ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suhana Khan: ಮಗಳ ಸ್ಟನ್ನಿಂಗ್‌ ಲುಕ್‌ ನೋಡಿ ಶಾರುಖ್‌ ಖಾನ್‌ ರಿಯಾಕ್ಷನ್‌ ಹೇಗಿತ್ತು ಗೊತ್ತಾ?

ಶಾರುಖ್ ಖಾನ್ ಅವರು ಮಕ್ಕಳ ಜೊತೆಗಿನ ಫೋಟೊವನ್ನು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳು ತ್ತಿರುತ್ತಾರೆ. ಅವರ ಮಗಳು ಸುಹಾನಾ ಖಾನ್ ಅವರು ಅಡೀಡಸ್ ಇಂಡಿಯಾದ ಜೊತೆ ಟೈ ಅಪ್ ಆಗಿ ಬ್ರ್ಯಾಂಡ್ ಅಂಬಾ ಸಿಡರ್ ಆಗಿದ್ದಾರೆ. ಇತ್ತೀಚೆಗಷ್ಟೆ ಅವರು ಅಡೀಡಸ್ ಬ್ರ್ಯಾಂಡ್ ನ ಬಟ್ಟೆತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದು ಅದನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋಗೆ ಸ್ವತಃ ಶಾರುಖ್ ಖಾನ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಶಾರುಖ್ ಪುತ್ರಿಯ ನ್ಯೂ ಲುಕ್ ಗೆ ಫ್ಯಾನ್ಸ್ ಫಿದಾ

Profile Pushpa Kumari Jun 8, 2025 3:41 PM

ನವದೆಹಲಿ: ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಅವರು ಸದಾ ಒಂದಲ್ಲ ಒಂದು ವಿಚಾರ ದಿಂದ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಇವರಿಗೆ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಕೂಡ ಇದೆ. ಶಾರುಖ್ ಖಾನ್ ಅವರು ಮಕ್ಕಳ ಜೊತೆಗಿನ ಫೋಟೋವನ್ನು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅವರ ಮಗಳು ಸುಹಾನಾ ಖಾನ್ (Suhana Khan) ಅಡೀಡಸ್ (Adidas) ಇಂಡಿಯಾದ ಜೊತೆ ಟೈ ಅಪ್ ಆಗಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಇತ್ತೀಚೆಗಷ್ಟೆ ಅವರು ಅಡೀಡಸ್ ಬ್ರ್ಯಾಂಡ್ ನ ಬಟ್ಟೆ ತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದು ಅದನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋಗೆ ಸ್ವತಃ ಶಾರುಖ್ ಖಾನ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲಿನಿಂದಲೂ ಅಡೀಡಸ್ ಕಂಪೆನಿಯೂ ಕ್ರೀಡಾ ಬಟ್ಟೆಗಳಿಗೆ ಬಹಳ ಪ್ರಸಿದ್ಧಿ ಪಡೆದಿದೆ. ಇದೀಗ ಇದೇ ಕಂಪೆನಿಯ ಸ್ಪೋರ್ಟ್ಸ್ ಶೂ, ಸಾಕ್ಸ್, ಟ್ರ್ಯಾಕ್ ಪ್ಯಾಂಟ್, ಓವರ್ ಜಾಕೆಟ್ ತೊಟ್ಟು ಸುಹಾನಾ ಖಾನ್ ಮಿಂಚಿದ್ದಾರೆ. ಸಿಂಪಲ್ ಮೇಕಪ್ ನಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು ಸಖತ್ ಗ್ಲಾಮರಸ್ ಆಗಿ ಕಂಡಿದ್ದಾರೆ. ಮಗಳ ಈ ಫೋಟೊ ಕಂಡು ನಟ ಶಾರುಖ್ ಖಾನ್ ಅವರು ಲುಕ್ಕಿಂಗ್ ಸೊ ಗುಡ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅದಕ್ಕೆ ಅವರ ಪುತ್ರಿ ಸುಹಾನಾ ಕೂಡ ಲವ್ ಯೂ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸುಹಾನಾ ಖಾನ್ 2023 ರಲ್ಲಿ ಜೋಯಾ ಅಖ್ತರ್ ನಿರ್ದೇಶನದ ದಿ ಆರ್ಚೀಸ್ ಸಿನಿಮಾ ಮೂಲಕ ಬಾಲಿವುಡ್ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರ ನೆಟ್‌ಫ್ಲಿಕ್ಸ್ ನಲ್ಲಿ ತೆರೆ ಕಂಡಿದ್ದು ಇದರಲ್ಲಿ ಖುಷಿ ಕಪೂರ್, ಅಗಸ್ತ್ಯ ನಂದಾ, ಡಾಟ್, ಮಿಹಿರ್ ಅಹುಜಾ, ವೇದಾಂಗ್ ರೈನಾ ಮತ್ತು ಯುವರಾಜ್ ಮೆಂಡಾ ಕೂಡ ನಟಿಸಿದ್ದಾರೆ. ಸದ್ಯ ಸುಹಾನಾ ತನ್ನ ತಂದೆಯೊಂದಿಗೆ ಕಿಂಗ್‌ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕಿಂಗ್ ಸಿನಿಮಾಕ್ಕೆ ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳಲಿದ್ದು ಬಹುದೊಡ್ಡ ತಾರಾಗಣ ಈ ಸಿನಿಮಾದಲ್ಲಿ ಇರಲಿದೆ. ಜಾಕಿ ಶ್ರಾಫ್, ಅನಿಲ್ ಕಪೂರ್, ಅರ್ಷದ್ ವಾರ್ಸಿ, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್, ದೀಪಿಕಾ ಪಡುಕೋಣೆ, ಜೈದೀಪ್ ಅಹ್ಲಾವತ್ ಮತ್ತು ಅಭಯ್ ವರ್ಮಾ ಅವರಂತಹ ದೊಡ್ಡ ನಟರು ಇದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: Karikaada Movie: ಐಟಿ ಜಗತ್ತಿನಿಂದ ಕನ್ನಡ ಚಿತ್ರರಂಗಕ್ಕೆ ಕಾಡ ನಟರಾಜ್‌- ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ ‘ಕರಿಕಾಡ’ ಸಿನಿಮಾ

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡ ನಿರ್ದೇಶನ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿದ್ದು ಅದಕ್ಕೂ ಕೂಡ ಶಾರುಖ್ ಬೆಂಬಲಿಸಿದ್ದಾರೆ. ನೆಟ್ ಫ್ಲಿಕ್ಸ್ ನಲ್ಲಿ ಚೊಚ್ಚಲ ಸರಣಿ ದಿ ಬ್ಯಾಡ್ಸ್ ಆಫ್ ಬಾಲಿವುಡ್ ಮೂಲಕ ನಿರ್ದೇಶನಕ್ಕೆ ನಟ ಶಾರುಖ್ ಖಾನ್ ಪುತ್ರ ಕಾಲಿಡುತ್ತಿದ್ದಾರೆ. ಈ ಕುರಿತಾದ ಕಾರ್ಯಕ್ರಮದಲ್ಲಿ ನಟ ಶಾರುಖ್ ಖಾನ್ ಇತ್ತೀಚೆಗಷ್ಟೇ ಭಾಗಿ ಯಾಗಿದ್ದರು. ನಿರ್ದೇಶನಕ್ಕೆ ಮೊದಲ ಹೆಜ್ಜೆ ಇಡುತ್ತಿರುವ ನನ್ನ ಮಗನಿಗೆ ಮತ್ತು ನಟಿಯಾಗುತ್ತಿರುವ ನನ್ನ ಮಗಳಿಗೆ ಈ ಜಗತ್ತು ನನಗೆ ನೀಡಿದಷ್ಟು ಪ್ರೀತಿಯಲ್ಲಿ ಶೇಕಡಾ 50 ರಷ್ಟು ನೀಡಿದರೆ ಹೊಸ ಸಾಧನೆಗೆ ಸ್ಫೂರ್ತಿ ಸಿಕ್ಕಂತಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ಅಭಿಮಾನಿಗಳು ಮತ್ತು ಪ್ರೇಕ್ಷಕರೊಂದಿಗೆ ಹೃತ್ಪೂರ್ವಕ ವಿನಂತಿಯನ್ನು ಮಾಡಿಕೊಂಡಿದ್ದರು. ಈ ಮೂಲಕ ಶಾರುಖ್ ಖಾನ್ ಮಕ್ಕಳು ಕೂಡ ಸಿನಿಮಾ ಕ್ಷೇತ್ರದತ್ತ ಸಾಗುವುದು ಅಭಿಮಾನಿಗಳಿಗೆ ಸಂತಸ ತಂದಿದೆ.