸಿರುವಂತೆ ಕಂಡರೂ ಇದು ಅದಲ್ಲ! ಇಂದು ನಾನಾ ಇತರೇ ಫ್ಯಾಬ್ರಿಕ್ ದಾರಗಳಿಂದ ಇದನ್ನು ಡಿಸೈನ್ ಮಾಡಲಾಗುತ್ತಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.

Stars Holiday Fashion 1

ಬೀಚ್‌ಸೈಡ್‌ವೇರ್‌ಗೆ ಸೇರಿದ ಕ್ರೊಶೆಟ್ ಕೋ ಆರ್ಡ್ ಸೆಟ್

ಅಂದಹಾಗೆ, ಈ ಕ್ರೊಶೆಟ್ ಕೋ ಆರ್ಡ್ ಸೆಟ್‌ಗಳು ಬೀಚ್‌ಸೈಡ್ ಪಾರ್ಟಿವೇರ್ ಕೆಟಗರಿಗೆ ಸೇರುತ್ತವೆ. ಸೆಲೆಬ್ರೆಟಿಗಳು ಈ ಉಡುಪಿನ ಅಭಿಮಾನಿಗಳು. ಇನ್ನು ಸಾಕಷ್ಟು ಫೋಟೋಶೂಟ್‌ಗಳಿಗೂ ಈ ಉಡುಗೆಯನ್ನು ಬಳಸಲಾಗುತ್ತದೆ. ಸಿನಿಮಾಗಳಲ್ಲಿ ಬೀಚ್‌ಸೈಡ್ ಹಾಡುಗಳಲ್ಲಿ ಇಂತಹ ಉಡುಗೆಗಳನ್ನು ಕಾಣಬಹುದು ಎನ್ನುವ ಫ್ಯಾಷನಿಸ್ಟಾ ಜಾನ್ ಪ್ರಕಾರ, ಇವು ಹಿಂದೆಯೂ ಚಾಲ್ತಿಯಲ್ಲಿದ್ದವು. ಆದರೆ, ಇತ್ತೀಚೆಗೆ ಬಾಲಿವುಡ್ ಸೆಲೆಬ್ರೆಟಿಗಳ ಮುಖಾಂತರ ಮತ್ತೊಮ್ಮೆ ಟ್ರೆಂಡಿಯಾಗಿವೆ ಎನ್ನುತ್ತಾರೆ.

Stars Holiday Fashion 2

ಕ್ರೊಶೆಟ್ ಕೋ ಆರ್ಡ್ ಸೆಟ್‌ನ ಇತರೇ ಡಿಸೈನ್ಸ್

ಅಂದ ಹಾಗೆ, ಕೇವಲ ಬೀಚ್‌ವೇರ್ ಕೆಟಗರಿಯಲ್ಲಿ ಮಾತ್ರವಲ್ಲ, ಕೆಲವಂತೂ ಕೇಪ್ ಡಿಸೈನ್ ಹೊಂದಿರುವ ಪ್ಯಾಂಟ್ ಶೈಲಿಯ ಕ್ರೋಶೆಟ್ ಸೆಟ್‌ಗಳು ಇತ್ತೀಚೆಗೆ ದೊರೆಯುತ್ತಿವೆ. ಒಳಗಡೆ ಯಾವುದಾದರೂ ಸಾದಾ ಉಡುಪಿನ ಜತೆಗೆ ಧರಿಸುವ ಇವು ಡಿಫರೆಂಟ್ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್.

Stars Holiday Fashion 3

ಕ್ರೊಶೆಟ್ ಕೋ ಆರ್ಡ್ ಸೆಟ್ ಬಗ್ಗೆ ಗೊತ್ತಿರಬೇಕಾದ ವಿಷಯಗಳು

  • ಇವು ದೇಹವನ್ನು ಎಕ್ಸ್‌ಪೋಸ್ ಮಾಡುತ್ತವೆ.
  • ಅಲ್ಟ್ರಾ ಮಾಡರ್ನ್ ಹುಡುಗಿಯರಿಗೆ ಮಾತ್ರ ಸೂಕ್ತ.
  • ಇವುಗಳ ಕೇಪ್ ಹಾಗೂ ಶ್ರಗ್‌ಗಳು ಜನಪ್ರಿಯಗೊಂಡಿವೆ.
  • ಲೈಟ್ ಕಲರ್‌ನವು ಹೆಚ್ಚು ಚಾಲ್ತಿಯಲ್ಲಿವೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Celebrity Fashion: ಕುರ್ತಾ ಸ್ಟೈಲ್ ಕಾಟನ್ ಗೌನ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಸಿಂಪಲ್ ಲುಕ್