ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಕೆಯ ಮೇಲೆ ಆಸಿಡ್‌ ದಾಳಿ ಮಾಡಿದ ಪತ್ನಿ!

ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಕೆಯ ಮೇಲೆ ಆಸಿಡ್‌ ಹಾಕಿದ ಪತ್ನಿ

ಪತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆಯ ಮೇಲೆ ಪತ್ನಿ ಆಸಿಡ್ ಎರೆಚಿದ ಘಟನೆ ಕೋಲಾರದ ಆಜಾದ್ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. ಆರೋಪಿ ಆಯೇಷಾ ಹಾಗೂ ಗಾಯಾಳು ಮುಸ್ಕಾನ್ ಇಬ್ಬರೂ ಪರಸ್ಪರ ಸಂಬಂಧಿಕರು ಎಂದು ಹೇಳಲಾಗಿದೆ.

ಬೆಂಗಳೂರು ನಗರ ಸಂಚಾರ ದಟ್ಟಣೆ ಸುಧಾರಿಸಲು ಅಧ್ಯಯನ: ಬೆಂಗಳೂರು ಸಂಚಾರ ಪೊಲೀಸ್‌ ಇಲಾಖೆ, ಐಆರ್‌ಟಿಇ ಹಾಗೂ ಡಿಯಾಜಿಯೋ ಸಹಭಾಗಿತ್ವ

ಬೆಂಗಳೂರು ನಗರ ಸಂಚಾರ ದಟ್ಟಣೆ ಸುಧಾರಿಸಲು ಅಧ್ಯಯನ

ಅಧ್ಯಯನವು ಸಂಚಾರ ಚಲನವಲನ, ಪಾದಚಾರಿಗಳ ನಡೆ, ರಸ್ತೆ ವಿನ್ಯಾಸದ ಪರಿಣಾಮ ಹಾಗೂ ಯೋಜನಾ ಸುಧಾರಣೆಗಳ ಬಗ್ಗೆ ಪ್ರಮುಖ ತಿಳುವಳಿಕೆ ನೀಡಿದ್ದು, ಸಂಚಾರ ಮಾರ್ಗ ವಿಭಜನೆ, ಪಾದಚಾರಿಗಳ ಸುರಕ್ಷಿತ ರಸ್ತೆ ದ್ವೀಪಗಳು, ಸಿಗ್ನಲ್ ವ್ಯವಸ್ಥೆ ಸುಧಾರಣೆ ಮತ್ತು ಸೂಚನಾ ಫಲಕಗಳ ಅಭಿವೃದ್ಧಿ ಸೇರಿದಂತೆ ಕಡಿಮೆ ವೆಚ್ಚದ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ.

ದತ್ತಾಂಶ ಆಧಾರಿತ ಆಡಳಿತದತ್ತ ರಾಜ್ಯದ ದಿಟ್ಟ ಹೆಜ್ಜೆ

ದತ್ತಾಂಶ ಆಧಾರಿತ ಆಡಳಿತದತ್ತ ರಾಜ್ಯದ ದಿಟ್ಟ ಹೆಜ್ಜೆ

ಜನಸಾಂಖ್ಯಿಕವಾಗಿ ಕರ್ನಾಟಕವು ಚುರುಕಾದ ಚಿತ್ರಣವನ್ನು ನೀಡುತ್ತದೆ. 15-59 ವರ್ಷದ ಕಾರ್ಯನಿರತ ವಯೋಮಾನದ ವರ್ಗವು ಸುಮಾರು 65% ಇದ್ದು, ಇದು ಜನ ಸಾಂಖ್ಯಿಕ ಲಾಭವನ್ನು ಸೂಚಿಸುತ್ತದೆ. ಇದೇ ಸಮಯದಲ್ಲಿ, 60 ವರ್ಷ ಮೇಲ್ಪಟ್ಟ ಹಿರಿಯರ ಪ್ರಮಾಣ 10% ಕ್ಕಿಂತ ಹೆಚ್ಚು ಆಗುವ ಸಾಧ್ಯತೆಯಿದ್ದು, ವೃದ್ಧಾಪ್ಯ ಆರೈಕೆ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಗಳ ಅಗತ್ಯತೆಯನ್ನು ಸೂಚಿಸುತ್ತದೆ.

ಕೊಲೆ ಬಳಿಕವೂ ನಿಂತಿಲ್ಲ ದ್ವೇಷ;  SSLC ವಿದ್ಯಾರ್ಥಿ ಸಂಕೇತ್ ಸಮಾಧಿ ಧ್ವಂಸಗೊಳಿಸಿದ ಕಿಡಿಗೇಡಿಗಳು

SSLC ವಿದ್ಯಾರ್ಥಿ ಸಂಕೇತ್ ಸಮಾಧಿ ಧ್ವಂಸಗೊಳಿಸಿದ ಕಿಡಿಗೇಡಿಗಳು

Santekh Murder Case: ಜಿಲ್ಲೆಯ ಸೂಳೆಬೈಲು ಬಡಾವಣೆ ನಿವಾಸಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಸಂಕೇತ್ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆದಿದ್ದು, ಪೋಷಕರು ಆತಂಕಕ್ಕೀಡಾಗಿದ್ದಾರೆ. ಜಗಳ ಬಿಡಸಲು ಹೋದ ಅಮಾಯಕ ಬಾಲಕ ಸಂಕೇತ್​ನನ್ನ ಕಿಡಿಗೇಡಿ ಯುವಕರು ಹತ್ಯೆ ಮಾಡಿದ್ದರು.

ಜಿಲ್ಲೆಯಲ್ಲಿ ಬರೀ ಕೆಐಎಡಿಬಿ ಸಮಸ್ಯೆ ಮಾತ್ರವಲ್ಲಾ. ಬೇರೆ ಜಲ್ವಂತ ಸಮಸ್ಯೆಗಳಿವೆ ಅತ್ತ ಕಡೆಯೂ ಸರ್ಕಾರ ಗಮನ ಗರಿಸಬೇಕು: ರವಿ ಪ್ರಕಾಶ್

ಜಿಲ್ಲೆಯಲ್ಲಿ ಬರೀ ಕೆಐಎಡಿಬಿ ಸಮಸ್ಯೆ ಮಾತ್ರವಲ್ಲ

ಈ ಹಿಂದೆ ನಗರದ ಎಪಿಎಂಸಿಯ ರೈತ ಭವನದಲ್ಲಿ ನಡೆದ ರೈತ ಪರ, ದಲಿತ ಪರ, ಪ್ರಗತಿ ಪರ ಸಂಘಟನೆಗಳು ಎಲ್ಲಾ ಸೇರಿ ಸಂಯುಕ್ತ ಹೋರಾಟ ಮಾಡಬೇಕು. ಆಗಮಾತ್ರ ನಾವು ನಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸಾಧ್ಯ ಎಂದು ಸಂಯುಕ್ತ ಹೋರಾಟ ರಂಗ ಮಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯ ಪಟ್ಟಣ ಹೋಬ ಳಿಯ 13 ಹಳ್ಳಿಗಳ ರೈತರ ಜಮೀನನ್ನು  ಕೆಐಡಿಬಿಯ ವಶದಿಂದ ಮತ್ತೆ ರೈತರಿಗೆ ನೀಡುವಂತೆ ಮಾಡಿದೆವು ಎಂದರು.

Chikkaballapur News: ಧ್ಯಾನದ ಮೂಲಕ ಸಮಾಜದ ಪರಿವರ್ತನೆ ಸಾಧ್ಯ: ಕೋಲಾರ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ಜಯಶ್ರೀ

ಧ್ಯಾನದ ಮೂಲಕ ಸಮಾಜದ ಪರಿವರ್ತನೆ ಸಾಧ್ಯ

ಇಂದಿನ ಯುವ ಜನತೆ ದುಶ್ಚಟಗಳಿಗೆ ದಾಸರಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಪೋಷಕರು ತಮ್ಮ ತಮ್ಮ ಮಕ್ಕಳ ಬಗ್ಗೆ ಗಮನ ಕೊಡಬೇಕು. ಅತ್ಯಂತ ಆಧುನಿಕತೆಯು ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಯುವಜನತೆ ಧ್ಯಾನದಲ್ಲಿ ತೊಡಗಿಕೊಂಡಾಗ ಅವರಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು.

Bangalore News: ಭಾರತದಲ್ಲಿ ಅನಿಮೆ ಹವಾ: 3 ಕೋಟಿ ರೂಪಾಯಿ ಬಹುಮಾನದೊಂದಿಗೆ ಗಿನ್ನೆಸ್ ದಾಖಲೆಯ ಗುರಿ ಹೊಂದಿರುವ ‘ದಿ ಜೈಂಟ್ ಹಂಟ್’

ಗಿನ್ನೆಸ್ ದಾಖಲೆಯ ಗುರಿ ಹೊಂದಿರುವ ‘ದಿ ಜೈಂಟ್ ಹಂಟ್’

ಜಾಗತಿಕವಾಗಿ ಅನಿಮೆ ಕಲಾ ಸ್ಪರ್ಧೆಯೊಂದಕ್ಕೆ ನೀಡಲಾಗುತ್ತಿರುವ ಅತ್ಯಂತ ದೊಡ್ಡ ಮೊತ್ತವಾದ ₹3 ಕೋಟಿ ಬಹುಮಾನದ ನಿಧಿಯನ್ನು ಈ ಸ್ಪರ್ಧೆಯು ಒಳಗೊಂಡಿದೆ. ‘ದಿ ಜೈಂಟ್ ಹಂಟ್’ ಸ್ಪರ್ಧೆಯು ವ್ಯಾಪ್ತಿ, ಮಾನ್ಯತೆ ಮತ್ತು ಅವಕಾಶಗಳನ್ನು ಮೇಳೈಸಿದ್ದು, ಭಾಗವಹಿಸುವವರಿಗೆ ಅಂತರಾಷ್ಟ್ರೀಯ ಮಟ್ಟದ ಗುರುತು ಮತ್ತು ಉದ್ಯಮದ ಮಾನ್ಯತೆ ಪಡೆಯಲು ಉತ್ತಮ ಅವಕಾಶವನ್ನು ನೀಡುತ್ತದೆ.

Gauribidanur News: ಕಾದಲವೇಣಿಯಲ್ಲಿ ಕೈವಾರ ತಾತಯ್ಯ ನವರ ದೇವಾಲಯ ನಿರ್ಮಾಣ

ಕಾದಲವೇಣಿಯಲ್ಲಿ ಕೈವಾರ ತಾತಯ್ಯ ನವರ ದೇವಾಲಯ ನಿರ್ಮಾಣ

ತಾಲೂಕಿನ ಬಲಿಜ ಸಂಘವು ಸಹಾ ಈ ದೇವಾಲಯ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಲಿದೆ ಎಂದು ಜಿಲ್ಲಾ ಬಲಿಜ ಘರ್ಜನೆ ಅಧ್ಯಕ್ಷರಾದ ಪ್ರದೀಪ್ ತಿಳಿಸಿದರು. ತಾತಯ್ಯನವರ ಕೀರ್ತನೆ ಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶನ, ಅವರು 17ನೇ ಶತಮಾನದಲ್ಲಿ ಜೀವಿಸಿದ್ದು ಅವರು ಬರೆದ ಕಾಲಜ್ಞಾನ ಎಂದಿಗೂ ನಿಜವಾಗಿದೆ ಎಂಬುದು ಭಕ್ತರ ಅನಿಸಿಕೆಯಾಗಿದೆ.

ಧರ್ಮಸ್ಥಳ ಪ್ರಕರಣ; ಯೂಟ್ಯೂಬರ್‌ ಎಂ.ಡಿ.ಸಮೀರ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ತಡೆ

ಯೂಟ್ಯೂಬರ್‌ ಎಂ.ಡಿ.ಸಮೀರ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ತಡೆ

ಧರ್ಮಸ್ಥಳದಲ್ಲಿನ ಅಸಹಜ ಸಾವುಗಳ ತನಿಖೆಗೆ ಸಂಬಂಧಿಸಿ ಕಾಲ್ಪನಿಕ ವಿಚಾರಗಳನ್ನು ಆಧರಿಸಿ ವಿಡಿಯೊ ಹರಿಬಿಟ್ಟ ಸಂಬಂಧ ಯೂಟ್ಯೂಬರ್‌ ಎಂ.ಡಿ. ಸಮೀರ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ರದ್ದುಪಡಿಸುವಂತೆ ಕೋರಿ ಎಂ.ಡಿ. ಸಮೀರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ತನಿಖೆಗೆ ತಡೆ ನೀಡಿದೆ.

Gauribidanur News: ಶಿವಕುಮಾರಸ್ವಾಮಿ ಜನ ಸೇವೆ ಅಜರಾಮರ: ಮುದುಗೆರೆ ರಾಜಶೇಖರ್

ಶಿವಕುಮಾರಸ್ವಾಮಿ ಜನ ಸೇವೆ ಅಜರಾಮರ: ಮುದುಗೆರೆ ರಾಜಶೇಖರ್

ಶಿವಕುಮಾರಸ್ವಾಮಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿದ ಜನ ಸೇವೆ ಎಂದೆಂ ದಿಗೂ ಅಜರಾಮರ ಎಂದು ಮುದುಗೆರೆ ರಾಜಶೇಖರ್ ತಿಳಿಸಿದರು. ಅವರು ಶಿವಕುಮಾರಸ್ವಾಮಿ ಜನ್ಮ ದಿನ ಪ್ರಯುಕ್ತ ಕೋಟಾಲದಿನ್ನೆಯಲ್ಲಿ ನಡೆದ ಶಿವಕುಮಾರಸ್ವಾಮಿ 119ನೇ ಜನ್ಮದಿನಾ ಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

Government Jobs: ತುಮಕೂರಿನಲ್ಲಿ ಪೌರ ಕಾರ್ಮಿಕರ ನೇಮಕಾತಿ: 238 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಪೌರ ಕಾರ್ಮಿಕರ ನೇಮಕಾತಿ: ಅರ್ಜಿ ಆಹ್ವಾನ

ತುಮಕೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 238 ಪೌರ ಕಾರ್ಮಿಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ತುಮಕೂರು, ತಿಪಟೂರು ಮತ್ತು ಶಿರಾ ನಗರಸಭೆಗಳಲ್ಲಿ ನೇಮಕಾತಿ ನಡೆಯಲಿದೆ. ಯಾವುದೇ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಮಾತನಾಡಲು ತಿಳಿದಿರಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 9 ಕೊನೆಯ ದಿನಾಂಕ.

Rohini Sindhuri: ಬಟ್ಟೆ ಬ್ಯಾಗ್ ಖರೀದಿ ಹಗರಣ; ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಹೈಕೋರ್ಟ್‌ ಸೂಚನೆ

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಹೈಕೋರ್ಟ್‌ ಸೂಚನೆ

Bag purchase scam: ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಅರೋಪ ಕೇಳಿಬಂದಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ 10ರಿಂದ 13ಗೆ ರೂಪಾಯಿಗೆ ಸಿಗುವ ಬ್ಯಾಗ್​ಗಳನ್ನು ಜಿಲ್ಲಾಧಿಕಾರಿ 52 ರೂ. ನೀಡಿ ಖರೀದಿಸಿದ್ದರು ಎನ್ನಲಾಗಿತ್ತು. ಈ ಸಂಬಂಧ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

ಪ್ರತಿಷ್ಠಿತ ಆ್ಯಪಲ್‌ ಸಂಸ್ಥೆಯ ಸ್ವಿಫ್ಟ್‌ ಸ್ಟುಡೆಂಟ್‌ ಚಾಲೆಂಜ್‌ 2026; ಟಾಪ್‌ 50 ವಿಜೇತರ ಪಟ್ಟಿಯಲ್ಲಿ ಬೆಂಗಳೂರಿನ ಪಿಇಎಸ್‌ ಕಾಲೇಜು ವಿದ್ಯಾರ್ಥಿನಿ ಅನನ್ಯಾಗೆ ಸ್ಥಾನ

ಪಿಇಎಸ್‌ ಕಾಲೇಜು ವಿದ್ಯಾರ್ಥಿನಿ ಅನನ್ಯಾಗೆ ಅಂತಾರಾಷ್ಟ್ರೀಯ ಮನ್ನಣೆ

Swift Student Challenge 2026: ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಅನನ್ಯಾ ಬಾಬು ಪ್ರಸಾದ್‌ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದೆ. ಟೆಕ್‌ ದೈತ್ಯ, ಅಮೆರಿಕ ಮೂಲದ ಆ್ಯಪಲ್‌ ಐಎನ್‌ಸಿ ನಡೆಸಿದ ಸ್ವಿಫ್ಟ್‌ ಸ್ಟುಡೆಂಟ್‌ ಚಾಲೆಂಜ್‌ 2026ರ ಟಾಪ್‌ 50 ವಿಜೇತರ ಪೈಕಿ ಅನನ್ಯಾ ಕೂಡ ಒಬ್ಬರು ಎಂದು ತಿಳಿಸಿದೆ.

MLA Subbareddy: ಸಹಕಾರ ಕ್ಷೇತ್ರ ಪಕ್ಷಾತೀತವಾಗಿರಲಿ: ಗುಡಿಬಂಡೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಕರೆ

ಸಹಕಾರ ಕ್ಷೇತ್ರ ಪಕ್ಷಾತೀತವಾಗಿರಲಿ

ಸಹಕಾರ ಸಂಸ್ಥೆಗಳು ರೈತರ ಜೀವನಾಡಿಗಳಾಗಿದ್ದು, ಇಲ್ಲಿ ಚುನಾವಣೆಗಳು ರಾಜಕೀಯ ಬಣ್ಣ ವಿಲ್ಲದೆ ನಡೆದರೆ ಮಾತ್ರ ಸಂಸ್ಥೆಗಳ ನೈಜ ಅಭಿವೃದ್ಧಿ ಸಾಧ್ಯವಾಗುತ್ತದೆ. ಚುನಾವಣೆ ವೇಳೆ ರಾಜಕೀಯ ವೈಷಮ್ಯಗಳನ್ನು ತರುವುದರಿಂದ ಸಂಘದ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಸಾಮಾನ್ಯ ಜನರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ತಲುಪುವುದಿಲ್ಲ.

Gudibande News: ಮಹಾವೀರರ ಆದರ್ಶಗಳು, ಅಹಿಂಸಾ ಮಾರ್ಗ ಪಾಲಿಸೋಣ: ಗುಂಪು ಮರದ ಆನಂದ್

ಮಹಾವೀರರ ಆದರ್ಶಗಳು, ಅಹಿಂಸಾ ಮಾರ್ಗ ಪಾಲಿಸೋಣ

ಮಹಾವೀರರು ಸಾವಿರಾರು ವರ್ಷಗಳ ಹಿಂದೆ ಬೋಧಿಸಿದ ತತ್ವಗಳು ಸಾರ್ವಕಾಲಿಕ ಪ್ರಸ್ತುತ ವಾಗಿವೆ. ಅವರು ಜೈನ ಸಮಾಜಕ್ಕೆ ಮಾತ್ರ ಬೋಧನೆ ಮಾಡಲಿಲ್ಲ. ಇಡೀ ಮಾನವ ಕಲ್ಯಾಣ ಬಯಸಿ, ಸನ್ಮಾರ್ಗ ತೋರಿದ್ದರು. ಅವರ ತತ್ವಾದರ್ಶಗಳು ಸರ್ವಕಾಲಿಕವಾದುದು. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕು.

ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀ ಸರ್ಕಾರದ ಯೋಜನೆಗಳಿಗೆ ಮಹಾನ್ ಸ್ಫೂರ್ತಿ: ಪ್ರಲ್ಹಾದ್‌ ಜೋಶಿ

ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀ ಸರ್ಕಾರದ ಯೋಜನೆಗಳಿಗೆ ಸ್ಫೂರ್ತಿ: ಜೋಶಿ

Pralhad Joshi: ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಮಹಾನ್ ಸಂತರಷ್ಟೇ ಅಲ್ಲ ಅವರೊಂದು ದಿವ್ಯಶಕ್ತಿ. ಅವರು ಪ್ರಾರಂಭಿಸಿದ "ಅನ್ನದಾಸೋಹ'' ಕೇವಲ ಊಟವಲ್ಲ. ಸಮಾನತೆಯ ಸಂದೇಶ. ಜಾತಿ-ಧರ್ಮ-ಬಡತನವೆಂಬ ಬೇಧ ತೊಡೆದು ಹಾಕಿ ಜಗತ್ತಿಗೆ ಮಾನವೀಯ ಮಂತ್ರವನ್ನು ಸಾರಿದ ದೈವಪುರುಷರು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಸ್ಮರಿಸಿದ್ದಾರೆ.

Chintamani News: ಅಧ್ಯಕ್ಷರಾಗಿ ವೆಂಕಟೇಶಪ್ಪ ಉಪಾಧ್ಯಕ್ಷರಾಗಿ ಹನುಮಪ್ಪ ಅವಿರೋಧವಾಗಿ ಆಯ್ಕೆ

ಅಕ್ಕಿಮಂಗಲ ಡೈರಿ ಚುನಾವಣೆ: ಅಧ್ಯಕ್ಷ ಉಪಾಧ್ಯಕ್ಷರು ಅವಿರೋಧ ಆಯ್ಕೆ

ಅಧ್ಯಕ್ಷರ ಸ್ಥಾನಕ್ಕೆ ವೆಂಕಟೇಶಪ್ಪ ಉಪಾಧ್ಯಕ್ಷರ ಸ್ಥಾನಕ್ಕೆ ಹನುಮಪ್ಪ ನಾಮ ಪತ್ರ ಸಲ್ಲಿಸಿದ್ದು,ಬೇರೆ ಯಾರು ನಾಮಪತ್ರ ಸಲ್ಲಿಸದೇ ಇರುವ ಕಾರಣಕ್ಕೆ ಚುನಾವಣಾ ಅಧಿಕಾರಿ ಯಾದ ಭಾಸ್ಕರ್ ರೆಡ್ಡಿ ಕೆ ಎಸ್ ರವರು ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು.

Gudibande News: ಸೌರ ವಿದ್ಯುತ್ ಹಾಗೂ ಹವಾಮಾನ ಸುಸ್ಥಿರತೆಯಿಂದ ಗ್ರಾಮಗಳ ಸ್ವಾವಲಂಬನೆ ಸಾಧ್ಯ: ಡಾ.ಶ್ರೀಧರ್ ಬಾಬು

ಸೌರ ವಿದ್ಯುತ್ ಹಾಗೂ ಹವಾಮಾನ ಸುಸ್ಥಿರತೆಯಿಂದ ಗ್ರಾಮಗಳ ಸ್ವಾವಲಂಬನೆ ಸಾಧ್ಯ

ಶಿಕ್ಷಣ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ ಈ ಮಹತ್ವಾಕಾಂಕ್ಷಿ ಯೋಜನೆಯು ಶಿಕ್ಷಣ, ನವೀಕರಿಸಬಹುದಾದ ಇಂಧನ ಮತ್ತು ಜೀವನೋಪಾಯದ ಕ್ಷೇತ್ರಗಳಲ್ಲಿ ಗ್ರಾಮಗಳನ್ನು ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಹವಾಮಾನ ಬದಲಾವಣೆಯ ಸವಾಲು ಗಳನ್ನು ಎದುರಿಸಲು ಸಕಾರಾತ್ಮಕ ಹೆಜ್ಜೆ ಇಡುವುದು ಮತ್ತು ಸುಸ್ಥಿರ ಅಭಿವೃದ್ಧಿಯ ಮಾದರಿ ಗ್ರಾಮಗಳನ್ನು ರೂಪಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ

ಆ ರೀತಿ ಮಾಡಿದ್ರೆ 1 ಪೈಸೆ ಸಾಲ ಮಾಡದೆ ರಾಜ್ಯದ ಆರ್ಥಿಕತೆ ನಿರ್ವಹಿಸುವೆ: ಬಿಜೆಪಿ ನಾಯಕರಿಗೆ ಸಿಎಂ ಸವಾಲು

ಆ ರೀತಿ ಮಾಡಿದ್ರೆ 1 ಪೈಸೆ ಸಾಲ ಮಾಡದೆ ಆರ್ಥಿಕತೆ ನಿರ್ವಹಿಸುವೆ: ಸಿಎಂ

Karnataka’s Tax Share: ರಾಜ್ಯದಲ್ಲಿ ಟ್ಯಾಕ್ಸ್ ಟೆರರಿಸಂ ಶುರುವಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೂಗಿಕೂಗಿ ಹೇಳಿದ್ದೇವೆ. ಆಗ ಬಾಯಿ ಮುಚ್ಚಿಕೊಂಡು ಏಳುಕೋಟಿ ಕನ್ನಡಿಗರಿಗೆ ದ್ರೋಹಬಗೆದಿರುವ ಬಿಜೆಪಿ ನಾಯಕರು ಈಗ ನಮ್ಮ ವಿರುದ್ಧ ಕೂಗು ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Shidlaghatta News: ಶಿಡ್ಲಘಟ್ಟದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿ: ಅನ್ನದಾಸೋಹ ಮೂಲಕ ಭಕ್ತರ ನಮನ

ಶಿಡ್ಲಘಟ್ಟದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿ

ಶಿಡ್ಲಘಟ್ಟದಲ್ಲಿ ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಶಿವಕುಮಾರ ಸ್ವಾಮೀಜಿಗಳು ನಗರೇಶ್ವರ ದೇವಾಲಯಕ್ಕೆ ಸಂಬಂಧಿಸಿದ ನಗರೇಶ್ವರ ಕಲ್ಯಾಣ ಮಂಟಪ ಉದ್ಘಾಟನೆ ಮಾಡಿ ದ್ದು ಸ್ಥಳೀಯರ ನೆನಪಿನಲ್ಲಿ ಇಂದಿಗೂ ವಿಶೇಷ ಸ್ಥಾನ ಪಡೆದಿದೆ ಎಂದರು. ಆ ಸಂದರ್ಭದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದರು

Lokaykta: ಸಮಯೋಚಿತವಾಗಿ ದೂರು ಅರ್ಜಿಗಳನ್ನು ವಿಲೇವಾರಿ ಮಾಡಿ: ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ

ಸಮಯೋಚಿತವಾಗಿ ದೂರು ಅರ್ಜಿಗಳನ್ನು ವಿಲೇವಾರಿ ಮಾಡಿ

ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿ ತನಿಖೆಗೆ ಬಾಕಿ ಇರುವ 73 ದೂರು ಪ್ರಕರಣಗಳಲ್ಲಿ ಇಂದು ವಿಚಾರಣೆ ನಡೆಸಲಾಗಿದೆ. ಬಹುತೇಕ ಪ್ರಕರಣ ಗಳು ಇತ್ಯರ್ಥವಾಗಿವೆ. ಕಂದಾಯ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳೆ ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ತಿಳಿಸಿದರು.

ನಾವು ಒಳ್ಳೆ ಕೆಲಸ ಮಾಡಿದ್ದೀವಲ್ವಾ? ಜನ ಓಟ್‌ ಹಾಕ್ತಾರೆ ಅನ್ನೋ ನಂಬಿಕೆಯಿದೆ ಎಂದ ಸಿಎಂ Video

ಒಳ್ಳೆ ಕೆಲಸ ಮಾಡಿದ್ದೇವೆ, ಜನ ನಮಗೆ ಓಟ್‌ ಹಾಕ್ತಾರೆ: ಸಿಎಂ

CM Siddaramaiah: ಬಿಜೆಪಿಯವರ ಅಪಪ್ರಚಾರದ ನಡುವೆಯೂ ಹಿಂದೆ ನಡೆದ 3 ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇವೆ. ಮಾಜಿ ಮುಖ್ಯಮಂತ್ರಿಗಳ ಪುತ್ರರು ನಿಂತಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈಗ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪಚುನಾವಣೆಗೆ ಪ್ರಚಾರ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ನಾವು ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ ಹೀಗಾಗಿ ಜನರು ಮತ ಹಾಕುತ್ತಾರೆ ಎಂಬ ನಂಬಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮ್ಮ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದರೆ ನನಗೆ ಶಕ್ತಿ ಬರುತ್ತದೆ: ಸಿಎಂ ಸಿದ್ದರಾಮಯ್ಯ

ನಮ್ಮ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದರೆ ನನಗೆ ಶಕ್ತಿ ಬರುತ್ತದೆ: ಸಿಎಂ

CM Siddaramaiah: ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ, ದೇವೇಗೌಡ‌ ಅವರ ಮಕ್ಕಳು, ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೇ? ಅದು ಕುಟುಂಬ ರಾಜಕಾರಣ ಅಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬೆಂಗಳೂರು- ವಿಜಯಪುರ ಎಕ್ಸ್‌ಪ್ರೆಸ್‌ ರೈಲಿಗೆ ಆಗ್ರಹ: ಸಚಿವ ಅಶ್ವಿನಿ ವೈಷ್ಣವ್, ಸೋಮಣ್ಣಗೆ ಎಂ‌.ಬಿ. ಪಾಟೀಲ್‌ ಪತ್ರ

ಬೆಂಗಳೂರು- ವಿಜಯಪುರ ಎಕ್ಸ್‌ಪ್ರೆಸ್‌ ರೈಲಿಗೆ ಎಂ‌.ಬಿ. ಪಾಟೀಲ್‌ ಆಗ್ರಹ

ಬೆಂಗಳೂರು-ವಿಜಯಪುರ ನಡುವೆ ಬಹುಕಾಲದ ಬೇಡಿಕೆಯಾಗಿರುವ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭಿಸಬೇಕು ಎಂದು ಕೋರಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ. ಸೋಮಣ್ಣ ಅವರಿಗೆ ಪತ್ರ ಬರೆದಿದ್ದಾರೆ.

Loading...