ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಕಮ್‌ಬ್ಯಾಕ್‌ ಪಂದ್ಯದಲ್ಲಿ ಸೊನ್ನೆ ಸುತ್ತಿ ನಿರಾಶೆ ಮೂಡಿಸಿದ ಕರುಣ್‌ ನಾಯರ್‌!

ಇಂಗ್ಲೆಂಡ್‌ ವಿರುದ್ದದ ಲೀಡ್ಸ್‌ ಟೆಸ್ಟ್‌ ಪಂದ್ಯ ಕನ್ನಡಿಗ ಕರುಣ್‌ ನಾಯರ್‌ ಅವರ ಪಾಲಿಗೆ ಅತ್ಯಂತ ಮುಖ್ಯವಾಗಿತ್ತು. ಏಕೆಂದರೆ 7 ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಇದಾಗಿತ್ತು. ಆದರೆ, ಪಂದ್ಯದ ಎರಡನೇ ದಿನವಾದ ಶನಿವಾರ ಡಕ್‌ಔಟ್‌ ಆಗುವ ಮೂಲಕ ನಿರಾಶೆ ಮೂಡಿಸಿದರು. ಅಂದರೆ 3011 ದಿನಗಳ ಬಳಿಕ ಟೆಸ್ಟ್‌ ಪಂದ್ಯವನ್ನು ಆಡಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು.

8 ವರ್ಷಗಳ ಬಳಿಕ ಕಮ್‌ಬ್ಯಾಕ್‌ ಪಂದ್ಯದಲ್ಲಿ ಡಕ್‌ಔಟ್‌ ಆದ ಕನ್ನಡಿಗ!

8 ವರ್ಷಗಳ ಟೆಸ್ಟ್‌ ಕಮ್‌ಬ್ಯಾಕ್‌ ಪಂದ್ಯದಲ್ಲಿ ಕರುಣ್‌ ನಾಯರ್‌ ಡಕ್‌ಔಟ್‌.

Profile Ramesh Kote Jun 21, 2025 9:35 PM

ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ (IND vs ENG) ಭಾರತ ತಂಡ ಅದ್ಭುತ ಆರಂಭವನ್ನು ಕಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್‌ನಲ್ಲಿ 471 ರನ್‌ಗಳಿಗೆ ಆಲ್‌ಔಟ್‌ ಆಯಿತು. ಭಾರತದ ಪರ ಯಶಸ್ವಿ ಜೈಸ್ವಾಲ್ (Yashasvi Jaiswal), ಶುಭಮನ್‌ ಗಿಲ್ (Shubman Gill) ಮತ್ತು ರಿಷಭ್ ಪಂತ್ (Rishabh Pant) ಅದ್ಭುತ ಶತಕಗಳನ್ನು ಬಾರಿಸಿದರು. ಈ ಮೂವರು ಆಟಗಾರರಲ್ಲದೆ, ಟೀಮ್‌ ಇಂಡಿಯಾದ ಮತ್ತೊಬ್ಬ ಆಟಗಾರನ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಏಕೆಂದರೆ ಬರೋಬ್ಬರಿ 7 ವರ್ಷಗಳ ಬಳಿಕ ಅವರು ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಮರಳಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಅವರ ನಮ್ಮ ಕನ್ನಡಿಗ ಕರುಣ್‌ ನಾಯರ್‌!

ಕರುಣ್ ನಾಯರ್ 3006 ದಿನಗಳ ನಂತರ ಭಾರತ ತಂಡದ ಪರ ಟೆಸ್ಟ್ ಪ್ಲೇಯಿಂಗ್ XI ನಲ್ಲಿ ಆಡುವ ಅವಕಾಶವನ್ನು ಪಡೆದಿದ್ದರು. ಶನಿವಾರ ಶುಭಮನ್‌ ಗಿಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಕರುಣ್‌ ನಾಯರ್‌ ಆಡಿದ್ದು ಕೇವಲ 4 ಎಸೆತಗಳು ಮಾತ್ರ. ಅವರು 105ನೇ ಓವರ್‌ನಲ್ಲಿ ಬೆನ್‌ ಸ್ಟೋಕ್ಸ್‌ ಅವರ ಎಸೆತದಲ್ಲಿ ಇನ್‌ಔಟ್‌ ಆಡಲು ಹೋಗಿ ಕವರ್ಸ್‌ನಲ್ಲಿ ಕ್ಯಾಚ್‌ ಕೊಟ್ಟರು. ಆ ಮೂಲಕ 7 ವರ್ಷಗಳ ಬಳಿಕ ತಮ್ಮ ಕಮ್‌ಬ್ಯಾಕ್‌ ಪಂದ್ಯದಲ್ಲಿ ಅವರು ವಿಕೆಟ್‌ ಒಪ್ಪಿಸಿದರು. ಕವರ್ಸ್‌ನಲ್ಲಿ ನಿಂತ್ತಿದ್ದ ಒಲ್ಲಿ ಪೋಪ್‌ ಅದ್ಭುತವಾಗಿ ಕ್ಯಾಚ್‌ ಪಡೆದಿದ್ದರು.

IND vs ENG: ಎರಡನೇ ದಿನ ಇಂಗ್ಲೆಂಡ್‌ ಕಮ್‌ಬ್ಯಾಕ್‌, ಭಾರತ 471ಕ್ಕೆ ಆಲ್‌ಔಟ್‌!

ಕರುಣ್ ನಾಯರ್ 2017ರ ಮಾರ್ಚ್‌ 25 ರಂದು ಕೊನೆಯ ಬಾರಿ ಭಾರತ ತಂಡದ ಪರ ಟೆಸ್ಟ್‌ ಪಂದ್ಯವನ್ನು ಆಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಅವರು ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ. ವಿದರ್ಭ ತಂಡದ ಪರ ದೇಶಿ ಕ್ರಿಕೆಟ್‌ನಲ್ಲಿ ರನ್‌ ಹೊಳೆ ಹರಿಸುವ ಮೂಲಕ ಅವರು ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನವನ್ನು ಪಡೆದಿದ್ದರು.



2022ರಲ್ಲಿ ಭಾವನಾತ್ಮಕ ಪೋಸ್ಟ್‌ ಹಾಕಿದ್ದ ಕರುಣ್

ಒಂದು ಕಾಲದಲ್ಲಿ ಕರುಣ್ ನಾಯರ್ ಅವರು ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಬರೆದಿದ್ದರು. "ಪ್ರೀತಿಯ ಕ್ರಿಕೆಟ್‌, ಮತ್ತೊಂದು ಅವಕಾಶ ನೀಡು," ಎಂದು ಕರುಣ್‌ ನಾಯರ್‌ 2022ರಲ್ಲಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದರು. ಅವರು ಟೆಸ್ಟ್‌ ತಂಡಕ್ಕೆ ಆಯ್ಕೆಯಾದ ಬಳಿಕ ಇವರ ಟ್ವಿಟ್‌ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

IND vs ENG: ʻನಿಮ್ಮ ಭವಿಷ್ಯವಾಣಿ ಸುಳ್ಳುʼ-ಮೈಕಲ್‌ ವಾನ್‌ಗೆ ತಿರುಗೇಟು ಕೊಟ್ಟ ನವಜೋತ್‌ ಸಿಧು!

ತ್ರಿಶತಕ ಸಿಡಿಸಿದ್ದ ಕರುಣ್‌ ನಾಯರ್‌

ಕಳೆದ ದೇಶಿ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ಕರುಣ್ ನಾಯರ್ ಅವರ ಪುನರಾಗಮನದ ಬಗ್ಗೆ ಎಲ್ಲಾ ಕಡೆಯಿಂದ ಚರ್ಚೆ ನಡೆಯಿತು. ಆಯ್ಕೆದಾರರು ಅವರನ್ನು ತಂಡಕ್ಕೆ ಆಯ್ಕೆ ಮಾಡಿದರು. ಕರುಣ್ ನಾಯರ್ ತಮ್ಮ ಟೆಸ್ಟ್‌ ವೃತ್ತಿ ಜೀವನದ ಆರಂಭಿಕ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ತ್ರಿಶತಕ ಗಳಿಸಿದ್ದರು. ವೀರೇಂದ್ರ ಸೆಹ್ವಾಗ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದರು. ಆದರೆ ನಂತರ ಅವರನ್ನು ತಂಡದಿಂದ ಕೈಬಿಡಲಾಗಿತ್ತು.