ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎರಡನೇ ಟೆಸ್ಟ್‌ ಗೆಲ್ಲಬೇಕೆಂದರೆ ಕುಲ್ದೀಪ್‌ ಯಾದವ್ ಆಡಬೇಕೆಂದ ಮೊಹಮ್ಮದ್‌ ಅಝರುದ್ದಿನ್‌!

ಇಂಗ್ಲೆಂಡ್‌ ವಿರುದ್ಧ ಜುಲೈ 2 ರಂದು ಆರಂಭವಾಗಲಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವರನ್ನು ಆಡಿಸಬೇಕೆಂದು ಮಾಜಿ ನಾಯಕ ಮೊಹಮ್ಮದ್‌ ಅಝರುದ್ದಿನ್‌ ಆಗ್ರಹಿಸಿದ್ದಾರೆ. ಲೀಡ್ಸ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಕುಲ್ದೀಪ್‌ ಯಾದವ್‌ ಆಡಿರಲಿಲ್ಲ.

ಎರಡನೇ ಟೆಸ್ಟ್‌ನಲ್ಲಿ ಕುಲ್ದೀಪ್‌ ಯಾದವ್‌ ಆಡಬೇಕೆಂದ ಅಝರುದ್ದಿನ್‌!

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕುಲ್ದೀಪ್‌ ಯಾದವ್‌ ಆಡಬೇಕೆಂದ ಮೊಹಮ್ಮದ್‌ ಅಝರುದ್ದಿನ್‌.

Profile Ramesh Kote Jun 30, 2025 4:41 PM

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ವಿರುದ್ಧ ಜುಲೈ 2 ರಂದು ಆರಂಭವಾಗಲಿರುವ ಎರಡನೇ ಟೆಸ್ಟ್‌ ಪಂದ್ಯದ(IND vs ENG) ನಿಮಿತ್ತ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ಗೆ (Kuldeep Yadav) ಅವಕಾಶ ನೀಡಬೇಕೆಂದು ಮಾಜಿ ನಾಯಕ ಮೊಹಮ್ಮದ್‌ ಅಝರುದ್ದಿನ್‌ (Mohammad Azharuddin) ಸಲಹೆ ನೀಡಿದ್ದಾರೆ. ಜೂನ್‌ 20 ರಿಂದ 24ರವರೆಗೆ ಲೀಡ್ಸ್‌ ಹೆಡಿಂಗ್ಲೆ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ತಂಡ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಮ್‌ ಇಂಡಿಯಾ 0-1 ಹಿನ್ನಡೆಯನ್ನು ಅನುಭವಿಸಿದೆ. ಆರಂಭಿಕ ಟೆಸ್ಟ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಬಿಟ್ಟರೆ ಇನ್ನುಳಿದ ಬೌಲರ್‌ಗಳು ಉತ್ತಮ ಬೌಲಿಂಗ್‌ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಕುಲ್ದೀಪ್‌ ಯಾದವ್‌ಗೆ ಪ್ಲೇಯಿಂಗ್‌ xiನಲ್ಲಿ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಮೊಹಮ್ಮದ್‌ ಅಝರುದ್ದಿನ್‌, "ಭಾರತ ತಂಡ ಜಸ್‌ಪ್ರೀತ್‌ ಬುಮ್ರಾ ಮೇಲೆ ಹೆಚ್ಚು ಅವಲಂಬನೆಯಾಗಿದೆ. ಪಂದ್ಯವನ್ನು ಆಡುವುದು ಸುಲಭವಲ್ಲ, ನಿಮಗೆ ಅನುಭವಿ ಬೌಲರ್‌ಗಳ ಅಗತ್ಯವಿದೆ ಹಾಗೂ ಕುಲ್ದೀಪ್‌ ಯಾದವ್‌ಗೆ ಪ್ಲೇಯಿಂಗ್‌ XIನಲ್ಲಿ ಆಡಲು ಅವಕಾಶ ನೀಡಬೇಕಾಗಿದೆ. ಬ್ಯಾಟಿಂಗ್‌ ಕುಸಿತದಿಂದಾಗಿ ನಾವು ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದೆವು. ನಿಮ್ಮ ಬೌಲಿಂಗ್‌ ವಿಭಾಗ ಪರಿಪೂರ್ಣವಾಗಬೇಕೆಂದರೆ, ನೀವು ಸರಿಯಾದ ಬೌಲರ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ," ಎಂದು ಅವರು ಹೇಳಿದ್ದಾರೆ.

IND vs ENG: ವಿರಾಟ್ ಕೊಹ್ಲಿಯ ಮಹತ್ವದ ದಾಖಲೆ ಮುರಿಯುವ ಸನಿಹದಲ್ಲಿ ರಿಷಭ್ ಪಂತ್!

2024ರ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದರು. ಆದರೆ, ವಾಷಿಂಗ್ಟನ್‌ ಸುಂದರ್‌ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಭಾಗವಾಗಿದ್ದರು. ಈ ಸರಣಿಯ ಆರಂಭಿಕ ಪಂದ್ಯದಲ್ಲಿ ಆರ್‌ ಅಶ್ವಿನ್‌ ಬದಲು ವಾಷಿಂಗ್ಟನ್‌ ಸುಂದರ್‌ ಹಾಗೂ ರವೀಂದ್ರ ಜಡೇಜಾ ಆಡಿದ್ದರು. ಆರ್‌ ಅಶ್ವಿನ್‌ ಅವರು ಒಂದೇ ಒಂದು ಪಂದ್ಯದಲ್ಲಿ ಮಾತ್ರ ಆಡಿದ್ದರು. ಮೂರನೇ ಟೆಸ್ಟ್‌ ಪಂದ್ಯದ ಬಳಿಕ ಆರ್‌ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಕುಲ್ದೀಪ್‌ ಯಾದವ್‌ ಅವರು 2017ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ಇಲ್ಲಿಯವರೆಗೂ ಆಡಿದ 13 ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು. ವಾಷಿಂಗ್ಟನ್‌ ಸುಂದರ್‌ 2021ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಜುಲೈ 2 ರಿಂದ 5 ರವರೆಗೆ ಎರಡನೇ ಟೆಸ್ಟ್‌ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಂಗ್‌ XI ನಲ್ಲಿ ವಾಷಿಂಗ್ಟನ್‌ ಹಾಗೂ ಕುಲ್ದೀಪ್‌ ಯಾದವ್‌ ಅವರ ನಡುವೆ ಪೈಪೋಟಿ ನಡೆಯುತ್ತಿದೆ.

IND vs ENG: ಪೀಟರ್ಸನ್ ಸಲಹೆಯನ್ನು ಬಹಿರಂಗಪಡಿಸಿದ ಕುಲ್ದೀಪ್

ಭಾರತ ಟೆಸ್ಟ್‌ ತಂಡ: ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ, ಆಕಾಶ್‌ ಸಿಂಗ್‌, ಅರ್ಷದೀಪ್‌ ಸಿಂಗ್‌, ಕುಲ್ದೀಪ್‌ ಯಾದವ್‌