ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Gold Price Today On 3rd May 2026: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ ಚೆಕ್‌ ಮಾಡಿ

ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

Gold Silver Price Today: ಶನಿವಾರ ಏರಿಕೆಯಾಗಿದ್ದ ಚಿನ್ನದ ದರ ಭಾನುವಾರ (ಮೇ 3) ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾನುವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 13,835 ರುಪಾಯಿ ಕಂದು ಬಂದಿದ್ದು, 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 15,093 ಇದೆ.

ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಭಾರಿ ದುರಂತ; ಹೊಂಡಕ್ಕೆ ಈಜಲು ತೆರಳಿದ ಇಬ್ಬರು ಬಾಲಕರು ಜಲಸಮಾಧಿ

ಹೊಂಡಕ್ಕೆ ಈಜಲು ತೆರಳಿದ ಇಬ್ಬರು ಬಾಲಕರು ಜಲಸಮಾಧಿ

Belagavi News: ಪ್ರಸಿದ್ಧ ಬೆಳಗಾವಿ ಕಪಿಲೇಶ್ವರ ದೇವಾಲಯ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. ಶಿವಂ ಪರಶುರಾಮ ಸುಂಡೀಕರ್ (7), ಪರಶುರಾಮ ನಿಲಜಕರ್ (11) ಮೃತರು. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಶೃಂಗೇರಿ ವಿಧಾನಸಭಾ ಕ್ಷೇತ್ರ: ಮತಗಳಲ್ಲಿ ಡಬಲ್‌ ಟಿಕ್‌ನಿಂದಾಗಿ 255 ಮತ ತಿರಸ್ಕೃತ, ಕಾಂಗ್ರೆಸ್‌ಗೆ  ಶಾಕ್

ಶಾಸಕ ಟಿ.ಡಿ. ರಾಜೇಗೌಡಗೆ ಶಾಕ್ ಕೊಟ್ಟ ಮರು ಮತ ಎಣಿಕೆ

2023ರಲ್ಲಿ ನಡೆದಿದ್ದ ಚಿಕ್ಕಮಗಳೂರು ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಏಣಿಕೆ ವೇಳೆ ಕಾಂಗ್ರೆಸ್ ಗೆ ಬಹುದೊಡ್ಡ ಹಿನ್ನಡೆಯಾಗಿದೆ. ಡಬ್ಬಲ್ ಟಿಕ್ ನಿಂದಾಗಿ 255 ಮತಗಳು ತಿರಸ್ಕೃತಗೊಂಡಿದ್ದು, ಶಾಸಕ ಟಿ.ಡಿ. ರಾಜೇಗೌಡ ಅವರು ಶಾಕ್ ಅನುಭವಿಸಿದ್ದಾರೆ. ಮೊದಲ ಬಾರಿಯ ಎಣಿಕೆಯಲ್ಲಿ ಗೆಲುವು ಸಾಧಿಸಿದ್ದ ರಾಜೇಗೌಡ ಅವರು ಮರು ಮತ ಎಣಿಕೆ ವೇಳೆ ಭಾರಿ ಹಿನ್ನಡೆ ಅನುಭವಿಸಿದರು.

ತಿಂಗಳಿಂದ ತಿಂಗಳಿಗೆ ಭಕ್ತರ ಪಾಲ್ಗೊಳ್ಳುವಿಕೆ ಹೆಚ್ಚುತ್ತೆ ಎಂಬುದು ನನ್ನ ನಂಬಿಕೆ: ಸಂಸದ ಡಾ.ಕೆ. ಸುಧಾಕರ್

ಅರುಣಾಚಲೇಶ್ವರ ದೇವಾಲಯದ ಮಾದರಿ ಅಭಿವೃದ್ದಿಯೆ ಗಿರಿ ಪ್ರದಕ್ಷಿಣೆ ಉದ್ದೇಶ

ನಮ್ಮ ಇವತ್ತಿನ ಗಿರಿಪ್ರದಕ್ಷಿಣೆ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಬಂದಿದ್ದು ಮತ್ತಷ್ಟು ಕಳೆ ಬಂದಿದೆ ಭಕ್ತರ ಇಚ್ಛೆಯಂತೆ ಗಿರಿ ಪ್ರದಕ್ಷಿಣೆ ಪ್ರಾರಂಭ ಮಾಡಿದ್ದೇವೆ. ಇದು ತಮಿಳುನಾಡು ಅರುಚಲೇಶ್ವರ ದೇವಾಲಯ ಸುತ್ತಿದಷ್ಟೆ ಪವಿತ್ರ ಮತ್ತು ಪಾವನವಾದ ಪ್ರದಕ್ಷಿಣೆ ಎಂದು ನಾನು ಭಾವಿಸಿದ್ದೇನೆ. ಪ್ರದಕ್ಷಿಣೆ ಪ್ರಾರಂಭ ಮಾಡಿ ಮೂರು ತಿಂಗಳಾಗಿದೆ ಪ್ರತಿ ಹುಣ್ಣಿಮೆಗೆ ನಡೆಯುವ ಈ ಗಿರಿ ಪ್ರದಕ್ಷಿಗೆ ತಿಂಗಳಿಂದ ತಿಂಗಳಿಗೆ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ.

Gubbi News: ಲಿಂಕ್ ಕೆನಾಲ್ ಬೇಡ, ಮುಖ್ಯನಾಲೆ ಅಗಲೀಕರಣ ಮಾಡಿ : ಶಾಸಕ ಎಸ್.ಆರ್.ಶ್ರೀನಿವಾಸ್

ಲಿಂಕ್ ಕೆನಾಲ್ ಬೇಡ, ಮುಖ್ಯನಾಲೆ ಅಗಲೀಕರಣ ಮಾಡಿ

ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಶಿಕ್ಷಣ ಇಲಾಖೆಯಲ್ಲಿ 66 ಸಾವಿರ ಹುದ್ದೆಗಳು ಭರ್ತಿಯಾಗಬೇಕಿದೆ. ಈ ಬಾರಿಯ ಹತ್ತನೇ ತರಗತಿಯ ಫಲಿತಾಂಶ ಶೇ.97 ರಷ್ಟಿದೆ. ಮುಂದಿನ ವರ್ಷದಲ್ಲಿ ನೂರಕ್ಕೆ ನೂರು ಫಲಿತಾಂಶ ತರುವಂತೆ ಸೂಚನೆ ನೀಡಲಾಗಿದೆ. ಹೊಸದಾಗಿ ಕೆಪಿಎಸ್ ಶಾಲೆಗಳು ತಾಲ್ಲೂಕಿನಲ್ಲಿ ಏಳೆಂಟು ಕಡೆ ಆರಂಭ ವಾಗಲಿದೆ. ಅರ್ಹ ಶಿಕ್ಷಕರ ಶಾಲೆಗಳ ಬಗ್ಗೆ ಪೋಷಕರಲ್ಲಿ ಆಸಕ್ತಿ ಕಾಣುತ್ತಿಲ್ಲ

Gudibande News: ಗುಡಿಬಂಡೆ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ: ಬಾಲಾಜಿ, ಶ್ರೀರಾಮರೆಡ್ಡಿ ಹಾಗೂ ಸುಬ್ಬಲಕ್ಷ್ಮಮ್ಮಗೆ ಜಯ

ಗುಡಿಬಂಡೆ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ನಡೆದ ಈ ಪ್ರಕ್ರಿಯೆಯು ರಾಜಕೀಯ ಚುನಾವಣೆಯಷ್ಟೇ ಪೈಪೋಟಿಯಿಂದ ಕೂಡಿದ್ದು ಎಲ್ಲರ ಗಮನ ಸೆಳೆಯಿತು. ಸಾಮಾನ್ಯ ಕ್ಷೇತ್ರದ ಎರಡು ಸ್ಥಾನಗಳಿಗಾಗಿ ಒಟ್ಟು 4 ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣೆಯಲ್ಲಿ ಬಾಲಾಜಿ 80 ಮತಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿದರೆ, ಇ.ಎನ್. ಶ್ರೀರಾಮರೆಡ್ಡಿ 72 ಮತಗಳನ್ನು ಪಡೆದು ಜಯಶಾಲಿ ಯಾದರು.

Gauribidanur News: ಡಿ.ಪಾಳ್ಯದಲ್ಲಿ ಬ್ರಹ್ಮ ರಥೋತ್ಸವ

Gauribidanur News: ಡಿ.ಪಾಳ್ಯದಲ್ಲಿ ಬ್ರಹ್ಮ ರಥೋತ್ಸವ

ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ರೀತಿಯ ದೇವತಾ ಕಾರ್ಯ ಗಳು ನೆರೆವೇರಿದವು, ಮಹಾ ಮಂಗಳಾರತಿಯ ನಂತರ ಅಭಿಜಿತ್ ಮುಹೂರ್ತದಲ್ಲಿ ಸಾವಿರಾರು ಮಂದಿ ಭಕ್ತರ ಜಯ ಘೋಷ ದೊಂದಗೆ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ರಾಜ ಬೀದಿಗಳಲ್ಲಿ ಸಾಗಿದ ಬ್ರಹ್ಮ ರಥೋತ್ಸವಕ್ಕೆ ಗ್ರಾಮಸ್ಥರು ಪೂಜೆಯನ್ನು ನೆರವೇರಿಸಿದರು

Chinthamani News: ಕಾರ್ಮಿಕರ 8 ಗಂಟೆ ಕೆಲಸದ ಹಕ್ಕಿಗಾಗಿ ನಡೆದ ಹೋರಾಟದ ಇತಿಹಾಸ ಸ್ಮರಿಸಿದ ಮೊಹಮ್ಮದ್ ಬೇಗ್

ಚಿಂತಾಮಣಿಯಲ್ಲಿ ಅದ್ದೂರಿ ಕಾರ್ಮಿಕ ದಿನಾಚರಣೆ

ರಾಜ್ಯ ಟೈಲ್ಸ್ ಮತ್ತು ಗ್ರಾನೈಟ್ ಹಾಗೂ ಇತರ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಮೆರವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. "ಕಾರ್ಮಿಕರ ದಿನಾಚರಣೆ ಶುಭಾಶಯಗಳು" ಮತ್ತು "ಎಲ್ಲಾ ಕೂಲಿ ಕಾರ್ಮಿಕರಿಗೆ ಜಯವಾಗಲಿ" ಎಂಬ ಘೋಷಣೆಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು.

ಮೇ.9ಕ್ಕೆ ಕೈಪು ಲಕ್ಷ್ಮೀನರಸಿಂಹಶಾಸ್ತ್ರೀಗಳಿಗೆ 1 ಲಕ್ಷ ನಗದು ಸಹಿತ ನಾರೇಯಣ ಪ್ರಶಸ್ತಿ : ಧರ್ಮಾಧಿಕಾರಿ ಎಂ.ಆರ್.ಜಯರಾಮ್

ಮೇ.9ಕ್ಕೆ ಕೈಪು ಲಕ್ಷ್ಮೀನರಸಿಂಹಶಾಸ್ತ್ರೀಗಳಿಗೆ ನಾರೇಯಣ ಪ್ರಶಸ್ತಿ

ಟ್ರಸ್ಟ್ ಸಮಿತಿಯ ಸದಸ್ಯರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೈವಾರ ತಾತಯ್ಯ ನವರ 300ನೇ ಜಯಂತಿಯನ್ನು ವರ್ಷಪೂರ್ತಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸೂಕ್ತ ವ್ಯಕ್ತಿಗಳಿಗೆ ನಾರೇಯಣ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ಅದರಂತೆ ಕೈಪು ಲಕ್ಷ್ಮೀನರಸಿಂಹ ಶಾಸ್ತ್ರೀಗಳಿಗೆ ಪ್ರಥಮವಾಗಿ ನಾರೇಯಣ ಪ್ರಶಸ್ತಿ ನೀಡಲಾಗುತ್ತಿದೆ

Chikkaballapur News: ಬೇಸಿಗೆ ಶಿಬಿರಗಳು ರಜಾ ಅವಧಿಯಲ್ಲಿ ಮಕ್ಕಳಲ್ಲಿ ಸೃಜನಶೀಲತೆ, ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ : ಪಿಡಿಒ ಲೋಕೇಶ್ ಬಣ್ಣನೆ

ಬೇಸಿಗೆ ಶಿಬಿರಗಳು ಸೃಜನಶೀಲತೆ, ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ

ಮಕ್ಕಳು ವರ್ಷವೆಲ್ಲ ಶಾಲೆಯಲ್ಲಿ ಓದು, ಪಾಠ ಪ್ರವಚನ, ಪರೀಕ್ಷೆಯೆಂದು ಹೆಚ್ಚು ತಲ್ಲೀನ ರಾಗಿರುತ್ತಾರೆ. ಪರೀಕ್ಷೆಯ ನಂತರ ಬರುವ ಬೇಸಿಗೆ ರಜೆಯಲ್ಲಿ ಈ ರೀತಿಯ ಬೇಸಿಗೆ ಶಿಬಿರ ಆಯೋಜಿಸುವುದರಿಂದ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ, ಚೈತನ್ಯ ಮೂಡಲು ಹಾಗೂ ಲವಲವಿಕೆ ಯಿಂದ ಇರುತ್ತಾರೆ. ಆದ್ದರಿಂದ ಲೇ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಹಕಾರಿ ಎಂದರು

SP Lavanya BN: ಬೆಸ್ಕಾಂ ಜಾಗೃತ ದಳದ ಎಸ್‌ಪಿ ಲಾವಣ್ಯ ಅನಾರೋಗ್ಯದಿಂದ ನಿಧನ

ಬೆಸ್ಕಾಂ ಜಾಗೃತ ದಳದ ಎಸ್‌ಪಿ ಲಾವಣ್ಯ ಅನಾರೋಗ್ಯದಿಂದ ನಿಧನ

ಮೃತ ಎಸ್ಪಿ ಲಾವಣ್ಯ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಚಿಂತಾಮಣೀ ತಾಲೂಕಿನ ದೊಡ್ಡಗಂಜೂರಿಗೆ ರವಾನಿಸುವ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಯುವ ಅಧಿಕಾರಿಯ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Chikkaballapur News: ಕಾರ್ಮಿಕರು ತಮ್ಮ ಶ್ರಮದ ಹಣವನ್ನು ದುಂದುವೆಚ್ಚಗಳಿಗೆ ಬಳಸಿದರೆ ಭವಿಷ್ಯ ಮಂಕಾಗಲಿದೆ: ನ್ಯಾ.ಟಿ.ಪಿ.ರಾಮಲಿಂಗೇಗೌಡ ಆತಂಕ

ಕಾರ್ಮಿಕರು ದುಂದುವೆಚ್ಚಗಳಿಗೆ ತಮ್ಮ ಶ್ರಮದ ಹಣ ಬಳಸಿದರೆ ಭವಿಷ್ಯ ಮಂಕು

ಸಮಯದ ಅರಿವಿಲ್ಲದೆ ದುಡಿಯುವ ಕಾರ್ಮಿಕರು ಜಾಣರಾಗಬೇಕು. ಜಾಗರೂಕರಾಗಿ ಬದುಕು ಕಟ್ಟಿ ಕೊಳ್ಳಬೇಕು. ಅದನ್ನು ಬಿಟ್ಟು ಮೊಬೈಲ್ ಹಾಗೂ ಇತರ ವಿಲಾಸಿ ವಸ್ತುಗಳ ಖರೀದಿಯಂತಹ ದುಂದು ವೆಚ್ಚಗಳಿಗೆ ಬಹುತೇಕ ಸಂಬಳವನ್ನು ಬಳಕೆ ಮಾಡದೆ, ಅಗತ್ಯಕ್ಕೆ ತಕ್ಕಂತೆ ಬಳಸಿ ಉಳಿಸುವ ಮೂಲಕ ಮಕ್ಕಳ ಭವಿಷ್ಯದತ್ತ ಗಮನ ಹರಿಸಬೇಕಿದೆ

Karaga Mahotsav: ಶ್ರೀ ಪೂಜಮ್ಮ ದೇವಿಯ 58ನೇ ವರ್ಷದ ಕರಗ ಅದ್ಧೂರಿ ಕರಗ ಮಹೋತ್ಸವ

ಶ್ರೀ ಪೂಜಮ್ಮ ದೇವಿಯ 58ನೇ ವರ್ಷದ ಕರಗ ಅದ್ಧೂರಿ ಕರಗ ಮಹೋತ್ಸವ

ತಾಲೂಕಿನ ಜಂಗಮಕೋಟೆಯಲ್ಲಿ ಶ್ರೀ ಪೂಜಮ್ಮ ದೇವಿಯ 58ನೇ ವರ್ಷದ ಕರಗ ಮಹೋತ್ಸವವು ಭಕ್ತಿಭಾವದಿಂದ ಅದ್ದೂರಿಯಾಗಿ ನೆರವೇರಿತು. ಶ್ರೀ ಪೂಜಮ್ಮ ದೇವಿ ಟ್ರಸ್ಟ್ ವತಿಯಿಂದ ಆಯೋಜಿಸ ಲಾದ ಮಹೋತ್ಸವದಲ್ಲಿ ಧಾರ್ಮಿಕ ವಿಧಿ ವಿಧಾನಗಳು, ವಾದ್ಯಗೋಷ್ಠಿ ಹಾಗೂ ಪೂಜಾ ಕಾರ್ಯಕ್ರಮ ಗಳು ಜರುಗಿದವು.

Vande Bharat Express: ಮೊದಲ ವಂದೇ ಭಾರತ್ ರೈಲು ತಯಾರಿಸಿದ ರಾಯ್‌ ಬರೇಲಿಯ ಎಂಸಿಎಫ್; ಟ್ರಯಲ್‌ ರನ್‌ಗೆ ರವಾನೆ

ಮೊದಲ ವಂದೇ ಭಾರತ್ ರೈಲು ತಯಾರಿಸಿದ ರಾಯ್‌ ಬರೇಲಿಯ ಎಂಸಿಎಫ್

ರಾಯ್‌ಬರೇಲಿಯ ಎಂಸಿಎಫ್ ತನ್ನ ಮೊದಲ ವಂದೇ ಭಾರತ್ ರೈಲನ್ನು ತಯಾರಿಸಿದ್ದು, ಇದನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಿಯಮಿತ ಪ್ರಯಾಣಿಕರ ಸೇವೆಗೆ ಸೇರ್ಪಡೆಗೊಳ್ಳುವ ಮೊದಲು, ರೈಲು ಸವಾರಿ ಗುಣಮಟ್ಟ, ಸುರಕ್ಷತಾ ಮಾನದಂಡ ಮತ್ತು ಕ್ರಿಯಾತ್ಮಕ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲು ಪ್ರಯೋಗಗಳಿಗೆ ರೈಲುಗಳು ಒಳಗಾಗುತ್ತವೆ.

ವಸತಿ ರಹಿತರಿಗೆ ಗುಡ್ ನ್ಯೂಸ್:ಅರ್ಹ ಫಲಾನುಭವಿಗಳ ಆಯ್ಕೆಗೆ ಗ್ರಾಮ ಸಭೆಯಲ್ಲಿ ಚಾಲನೆ

ಕಾಗತಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಸಭೆ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲ ದಿದ್ದಲ್ಲಿ, ಪಕ್ಕದ ಗ್ರಾಮಗಳಲ್ಲಿ ಜಮೀನು ಗುರುತಿಸಿ ಲೇಔಟ್ ನಿರ್ಮಿಸುವ ಮೂಲಕ ವಸತಿ ರಹಿತರಿಗೆ ನ್ಯಾಯ ಒದಗಿಸುವ ಭರವಸೆ ಯನ್ನು ನೀಡಿದರು. ಗ್ರಾಮ ಪಂಚಾಯತಿಯ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಸರ್ವೇ ನಡೆಸಿದ ನಂತರವೇ ಅಂತಿಮ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು

Election: 4 ಮಂದಿ ಮಹಿಳಾ ನಿರ್ದೇಶಕರು, 8 ಮಂದಿ ಪುರುಷ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪೂರ್ಣ

ತಾಲೂಕು ಶಿಕ್ಷಕರ ಸಂಘದ ಚುನಾವಣೆ : ಮಧ್ಯರಾತ್ರಿವರೆಗೂ ನಡೆದ ಮತ ಎಣಿಕೆ

ಚುನಾವಣಾಧಿಕಾರಿಯಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ ಪೆರೇಸಂದ್ರ ಪ್ರೌಢಶಾಲೆಯ ನರಸಿಂಹರೆಡ್ಡಿ ಘೋಷಣೆ ಮಾಡಿದಂತೆ ಮಹಿಳಾ ವಿಭಾಗಕ್ಕೆ 7 ಮಂದಿ ಸ್ಪರ್ಧೆ ಮಾಡಿದ್ದು ಅಪ್ಸರ-260, ಚಂದ್ರಕಲಾ-193, ಜಯಭಾರತಿ-255, ಲಾವಣ್ಯ-203, ವಹೀದಾಭಾನು-313, ಪ್ರೇಮಾವತಿ-205, ವಿಜಯ ಲಕ್ಷ್ಮೀ-179 ಮತಗಳನ್ನು ಪಡೆದಿದ್ದರು. ಈ ಪೈಕಿ ಅತಿ ಹೆಚ್ಚು ಮತಗಳನ್ನು ಪಡೆದ ವಹಿದಾ ಭಾನು-313, ಅಪ್ಸರ-260, ಜಯಭಾರತಿ-255, ಪ್ರೇಮಾವತಿ-205, ನಾಲ್ಕು ಮಂದಿ ಆಯ್ಕೆಯಾದರು.

ಪೇಪರ್ ಲೆಸ್ ನೋಂದಣಿ ವ್ಯವಸ್ಥೆಯಿಂದ ಆಸ್ತಿ ಭದ್ರತೆ ಅಪಾಯದಲ್ಲಿ: ಆತಂಕ ವ್ಯಕ್ತಪಡಿಸಿದ ಪರವಾನಗಿ ಪಡೆದ ಪತ್ರ ಬರಹಗಾರರ ಒಕ್ಕೂಟ

ಪೇಪರ್ ಲೆಸ್ ನೋಂದಣಿ ವ್ಯವಸ್ಥೆಯಿಂದ ಆಸ್ತಿ ಭದ್ರತೆ ಅಪಾಯದಲ್ಲಿ

ಆಸ್ತಿ ಬಗ್ಗೆ ವಾರಸುದಾರರಿಗೆ ಮಾಹಿತಿಯೇ ಇರುವುದಿಲ್ಲ. ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆಸ್ತಿ ಖರೀದಿ ಬಗ್ಗೆ ಕುಟುಂಬ ಸದಸ್ಯರಿಗೆ ಸ್ಪಷ್ಟ ಮಾಹಿತಿ ಸಿಗದಿರುವುದರಿಂದ ಮುಂದಿನ ದಿನಗಳಲ್ಲಿ ಆಸ್ತಿಗಳು ಕೈತಪ್ಪುವ ಕಳವಳ ಹೆಚ್ಚಾಗಿದೆ. ಇ-ಸಹಿ ದುರುಪಯೋಗವಾಗಲಿದ್ದು, ಮೋಸಕ್ಕೆ ಅವಕಾಶ ವಾಗಲಿದೆ.

ಚಿತ್ರದುರ್ಗದಲ್ಲಿ ಅಭಿಮಾನೋತ್ಸವ; ಮೇ 8ರಂದು ಮಿನಿ ದಸರಾ ಮಾದರಿಯಲ್ಲಿ ಬಿ.ಎಸ್.ಯಡಿಯೂರಪ್ಪ ಪುರಪ್ರವೇಶ

ಅಭಿಮಾನೋತ್ಸವ; ಮೇ 8ಕ್ಕೆ ಮಿನಿ ದಸರಾ ಮಾದರಿಯಲ್ಲಿ ಬಿಎಸ್‌ವೈ ಪುರಪ್ರವೇಶ

BY Vijayendra: ಬಿಎಸ್‍ವೈ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಯಾವುದೇ ರಾಜಕೀಯ ಬಣ್ಣ ಕಟ್ಟಬೇಡಿ. ಚುನಾವಣೆ ಆರು ತಿಂಗಳು ಇರುವಾಗ ಈ ಕಾರ್ಯಕ್ರಮ ಆಯೋಜಿಸಿದರೆ ಬಿಜೆಪಿಗೆ ಲಾಭವಾಗಲಿದೆ, ವಿಜಯೇಂದ್ರ ಅವರಿಗೆ ಲಾಭವಾಗಲಿದೆ ಎಂದು ಹೇಳಬಹುದಿತ್ತು. ಆದರೆ ಅಂತಹ ಯಾವುದೇ ಲಾಭ ಪಡೆಯುವ ಉದ್ದೇಶ ಇಲ್ಲ. ಇದಕ್ಕೆ ರಾಜಕೀಯ ಬಣ್ಣ ಕಟ್ಟಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಮನವಿ ಮಾಡಿದ್ದಾರೆ.

ಪತ್ನಿಗೆ ಅಕ್ರಮ ಸಂಬಂಧ; ಮಲೇಷ್ಯಾದಿಂದ ದಾಂಡೇಲಿಗೆ ಬಂದಿದ್ದ ಗಂಡ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು ಗಂಡ ಆತ್ಮಹತ್ಯೆ

ಪತ್ನಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ತಾಯಿಯೇ ಕಾರಣ ಎಂದು ಆರೋಪಿಸಿ ಗಂಡ ಆತ್ಮಹತ್ಯೆ ಎನ್ನಲಾಗಿದೆ. ಸದ್ಯ, ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ರಾಘವೇಂದ್ರ ಪತ್ನಿ ಮೇಘಾ ಮತ್ತು ಆಕೆಯ ತಾಯಿಯನ್ನು ದಾಂಡೇಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ಮೀಸಲು; ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜೋಶಿ ಕಿಡಿ

ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ ಕಾಂಗ್ರೆಸ್‌ ಸರ್ಕಾರ: ಜೋಶಿ

Pralhad Joshi: ಕಾಂಗ್ರೆಸ್ ಸರ್ಕಾರ ಯಾವತ್ತೂ ಬರೀ ಅಲ್ಪಸಂಖ್ಯಾತರ ಓಲೈಕೆಯಲ್ಲೇ ತೊಡಗಿ ಮಹಾಪರಾಧ ಎಸಗುತ್ತಿದೆ. ಸಿಎಂ ಸಿದ್ದರಾಮಯ್ಯು ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ಕೇವಲ ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗಾಗೇ ₹600 ಕೋಟಿ ರೂ.ಮೀಸಲಿಟ್ಟು ನಿಜ ಸ್ವರೂಪ ಪ್ರದರ್ಶಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

Pralhad Joshi: ಸಿದ್ದರಾಮಯ್ಯ ಸರ್ಕಾರ ಹಲವು ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಿದ್ದೇಕೆ?: ಪ್ರಲ್ಹಾದ್‌ ಜೋಶಿ ಪ್ರಶ್ನೆ

ಸಿದ್ದರಾಮಯ್ಯ ಸರ್ಕಾರ ಹಲವು ಬಾರಿ ಬೆಲೆ ಹೆಚ್ಚಿಸಿದ್ದೇಕೆ?; ಜೋಶಿ

Pralhad Joshi: ಸಿಎಂ ಸಿದ್ದರಾಮಯ್ಯ ಅವರು ಆಡಳಿತಗಾರರಾಗಿ, ಗ್ಯಾಸ್ ಬೆಲೆ ಹೆಚ್ಚಳದ ಸತ್ಯ ಗೊತ್ತಿದ್ದರೂ ಕೇಂದ್ರವನ್ನು ಟೀಕಿಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಇವರು ಅಧಿಕಾರಕ್ಕೆ ಬಂದ ಮೇಲೆ ಹಲವು ಬಾರಿ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಎಲ್ಲದರ ಬೆಲೆಯನ್ನೂ ದುಪ್ಪಟ್ಟು ಹೆಚ್ಚಿಸಿದ್ದೇಕೆ? ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದ್ದಾರೆ.

ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಐಟಿ ನೋಟಿಸ್‌; ತೆರಿಗೆ ಮೇಲ್ಮನವಿಯಲ್ಲಿ ಜಯ

ತೆರಿಗೆ ಮೇಲ್ಮನವಿಯಲ್ಲಿ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಜಯ

ಶ್ರೀರಾಮಚಂದ್ರಾಪುರ ಮಠವು ಸುಮಾರು 13 ವರ್ಷಗಳ ಕಾಲ ಶ್ರೀಸಂಸ್ಥಾನ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ನಿರ್ವಹಿಸಿದ್ದು, ಪ್ರತಿ ವರ್ಷ ಲೆಕ್ಕಪರಿಶೋಧನೆಯನ್ನು ನಡೆಸಿ; ಸುವ್ಯವಸ್ಥಿತವಾಗಿ ಲೆಕ್ಕಪತ್ರಗಳನ್ನು ನಿರ್ವಹಿಸಿ - ಸುಭದ್ರವಾಗಿ ದಾಖಲೀಕರಣ ಮಾಡಿದೆ. ಇದೀಗ ಮೇಲ್ಮನವಿ ಆದೇಶದನ್ವಯ ತೆರಿಗೆ ಬಾಕಿ ಶೂನ್ಯವಾಗಿರುವುದು ಭಕ್ತಾದಿಗಳ ಗೊಂದಲಗಳನ್ನು ನಿವಾರಿಸಿದೆ ಎಂದು ಶ್ರೀರಾಮಚಂದ್ರಾಪುರ ಮಠ ತಿಳಿಸಿದೆ.

Chief Information Commissioner: ರಾಜ್ಯ ಮಾಹಿತಿ ಆಯೋಗದ ನೂತನ ಮುಖ್ಯ ಆಯುಕ್ತೆಯಾಗಿ ಜಿ. ಸತ್ಯವತಿ ನೇಮಕ

ರಾಜ್ಯ ಮಾಹಿತಿ ಆಯೋಗದ ನೂತನ ಮುಖ್ಯ ಆಯುಕ್ತೆಯಾಗಿ ಜಿ. ಸತ್ಯವತಿ ನೇಮಕ

Karnataka Information Commission: ದೀರ್ಘಕಾಲದಿಂದ ತೆರವಾಗಿದ್ದ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರ ಸ್ಥಾನಕ್ಕೆ ಅರ್ಹ ಅಧಿಕಾರಿಯ ಆಯ್ಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಯ್ಕೆ ಸಮಿತಿಯು ಇತ್ತೀಚೆಗೆ ಸಭೆ ನಡೆಸಿ ಚರ್ಚಿಸಿತ್ತು. ಸಮಿತಿಯ ಶಿಫಾರಸಿನ ಮೇರೆಗೆ ರಾಜ್ಯಪಾಲರು ಈಗ ನಿವೃತ್ತ ಐಎಎಸ್‌ ಅಧಿಕಾರಿ ಜಿ. ಸತ್ಯವತಿ ಅವರನ್ನು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಿಸಿ, ಆದೇಶ ಹೊರಡಿಸಿದ್ದಾರೆ.

Sringeri Postal Ballot recount: ಶೃಂಗೇರಿ ಕ್ಷೇತ್ರ ಅಂಚೆ ಮತ ಮರು ಎಣಿಕೆಯಲ್ಲೂ ಕಾಂಗ್ರೆಸ್​​ನ ಟಿ.ಡಿ.ರಾಜೇಗೌಡಗೆ ಗೆಲುವು

ಶೃಂಗೇರಿ ಕ್ಷೇತ್ರ ಅಂಚೆ ಮತ ಮರು ಎಣಿಕೆಯಲ್ಲೂ ಟಿ.ಡಿ.ರಾಜೇಗೌಡಗೆ ಗೆಲುವು

ಹೈಕೋರ್ಟ್ ಆದೇಶದ ಮೇರೆಗೆ ಶನಿವಾರ ಚಿಕ್ಕಮಗಳೂರು ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ ಎಣಿಕೆ ಮಾಡಲಾಗಿದೆ. ಹಾಲಿ ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮತ್ತು ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ನಡುವೆ ಮರು ಎಣಿಕೆ ಫೈಟ್ ಜೋರಾಗಿತ್ತು. ಸಾಕಷ್ಟು ಕುತೂಹಲದ ಮಧ್ಯೆ ಇದೀಗ ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್​ ಶಾಸಕ ಟಿ.ಡಿ.ರಾಜೇಗೌಡ ಗೆಲುವು ಸಾಧಿಸಿದ್ದಾರೆ.

Loading...