Viral News: ಸತ್ತು 24 ನಿಮಿಷದ ಬಳಿಕ ಬದುಕಿ ಬಂದ್ಳು! ಸಾವಿನ ನಂತರ ಏನಾಗುತ್ತೆ ಎಂಬ ಪ್ರಶ್ನೆಗೆ ಈಕೆ ಹೇಳಿದ್ದೇನು ಗೊತ್ತಾ?
ಸ್ಪೇನ್‌ನ ಆಂಡಲೂಸಿಯಾದ 50 ವರ್ಷದ ಪತ್ರಕರ್ತೆ ಮತ್ತು ಸಮಾಜಶಾಸ್ತ್ರಜ್ಞೆ ಟೆಸ್ಸಾ ರೊಮೆರೊ ಎಂಬಾಕೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಆಕೆ ಸತ್ತಿದ್ದಾಳೆಂದು ವೈದ್ಯರು ಘೋಷಿಸಿದ್ದಾರೆ. ಆದರೆ 24 ನಿಮಿಷಗಳ ನಂತರ ಮತ್ತೆ ಜೀವಂತವಾಗಿ ಎದ್ದು ಬಂದಿದ್ದಾಳಂತೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.


ಮ್ಯಾಡ್ರಿಡ್: ಸಾವಿನ ನಂತರ ಏನು? ನಮ್ಮ ಆತ್ಮ ಏನಾಗುತ್ತದೆ? ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಈ ಪ್ರಶ್ನೆಗೆ ಉತ್ತರ ಕೂಡ ಇದುವರೆಗೆ ಸಿಕ್ಕಿಲ್ಲ! ಸದಾ ಬಡಿಯುವ ಈ ಹೃದಯ ನಿಂತು, ದೇಹದಿಂದ ಪ್ರಾಣಪಕ್ಷಿ ಹಾರಿಹೋದಾಗ ಏನಾಗುತ್ತದೆ ಎಂದು ಕೇಳಿದರೆ ಎಲ್ಲರೂ ಮೌನವಾಗುತ್ತಾರೆ. ಸತ್ತು ಹೋದವರೆಂದುಕೊಂಡವರು ಮರಳಿ ಎದ್ದು ಬಂದ ಘಟನೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಸ್ಪೇನ್‌ನ ಆಂಡಲೂಸಿಯಾದ 50 ವರ್ಷದ ಪತ್ರಕರ್ತೆ ಮತ್ತು ಸಮಾಜಶಾಸ್ತ್ರಜ್ಞೆ ಟೆಸ್ಸಾ ರೊಮೆರೊ ಎಂಬಾಕೆ ಸತ್ತು 24 ನಿಮಿಷಗಳ ಕಾಲ ನಂತರ ಮತ್ತೆ ಬದುಕಿಬಂದಿದ್ದಾಳೆ. ಅದು ಅಲ್ಲದೇ, ಸತ್ತ ಬಳಿಕ ತನಗಾದ ಅನುಭವವನ್ನು ಈಕೆ ಹಂಚಿಕೊಂಡಿದ್ದಾಳೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.
ನಡೆದಿದ್ದೇನು?
ಟೆಸ್ಸಾ ತನ್ನ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳಂತೆ.ವೈದ್ಯರು ಕೂಡ ಆಕೆ ಸತ್ತಿದ್ದಾಳೆಂದು ಹೇಳಿದ್ದಾರೆ.24 ನಿಮಿಷಗಳ ನಂತರ ಆಕೆ ಮತ್ತೆ ಬದುಕಿಬಂದಿದ್ದಾಳಂತೆ. ಆ ಅವಧಿಯಲ್ಲಿ ತಾನು ಈ ಬೇರೆಯದ್ದೇ ಆದ ಲೋಕಕ್ಕೆ ಪ್ರಯಾಣಿಸಿದ್ದೇನೆ ಎಂದು ಟೆಸ್ಸಾ ಹೇಳಿದ್ದಾಳೆ. ಈ ಅನುಭವದಿಂದ ಟೆಸ್ಸಾ ತನ್ನ ಸಾವಿಗೆ ಹತ್ತಿರವಾದ ಅನುಭವದ ಬಗ್ಗೆ ಒಂದು ಪುಸ್ತಕವನ್ನು ಬರೆದಿದ್ದಾಳೆ. ಒಂದು ಕಾಲದಲ್ಲಿ ಅಂತಹ ಅನುಭವಗಳ ಬಗ್ಗೆ ಸಂದೇಹ ಹೊಂದಿದ್ದ ಟೆಸ್ಸಾ, ಈಗ ಅದು ನಿಜ ಎಂದು ನಂಬಿದ್ದಾಳೆ. "ನಾನು ಇನ್ನು ಮುಂದೆ ಸಾವಿಗೆ ಹೆದರುವುದಿಲ್ಲ" ಎಂದು ಆಕೆ ಹೇಳಿದ್ದಾಳೆ.
ಟೆಸ್ಸಾ ಸಾವಿಗೆ ಕಾರಣವೇನು?
ಟೆಸ್ಸಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಳಂತೆ. ಹಲವು ವೈದ್ಯಕೀಯ ಪರೀಕ್ಷೆಯ ಹೊರತಾಗಿಯೂ, ಯಾವ ರೋಗ ಎಂಬುದು ತಿಳಿದುಬಂದಿಲ್ಲ. ಕೆಲವು ವೈದ್ಯರು ಆಕೆ ಬದುಕುಳಿಯುವುದು ಕಷ್ಟ ಎಂದು ಹೇಳಿದ್ದಾರೆ.ಆದರೆ ಈಗ ಸಾವಿನ ಕುರಿತಾದ ಟೆಸ್ಸಾಳ ದೃಷ್ಟಿಕೋನ ಬದಲಾಗಿದೆಯಂತೆ. "ಸಾವೆಂದರೆ ತುಂಬಾ ಭಯಪಡುತ್ತಿದ್ದೆ, ಆದರೆ ಈಗ ಅದು ಶಾಂತಿಯುತ ಪರಿವರ್ತನೆ ಎಂದು ನನಗೆ ತಿಳಿದಿದೆ" ಎಂದು ಆಕೆ ಹೇಳಿದ್ದಾಳೆ.