ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Shidlaghatta News: ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಆರೋಪ: ರಾಜೀವ್ ಗೌಡ ವಿರುದ್ಧ ಯುವ ಮುಖಂಡರ ಅಸಮಾಧಾನ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ವರಿಷ್ಠರಿಗೆ ಮನವಿ

ಮಹಿಳೆಯೊಬ್ಬರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತುಗೊಂಡಿದ್ದರೂ, ಕಾಂಗ್ರೆಸ್ ಪಕ್ಷದ ಹೆಸರನ್ನು ಬಳಸಿಕೊಂಡು ಗುಂಪುಗಾರಿಕೆ ನಡೆಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಶಿಸ್ತು ಮತ್ತು ಸಂಘಟನೆ ಯನ್ನು ಕಾಪಾಡುವುದು ಪ್ರತಿಯೊಬ್ಬ ಮುಖಂಡನ ಜವಾಬ್ದಾರಿಯಾಗಿದ್ದು, ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ಹಿತಕ್ಕೆ ಆದ್ಯತೆ ನೀಡಬೇಕು ಎಂದರು.

Gudibande News: ಸ್ಥಳೀಯ ಚುನಾವಣೆಗಳಿಗೆ ಎನ್‌ಡಿಎ ಸಂಘಟಿತ ಸಿದ್ಧತೆ: ಹರಿನಾಥ್ ರೆಡ್ಡಿ

ಸ್ಥಳೀಯ ಚುನಾವಣೆಗಳಿಗೆ ಎನ್‌ಡಿಎ ಸಂಘಟಿತ ಸಿದ್ಧತೆ: ಹರಿನಾಥ್ ರೆಡ್ಡಿ

ಸಂಸದ ಕೆ. ಸುಧಾಕರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಿರ್ದೇಶನದಂತೆ ಮುಂದಿನ ಚುನಾವಣೆಗಳನ್ನು ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಪಕ್ಷದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಗಳಿಗೆ ಎಲ್ಲರೂ ಬದ್ಧರಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ನಮ್ಮ ಉದ್ದೇಶವಾಗಿದೆ

Rajyotsava awardee Prameela Mahadev: ಮಹಾಜನ್ ವರದಿ ಯಥಾವತ್ ಜಾರಿಯಾಗಲಿ: ಪ್ರಮೀಳ ಮಹಾದೇವ್

ಮಹಾಜನ್ ವರದಿ ಯಥಾವತ್ ಜಾರಿಯಾಗಲಿ: ಪ್ರಮೀಳ ಮಹಾದೇವ್

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಮಹಾಜನ್ ವರದಿ: ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿ ದರು. ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯಗಳ ರಚನೆ ಕುರಿತು ದೇಶದಲ್ಲಿ ಹಲವು ಚರ್ಚೆಗಳು ನಡೆದವು. ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಬಹುದೆಂಬ ಆತಂಕವೂ ಇತ್ತು.

ಶಿಡ್ಲಘಟ್ಟ ಕಾಂಗ್ರೆಸ್ ಒಗ್ಗಟ್ಟಿಗೆ ಹೈಕಮಾಂಡ್ ಮಧ್ಯಪ್ರವೇಶಿಸಲಿ: ಮುನೀಂದ್ರ

ಶಿಡ್ಲಘಟ್ಟ ಕಾಂಗ್ರೆಸ್ ಒಗ್ಗಟ್ಟಿಗೆ ಹೈಕಮಾಂಡ್ ಮಧ್ಯಪ್ರವೇಶಿಸಲಿ: ಮುನೀಂದ್ರ

ಪಕ್ಷದ ಮತದಾರರು ಕಾಂಗ್ರೆಸ್ ಪರವಾಗಿದ್ದರೂ, ಅವರನ್ನು ಮುನ್ನಡೆಸುವ ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಮೂರು ವರ್ಷಗಳಾದರೂ ನಾಮನಿರ್ದೇಶನ ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ. ಪಕ್ಷಕ್ಕಾಗಿ ದುಡಿದವರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ತುಮಕೂರಿನಲ್ಲಿ ಅಕ್ರಮ ಗೋಮಾಂಸ ಮಾರಾಟ: ಆರೋಪಿ ಪೊಲೀಸರ ವಶಕ್ಕೆ

ತುಮಕೂರಿನಲ್ಲಿ ಅಕ್ರಮ ಗೋಮಾಂಸ ಮಾರಾಟ: ಆರೋಪಿ ಪೊಲೀಸರ ವಶಕ್ಕೆ

Tumkur News: ತುಮಕೂರು ನಗರದ ಸದಾಶಿವನಗರದ 8ನೇ ಕ್ರಾಸ್‌ನಲ್ಲಿರುವ ಶೆಡ್‌ ಒಂದರಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಿಲಕ್ ಪಾರ್ಕ್ ಠಾಣೆ ಪೊಲೀಸರು ದಾಳಿ ನಡೆಸಿ, ಗೋಮಾಂಸವನ್ನು ವಶಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ಜರುಗಿದೆ.

Sugar cane Farmer protest: ಕೇಂದ್ರದೊಂದಿಗೆ ನಡೆದ ಸಂಧಾನ ಸಭೆ ವಿಫಲ, ಬೇಡಿಕೆ ಈಡೇರುವವರೆಗೆ ಹೋರಾಟ ಕೈಬಿಡದಿರಲು ರೈತರ ನಿರ್ಧಾರ

ಕಬ್ಬಿಗೆ ₹5,500 ದರಕ್ಕೆ ರೈತರ ಪಟ್ಟು; ಅಹೋರಾತ್ರಿ ಹೆದ್ದಾರಿ ಧರಣಿ

ಕೇಂದ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ನಡೆದ ಸಂಧಾನ ಸಭೆಯಲ್ಲಿಯೂ ರೈತರ ಪ್ರಮುಖ ಬೇಡಿಕೆಗಳಿಗೆ ಸ್ಪಷ್ಟ ಒಪ್ಪಿಗೆ ದೊರೆಯದ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ. ಕೇಂದ್ರದಿಂದ ಬೇಡಿಕೆಗಳಿಗೆ ಒಪ್ಪಿಗೆ ಸಿಗುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.

Karnataka Sting Operation: ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ವಿಡಿಯೊ ಪ್ರಸಾರ ಮಾಡದಂತೆ ಕೋರ್ಟ್‌ನಿಂದ ಪ್ರತಿಬಂಧಕಾದೇಶ

ಸಿದ್ದರಾಮಯ್ಯ ವಿರುದ್ಧ ವಿಡಿಯೊ ಪ್ರಸಾರ ಮಾಡದಂತೆ ಪ್ರತಿಬಂಧಕಾದೇಶ

ವೈರಲ್ ವಿಡಿಯೊ ಮತ್ತು ಅದಕ್ಕೆ ಸಂಬಂಧಿಸಿದ ಆರೋಪಗಳ ಪ್ರಸಾರ ಹಾಗೂ ಹಂಚಿಕೆಗೆ ತಡೆ ನೀಡುವಂತೆ ಕೋರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ 19ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್‌ನಿಂದ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಲಾಗಿದೆ.

ಸತ್ಯಸಾಯಿ ಗ್ರಾಮದಲ್ಲಿ ಯಕ್ಷಗಾನ ವೈಭವ: ಸಂಸ್ಕೃತಿಯೇ ದೇಶದ ಅಸ್ಮಿತೆ ಎಂದ ಸದ್ಗುರು ಮಧುಸೂದನ ಸಾಯಿ

ಸಂಸ್ಕೃತಿಯೇ ದೇಶದ ಅಸ್ಮಿತೆ ಎಂದ ಸದ್ಗುರು ಮಧುಸೂದನ ಸಾಯಿ

ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವು ಸಾವಿರಾರು ಭಕ್ತರು ಹಾಗೂ ವಿದ್ಯಾರ್ಥಿ ಗಳನ್ನು ಮಂತ್ರಮುಗ್ಧಗೊಳಿಸಿತು. ಡಾ. ಕೆರೆಮನೆ ಶಿವಾನಂದ ಹೆಗಡೆ ಅವರ ನಿರ್ದೇಶನದಲ್ಲಿ ಮೂಡಿ ಬಂದ ಪ್ರಸಂಗದಲ್ಲಿ ರಾಮ, ಸೀತೆ, ಲಕ್ಷ್ಮಣ, ರಾವಣ ಹಾಗೂ ಮಾರೀಚನ ಪಾತ್ರಗಳನ್ನು ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಭಾಗವತಿಕೆ ಮತ್ತು ವಾದ್ಯಗಳ ನಾದವು ಪ್ರದರ್ಶನದ ಮೆರುಗು ಹೆಚ್ಚಿಸಿತು.

Chikkaballapur News: ಜಿಲ್ಲೆಯಲ್ಲಿ ಶೇ.51ರಷ್ಟು ಮಳೆ ಕೊರತೆ; ಮುನ್ನೆಚ್ಚರಿಕೆ ಕ್ರಮಕ್ಕೆ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ಮಂಜುಳ ಸೂಚನೆ

ಮಳೆ ಕೈಕೊಟ್ಟರೆ 285 ಗ್ರಾಮಗಳಿಗೆ ಕುಡಿಯುವ ನೀರಿನ ಬವಣೆ!

ಚಿಂತಾಮಣಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಅವರು, ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಮುನ್ನವೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಖಾಸಗಿ ಕೊಳವೆ ಬಾವಿಗಳ ಮಾಲೀಕರ ಸಹಕಾರ ಪಡೆದು ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

Karnataka Sting Operation: ಸ್ಟಿಂಗ್ ಆಪರೇಷನ್ ವಿಡಿಯೊಗೂ ನನಗೂ ಯಾವುದೇ ಸಂಬಂಧ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಸ್ಟಿಂಗ್ ಆಪರೇಷನ್ ವಿಡಿಯೊಗೂ ನನಗೂ ಯಾವುದೇ ಸಂಬಂಧ ಇಲ್ಲ: ಸಿದ್ದರಾಮಯ್ಯ

Ex CM Siddaramiah: ಸ್ಟಿಂಗ್ ಆಪರೇಷನ್ ವಿಡಿಯೊ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ನಾನು ಈಗಾಗಲೇ ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದೇನೆ. ಆ ತನಿಖೆಯಿಂದ ಸತ್ಯ ಹೊರಬರಲಿದೆ ಎಂಬ ವಿಶ್ವಾಸವೂ ನನಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ವರ್ಷಪೂರ್ತಿ ಡೆಂಘೀ ಮುನ್ನೆಚ್ಚರಿಕೆಗೆ ಕರೆ ನೀಡಲು ಕೈಜೋಡಿಸಿದ ತಕೇಡ

ವರ್ಷಪೂರ್ತಿ ಡೆಂಘೀ ಮುನ್ನೆಚ್ಚರಿಕೆಗೆ ಕರೆ ನೀಡಲು ಕೈಜೋಡಿಸಿದ ತಕೇಡ

ಡೆಂಘೀ ರೋಗವು ವರ್ಷಪೂರ್ತಿ ಎದುರಾಗುವ ಸಾರ್ವಜನಿಕ ಆರೋಗ್ಯ ಬೆದರಿಕೆಯಾಗಿ ರೂಪಾಂತರ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಾದ್ಯಂತ ಕಣ್ಗಾವಲು, ತಡೆಗಟ್ಟುವಿಕೆ, ನಾವೀನ್ಯತೆ ಮತ್ತು ಸಮುದಾಯದ ಸಿದ್ಧತೆಯನ್ನು ಬಲಪಡಿಸಲು ಕರ್ನಾಟಕದ ನಾಯಕತ್ವ, ಸಾರ್ವಜನಿಕ ಆರೋಗ್ಯ ತಜ್ಞರು ಹಾಗೂ ಪಾಲುದಾರರು 4-ಅಂಶಗಳ ಕ್ರಮಕ್ಕೆ ಕರೆಗೆ ಅನುಮೋದನೆ ನೀಡಿದ್ದಾರೆ.

ನಟ ಸುದೀಪ್ ತಾಯಿ ಹೆಸರಲ್ಲಿ ವಂಚನೆ: ಕ್ರಿಕೆಟ್ ಟೂರ್ನಿ ನಡೆಸುವುದಾಗಿ ಲಕ್ಷಾಂತರ ರೂ. ಸಂಗ್ರಹಿಸಿ ವ್ಯಕ್ತಿ ಎಸ್ಕೇಪ್

ನಟ ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್‌ ಟೂರ್ನಿ; 1.5 ಲಕ್ಷ ರೂ. ವಂಚನೆ!

​ಶಿರಾ ತಾಲೂಕಿನ ದೊಡ್ಡಗುಳ ಗ್ರಾಮದಲ್ಲಿ ʼಎರಡು ರಾಜ್ಯ ಒಂದು ಕಪ್ʼ ಎಂಬ ಹೆಸರಿನಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವುದಾಗಿ ಪ್ರಶಾಂತ್ ಎಂಬಾತ ಸ್ಥಳೀಯರನ್ನು ಮತ್ತು ಕ್ರೀಡಾಪಟುಗಳನ್ನು ಸಂಪರ್ಕಿಸಿದ್ದನು. ಆಹ್ವಾನ ಪತ್ರಿಕೆಯಲ್ಲಿ ಕಿಚ್ಚ ಸುದೀಪ್ ಹಾಗೂ ಅವರ ತಾಯಿ ಸರೋಜಾ ಅವರ ಭಾವಚಿತ್ರಗಳನ್ನು ಮುದ್ರಿಸಿ, ಸಾರ್ವಜನಿಕರಲ್ಲಿ ನಂಬಿಕೆ ಹುಟ್ಟಿಸಿ, ಹಣ ವಸೂಲಿ ಮಾಡಿ ಪರಾರಿಯಾಗಿದ್ದಾನೆ.

ಬೆಂಗಳೂರಿನ ಪಬ್‌ಗಳ ಮೇಲೆ ಪೊಲೀಸ್‌ ದಾಳಿ: ಐಡಿ ತೋರಿಸಲು ಹೇಳಿದ್ದಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆಯೇ ಹಲ್ಲೆ ಮಾಡಿದ ಐಎಎಸ್ ಅಧಿಕಾರಿ

ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆಯೇ ಹಲ್ಲೆ ಮಾಡಿದ ಐಎಎಸ್ ಅಧಿಕಾರಿ

IAS Officer Assaults Police: ಪಬ್ ದಾಳಿಯ ಸಂದರ್ಭದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ಮತ್ತು ನಿಂದನೆ ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ಮತ್ತು ಅವರ ಮೂವರು ಸ್ನೇಹಿತರ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಐಡಿ ತೋರಿಸಲು ಕೇಳಿದಾಗ, ಐಎಎಸ್ ಅಧಿಕಾರಿಯು ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಬೆಂಗಳೂರಿನ ಪಬ್‌ನಲ್ಲಿ ಆಂಧ್ರದ ಐಎಎಸ್‌ ಅಧಿಕಾರಿ ಕಿರಿಕ್; ಐಡಿ ಕಾರ್ಡ್‌ ಕೇಳಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ, FIR ದಾಖಲು

ಬೆಂಗಳೂರಿನ ಪಬ್‌ನಲ್ಲಿ ಆಂಧ್ರ ಪ್ರದೇಶದ ಅಧಿಕಾರಿ ಕಿರಿಕ್; FIR ದಾಖಲು

ಬೆಂಗಳೂರು ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ 'ಕವೋರ್' ಪಬ್‌ನಲ್ಲಿ ಪೊಲೀಸರ ಮೇಲೆ ಐಎಎಸ್‌ ಅಧಿಕಾರಿ ದರ್ಪ ಮೆರೆದ ಘಟನೆ ನಡೆದಿದೆ. ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರ ಸ್ವಕ್ಷೇತ್ರ ಕುಪ್ಪಂನ 'ಕುಪ್ಪಂ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ'ದ ಮುಖ್ಯಸ್ಥ ಐಎಎಸ್ ವಿಕಾಸ್ ಮರ್ಮತ್ ಸೇರಿ ನಾಲ್ವರ ವಿರುದ್ಧ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Sugarcane Growers Protest: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಕಿಚ್ಚು ದುಪ್ಪಟ್ಟು; ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಕಿಚ್ಚು ದುಪ್ಪಟ್ಟು; ಹೆದ್ದಾರಿ ಬಂದ್

ಸೋಮವಾರ ದೆಹಲಿಯಲ್ಲಿ ಕೇಂದ್ರ ಸಚಿವರ ಜೊತೆ ರೈತ ಸಂಘಟನೆ ಸದಸ್ಯರು ನಡೆಸಿದ ಸಭೆ ವಿಫಲವಾದ ಬೆನ್ನಲ್ಲೇ ಮಂಗಳವಾರ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ರೈತ ಸಂಘಟನೆ ಕರೆ ನೀಡಿತ್ತು.‌ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಂದ್ ಮಾಡಿದ ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ 3ನೇ ಅನಿವಾಸಿ ಕನ್ನಡಿಗರ ಸಮ್ಮೇಳನ

ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ 3ನೇ ಅನಿವಾಸಿ ಕನ್ನಡಿಗರ ಸಮ್ಮೇಳನ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 3ನೇ ಅನಿವಾಸಿ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನ ಇತ್ತೀಚೆಗೆ ಅದ್ಧೂರಿಯಾಗಿ ಜರುಗಿತು. ಸಮ್ಮೇಳನದ ಸಮ್ಮೇಳನಾಧ್ಯಕ್ಷೆಯಾಗಿ ಸುಮಾ ಮಹೇಶ್ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದೇಶದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಗಟ್ಟಿಯಾದ ನಂಟನ್ನು ಉಳಿಸಿಕೊಂಡಿರುವ ಅನಿವಾಸಿ ಕನ್ನಡಿಗರು, ಮುಂದಿನ ಪೀಳಿಗೆಗೂ ಕನ್ನಡದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಮಹತ್ತರ ಜವಾಬ್ದಾರಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಕೆಎಸ್‌ಕ್ಯೂ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲುಗೆ ಐಸಿಸಿ ಕತಾರ್ ಸನ್ಮಾನ

ಕೆಎಸ್‌ಕ್ಯೂ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲುಗೆ ಐಸಿಸಿ ಕತಾರ್ ಸನ್ಮಾನ

ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿರುವ ಐಸಿಸಿಯ ‘ಅಶೋಕ ಹಾಲ್’ನಲ್ಲಿ ಆಯೋಜಿಸಲಾಗಿದ್ದ 101ನೇ ಆವೃತ್ತಿಯ ‘ವೆಡ್ನೆಸ್‌ಡೇ ಫಿಯೆಸ್ಟಾ – ಸಿಲ್ವರ್ ರೈಸ್’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಐಸಿಸಿ ಕತಾರ್ ವತಿಯಿಂದ ‘ಕರ್ನಾಟಕ ಸಂಘ ಕತಾರ್’ (ಕೆಎಸ್‌ಕ್ಯೂ) ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಅತಿ ಶೀಘ್ರದಲ್ಲೇ ಜಂಟಿ ಸಮಿತಿ ರಚನೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಅತಿ ಶೀಘ್ರದಲ್ಲೇ ಜಂಟಿ ಸಮಿತಿ ರಚನೆ

Pralhad Joshi: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಬದ್ಧವಿದೆ. ಪಕ್ಷಾತೀತವಾಗಿ ಎಲ್ಲಾ ರಾಜ್ಯ ಸರ್ಕಾರಗಳ ಸಹಕಾರ ಪಡೆದು ಅಗತ್ಯ ಕ್ರಮ ಕೈಗೊಳ್ಳುತ್ತದೆ. ಕೃಷಿ ಸಚಿವ ಶಿವರಾಜಸಿಂಗ್‌ ಚವ್ಹಾಣ್‌ ಮತ್ತು ಆಹಾರ ಸಚಿವನಾಗಿ ನಾನು ರೈತರ ಸಮಸ್ಯೆಗಳನ್ನೆಲ್ಲ ಆಲಿಸಿದ್ದು, ಶೀಘ್ರದಲ್ಲೇ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಸ್ಟಿಂಗ್ ಆಪರೇಷನ್: ಮಾಧ್ಯಮಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಿದ್ದರಾಮಯ್ಯ

ಸ್ಟಿಂಗ್ ಆಪರೇಷನ್: ಶೀಘ್ರದಲ್ಲೇ ಹೊರಬೀಳಲಿದೆ ಕೋರ್ಟ್ ಆದೇಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ಸಚಿವರನ್ನು ಗುರಿಯಾಗಿಸಿಕೊಂಡು ಖಾಸಗಿ ತಂಡವೊಂದು ನಡೆಸಿರುವ ಸ್ಟಿಂಗ್ ಆಪರೇಷನ್ ಕುರಿತಾಗಿ ಸಿದ್ದರಾಮಯ್ಯ ಅವರು 18ನೇ ಸಿಸಿಎಚ್ ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ಶೀಘ್ರದಲ್ಲೇ ಈ ಕುರಿತು ನ್ಯಾಯಾಲಯ ಆದೇಶ ಹೊರಬೀಳುವ ನಿರೀಕ್ಷೆ ಇದೆ ಎನ್ನಲಾಗಿದೆ.

ಕ್ಯಾಪ್ಟನ್ ಸ್ಥಾನಕ್ಕೆ ಧನಂಜಯ ಪೈಪೋಟಿ: ಪ್ರಶಾಂತ ಆನೆ ಹೆಗಲಿಗೆ ಚಿನ್ನದ ಅಂಬಾರಿ?

ಪ್ರಶಾಂತ ಆನೆ ಹೆಗಲಿಗೆ ಚಿನ್ನದ ಅಂಬಾರಿ?

ಅನುಭವ, ವಯಸ್ಸು ಹಾಗೂ ಸಾಮರ್ಥ್ಯ ಕ್ಯಾಪ್ಟನ್ ಆಗುವ ಆನೆಗೆ ಪರಿಗಣಿಸಲಾಗುತ್ತದೆ. ಈ ಎಲ್ಲ ಸಾಮರ್ಥ್ಯಗಳನ್ನು ಮಹೇಂದ್ರ ಆನೆ ಹೊಂದಿದ್ದು, ಈ ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಆನೆಯನ್ನು ಮಹೇಂದ್ರ ಹೊರಲಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಧನಂಜಯ ಆನೆ ಹೆಸರು ಕೂಡ ಸ್ಪರ್ಧೆಯಲ್ಲಿದೆ.

Navratri: ನವರಾತ್ರಿ 3ನೇ ದಿನ: ತಾಯಿ ಚಂದ್ರಘಂಟಾ ಪೂಜೆ ಹೇಗೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ನವರಾತ್ರಿಯ ತೃತೀಯ ದಿನ ಚಂದ್ರಘಂಟಾ ದೇವಿಯ ಪೂಜೆ ಹೀಗೆ ಮಾಡಿ

ನವರಾತ್ರಿಯ ಮೂರನೇ ದಿನವನ್ನು ತಾಯಿ ಚಂದ್ರಘಂಟಾ ದೇವಿಯ ಆರಾಧನೆಗೆ ಸಮರ್ಪಿಸಲಾಗಿದೆ. ಪಾರ್ವತಿ ದೇವಿಯ ವಿವಾಹಿತ ರೂಪವೆಂದು ಪರಿಗಣಿಸಲ್ಪಡುವ ಚಂದ್ರಘಂಟಾ ದೇವಿಯು ಧೈರ್ಯ, ಶೌರ್ಯ ಮತ್ತು ಶಕ್ತಿಯ ಸಂಕೇತವಾಗಿದ್ದಾಳೆ. ಈ ದಿನ ದೇವಿಗೆ ಹೂವು, ಧೂಪ, ದೀಪ ಮತ್ತು ನೈವೇದ್ಯವನ್ನು ಅರ್ಪಿಸಿ, ಮಂತ್ರಗಳನ್ನು ಪಠಿಸಿ ಆರಾಧಿಸಲಾಗುತ್ತದೆ. ದೇವಿಯ ಪೌರಾಣಿಕ ಕಥೆಯು ಮಹಿಷಾಸುರನ ಸಂಹಾರ ಮತ್ತು ದುಷ್ಟಶಕ್ತಿಗಳ ವಿರುದ್ಧದ ವಿಜಯವನ್ನು ಸಾರುತ್ತದೆ. ತಾಯಿಯ ಆರಾಧನೆಯಿಂದ ಭಯ ದೂರವಾಗಿ, ಧೈರ್ಯ ಮತ್ತು ಮನಃಶಾಂತಿ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ.

28,825 ರುಪಾಯಿಗೆ ತಲುಪಿದ ಕ್ವಿಂಟಾಲ್ ಕೊಬ್ಬರಿ ದರ: ಕೊಬ್ಬರಿ ಬೆಲೆ ಏರಿಕೆ, ತೆಂಗಿನಕಾಯಿ ದರ ಇಳಿಕೆ

ಕೊಬ್ಬರಿ ಬೆಲೆ ಏರಿಕೆ, ತೆಂಗಿನಕಾಯಿ ದರ ಇಳಿಕೆ

ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಗ್ರೇಡ್-1 ಕೊಬ್ಬರಿಯ ಕೊರತೆ ಇರುವುದರಿಂದ, ಲಭ್ಯವಿರುವ ಗುಣಮಟ್ಟದ ಕೊಬ್ಬರಿಗೆ ಎಣ್ಣೆ ಉತ್ಪಾದಕರು ಮತ್ತು ವರ್ತಕರು ಪೈಪೋಟಿಯ ಮೇಲೆ ಹೆಚ್ಚಿನ ದರ ನೀಡಿ ಖರೀದಿಸುತ್ತಿದ್ದಾರೆ. ತಿಪಟೂರು ಕೊಬ್ಬರಿಯು ತನ್ನ ವಿಶೇಷ ರುಚಿ, ಹೆಚ್ಚಿನ ಎಣ್ಣೆಯಾಂಶ ಹಾಗೂ ಬಾಳಿಕೆಗೆ ಹೆಸರು ವಾಸಿಯಾಗಿದೆ. ಇಲ್ಲಿನ ತೆಂಗಿನ ಎಣ್ಣೆ ಹಾಗೂ ಇತರೆ ಉಪ ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಹೆಚ್ಚಿದೆ.

ಮೈತ್ರಿ ಬಲದೊಂದಿಗೆ ನಮೋಶಿ ಮತಬೇಟೆ : ಶಿಕ್ಷಕರ ಮನಗೆಲ್ಲಲು ಕೈ-ಕಮಲ ಕಸರತ್ತು !

ಶಿಕ್ಷಕರ ಮನಗೆಲ್ಲಲು ಕೈ-ಕಮಲ ಕಸರತ್ತು !

ಕಣದಲ್ಲಿರುವ 13 ಅಭ್ಯರ್ಥಿಗಳ ಪೈಕಿ ಪ್ರಮುಖ ಸ್ಪರ್ಧೆ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರು ಮತ್ತು ಬಿಜೆಪಿಯ ಶಶಿಲ್ ಜಿ.ನಮೋಶಿ ನಡುವೆಯೇ ಸೀಮಿತವಾಗಿದ್ದು, ಶಿಕ್ಷಕರ ಮತಗಳನ್ನು ಸೆಳೆಯಲು ಉಭಯ ಪಕ್ಷಗಳ ತಂಡಗಳು ಏಳು ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿವೆ. ರಾಜಕೀಯ ಚಟುವಟಿಕೆಯ ವೇಗ, ಮೈತ್ರಿ ಪಕ್ಷಗಳ ಒಗ್ಗಟ್ಟು ಹಾಗೂ ಕ್ಷೇತ್ರದಾದ್ಯಂತ ನಡೆಯುತ್ತಿರುವ ಸಂಪರ್ಕ ಅಭಿಯಾನ ಗಮನಿಸಿದರೆ ಸದ್ಯದ ವಾತಾವರಣದಲ್ಲಿ ಬಿಜೆಪಿಗೆ ತುಸು ಮೇಲುಗೈ ಕಾಣಿಸುತ್ತಿದೆ.

ಸಿದ್ದು ಮೇಲೆ ಎಚ್‌ಡಿಕೆಗೆ ದಿಢೀರ್ ಪ್ರೀತಿ, ಬಿಜೆಪಿಗೆ ಭೀತಿ, ಸರಕಾರಕ್ಕೆ ತನಿಖೆ ಇಕ್ಕಟ್ಟು: ಸ್ಟಿಂಗ್‌ ಆಪರೇಷನ್ ಅಪಾಯದ ರಿಂಗ್‌ನಲ್ಲಿ ಕಾಂಗ್ರೆಸ್

ಸ್ಟಿಂಗ್‌ ಆಪರೇಷನ್ ಅಪಾಯದ ರಿಂಗ್‌ನಲ್ಲಿ ಕಾಂಗ್ರೆಸ್

ರಾಜ್ಯ ರಾಜಕಾರಣ ಮೇಲ್ನೋಟಕ್ಕೆ ನಿಂತ ನೀರಂತೆ ಕಂಡರೂ ನಾಲ್ಕು ದಿನಗಳಿಂದ ಮಾಧ್ಯಮ ಗಳಲ್ಲಿ ತೇಲಿ ಬಂದಿರುವ ಸ್ಟಿಂಗ್ ಆಪರೇಷನ್ ಕಾವಿನಿಂದ ಕಾದು ಕುದಿಯುಂತಾಗಿದೆ. ಇದೀಗ ಅದು ಎಲ್ಲ ಹಂತವನ್ನೂ ಮೀರಿ ಆಡಳಿತ ಮತ್ತು ಪ್ರತಿಪಕ್ಷಗಳ ಒಳ ರಾಜಕಾರಣವನ್ನು ಹೊಕ್ಕಿ ಅಲ್ಲಿಯೂ ಅನೇಕ ಸಂಗತಿಗಳು ಸ್ಫೋಟಗೊಳ್ಳುವಂತಾಗಿದೆ.

Loading...