ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dilip Doshi: ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ನಿಧನ

15 ಏಕದಿನ ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದರು. 1968-69ರ ಋತುವಿನಲ್ಲಿ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದೋಷಿ, 1986 ರಲ್ಲಿ ನಿವೃತ್ತರಾಗುವವರೆಗೂ 238 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಮತ್ತು 898 ವಿಕೆಟ್‌ಗಳನ್ನು ಪಡೆದರು. ಈ ಸಮಯದಲ್ಲಿ ಅವರು ಬಂಗಾಳ ಮತ್ತು ಸೌರಾಷ್ಟ್ರವನ್ನು ಪ್ರತಿನಿಧಿಸಿದರು.

ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ನಿಧನ

Profile Abhilash BC Jun 24, 2025 9:14 AM

ಲಂಡನ್‌: ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ(Dilip Doshi) ಅವರು ಸೋಮವಾರ ರಾತ್ರಿ ಲಂಡನ್‌ನಲ್ಲಿ 77 ನೇ ವಯಸ್ಸಿನಲ್ಲಿ ನಿಧನರಾದರು(Dilip Doshi passed away) ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ದೋಶಿ ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ. ಭಾರತ ಪರ 33 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಪ್ರಮುಖ ಆಟಗಾರರಾಗಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ತೋರಿದ್ದರೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದೋಶಿ ತಡವಾಗಿ ಆಯ್ಕೆಯಾರು. 32 ನೇ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದರು. 1979-83ರ ಅವಧಿಯಲ್ಲಿ ಭಾರತ ಪರ ಆಡಿದ ಅವರು, 33 ಟೆಸ್ಟ್‌ಗಳಲ್ಲಿ 114 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಲ್ಲಿ ಆರು ಐದು ವಿಕೆಟ್‌ ಗೊಂಚಲು ಸೇರಿದೆ.

15 ಏಕದಿನ ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದರು. 1968-69ರ ಋತುವಿನಲ್ಲಿ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದೋಷಿ, 1986 ರಲ್ಲಿ ನಿವೃತ್ತರಾಗುವವರೆಗೂ 238 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಮತ್ತು 898 ವಿಕೆಟ್‌ಗಳನ್ನು ಪಡೆದರು. ಈ ಸಮಯದಲ್ಲಿ ಅವರು ಬಂಗಾಳ ಮತ್ತು ಸೌರಾಷ್ಟ್ರವನ್ನು ಪ್ರತಿನಿಧಿಸಿದರು. ನಿವೃತ್ತಿ ಬಳಿಕ ಲಂಡನ್‌ನಲ್ಲಿ ನೆಲೆಸಿದ್ದರು.

ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಸೋಮವಾರದ ದಿನದಾಟ ಮುಗಿದ ನಂತರ ಚೇತೇಶ್ವರ ಪೂಜಾರ ಅವರು ದೋಶಿಗೆ ಗೌರವ ಸಲ್ಲಿಸಿದರು. ಬಿಸಿಸಿಐ ಕೂಡ ಸಂತಾಪ ಸೂಚಿಸಿದೆ.

ಬಿಸಿಸಿಐನ ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಕೂಡ ಸಂತಾಪ ಸೂಚಿಸಿದ್ದು, ಇದು ತಮಗೆ ಅತ್ಯಂತ ನೋವಿನ ಮತ್ತು ವೈಯಕ್ತಿಕ ನಷ್ಟ ಎಂದು ಹೇಳಿದರು. "ದಿಲೀಪ್ ದಂತಕಥೆಯ ಕ್ರಿಕೆಟಿಗರಲ್ಲಿ ಒಬ್ಬರು ಮಾತ್ರವಲ್ಲ, ನಾನು ತಿಳಿದಿರುವ ಅತ್ಯುತ್ತಮ ಮನುಷ್ಯರಲ್ಲಿ ಒಬ್ಬರು. ಅವರ ಉದಾತ್ತ ಹೃದಯ, ಸಮಗ್ರತೆ ಮತ್ತು ಆಟಕ್ಕೆ ಅಮೂಲ್ಯವಾದ ಸಮರ್ಪಣೆ ನಿಜವಾಗಿಯೂ ವಿಶೇಷವಾಗಿಸಿತು" ಎಂದು ಶಾ ಹೇಳಿದರು.

ಇದನ್ನೂ ಓದಿ ಹೃದಯಾಘಾತದಿಂದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ನಿಧನ