Finn Allen: ವಿಸ್ಫೋಟಕ ಬ್ಯಾಟಿಂಗ್ ನಡೆಸಿ ವಿಶ್ವ ದಾಖಲೆ ಬರೆದ ಆರ್‌ಸಿಬಿ ಮಾಜಿ ಆಟಗಾರ
ಎಂಎಲ್ಸಿ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಫಿನ್ ಅಲೆನ್ ಕೇವಲ 51 ಎಸೆತಗಳಲ್ಲಿ 5 ಬೌಂಡರಿ, 19 ಸಿಕ್ಸರ್ ಸಹಿತ 151 ರನ್ ಸಿಡಿಸಿದರು. ಈ ಮೂಲಕ 5 ವಿಕೆಟ್ಗೆ 269 ರನ್ ಕಲೆಹಾಕಿದ ಸ್ಯಾನ್ ಫ್ರಾನ್ಸಿಸ್ಕೋ ತಂಡ ವಾಷಿಂಗ್ಟನ್ ಫ್ರೀಡಂ ವಿರುದ್ಧ 123 ರನ್ಗಳಿಂದ ಗೆದ್ದು ಬೀಗಿತು.


ಓಕ್ಲ್ಯಾಂಡ್: ನ್ಯೂಜಿಲೆಂಡ್ನ ಫಿನ್ ಅಲೆನ್ ಅವರು ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್(MLC 2025) (ಎಂಎಲ್ಸಿ) ಟಿ20 ಲೀಗ್‌ನಲ್ಲಿ ಸ್ಯಾನ್ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡದ ಪರ ಒಂದೇ ಇನಿಂಗ್ಸ್ನಲ್ಲಿ 19 ಸಿಕ್ಸರ್ ಸಿಡಿಸುವ ಮೂಲಕ ನೂತನ ವಿಶ್ವದಾಖಲೆ ಬರೆದಿದ್ದಾರೆ. ಫಿನ್ ಅಲೆನ್ ಅವರನ್ನು 2022ರ ಐಪಿಎಲ್ ಮಿನಿ ಹರಾಜಿನಲ್ಲಿ 80 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ತಂಡ ಖರೀದಿಸಿತ್ತು. ಆದರೆ ಐಪಿಎಲ್ 2 ಆವೃತ್ತಿಗಳಲ್ಲಿ ಪದಾರ್ಪಣೆಯ ಅವಕಾಶವೇ ದೊರೆಯಲಿಲ್ಲ. ಇದೀಗ ಟಿ20 ಲೀಗ್‌ನಲ್ಲಿ ತಮ್ಮ ಬ್ಯಾಟಿಂಗ್ ಪ್ರತಾಪ ತೋರಿಸಿರುವ ಅವರಿಗೆ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ದೊಡ್ಡ ಮೊತ್ತ ಸಿಗುವ ಸಾಧ್ಯತೆ ಇದೆ.
ಎಂಎಲ್ಸಿ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಫಿನ್ ಅಲೆನ್ ಕೇವಲ 51 ಎಸೆತಗಳಲ್ಲಿ 5 ಬೌಂಡರಿ, 19 ಸಿಕ್ಸರ್ ಸಹಿತ 151 ರನ್ ಸಿಡಿಸಿದರು. ಈ ಮೂಲಕ 5 ವಿಕೆಟ್ಗೆ 269 ರನ್ ಕಲೆಹಾಕಿದ ಸ್ಯಾನ್ ಫ್ರಾನ್ಸಿಸ್ಕೋ ತಂಡ ವಾಷಿಂಗ್ಟನ್ ಫ್ರೀಡಂ ವಿರುದ್ಧ 123 ರನ್ಗಳಿಂದ ಗೆದ್ದು ಬೀಗಿತು.
ಇದನ್ನೂ ಓದಿ IPL 2025: ಆರ್‌ಸಿಬಿಗೆ ಕಪ್ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!
49 ಎಸೆತಗಳಲ್ಲೇ 150 ರನ್ ಪೂರೈಸಿದ ಅಲೆನ್ ಟಿ20ಯಲ್ಲಿ ಅತಿವೇಗದ 150 ರನ್ ಬಾರಿಸಿದ ದಾಖಲೆ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಡಿವಾಲ್ಡ್ ಬ್ರೆವಿಸ್ ಹೆಸರಿನಲ್ಲಿತ್ತು. ಬ್ರೆವಿಸ್ 2022ರಲ್ಲಿ 52 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.