ವಿರೋಧದ ನಡುವೆ ಸಿನಿಮಾ ಟಿಕೆಟ್ ಮೇಲೆ ಶೇ.2 ಸೆಸ್
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರು, ಇದೀಗ ಮತ್ತೊಮ್ಮೆ ದರ ಏರಿಕೆಯ ಆಘಾತಕ್ಕೆ ಸಿದ್ಧರಾಗಬೇಕಿದೆ. ರಾಜ್ಯದಲ್ಲಿರುವ ವಿವಿಧ ಹಾಲು ಒಕ್ಕೂಟಗಳು ಹಾಲಿನ ಮಾರಾಟ ದರವನ್ನು 5 ರಿಂದ 10 ರು. ವರೆಗೆ ಏರಿಸಬೇಕು ಎನ್ನುವ ಬೇಡಿಕೆಯನ್ನು ಸರಕಾರದ ಮುಂದಿಟ್ಟಿವೆ. ಈಗಿರುವ ಅಂದಾಜಿನಂತೆ ಲೀಟರ್‌ಗೆ 2 ರಿಂದ 3 ರು. ಬೆಲೆಯೇರುವ ಸಾಧ್ಯತೆಯಿದೆ.