ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Kakar: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖ್ಯಾತ ಸೀರಿಯಲ್‌ ನಟಿಗೆ ಆಪರೇಷನ್‌ ಸಕ್ಸಸ್‌!

ಖ್ಯಾತ ಹಿಂದಿ ಕಿರುತೆರೆ ನಟಿ ದೀಪಿಕಾ ಕಾಕರ್‌ ಇತ್ತೀಚಿಗೆ ಲಿವರ್‌ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಈ ಹಿನ್ನಲೆ ಅವರು ಕಳೆದ 11ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ದೀಪಿಕಾರವರಿಗೆ ಎರಡನೇ ಹಂತದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ತಮ್ಮ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಖ್ಯಾತ ಸೀರಿಯಲ್‌ ನಟಿಗೆ ಕ್ಯಾನ್ಸರ್‌ ಆಪರೇಷನ್‌ ಸಕ್ಸಸ್‌!

Profile Rakshita Karkera Jun 14, 2025 1:32 PM

ಮುಂಬೈ: ಕಳೆದ ಕೆಲವು ತಿಂಗಳಿಂದ ಲಿವರ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿಂದಿ ಕಿರುತೆರೆ ನಟಿ ನಟಿ ದೀಪಿಕಾ ಕಾಕರ್‌(Actress Dipika kakar) ಅವರು ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ದೀಪಿಕಾ ಕಳೆದ 11 ದಿನಗಳಿಂದ ಮುಂಬೈನ ಕೊಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದು ಅವರ ಅಭಿಮಾನಿಗಳಲ್ಲಿ ಅತೀವ ಆತಂಕ ಉಂಟುಮಾಡಿತ್ತು. ಇದೀಗ ದೀಪಿಕಾಗೆ ಎರಡನೇ ಹಂತದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಡಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಇನ್ನು ಚಿಕಿತ್ಸೆ ಮುಂದುವರೆಯಲಿದೆ ಸದ್ಯದ ಮಟ್ಟಿಗೆ ದೀಪಿಕಾ ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದಾರೆ.

ಇನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ನಟಿ ದೀಪಿಕಾ ಅವರ ಅಧಿಕೃತ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು, ಆಪರೇಷನ್‌ ವೇಳೆ ಕ್ಯಾನ್ಸರ್‌ನಿಂದ ಕೂಡಿದ್ದ ಟ್ಯೂಮರ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. 11 ದಿನ ತುಂಬಾ ಕಷ್ಟವಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ಅದ್ಭುತವಾಗಿ ನೋಡಿಕೊಂಡರು. ಸದ್ಯದ ಮಟ್ಟಿಗೆ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಚಿಕಿತ್ಸೆ ಮುಂದುವರೆಯಲಿದ್ದು, ಆದಷ್ಟು ಬೇಗ ಗುಣಮುಖಳಾಗುತ್ತೇನೆ ಎನ್ನುವ ಆತ್ಮವಿಶ್ವಾಸವಿದೆ ಎಂದು ಹೇಳಿದ್ದು, ನನ್ನ ಅಭಿಮಾನಿಗಳು ಹಾಗೂ ಸ್ನೇಹಿತರ ಪ್ರಾರ್ಥನೆಗಳು, ನನ್ನ ದೊಡ್ಡ ಶಕ್ತಿಯಾಗಿದೆ. ಇನ್ನೂ ನನ್ನ ಮುಂದಿನ ಚಿಕಿತ್ಸೆ ಸರಾಗವಾಗಿ ನಡೆಯಲಿ ಎಂದು ನೀವು ಹಾರೈಸುತ್ತೀರಿ ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ದೀಪಿಕಾ ಪತಿ ನಟ ಶೋಯಬ್ ಇಬ್ರಾಹಿಂ ಹೇಳಿದ್ದೇನು?

ದೀಪಿಕಾ ಪತಿ ಶೋಯಬ್ ಇಬ್ರಾಹಿಂ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮ್ಯಾಲಿಗ್ನೆಂಟ್ ಟ್ಯೂಮರ್ ಆದ ಕಾರಣಚಿಕಿತ್ಸೆಗೊಳಪಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಇನ್ನೂ ಚಿಕಿತ್ಸೆಯ ಹಲವು ಹಂತಗಳು ಬಾಕಿ ಉಳಿದಿವೆ. ಸದ್ಯದ ಮಟ್ಟಿಗೆ ದೀಪಿಕಾ ಆರೋಗ್ಯ ಸುಧಾರಿಸಿದೆ.ಕಳೆದ ಕೆಲವು ದಿನಗಳು ನನಗೆ ಮತ್ತು ನನ್ನ ಕುಟುಂಬಕ್ಕೆ ಆತಂಕವಾಗಿತ್ತು. ನಿಮ್ಮಲ್ಲರ ಪ್ರೀತಿಗೆ ನಾವು ಋಣಿಯಾಗಿದ್ದೇವೆ ಎಂದು ಹೇಳಿದ್ದಾರೆ