Sobhita Dhulipala: ನಾಗಾರ್ಜುನ ಪುತ್ರ ಅಖಿಲ್ ಮದುವೆಯ ಅಪರೂಪದ ಫೋಟೊ ಹಂಚಿಕೊಂಡ ಶೋಭಿತಾ ಧುಲಿಪಾಲ
ಟಾಲಿವುಡ್ ಹಿರಿಯ ಕಲಾವಿದರಾದ ನಾಗಾರ್ಜುನ-ಅಮಲಾ ತಾರಾ ದಂಪತಿಯ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ (Akhil Akkineni) ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದರಾಬಾದ್ನಲ್ಲಿ ಕೆಲವು ದಿನಗಳ ಹಿಂದೆ ನಡೆದ ಅದ್ಧೂರಿ ಸಮಾರಂಭದಲ್ಲಿ ಅವರು ತಮ್ಮ ಗೆಳತಿ ಜೈನಾಬ್ ರಾವ್ಜಿ ಜತೆ ಸಪ್ತಪದಿ ತುಳಿದಿದ್ದಾರೆ. ಇದೀಗ ಅಖಿಲ್ ಅವರ ನಾಗಚೈತನ್ಯ ಅವರ ಪತ್ನಿ ಶೋಭಿತಾ ಧುಲಿಪಾಲ (Sobhita Dhulipala) ಮದುವೆ ಮತ್ತು ಆರತಕ್ಷತೆಯ ಅಪರೂಪದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.



ಕೆಂಪು ಬಣ್ಣದ ಅನಾರ್ಕಲಿ ತೊಟ್ಟು ರಿಸೆಪ್ಶನ್ಗೆ ಆಗಮಿಸಿದ ಶೋಭಿತಾ ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಎನಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಅವರ ವಿವಾಹ ನಾಗಚೈತನ್ಯ ಜತೆಗೆ ನಡೆದಿತ್ತು.

ತೆಲಂಗಾಣದ ಉದ್ಯಮಿ ಜುಲ್ಫಿ ರಾವ್ಜಿ ಅವರ ಪುತ್ರಿ ಜೈನಾಬ್ ರಾವ್ಜಿ ಮತ್ತು ಅಖಿಲ್ ಅಕ್ಕಿನೇನಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಜೋಡಿಯ ಮದುವೆ ಸಮಾರಂಭದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹೈದರಾಬಾದ್ನಲ್ಲಿ ಇವರ ವಿವಾಹ ನಡೆದಿದ್ದು, ಸ್ನೇಹಿತರು ಹಾಗೂ ಕುಟುಂಬದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ನಟ ನಾಗಾರ್ಜುನ ಅವರು ಮಗ ಅಖಿಲ್ ಜತೆಗೆ ಕುಳಿತು ವಿವಾಹ ವಿಧಿಗಳು ನಡೆಸಿಕೊಟ್ಟಿದ್ದಾರೆ. ಅದಾದ ಬಳಿಕ ನವದಂಪತಿ ನಾಗಾರ್ಜುನ-ಅಮಲಾ ಜತೆಗೆ ನಿಂತು ಪೋಸ್ ನೀಡಿದ್ದಾರೆ.

ಮದುವೆ ವೇಳೆ ಜೈನಾಬ್ ಪಾಸ್ಟೆಲ್ ಐವೊರಿ ಬಣ್ಣದ ಸೀರೆ ಹಾಗೂ ಗೋಲ್ಡ್ ಬ್ಲೌಸ್ನಲ್ಲಿ ಕ್ಯೂಟ್ ಆಗಿ ಕಂಡು ಬಂದರೆ, ಅಖಿಲ್ ಸರಳ ಮತ್ತು ಸಾಂಪ್ರದಾಯಿಕ ಪಂಚೆ ಧರಿಸಿದ್ದರು.

ನಾಗ ಚೈತನ್ಯ ಮತ್ತು ಶೋಭಿತಾ ಕಳೆದ ವರ್ಷ ಡಿ. 4ರಂದು ಹೈದರಾಬಾದ್ನಲ್ಲಿ ಸಪ್ತಪದಿ ತುಳಿದಿದ್ದರು. ಸದ್ಯ ಇಬ್ಬರು ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಇದ್ದಾರೆ.