ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಕದಿನದಲ್ಲಿ ಗರಿಷ್ಠ ಚೇಸಿಂಗ್​ ದಾಖಲೆ ಬರೆದ ನೆದರ್ಲೆಂಡ್

Scotland vs Netherlands: ಆಸೀಸ್​ ವಿರುದ್ಧ 2006ರಲ್ಲಿ 435 ಮತ್ತು 2016ರಲ್ಲಿ 372 ರನ್​ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ಬೆನ್ನಟ್ಟಿರುವುದು ಏಕದಿನದಲ್ಲಿ ಮೊದಲೆರಡು ಚೇಸಿಂಗ್​ ದಾಖಲೆಗಳಾಗಿವೆ. ಮೂರನೇ ಗರಿಷ್ಠ ಮೊತ್ತದ ಚೇಸಿಂಗ್​ ದಾಖಲೆ ನೆದರ್ಲೆಂಡ್ ಹೆಸರಿನಲ್ಲಿ ದಾಖಲಾಯಿತು.

ಏಕದಿನದಲ್ಲಿ ಗರಿಷ್ಠ ಚೇಸಿಂಗ್​ ದಾಖಲೆ ಬರೆದ ನೆದರ್ಲೆಂಡ್

Profile Abhilash BC Jun 14, 2025 8:19 AM

ಡುಂಡೀ: ನೆದರ್ಲೆಂಡ್​ ತಂಡ ಸ್ಕಾಟ್ಲೆಂಡ್(Scotland vs Netherlands)​ ವಿರುದ್ಧದ ಏಕದಿನ ಪಂದ್ಯದಲ್ಲಿ 370 ರನ್​ಗಳ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ 3ನೇ ಗರಿಷ್ಠ ಮೊತ್ತದ ಚೇಸಿಂಗ್​ ದಾಖಲೆ ಬರೆದಿದೆ. ಏಕದಿನ ವಿಶ್ವಕಪ್​ ಅರ್ಹತಾ ಲೀಗ್ 2ರ(Cricket World Cup League 2) ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಡಚ್ಚರು ಈ ಸಾಧನೆ ಮಾಡಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಸ್ಕಾಟ್ಲೆಂಡ್​ ತಂಡ 6 ವಿಕೆಟ್​ಗೆ 369 ರನ್​ ಪೇರಿಸಿತು. ದಿಟ್ಟ ರೋತಿಯಲ್ಲಿ ಗುರಿ ಬೆನ್ನಟ್ಟಿದ ನೆದರ್ಲೆಂಡ್ ಮ್ಯಾಕ್ಸ್​ ಓ ಡೌಡ್​ (158*ರನ್​, 130 ಎಸೆತ, 13 ಬೌಂಡರಿ, 4 ಸಿಕ್ಸರ್​) ಬ್ಯಾಟಿಂಗ್‌ ನೆರವಿನಿಂದ 49.2 ಓವರ್​ಗಳಲ್ಲಿ 6 ವಿಕೆಟ್​ಗೆ 374 ರನ್​ ಸಿಡಿಸಿ ಜಯಿಸಿತು. ಸ್ಕಾಟ್ಲೆಂಡ್ ಪರ ಜಾರ್ಜ್​ ಮುನ್ಸೆ (191 ರನ್​, 150 ಎಸೆತ, 14 ಬೌಂಡರಿ, 11 ಸಿಕ್ಸರ್​) ಭರ್ಜರಿ ಬ್ಯಾಟಿಂಗ್​ ವ್ಯರ್ಥವಾಯಿತು.

ಆಸೀಸ್​ ವಿರುದ್ಧ 2006ರಲ್ಲಿ 435 ಮತ್ತು 2016ರಲ್ಲಿ 372 ರನ್​ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ಬೆನ್ನಟ್ಟಿರುವುದು ಏಕದಿನದಲ್ಲಿ ಮೊದಲೆರಡು ಚೇಸಿಂಗ್​ ದಾಖಲೆಗಳಾಗಿವೆ. ಮೂರನೇ ಗರಿಷ್ಠ ಮೊತ್ತದ ಚೇಸಿಂಗ್​ ದಾಖಲೆ ನೆದರ್ಲೆಂಡ್ ಹೆಸರಿನಲ್ಲಿ ದಾಖಲಾಯಿತು.

ವಿಶ್ವ ದಾಖಲೆ ಬರೆದ ಆರ್‌ಸಿಬಿ ಮಾಜಿ ಆಟಗಾರ

ನ್ಯೂಜಿಲೆಂಡ್​ನ ಫಿನ್​ ಅಲೆನ್ ಅವರು​ ಅಮೆರಿಕದ ಮೇಜರ್​ ಲೀಗ್​ ಕ್ರಿಕೆಟ್(MLC 2025)​ (ಎಂಎಲ್​ಸಿ) ಟಿ20 ಲೀಗ್​ನಲ್ಲಿ ಸ್ಯಾನ್​ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್​ ತಂಡದ ಪರ ಒಂದೇ ಇನಿಂಗ್ಸ್​ನಲ್ಲಿ 19 ಸಿಕ್ಸರ್​ ಸಿಡಿಸುವ ಮೂಲಕ ನೂತನ ವಿಶ್ವದಾಖಲೆ ಬರೆದಿದ್ದಾರೆ. ಫಿನ್​ ಅಲೆನ್​ ಅವರನ್ನು 2022ರ ಐಪಿಎಲ್ ಮಿನಿ ಹರಾಜಿನಲ್ಲಿ 80 ಲಕ್ಷ ರೂಪಾಯಿ ನೀಡಿ ಆರ್​ಸಿಬಿ ತಂಡ ಖರೀದಿಸಿತ್ತು. ಆದರೆ ಐಪಿಎಲ್ 2 ಆವೃತ್ತಿಗಳಲ್ಲಿ ಪದಾರ್ಪಣೆಯ ಅವಕಾಶವೇ ದೊರೆಯಲಿಲ್ಲ.

49 ಎಸೆತಗಳಲ್ಲೇ 150 ರನ್​ ಪೂರೈಸಿದ ಅಲೆನ್‌ ಟಿ20ಯಲ್ಲಿ ಅತಿವೇಗದ 150 ರನ್​ ಬಾರಿಸಿದ ದಾಖಲೆ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಡಿವಾಲ್ಡ್​ ಬ್ರೆವಿಸ್​ ಹೆಸರಿನಲ್ಲಿತ್ತು. ಬ್ರೆವಿಸ್‌ 2022ರಲ್ಲಿ 52 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.