ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಮಿಶ್ರ ತಳಿಯ ಹಾಲು ಅಹಿತ ಎಂದು ವಿಜ್ಞಾನವೂ ಒಪ್ಪಿದೆ: ರಾಘವೇಶ್ವರ ಶ್ರೀ

ಮಿಶ್ರ ತಳಿಯ ಹಾಲು ಅಹಿತ ಎಂದು ವಿಜ್ಞಾನವೂ ಒಪ್ಪಿದೆ: ರಾಘವೇಶ್ವರ ಶ್ರೀ

ಆಧುನಿಕ ವಿಜ್ಞಾನವೂ ಕೂಡ ದೇಸಿ ಗೋವು ಹಾಗೂ ಮಿಶ್ರತಳಿಯ ಹಾಲು, ತುಪ್ಪಗಳನ್ನು ವಿಶ್ಲೇಷಿಸಿದ್ದು, ದೇಶಿ ಗೋವಿನ ಎ2 ಹಾಲು ಮತ್ತು ತುಪ್ಪುಗಳು ಶ್ರೇಷ್ಠ ಎಂಬುದಾಗಿ ದೃಢೀಕರಿಸಿವೆ. ಗೋವಿನ ಉತ್ಪನ್ನಗಳು ಜೀರ್ಣಕ್ರಿಯೆಗೆ ಪೂರಕವಾದರೆ, ಮಿಶ್ರತಳಿಯ ಉತ್ಪನ್ನಗಳು ಜೀರ್ಣಕ್ರಿಯೆಗೆ ಸಹಕಾರಿಯಲ್ಲ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಹೇಳಿದ್ದಾರೆ.

Gubbi News: ಶತಮಾನ ಕಂಡ ಪಿಎಂಶ್ರೀ ಶಾಲೆಯಲ್ಲಿ ವಿದ್ಯಾರ್ಥಿಗಳಿಬ್ಬರಿಗೆ ಥಳಿತ..!! : ಪೋಷಕರ ದೂರು - ಶಿಕ್ಷಕ ಸಮೀರ್ ಸಸ್ಪೆಂಡ್

ಶತಮಾನ ಕಂಡ ಪಿಎಂಶ್ರೀ ಶಾಲೆಯಲ್ಲಿ ವಿದ್ಯಾರ್ಥಿಗಳಿಬ್ಬರಿಗೆ ಥಳಿತ..!!

ಶುಕ್ರವಾರ ಶಾಲೆಯಲ್ಲಿ ಏಳನೇ ತರಗತಿಯ ನೂತನ್ ಹಾಗೂ ದಯಾನಂದ್ ಎಂಬ 12 ವರ್ಷದ ವಿದ್ಯಾರ್ಥಿಗಳಿಗೆ ಶಿಕ್ಷಕ ಸಮೀರ್ ಮಕ್ಕಳ ಮುಂದೆಯೇ ಕೋಲು ಹಿಡಿದು ಮನಬಂದಂತೆ ಥಳಿಸಿ ದ್ದಾರೆ. ಕಾಲು ಕೈ ಹಾಗೂ ಎದೆಯ ಭಾಗದಲ್ಲಿ ಬಾಸುಂಡೆ ಬಂದು ರಕ್ತ ಹೆಪ್ಪುಗಟ್ಟಿ ಮಕ್ಕಳು ನರಳಾಡಿದ್ದಾರೆ. ಮನೆಗೆ ಮರಳಿದ ಮಕ್ಕಳ ವರ್ತನೆ ಕಂಡ ಪೋಷಕರು ವಿಚಾರಿಸಿದಾಗ ಶಿಕ್ಷಕನ ಅಮಾನವೀಯ ನಡವಳಿಕೆ ತಿಳಿದುಬಂದಿದೆ.

ತುಮಕೂರಿನಲ್ಲಿ ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ; 20ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ

ತುಮಕೂರಿನಲ್ಲಿ ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ

ತುಮಕೂರಿನಲ್ಲಿ ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ, ಹಿಂದೂ ಮಹಾ ಗಣಪತಿಗೆ ಮಹಾಮಂಗಳಾರತಿ, ಪುಷ್ಪಾರ್ಚನೆ ಮಾಡಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿಗಳು ಗಣೇಶನಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

Mangaluru Wall Collapse: ಮಂಗಳೂರಿನಲ್ಲಿ ಕಟ್ಟಡದ ಬಾಲ್ಕನಿ ಕುಸಿದು ಒಬ್ಬ ವಿದ್ಯಾರ್ಥಿಯ ಮೆದುಳು ನಿಷ್ಟ್ರಿಯ, ನಾಲ್ವರಿಗೆ ಗಾಯ; video

ಮಂಗಳೂರಿನಲ್ಲಿ ಕಟ್ಟಡದ ಬಾಲ್ಕನಿ ಕುಸಿದು ವಿದ್ಯಾರ್ಥಿಯ ಮೆದುಳು ನಿಷ್ಟ್ರಿಯ

ಮಂಗಳೂರಿನ ಎಮ್ಮೆಕೆರೆಯ ಲಕ್ಷ್ಮೀನಾರಾಯಣ ಸಭಾಭವನದ ಬಾಲ್ಕನಿಯ ತಡೆಗೋಡೆ ಕುಸಿದು ಅವಘಡ ಸಂಭವಿಸಿದೆ. ಕಾರ್ಯಕ್ರಮ ನಡೆಯುತ್ತಿದ್ದಾಗ ಮೊದಲ ಮಹಡಿಯ ತಡೆಗೋಡೆ ಕುಸಿದಿದ್ದರಿಂದ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಈ ಪೈಕಿ ಒಬ್ಬ ವಿದ್ಯಾರ್ಥಿಯ ಮೆದುಳು ನಿಷ್ಟ್ರಿಯಗೊಂಡಿದೆ ಎಂದು ತಿಳಿದುಬಂದಿದೆ.

Cybersecurity: ಕ್ವಾಂಟಮ್ ಕಂಪ್ಯೂಟಿಂಗ್‌ನಿಂದ ಸೈಬರ್ ಭದ್ರತೆಗೆ ಹೊಸ ಸವಾಲು: ಡಾ.ಕೆ.ಆರ್.ವೇಣುಗೋಪಾಲ್

ಕ್ವಾಂಟಮ್ ಕಂಪ್ಯೂಟಿಂಗ್‌ನಿಂದ ಸೈಬರ್ ಭದ್ರತೆಗೆ ಹೊಸ ಸವಾಲು

ಐಇಇಇ, ಡಬ್ಲ್ಯೂ ಐಇ ಬೆಂಗಳೂರು ಸೆಕ್ಷನ್‌ ಮತ್ತು ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆದ ʼಕ್ವಾಂಟಂʼ (ನಾವಿನ್ಯತೆ, ಬುದ್ಧಿವಂತಿಕೆ, ಪರಿಣಾಮ) ಕುರಿತು ವಿಚಾರಗೋಷ್ಠಿಯಲ್ಲಿ  ಮಾತನಾಡಿದ ಅವರು, ಸಾಂಪ್ರದಾಯಿಕ ಕಂಪ್ಯೂಟರ್‌ ಗಳು 0 ಮತ್ತು 1 ಎಂಬ ನಿರ್ದಿಷ್ಟ ಸ್ಥಿತಿಗಳ ಆಧಾರದ ಮೇಲೆ ಕಾರ್ಯನಿರ್ವಹಿಸಿದರೆ, ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಒಂದೇ ಸಮಯದಲ್ಲಿ ಹಲವು ಸಾಧ್ಯತೆಗಳಿರುವ ಕ್ವಾಂಟಮ್ ಸ್ಥಿತಿಗಳನ್ನು ಬಳಸಿಕೊಳ್ಳಲಾಗುತ್ತದೆ

Rathotsava: ಕೈವಾರದಲ್ಲಿ ಹುಣ್ಣಿಮೆ ಪೂಜೆ, ರಥೋತ್ಸವ

ಕೈವಾರದಲ್ಲಿ ಹುಣ್ಣಿಮೆ ಪೂಜೆ, ರಥೋತ್ಸವ

ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಶ್ರೀದೇವಿ, ಭೂದೇವಿ ಸಮೇತ ಶ್ರೀಅಮರನಾರಾಯಣಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರಾಯಣ ತಾತಯ್ಯನವರ ಉತ್ಸವ ಮೂರ್ತಿಗಳಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ ಹಾಗೂ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಬಳಿಕ ನಡೆದ ರಥೋತ್ಸವದ ಪೂಜಾ ಕೈಂಕರ್ಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

Chikkaballapur News: ಶಿಕ್ಷಣದಿಂದ ವಿವೇಕ, ಜ್ಞಾನ, ಕರುಣೆ, ಪ್ರೀತಿ ಬೆಳೆಯಬೇಕು: ಗೊಲ್ಲಹಳ್ಳಿ ಶಿವಪ್ರಸಾದ್

ಶಿಕ್ಷಣದಿಂದ ವಿವೇಕ, ಜ್ಞಾನ, ಕರುಣೆ, ಪ್ರೀತಿ ಬೆಳೆಯಬೇಕು

ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು, ಸಮಾಜ ನಿಮ್ಮನ್ನು ಕೋಟಿ ಕಣ್ಣುಗಳಿಂದ ನೋಡುತ್ತಿದೆ ಎಂಬ ಎಚ್ಚರ ಇರಬೇಕು. ವಿದ್ಯಾರ್ಥಿ ಜೀವನದಲ್ಲಿ ನಿರಂತರ ಅಧ್ಯಯನದ ಮೂಲಕ ಜ್ಞಾನ ಸಂಪಾದಿಸಿ, ಯಶಸ್ಸಿನ ಗುರಿ ತಲುಪುವ ಸಂಕಲ್ಪ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಯಲ್ಲೂ ಅಪಾರ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಹೊರತರುವ ಕೆಲಸವನ್ನು ಬೋಧಕರು ಮಾಡಬೇಕು

Prakash Raj: ಸೆ.30ರಂದು ಎಸ್‌ಐಆರ್ ವಿರೋಧಿ ಸಮಾವೇಶ: ನಟ ಪ್ರಕಾಶ್ ರಾಜ್

ಸೆ.30ರಂದು ಎಸ್‌ಐಆರ್ ವಿರೋಧಿ ಸಮಾವೇಶ: ನಟ ಪ್ರಕಾಶ್ ರಾಜ್

ರಾಜ್ಯದ 100 ಮತಗಟ್ಟೆಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಪರಿಶೋಧನೆ ನಡೆಸಿ, ಲೋಪಗಳು ಕಂಡುಬಂದಿರುವುದನ್ನು ದಾಖಲೆಗಳ ಸಹಿತ ಜನರ ಮುಂದಿಡಲಾಗುವುದು. ಸೆ.30ರಂದು ಬೆಂಗಳೂರಿ ನಲ್ಲಿ ನಡೆಯುವ ಸಮಾವೇಶದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದು, ಅ.15ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ದೇಶದ ವಿವಿಧ ರಾಜ್ಯಗಳ ಜನರನ್ನು ಒಳಗೊಂಡ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ

Gandhi Sante: ಹೊನ್ನೇಸರದಲ್ಲಿ ಸ್ವದೇಶಿ, ಸ್ವಾವಲಂಬನೆ ಗುರಿಯ ʼಗಾಂಧಿ ಸಂತೆʼಗೆ ಚಾಲನೆ

ಹೊನ್ನೇಸರದಲ್ಲಿ ಸ್ವದೇಶಿ, ಸ್ವಾವಲಂಬನೆ ಗುರಿಯ ʼಗಾಂಧಿ ಸಂತೆʼಗೆ ಚಾಲನೆ

ಪರಿಶುದ್ಧ ಕೈಮಗ್ಗದ ಉತ್ಪನ್ನಗಳ ಖರೀದಿಗೆ ಖ್ಯಾತ ರಂಗಕರ್ಮಿ, ಗಾಂಧಿವಾದಿ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾಗಿರುವ 'ಚರಕʼ ನೇಕಾರರ ಸಂಘ ವೇದಿಕೆ ಕಲ್ಪಿಸಿದೆ. ಸಾಗರ ತಾಲೂಕಿನ ಹೊನ್ನೇಸರದಲ್ಲಿ ಆಯೋಜಿಸಿರುವ ʼಗಾಂಧಿ ಸಂತೆʼಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಶನಿವಾರ ಚಾಲನೆ ನೀಡಿದ್ದಾರೆ.

ಮದ್ಯವರ್ಜನ ಶಿಬಿರದಿಂದ ನೊಂದವರ ಸಂಸಾರದಲ್ಲಿ ನೆಮ್ಮದಿಯ ಬೆಳಕು: ಶ್ರದ್ಧಾ ಅಮಿತ್

ಮದ್ಯವರ್ಜನ ಶಿಬಿರದಿಂದ ನೊಂದವರ ಸಂಸಾರದಲ್ಲಿ ನೆಮ್ಮದಿಯ ಬೆಳಕು

Tumkur News: ವ್ಯಸನ ಮುಕ್ತರಾದ ವ್ಯಕ್ತಿಗಳು ಮುಂದೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು, ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಟ್ರಸ್ಟ್ ವತಿಯಿಂದ ನಿರಂತರ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ನ ಟ್ರಸ್ಟಿ, ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯ (ಕ್ಷೇಮವನ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್ ತಿಳಿಸಿದ್ದಾರೆ.

Pavithra Gowda: ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡಗೆ ನಿರಾಸೆ; ಅರ್ಜಿ ವಜಾ ಮಾಡಿದ ಕೋರ್ಟ್‌

ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡಗೆ ನಿರಾಸೆ; ಅರ್ಜಿ ವಜಾ

Renukaswamy Murder case: ತಮ್ಮ ಮಗಳ ವಿದ್ಯಾಭ್ಯಾಸ ಹಾಗೂ ಆಕೆಯ ಭವಿಷ್ಯದ ವಿಚಾರವನ್ನೂ ಪರಿಗಣಿಸಿ ಜಾಮೀನು ನೀಡಬೇಕು ಎಂದು ಪವಿತ್ರಾ ಗೌಡ ಮನವಿ ಮಾಡಿದ್ದರು. ಆದರೆ, ಬೆಂಗಳೂರಿನ 59ನೇ ಸಿಸಿಎಚ್ ಕೋರ್ಟ್ ವಾದ - ಪ್ರತಿವಾದವನ್ನು ಆಲಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪೊಲೀಸ್ ದಬ್ಬಾಳಿಕೆಗೆ ಹೈಕೋರ್ಟ್ ಚಾಟಿ; ಮೋಹನ ಗೌಡ ಪ್ರಕರಣದಲ್ಲಿ ಐತಿಹಾಸಿಕ ಆದೇಶ

ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪೊಲೀಸ್ ದಬ್ಬಾಳಿಕೆಗೆ ಹೈಕೋರ್ಟ್ ಚಾಟಿ

ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಬಂಧನ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.‌ ಉಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ, ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಮ್ ಅವರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ.

ಎಸ್‌ಐಆರ್‌ ವಿರೋಧಿಸಿ ತುಮಕೂರಿನಲ್ಲಿ ಸೆ. 28ರಂದು ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

ಎಸ್‌ಐಆರ್‌ ವಿರೋಧಿಸಿ ತುಮಕೂರಿನಲ್ಲಿ ಸೆ. 28ಕ್ಕೆ ಕಾಂಗ್ರೆಸ್‌ ಪ್ರತಿಭಟನೆ

Tumkur News: ಬಿಜೆಪಿಯನ್ನು ಅಧಿಕಾರಕ್ಕೆ ತರಲು ಚುನಾವಣಾ ಆಯೋಗವು ಎಸ್.ಐ.ಆರ್. ಪ್ರಕ್ರಿಯೆ ಮೂಲಕ ಬಿಜೆಪಿಯೇತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸುತ್ತಿದೆ. ಬಬಲೇಶ್ವರ, ಬೆಳಗಾವಿ ಮತ್ತು ಧಾರವಾಡ ದಕ್ಷಿಣದಲ್ಲಿ ಇದರ ಅಕ್ರಮಗಳು ದಾಖಲೆಗಳ ಮೂಲಕ ಬಹಿರಂಗಗೊಂಡಿವೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಆರೋಪಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಕಲಿತದ್ದು ನನ್ನ ಪಾಲಿಗೆ ಎಂದಿಗೂ ಹೆಮ್ಮೆಯ ವಿಷಯ: ನ್ಯಾಯಾಧೀಶ ಜಯಂತ್ ಕುಮಾರ್

ಸರ್ಕಾರಿ ಶಾಲೆಯಲ್ಲಿ ಕಲಿತದ್ದು ಹೆಮ್ಮೆಯ ವಿಷಯ: ನ್ಯಾ. ಜಯಂತ್ ಕುಮಾರ್

Tumkur News: ವೃಕ್ಷಗಳ ಮಾರಣಹೋಮದಿಂದ ಮಳೆ ಕಡಿಮೆಯಾಗಿ ಕುಡಿಯುವ ನೀರಿಗೂ ಅಭಾವ ಎದುರಾಗಿದೆ. ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ನೆಟ್ಟಿರುವ ಸಸಿಗಳನ್ನು ದೈನಂದಿನ ಪಾಲನೆ ಮಾಡುವ ಮೂಲಕ ಬೆಳೆಸಬೇಕು ಎಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಕರೆ ನೀಡಿದ್ದಾರೆ.

Hasanamba Jatra Mahotsava 2026: ಅ.29ರಿಂದ ನ.11ರವರೆಗೆ ಹಾಸನಾಂಬೆ ಜಾತ್ರೆ; ಅನಗತ್ಯ ವಿಐಪಿ ಪಾಸ್ ವ್ಯವಸ್ಥೆಗೆ ಕಡಿವಾಣ

ಅ.29ರಿಂದ ನ.11ರವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮದಲ್ಲಿ ಹಾಸನಾಂಬೆ ದರ್ಶನೋತ್ಸವದ ಅಧಿಕೃತ ಪೋಸ್ಟರ್ ಹಾಗೂ ವಿಶೇಷ ವೆಬ್‌ಸೈಟ್‌ ಅನ್ನು ಸಚಿವ ಶಿವಲಿಂಗೇಗೌಡ ಅವರು ಬಿಡುಗಡೆಗೊಳಿಸಿದ್ದಾರೆ. ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಅತ್ಯಂತ ವಿಜೃಂಭಣೆಯಿಂದ ಹಾಸನಾಂಬೆ ಜಾತ್ರೆ ನಡೆಯಲಿದೆ.

ಹಾಲಿನ ದರ ಏರಿಕೆ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

ಹಾಲಿನ ದರ ಏರಿಕೆ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ

CM DK Shivakumar: ಹಾಲಿನ ದರ ಏರಿಕೆ ವಿಚಾರ ಕುರಿತು ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿರುವ ಸಿಎಂ ಡಿ.ಕೆ. ಶಿವಕುಮಾರ್, 'ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ನನ್ನನ್ನು ಭೇಟಿಯಾಗಿ 12 ರೂ. ಹೆಚ್ಚಳ ಮಾಡಿ. ಅದರಲ್ಲಿ 2 ರೂ. ಸಂಘಗಳಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿನ ಪರಿಸ್ಥಿತಿಯ ಬಗ್ಗೆ ವರದಿಗಳನ್ನು ಪಡೆದು, ಪರಿಶೀಲಿಸಿದ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ' ಎಂದು ಹೇಳಿದ್ದಾರೆ.

MLC Election: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ NDA ನಾಯಕರ ಸಭೆ; ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರೆದುರು ತೆರೆದಿಡಲು ಸಚಿವ ಜೋಶಿ ಸಲಹೆ

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರೆದುರು ತೆರೆದಿಡಲು ಜೋಶಿ ಸಲಹೆ

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ವಿಧಾನ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಕುರಿತು ಬಿಜೆಪಿ ಮತ್ತು ಜೆಡಿಎಸ್‌ ಉಭಯ ಪಕ್ಷಗಳ ಮುಖಂಡರೂ ಪ್ರಮುಖ ವಿಷಯಗಳ ಮೇಲೆ ಸಮಾಲೋಚನೆ ನಡೆಸಿದ್ದಾರೆ.

Congress Protest: ಎಸ್‌ಐಆರ್‌ ರದ್ದುಗೊಳಿಸಿ, ಹೊಸ ಪ್ರಕ್ರಿಯೆ ನಡೆಸಿ: ಕೇಂದ್ರ ಚುನಾವಣಾ ಆಯೋಗಕ್ಕೆ ಸಿಎಂ ಡಿಕೆಶಿ ಒತ್ತಾಯ

ಎಸ್‌ಐಆರ್‌ ರದ್ದುಗೊಳಿಸಿ, ಹೊಸ ಪ್ರಕ್ರಿಯೆ ನಡೆಸಿ: ಸಿಎಂ ಒತ್ತಾಯ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ. ಜ್ಞಾನೇಶ್‌ ಕುಮಾರ್‌ ಅವರು ಚೀಫ್‌ ಎಲೆಕ್ಷನ್‌ ಕಮಿಷನರ್‌ ಅಲ್ಲ, ಚೀಫ್‌ ಸೆಲೆಕ್ಷನ್‌ ಕಮಿಷನರ್‌ ಆಗಿದ್ದೀರಿ. ಜನ ನಿಮ್ಮ ಅನ್ಯಾಯಗಳ ವಿರುದ್ಧ ದಂಗೆ ಏಳುತ್ತಾರೆ. ಕೇಂದ್ರ ಸರ್ಕಾರ ಅಧಿವೇಶನ ಕರೆದು ಇದರ ಬಗ್ಗೆ ಶೀಘ್ರ ಚರ್ಚೆ ನಡೆಸಬೇಕು ಎಂದು ಸಿಎಂ ಆಗ್ರಹಿಸಿದ್ದಾರೆ.

ಕೆಪಿಎಸ್‌ಸಿ ಅಕ್ರಮಗಳ ಬಗ್ಗೆ ಕಾಕ್ರೋಚ್ ಜನತಾ ಪಾರ್ಟಿ ಮೌನ ಏಕೆ?: ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ

ಕೆಪಿಎಸ್‌ಸಿ ಅಕ್ರಮಗಳ ಬಗ್ಗೆ ಸಿಜೆಪಿ ಮೌನ ಏಕೆ?: ಎಚ್‌ಡಿಕೆ ಪ್ರಶ್ನೆ

HD Kumaraswamy: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಯಿತು ಎಂದು ನವದೆಹಲಿಯಲ್ಲಿ ಇನ್ನಿಲ್ಲದ ಗಲಾಟೆ ಎಬ್ಬಿಸಿದ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಜೆನ್ ಜಿ ಗಳು ಈಗೆಲ್ಲಿ ಹೋಗಿದ್ದಾರೆ? ಅವರಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಮಿತಿಮೀರಿದ ಭ್ರಷ್ಟಾಚಾರ ಮತ್ತು ಕೆಪಿಎಸ್ಸಿಯಲ್ಲಿ ನಡೆದಿರುವ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳ ನೇಮಕಾತಿ ಅಕ್ರಮ ಹಾಗೂ ಪಶು ವೈದ್ಯರ ನೇಮಕಾತಿ ಅಕ್ರಮ ಸೇರಿದಂತೆ ಕಾಸಿಗಾಗಿ ಉದ್ಯೋಗಗಳನ್ನು ಮಾಡಿಕೊಳ್ಳುತ್ತಿರುವ ಭ್ರಷ್ಟಾಚಾರವನ್ನು ಪ್ರಶ್ನಿಸುತ್ತಿಲ್ಲ ಏಕೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Congress Protest: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ, ಬಂಧನಕ್ಕೆ ಆಗ್ರಹ; ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆ ಪಡೆದು, ಬಂಧಿಸಬೇಕು ಎಂದು ಕೈ ನಾಯಕರು ಆಗ್ರಹಿಸಿದ್ದಾರೆ.

Hassan Woman Missing: ಹಾಸನದಲ್ಲಿ ನವವಿವಾಹಿತೆ ಕಣ್ಮರೆ ಕೇಸ್‌; 8 ದಿನಗಳ ಬಳಿಕ ಮೃತದೇಹ ಪತ್ತೆ!

ಹಾಸನದಲ್ಲಿ ಕಣ್ಮರೆಯಾಗಿದ್ದ ನವವಿವಾಹಿತೆಯ ಮೃತದೇಹ ಪತ್ತೆ!

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಬಳಿ ಹೇಮಾವತಿ ನಾಲೆಯಲ್ಲಿ ನವವಿವಾಹಿತೆ ಪ್ರಿಯಾಂಕಾ ಅವರ ಮೃತದೇಹ ಸಿಕ್ಕಿದೆ. ಸೆ.19ರ ರಾತ್ರಿ ಚನ್ನರಾಯಪಟ್ಟಣ ತಾಲೂಕು ಚಿಕ್ಕನಾಯಕನಹಳ್ಳಿ ಗ್ರಾಮದ ಬಳಿ ತನ್ನ ಎದುರೇ ಪ್ರಿಯಾಂಕಾ ನಾಲೆಗೆ ಜಿಗಿದಿದ್ದಳು ಎಂದು ಪತಿ ರಾಜಶೇಖರ್ ಹೇಳಿದ್ದ. ಸುದೀರ್ಘ ಶೋಧ ಕಾರ್ಯಾಚರಣೆ ಬಳಿಕ ಪ್ರಿಯಾಂಕ ಮೃತದೇಹ ಪತ್ತೆಯಾಗಿದೆ.

Gold Price Today On 26 September 2026: ಚಿನ್ನದ ದರದಲ್ಲಿ ಕೊಂಚ ಇಳಿಕೆ; 14 ಸಾವಿರ ರೂಪಾಯಿ ಗಡಿಯಿಂದ ಕೆಳಗಿಳಿದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಕೊಂಚ ಇಳಿಕೆ

Gold Silver Rate Today: ಚಿನ್ನದ ಬೆಲೆಯಲ್ಲಿ ಶನಿವಾರ ತುಸು ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 15 ರೂಪಾಯಿ ಇಳಿಕೆಯಾಗಿ13,995 ರೂಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 16 ರುಪಾಯಿ ಕಡಿಮೆಯಾಗಿ 15,268 ರೂಪಾಯಿ ಕಂಡು ಬಂದಿದೆ.

Sowjanya case: ಸಿಕ್ಕಿಬಿದ್ದವರು ಇಂದು ಸಂಭ್ರಮಿಸುತ್ತಿದ್ದಾರೆ, ಮುಂದೆ...?: ಎಸ್‌ಐಟಿ ರಚನೆ ಹಿಂದಿನ ತಂಡ ಒಂದೇ!

ಎಸ್‌ಐಟಿ ರಚನೆ ಹಿಂದಿನ ತಂಡ ಒಂದೇ!

ಬುರುಡೆ ಪ್ರಕರಣದಲ್ಲಿ ಸಾಕ್ಷಿ ರಕ್ಷಣಾ ಕಾಯ್ದೆಯ ಹೆಸರಿನಲ್ಲಿ ಚಿನ್ನಯ್ಯ ಎಂಬಾತನಿಗೆ ಮುಖಕ್ಕೆ ಮುಸುಕು ಹಾಕಿ ಮಾಸ್ಕ್ ಮ್ಯಾನ್ ರೂಪದಲ್ಲಿ ತಂದು ನಿಲ್ಲಿಸಲಾಗಿತ್ತು. ಆತನ ಬೆನ್ನಿಗೆ ವಕೀಲರ ಪಡೆ ಹಾಗೂ ಹತ್ತಾರು ಕಾನೂನು ರಕ್ಷಾ ಕವಚಗಳನ್ನು ಕಟ್ಟಿ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿ, ತನಿಖೆಯ ವೇಳೆ ರಕ್ಷಣಾ ಆಯುಧ ವನ್ನಾಗಿ ಬಳಸಲಾಯಿತು.

ಕದ್ದ ಮಾಲು ಖರೀದಿಸಿ ಹಣ ವರ್ಗಾವಣೆ ಆರೋಪ: ಅಟ್ಟಿಕಾ ಗೋಲ್ಡ್ ಕಂಪನಿಗೆ ಡಬಲ್ ಶಾಕ್, ಇ.ಡಿ. ಬೆನ್ನಲ್ಲೇ ಐಟಿ ದಾಳಿ

ಅಟ್ಟಿಕಾ ಗೋಲ್ಡ್ ಕಂಪನಿಗೆ ಡಬಲ್ ಶಾಕ್, ಇ.ಡಿ. ಬೆನ್ನಲ್ಲೇ ಐಟಿ ದಾಳಿ

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಅಟ್ಟಿಕಾ ಗೋಲ್ಡ್‌ನ ಒಟ್ಟು 19ಕ್ಕೂ ಹೆಚ್ಚು ಕಚೇರಿ, ಶೋರೂಂ ಹಾಗೂ ಮಾಲೀಕರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಅಟ್ಟಿಕಾ ಗೋಲ್ಡ್ ಸಂಸ್ಥೆಯು ಸಾರ್ವಜನಿಕರಿಂದ ಹಳೆಯ ಚಿನ್ನವನ್ನು ಪಡೆದು ತಕ್ಷಣದ ನಗದು ನೀಡುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಹಲವು ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

Loading...