ಆರ್‌ಡಿಪಿಆರ್ ಎಇಇ ನೇಮಕದಲ್ಲೂ ಅಕ್ರಮ
ತನಿಖೆಯ ಸಂದರ್ಭದಲ್ಲಿ ಮೂವರು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗದಿರುವುದು ಕೂಡ ಗಮನಕ್ಕೆ ಬಂದಿತ್ತು. ಪ್ರಕರಣದ ಮುಂದಿನ ತನಿಖೆಗಾಗಿ ಕೆಪಿಎಸ್‌ಸಿ ಆಂತರಿಕ ಸಮಿತಿ ರಚಿಸಿತ್ತು. ಕೆಪಿಎಸ್‌ಸಿ ಸದಸ್ಯ ಶಾಂತ ಹೊಸಮನಿ ನೇತೃತ್ವದಲ್ಲಿ ಸಮಿತಿ ರಚನೆ ಯಾಗಿತ್ತು. ಬಳಿಕ ವಿಜಯ್‌ಕುಮಾರ್ ನೇತೃತ್ವದಲ್ಲಿ ಮತ್ತೊಂದು ಉಪಸಮಿತಿ ರಚಿಸಿ, 24 ಅಭ್ಯರ್ಥಿ ಗಳ ಒಎಂಆರ್ ಶೀಟ್‌ಗಳು, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಯಿತು