ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishabh Pant: ಧೋನಿಯ ಎರಡು ದಾಖಲೆ ಮೇಲೆ ಕಣ್ಣಿಟ್ಟ ಪಂತ್‌

ಸೆನಾ ದೇಶಗಳಲ್ಲಿ, ಪಂತ್ 26 ಟೆಸ್ಟ್‌ಗಳಲ್ಲಿ 37.35 ರ ಸರಾಸರಿಯಲ್ಲಿ 1,681 ರನ್ ಗಳಿಸಿದ್ದಾರೆ. ಎಂಎಸ್ ಧೋನಿಯನ್ನು ಹಿಂದಿಕ್ಕಲು ಮತ್ತು ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯನ್ ವಿಕೆಟ್ ಕೀಪರ್ ಆಗಲು ಅವರಿಗೆ ಅರ್ಧಶತಕದ ಅಗತ್ಯವಿದೆ.

ಧೋನಿಯ ಎರಡು ದಾಖಲೆ ಮೇಲೆ ಕಣ್ಣಿಟ್ಟ ಪಂತ್‌

Profile Abhilash BC Jun 19, 2025 4:13 PM

ಲೀಡ್ಸ್‌: ಇಂಗ್ಲೆಂಡ್‌ ವಿರುದ್ಧದ(IND vs ENG Test) ಸರಣಿಯಲ್ಲಿ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಷಭ್‌ ಪಂತ್‌(Rishabh Pant)ಗೆ ಮಾಜಿ ದಿಗ್ಗಜ ಆಟಗಾರ ಮಹೇಂದ್ರ ಸಿಂಗ್‌ ಧೋನಿ(MS Dhoni) ಅವರ ಎರಡು ಪ್ರಮುಖ ದಾಖಲೆಯನ್ನು ಮುರಿದು ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕೀಪರ್ ಆಗುವ ಸುವರ್ಣ ಅವಕಾಶವಿದೆ. ಪಂತ್‌ ಮನಸ್ಸು ಮಾಡಿದರೆ ಶುಕ್ರವಾರ ಲೀಡ್ಸ್‌ನಲ್ಲಿ ಆರಂಭವಾಗುವ ಮೊದಲ ಟೆಸ್ಟ್‌ ಪಂದ್ಯದಲ್ಲೇ ಧೋನಿ ದಾಖಲೆ ಮುರಿಯಬಹುದು.

ಹೌದು, ಪಂತ್‌ ಅವರು ಇಂಗ್ಲೆಂಡ್‌ ಸರಣಿಯಲ್ಲಿ ಶತಕವೊಂದನ್ನು ಬಾರಿಸಿದರೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಕೀಪರ್ ಆಗಬಹುದು. ಸದ್ಯ ಪಂತ್‌ ಮತ್ತು ಧೋನಿ ತಲಾ 6 ಶತಕ ಬಾರಿಸಿದಾರೆ.

ಶತಕದ ದಾಖಲೆ ಮಾತ್ರವಲ್ಲದೆ, ಪಂತ್‌ಗೆ ಧೋನಿಯ ಮತ್ತೊಂದು ದಾಖಲೆಯನ್ನು ಮುರಿಯುವ ಅವಕಾಶವಿದೆ. ಸೆನಾ ದೇಶಗಳಲ್ಲಿ, ಪಂತ್ 26 ಟೆಸ್ಟ್‌ಗಳಲ್ಲಿ 37.35 ರ ಸರಾಸರಿಯಲ್ಲಿ 1,681 ರನ್ ಗಳಿಸಿದ್ದಾರೆ. ಎಂಎಸ್ ಧೋನಿಯನ್ನು ಹಿಂದಿಕ್ಕಲು ಮತ್ತು ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯನ್ ವಿಕೆಟ್ ಕೀಪರ್ ಆಗಲು ಅವರಿಗೆ ಅರ್ಧಶತಕದ ಅಗತ್ಯವಿದೆ. ಧೋನಿ 32 ಸೆನಾ ಟೆಸ್ಟ್ ಪಂದ್ಯಗಳಲ್ಲಿ 31.47 ಸರಾಸರಿಯಲ್ಲಿ 1,732 ರನ್ ಗಳಿಸಿದ್ದಾರೆ. ಮತ್ತು ಇದರಲ್ಲಿ 13 ಅರ್ಧಶತಕಗಳು ಸೇರಿವೆ.

ಇದನ್ನೂ ಓದಿ IND vs ENG: ಲೀಡ್ಸ್‌ನಲ್ಲಿ ಭಾರತಕ್ಕೆ ಒಲಿಯಲಿ ಗೆಲುವಿನ ಲೀಡ್‌

ಪಂತ್‌ ವಿದೇಶಿ ನೆಲದಲ್ಲಿ ಉತ್ತಮ ಟೆಸ್ಟ್‌ ದಾಖಲೆಯನ್ನು ಹೊಂದಿದ್ದಾರೆ. ಹೀಗಾಗಿ ಅವರು ಈ ಬಾರಿಯೂ ತಂಡಕ್ಕೆ ನೆರವಾಗುದರಲ್ಲಿ ಅನುಮಾನವೇ ಬೇಡ. ಈ ಹಿಂದೆ ಇಂಗ್ಲೆಂಡ್‌, ಆಸ್ಟ್ರೇಲಿಯಾ ಸೇರಿ ವಿದೇಶಿ ಟೆಸ್ಟ್‌ಗಳಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದಾಗ ಪಂತ್‌ ತಮ್ಮ ಬಿರುಸಿನ ಬ್ಯಾಟಿಂಗ್‌ ಮೂಲಕ ತಂಡಕ್ಕೆ ನೆರವಾಗಿದ್ದರು. ಅಲ್ಲದೆ ಕೆಲವು ಪಂದ್ಯಗಳಲ್ಲಿ ಸ್ಮರಣೀಯ ಗೆಲುವು ಕೂಡ ತಂದುಕೊಟ್ಟಿದ್ದರು. ಈ ಬಾರಿ ಅವರು ತಂಡದ ಉಪನಾಯಕ ಜವಾಬ್ದಾರಿ ಹೊತ್ತಿದ್ದಾರೆ.