ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lalit Modi: ಲಲಿತ್ ಮೋದಿ ಅರ್ಜಿ ವಜಾ; ಬಿಸಿಸಿಐಗೆ ದಂಡ ವಿಧಿಸಲು ಸುಪ್ರೀಂ ನಿರಾಕರಣೆ

Supreme Court: ಲಲಿತ್ ಮೋದಿ ಅವರ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಡಿಸೆಂಬರ್ 19, 2023 ರಂದು "ಕ್ಷುಲ್ಲಕ ಮತ್ತು ಸಂಪೂರ್ಣವಾಗಿ ತಪ್ಪು ಕಲ್ಪನೆ" ಎಂದು ಕರೆದು, ಅರ್ಜಿಯನ್ನು ವಜಾಗೊಳಿಸಿತ್ತು. ಜತೆಗೆ ₹1 ಲಕ್ಷ ದಂಡ ವಿಧಿಸಿತ್ತು. ಬಳಿಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಲಲಿತ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡ ಬಿಸಿಸಿಐ ₹10.65 ಕೋಟಿ ಫೆಮಾ ದಂಡ ಪಾವತಿಸಬೇಕೆಂಬ ಅರ್ಜಿಯನ್ನು ತಿರಸ್ಕರಿಸಿದೆ. ಇದು ಲಲಿತ್ ಮೋದಿಗೆ ಹಿನ್ನಡೆಯಾಗಿದೆ.

ಮೋದಿ ಅರ್ಜಿ ವಜಾ; ಬಿಸಿಸಿಐಗೆ ದಂಡ ವಿಧಿಸಲು ಸುಪ್ರೀಂ ನಿರಾಕರಣೆ

Profile Abhilash BC Jun 30, 2025 2:25 PM

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ED) ವಿಧಿಸಿರುವ 10.65 ಕೋಟಿ ದಂಡವನ್ನು ಪಾವತಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗೆ ನಿರ್ದೇಶನ ನೀಡಬೇಕೆಂದು ಕೋರಿ, ಮಾಜಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ(Lalit Modi) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್(Supreme Court) ಸೋಮವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಕಾನೂನಿನಡಿಯಲ್ಲಿ ಲಭ್ಯವಿರುವ ನಾಗರಿಕ ಪರಿಹಾರಗಳನ್ನು ಲಲಿತ್ ಮೋದಿ ಅನುಸರಿಸಬಹುದು ಎಂದು ತೀರ್ಪು ನೀಡಿತು. ಆದರೆ ದಂಡದ ಮೊತ್ತವನ್ನು ಬಿಸಿಸಿಐ ಭರಿಸುವಂತೆ ಒತ್ತಾಯಿಸಲು ನಿರಾಕರಿಸಿತು.

ಲಲಿತ್ ಮೋದಿ ಅವರ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಡಿಸೆಂಬರ್ 19, 2023 ರಂದು "ಕ್ಷುಲ್ಲಕ ಮತ್ತು ಸಂಪೂರ್ಣವಾಗಿ ತಪ್ಪು ಕಲ್ಪನೆ" ಎಂದು ಕರೆದು, ಅರ್ಜಿಯನ್ನು ವಜಾಗೊಳಿಸಿತ್ತು. ಜತೆಗೆ ₹1 ಲಕ್ಷ ದಂಡ ವಿಧಿಸಿತ್ತು. ಬಳಿಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಲಲಿತ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡ ಬಿಸಿಸಿಐ ₹10.65 ಕೋಟಿ ಫೆಮಾ ದಂಡ ಪಾವತಿಸಬೇಕೆಂಬ ಅರ್ಜಿಯನ್ನು ತಿರಸ್ಕರಿಸಿದೆ. ಇದು ಲಲಿತ್ ಮೋದಿಗೆ ಹಿನ್ನಡೆಯಾಗಿದೆ.

ಇದನ್ನೂ ಓದಿ BCCI Apex Council meeting: ಐಪಿಎಲ್‌ ವಿಜಯೋತ್ಸವಕ್ಕೆ ಮಾರ್ಗಸೂಚಿ; ತ್ರಿಸದಸ್ಯ ಸಮಿತಿ ರಚನೆ

ಐಪಿಎಲ್‌ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಲಲಿತ್ ಮೋದಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಮತ್ತು ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪಗಳು ಕೇಳಿ ಬಂದ ಕಾರಣ 2010ರಲ್ಲಿ ಅವರು ಭಾರತದಿಂದ ಪಲಾಯನಗೈದಿದ್ದರು.