Fahadh Faasil: ಐಫೋನ್ ಜಮಾನದಲ್ಲಿ ಕೀ ಪ್ಯಾಡ್ ಮೊಬೈಲ್ ಬಳಸುವ ಫಹಾದ್ ಫಾಸಿಲ್- ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!
ನಟ ಫಹಾದ್ ಅವರು ನಿರ್ದೇಶಕ ಅಭಿನವ್ ಸುಂದರ್ ಅವರ ಮಾಲಿವುಡ್ ಟೈಮ್ಸ್ ಸಿನಿಮಾದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ಅವರು ಕೀಪ್ಯಾಡ್ ಫೋನ್ ಬಳ ಸುತ್ತಿರುವುದು ಕಂಡುಬಂದಿದೆ. ಸಿನಿಮಾದಲ್ಲಿ ಕೋಟಿ ರೂಪಾಯಿಗಳ ತನಕ ಸಂಭಾವನೆ ಪಡೆಯುವ ನಟ ಫಹಾದ್ ಅವರ ಕೈಲಿ ಇದ್ದದ್ದು ಐಫೋನಲ್ಲ ಬದಲಾಗಿ ಕೀ ಪ್ಯಾಡ್ ಸೆಟ್.. ಈಗಂತೂ ಸಾಮಾನ್ಯ ಜನರೇ ಐಫೋನ್ ಬಳಕೆ ಮಾಡುತ್ತಿರಬೇಕಾದರೆ ದೇಶದ ಸ್ಟಾರ್ ನಟರಾದರೂ ಕೀಪ್ಯಾಡ್ ಸೆಟ್ ಫೋನ್ ಬಳಸುವ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಹೊಸ ಚರ್ಚೆ ಏರ್ಪಡುತ್ತಿದೆ.


ನವದೆಹಲಿ: ಮಲಯಾಳಂ, ತಮಿಳು, ತೆಲುಗು ಸಿನಿಮಾದಲ್ಲಿ ಗುರುತಿಸಿಕೊಂಡ ನಟ ಫಹಾದ್ ಫಾಸಿಲ್ (Fahadh Faasil) ಅವರು ತಮ್ಮ ಅದ್ಭುತ ಅಭಿನಯದಿಂದಲೇ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಅವರ ಸರಳ ಜೀವನಶೈಲಿಯು ಅನೇಕರಿಗೆ ಸ್ಫೂರ್ತಿ ಎಂದೆ ಹೇಳಬಹುದು. ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದ ನಟ ಫಹಾದ್ ಸೋಶಿಯಲ್ ಮಿಡಿಯಾದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಸಾರ್ವಜನಿಕ ಕಾರ್ಯಕ್ರಮಕ್ಕೂ ಹೆಚ್ಚಾಗಿ ಭಾಗವಹಿಸದೆ ಮತ್ತು ಸೋಶಿಯಲ್ ಮಿಡಿಯಾದಿಂದಲೂ ದೂರ ಉಳಿದ ನಟರಲ್ಲಿ ಇವರು ಕೂಡ ಒಬ್ಬರು ಎನ್ನ ಲಾಗಿತ್ತು. ಆದರೆ ಇದೀಗ ಫಹಾದ್ ಅವರು ಕೀಪ್ಯಾಡ್ ಫೋನ್ ನಲ್ಲಿ ಮಾತಾಡುತ್ತಿರುವ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು ವಿಡಿಯೋ ಕಂಡು ಅಭಿಮಾನಿಗಳೇ ಅಚ್ಚರಿಗೊಂಡಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ನಟ ಫಹಾದ್ ಅವರು ನಿರ್ದೇಶಕ ಅಭಿನವ್ ಸುಂದರ್ ಅವರ ಮಾಲಿವುಡ್ ಟೈಮ್ಸ್ ಸಿನಿಮಾದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ಅವರು ಕೀಪ್ಯಾಡ್ ಫೋನ್ ಬಳಸುತ್ತಿರುವುದು ಕಂಡುಬಂದಿದೆ. ಸಿನಿಮಾದಲ್ಲಿ ಕೋಟಿ ರೂಪಾ ಯಿಗಳ ತನಕ ಸಂಭಾವನೆ ಪಡೆಯುವ ನಟ ಫಹಾದ್ ಅವರ ಕೈಲಿ ಇದ್ದದ್ದು ಐಫೋನಲ್ಲ ಬದಲಾಗಿ ಕೀ ಪ್ಯಾಡ್ ಸೆಟ್.. ಈಗಂತೂ ಸಾಮಾನ್ಯ ಜನರೇ ಐಫೋನ್ ಬಳಕೆ ಮಾಡುತ್ತಿರಬೇಕಾದರೆ ದೇಶದ ಸ್ಟಾರ್ ನಟರಾದರೂ ಕೀಪ್ಯಾಡ್ ಸೆಟ್ ಫೋನ್ ಬಳಸುವ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಹೊಸ ಚರ್ಚೆ ಏರ್ಪಡುತ್ತಿದೆ. ಆದರೆ ಅವರ ಈ ಫೋನಿನ ಬೆಲೆ ತಿಳಿದರೆ ಎಂಥವರಿಗಾದರೂ ಶಾಕ್ ಆಗದೆ ಇರಲಾರದು.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಫಹಾದ್ ಅವರ ಫೋನು ಕೀಪ್ಯಾಡ್ ಸೆಟ್ ಆಗಿದ್ದರೂ ಅದರ ಬೆಲೆ ಮಾತ್ರ ತುಂಬಾ ದುಬಾರಿ ಎನ್ನಲಾಗುತ್ತಿದೆ. ಫಹಾದ್ ಫಾಸಿಲ್ ಬಳಕೆ ಮಾಡುವ ಫೋನು ವರ್ತು ಅಸೆಂಟ್ ಟಿಐ ಡಿಎಸ್6823 ಮಾಡೆಲ್ ನದ್ದಾಗಿದ್ದು ಈ ಫೋನು 2008 ರಲ್ಲಿ ಬಿಡುಗಡೆಯಾಗಿದೆ. ಇದರ ಆರಂಭಿಕ ಆವೃತ್ತಿಯ ಬೆಲೆಯೇ 5.54 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಈಗ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹಾಗಿದ್ದರೂ ಕೆಲವು ವೆಬ್ಸೈಟ್ಗಳಲ್ಲಿ ಈ ಲಿಮಿಟೆಡ್ ಎಡಿಷನ್ ನಲ್ಲಿ ಫೋನು ಲಭ್ಯವಿದೆ. ಅವರ ಕೀಪ್ಯಾಡ್ ಫೋನ್ ಪ್ರಸ್ತುತ 11,920 ಡಾಲರ್‌ನದ್ದು ಎಂದು ಹೇಳಲಾಗುತ್ತಿದ್ದು ಭಾರತದಲ್ಲಿ ಇದರ ಮೌಲ್ಯ 10 ಲಕ್ಷ ರೂ.ಆಗಿದೆ. ವರ್ಟು ಫೋನಿನ ಬೆಲೆಯು 1 ಲಕ್ಷದಿಂದ 70 ಲಕ್ಷದವರೆಗೆ ಪ್ರೀಮಿಯಂ ಆಯ್ಕೆಗಳೊಂದಿಗೆ ವಿವಿಧ ಮಾದರಿಗಳಲ್ಲಿಯೂ ಲಭ್ಯವಿದೆಯಂತೆ. ಹಾಗೆಂದು ಕೇಳಿದವರಿಗೆಲ್ಲ ಅಥವಾ ಹಣ ಇದ್ದವರಿಗೆಲ್ಲ ಈ ಫೋನ್ ಸಿಗಲಾರದು ಯಾಕೆಂದರೆ ಫೋನು ಖರೀದಿಸುವವರ ಪ್ರೊಫೈಲ್ ಪರೀಕ್ಷೆ ಮಾಡಿದ್ದ ಬಳಿಕವೇ ಫೋನ್ ಅನ್ನು ನೀಡುವ ನಿಯಮ ಕೂಡ ಇಲ್ಲಿದೆ.
ವರ್ತು ಫೋನನ್ನು ಅಸಲಿ ಟೈಟ್ಯಾನಿಯಂ ಮತ್ತು ದುಬಾರಿ ಕಾರ್ಬನ್ ಫೈಬರ್ ಅನ್ನು ಬಳಸಿ ಮಾಡ ಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಇದರ ಸ್ಕ್ರೀನ್ ಗೆ ಗ್ಲಾಸ್ ಬಳಸಿಲ್ಲ ಬದಲಾಗಿ ಅಪರೂಪದ ಸಫೈರ್ ಕ್ರಿಸ್ಟಲ್ ಬಳಕೆ ಮಾಡಲಾಗಿದೆ. ಅದರ ಜೊತೆಗೆ ಕೈಯಿಂದ ಮಾಡಿದ ಲೆದರ್ ಅನ್ನು ಸಹ ವರ್ಟು ಫೋನಿಗೆ ಬಳಸಲಾಗಿದೆ. ಈ ಫೋನ್ ಬಳಕೆದಾರರಿಗೆ ಇತರ ಸರ್ವೀಸ್ ವ್ಯವಸ್ಥೆ ಕೂಡ ಇದೆ. ಹೋಟೆಲ್ ರೂಂ ಬುಕಿಂಗ್, ಪಾರ್ಟಿ ಹಾಲ್ ಬುಕ್ಕಿಂಗ್, ಫ್ಲೈಟ್ ಬುಕಿಂಗ್ ಇತರ ಸರ್ವೀಸ್ ಗಳಿಗೆ ಹಣ ಪಾವತಿಸಿ ಕರೆ ಮಾಡಿ ತಿಳಿಸಿದರೆ ಉಳಿದೆಲ್ಲವನ್ನು ಸರ್ವೀಸ್ ನವರೆ ನೋಡಿಕೊಳ್ಳುತ್ತಾರೆ.
ಆವೇಶಂ, ಸಿಯು ಸೂನ್, ಪುಷ್ಪ, ಬ್ಯಾಂಗಲೂರ್ ಡೇಸ್, ವೆಟ್ಟೈಯನ್ ಇತರ ಸಿನಿಮಾಗಳ ಮೂಲಕ ಪ್ರಸಿದ್ಧರಾದ ನಟ ಫಹಾದ್ ಅವರು ಸದ್ಯ ಮಾರೀಸನ್ ಸಿನಿಮಾ ಕೆಲಸ ಕಾರ್ಯಗಳಲ್ಲಿ ಬ್ಯುಸಿ ಯಾಗಿದ್ದಾರೆ. ಮಾಮನ್ನನ್ ಚಿತ್ರದ ನಂತರ ಸಹನಟ ವಡಿವೇಲು ಅವರೊಂದಿಗೆ ಮಾರೀಸನ್ ಸಿನಿಮಾದಲ್ಲಿ ಮತ್ತೆ ನಟ ಫಹಾದ್ ಕಾಣಿಸಿಕೊಳ್ಳಲಿದ್ದು ಸಿನಿಮಾ ಶೂಟಿಂಗ್ ಕಾರ್ಯಗಳು ಮುಗಿದಿವೆ. ಇದೇ ಜುಲೈ 25ಕ್ಕೆ ಈ ಸಿನಿಮಾ ರಿಲೀಸ್ ಆಗಲಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.