ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಯಸ್ಕರ ವೇದಿಕೆ ಓನ್ಲಿಫ್ಯಾನ್ಸ್‌ನಲ್ಲಿ ಅಶ್ಲೀಲ ಫೋಟೊ ಮಾರಾಟ ಮಾಡುತ್ತಿದ್ದ ಸ್ಕಾಟ್ಲೆಂಡ್‌ ಶಿಕ್ಷಕಿ ಅಮಾನತು

ಸ್ಕಾಟ್ಲೆಂಡ್‌ನ ಗ್ಲಾಸ್ಗೋದ ಬನ್ನರ್‌ಮನ್ ಹೈಸ್ಕೂಲ್‌ನ ಭೌತಶಾಸ್ತ್ರ ಶಿಕ್ಷಕಿ ಕಿರ್ಸ್ಟಿ ಬುಚನ್ ವಯಸ್ಕರ ವೇದಿಕೆ ಓನ್ಲಿಫ್ಯಾನ್ಸ್‌ನಲ್ಲಿ ಖಾತೆ ಹೊಂದಿರುವ ಅಂಶ ಬಹಿರಂಗವಾದ ನಂತರ ಉದ್ಯೋಗದಿಂದ ವಜಾಗೊಂಡಿದ್ದಾರೆ. ವಿಷಯವನ್ನು ತಿಳಿದು ಕೆಲವು ಪೋಷಕರು ಕೋಪಗೊಂಡಿದ್ದರು. ಗ್ಲಾಸ್ಗೋ ಸಿಟಿ ಕೌನ್ಸಿಲ್ ತನಿಖೆ ಆರಂಭಿಸಿ, ಪ್ರಕರಣವನ್ನು ಜನರಲ್ ಟೀಚಿಂಗ್ ಕೌನ್ಸಿಲ್ ಫಾರ್ ಸ್ಕಾಟ್ಲೆಂಡ್ (GTCS)ಗೆ ಒಪ್ಪಿಸಿತ್ತು.

ತನ್ನದೇ ಅಶ್ಲೀಲ ಫೋಟೊ ಮಾರಾಟ ಮಾಡುತ್ತಿದ್ದ ಸ್ಕಾಟ್ಲೆಂಡ್‌ ಶಿಕ್ಷಕಿ ಅಮಾನತು

Profile Sushmitha Jain Jun 11, 2025 6:50 PM

ಎಡಿನ್‌ಬರ್ಗ್‌: ಸ್ಕಾಟ್ಲೆಂಡ್‌ನ (Scotland) ಗ್ಲಾಸ್ಗೋದ ಬನ್ನರ್‌ಮನ್ ಹೈಸ್ಕೂಲ್‌ನ ಭೌತಶಾಸ್ತ್ರ ಶಿಕ್ಷಕಿ (Physics Teacher) ಕಿರ್ಸ್ಟಿ ಬುಚನ್ (34) ವಯಸ್ಕರ ವೇದಿಕೆ ಓನ್ಲಿಫ್ಯಾನ್ಸ್‌ನಲ್ಲಿ (OnlyFans) ಖಾತೆ ಹೊಂದಿರುವ ಅಂಶ ಬಹಿರಂಗವಾದ ನಂತರ ಉದ್ಯೋಗದಿಂದ ವಜಾಗೊಂಡಿದ್ದಾರೆ. ವಿಷಯವನ್ನು ತಿಳಿದು ಕೆಲವು ಪೋಷಕರು ಕೋಪಗೊಂಡಿದ್ದರು. 2022ರಲ್ಲಿ ರೆಕಾರ್ಡ್‌ಗೆ ನೀಡಿದ ಸಂದರ್ಶನದಲ್ಲಿ, ವೇತನ ವಿವಾದದಿಂದಾಗಿ ಆದಾಯಕ್ಕಾಗಿ ಓನ್ಲಿಫ್ಯಾನ್ಸ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡು ಒಂದೇ ತಿಂಗಳಲ್ಲಿ 60,000 ಪೌಂಡ್‌ (69 ಲಕ್ಷ ರೂ.) ಗಳಿಸಿದ್ದಾಗಿ ಎಂದು ಬುಚನ್ ಹೇಳಿದ್ದರು. ಗ್ಲಾಸ್ಗೋ ಸಿಟಿ ಕೌನ್ಸಿಲ್ ತನಿಖೆ ಆರಂಭಿಸಿ, ಪ್ರಕರಣವನ್ನು ಜನರಲ್ ಟೀಚಿಂಗ್ ಕೌನ್ಸಿಲ್ ಫಾರ್ ಸ್ಕಾಟ್ಲೆಂಡ್ (GTCS)ಗೆ ಒಪ್ಪಿಸಿತು.

ಓನ್ಲಿಫ್ಯಾನ್ಸ್‌ನಲ್ಲಿ ‘ಜೆಸ್ಸಿಕಾ ಜಾಕ್‌ರ್ಯಾಬಿಟ್‌ಎಕ್ಸ್’ ಎಂಬ ಹೆಸರಿನಲ್ಲಿ ಖಾತೆ ತೆರೆದ ಬುಚನ್, ತಮ್ಮ ವೃತ್ತಿಯನ್ನು ಮಾರಾಟದ ಸಾಧನವಾಗಿ ಬಳಸಿದ್ದಾರೆ ಎಂದು GTCS ಆರೋಪಿಸಿತು. ಆಕೆಯ ಪ್ರೊಫೈಲ್‌ನಲ್ಲಿ ‘ಗುಡ್ ಟೀಚರ್ ಗಾನ್ ಬ್ಯಾಡ್’ ಎಂಬ ವಿವರವಿತ್ತು. 18 ವರ್ಷದೊಳಗಿನವರಿಗೆ ಪ್ರವೇಶವನ್ನು ತಡೆಯದಿರುವುದು ಆಕೆಯ ವೈಫಲ್ಯ ಎಂದು GTCS ತೀರ್ಮಾನಿಸಿತು.

ಈ ಸುದ್ದಿಯನ್ನೂ ಓದಿ: Viral News: ಒಂದೇ ದಿನ ಬರೋಬ್ಬರಿ 2,000 ಪುರುಷರೊಂದಿಗೆ ಸೆಕ್ಸ್‌ ಮಾಡ್ತೇನೆ... ಮತ್ತೊಂದು ಹುಚ್ಚಾಟಕ್ಕೆ ಮುಂದಾದ ಓನ್ಲಿ ಫ್ಯಾನ್ಸ್‌ ಮಾಡೆಲ್‌

ಶಿಕ್ಷಣ ಶಿಸ್ತು ಸಮಿತಿಯ ಮುಂದೆ ಮೂರು ಆರೋಪಗಳನ್ನು ಎದುರಿಸಿದ ಬುಚನ್, ತಮ್ಮ ಗುರುತು ಮತ್ತು ವೃತ್ತಿಯನ್ನು ಮರೆಮಾಚಲಿಲ್ಲ ಎಂದು GTCS ಕಂಡುಕೊಂಡಿತು. ಸೋಮವಾರ GTCS ಆಕೆಯನ್ನು ಶಿಕ್ಷಕ ವೃತ್ತಿಯಿಂದ ತೆಗೆದುಹಾಕಿತು. ಎರಡು ವರ್ಷಗಳವರೆಗೆ ಆಕೆ ಮರುನೋಂದಣಿಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಬುಚನ್ ಈ ತೀರ್ಪನ್ನು ‘ಅನ್ಯಾಯ’ ಎಂದು ಕರೆದಿದ್ದಾರೆ. “ಇದೊಂದು ಕಾಂಗರೂ ಕೋರ್ಟ್. ನಾನು ಶಿಕ್ಷಕಿಯಾಗಿ ಉತ್ತಮವಾಗಿದ್ದೆ. ಆದರೆ ಈ ತೀರ್ಪು ಸ್ವಾತಂತ್ರ್ಯದ ಮೇಲಿನ ದಾಳಿ. ನಾನು ವಯಸ್ಕರ ಸೈಟ್‌ನಲ್ಲಿ ಕೆಲಸ ಮಾಡಿದ್ದು, ವಿದ್ಯಾರ್ಥಿಗಳು ಇದನ್ನು ನೋಡುತ್ತಾರೆ ಎಂದು ಭಾವಿಸಿರಲಿಲ್ಲ” ಎಂದು ಆಕೆ ತಿಳಿಸಿದ್ದಾರೆ.

“ನಾನು ನೈತಿಕ ಮೌಲ್ಯಗಳೊಂದಿಗೆ ಜೀವನ ನಡೆಸುತ್ತೇನೆ. ಶಿಕ್ಷಕಿಯಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸಿದ್ದೆ. ಈ ನಿಷೇಧ ನನ್ನನ್ನು ದುಃಖಕ್ಕೀಡು ಮಾಡಿದೆ” ಎಂದು ಬುಚನ್ ಹೇಳಿದ್ದಾರೆ. GTCSನ ಸಾಲಿಸಿಟರ್ ಗ್ಯಾರಿ ಬರ್ಟನ್, “ಬುಚನ್ ತಮ್ಮ ವೃತ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ. ಬುಚನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, “ನನ್ನ ಕೆಲಸದಿಂದ ಯಾರಿಗೂ ಹಾನಿಯಾಗಿಲ್ಲ” ಎಂದಿದ್ದಾರೆ.