Viral Video: ಪ್ರಿಯಕರನ ಕನಸು ಈಡೇರಿಸಲು ಈಕೆ ಮಾಡಿದ ಸಾಹಸ ಕೇಳಿದ್ರೆ ಶಾಕ್ ಆಗ್ತೀರಿ! ಪ್ರೀತಿಯಂದ್ರೆ ಇದೆ ನೋಡಿ!
ಪ್ರಿಯತಮೆಯೊಬ್ಬಳು, ಭಾರತೀಯ ಸೇನೆಗೆ ಸೇರುವ ಆಕಾಂಕ್ಷೆ ಹೊಂದಿದ್ದ ತನ್ನ ಪ್ರಿಯಕರನಿಗಾಗಿ ಹರಿದ್ವಾರಕ್ಕೆ ಯಾತ್ರೆ ಕೈಗೊಂಡು ಅಲ್ಲಿ 81 ಲೀಟರ್ ಗಂಗಾಜಲವನ್ನು ತಂದು ಶಿವರಾತ್ರಿಯ ದಿನದಂದು ಪಾರ್ತಪುರದ ಶಿವಲಿಂಗಕ್ಕೆ ಅದನ್ನು ಅರ್ಪಿಸಲು ಯೋಜಿಸಿದ್ದಾಳೆ. ಪ್ರಿಯಕರನಿಗಾಗಿ ಆಕೆ ಮಾಡಿದ ಈ ಕಾರ್ಯ ಅನೇಕರ ಮನಸ್ಸನ್ನು ಗೆದ್ದಿದೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: ಇತ್ತೀಚೆಗೆ ಪ್ರೀತಿ, ಸ್ನೇಹದ ಹೆಸರಿನಲ್ಲಿ ಮೋಸ, ಕೊಲೆಯ ಪ್ರಕರಣಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಆದರೆ ಉತ್ತರ ಪ್ರದೇಶದ ಸಹರಾನ್‌ಪುರ ವಿಭಾಗದ ಮುಜಫರ್‌ನಗರದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನ ಕನಸಿಗಾಗಿ ಮಾಡಿದ ಕಾರ್ಯವೊಂದು ಜನರ ಮನಸ್ಸನ್ನು ಗೆದ್ದಿದೆ.ಹೌದು,ಮೀರತ್‌ನ ಪಾರ್ತಾಪುರ ನಿವಾಸಿ ಲಕ್ಷ್ಮಿ, ವಿಶೇಷ ಉದ್ದೇಶದಿಂದ ಹರಿದ್ವಾರಕ್ಕೆ ಕನ್ವರ್( Kanwar) ಯಾತ್ರೆ ಕೈಗೊಂಡಿದ್ದಾಳೆ. ಉದ್ಯೋಗ ಪಡೆಯಲು ಕಷ್ಟಪಡುತ್ತಿರುವ ತನ್ನ ಗೆಳೆಯನಿಗಾಗಿ ಆಕೆ ಯಾತ್ರೆಯನ್ನು ಕೈಗೊಂಡಿದ್ದಾಳೆ. ಲಕ್ಷ್ಮಿ, ತನ್ನ ಸ್ನೇಹಿತೆ ಮಾನ್ಸಿ ಜೊತೆಗೂಡಿ, ಹರಿದ್ವಾರದಿಂದ 81 ಲೀಟರ್ ಗಂಗಾಜಲವನ್ನು(Gangajal) ಸಂಗ್ರಹಿಸಿ ಈಗ ತನ್ನ ಊರಿಗೆ ಮರಳಿದ್ದಾಳೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಈ ಬಗ್ಗೆ ಮಾತನಾಡಿದ ಲಕ್ಷ್ಮಿ, ತನ್ನ ಗೆಳೆಯ ಭಾರತೀಯ ಸೇನೆಗೆ ಸೇರುವ ಆಕಾಂಕ್ಷೆ ಹೊಂದಿದ್ದಾನೆ ಮತ್ತು ಕಳೆದ ಒಂದು ವರ್ಷದಿಂದ ಅದಕ್ಕಾಗಿ ತಯಾರಿ ನಡೆಸುತ್ತಿದ್ದಾನೆ. ಆದರೆ ಇನ್ನೂ ಯಶಸ್ವಿಯಾಗಲಿಲ್ಲ. ಅವನ ಕನಸನ್ನು ಈಡೇರಿಸಲು ಆಕೆ ಈ ಯಾತ್ರೆಯನ್ನು ಕೈಗೊಂಡಿದ್ದಳಂತೆ.
ಮಾಹಿತಿ ಪ್ರಕಾರ, ತನ್ನ ಗೆಳೆಯನ ಆಕಾಂಕ್ಷೆಗಳು ಈಡೇರಲಿ ಎಂದು ಪ್ರಾರ್ಥಿಸುತ್ತಾ,ಸಂಗ್ರಹಿಸಿದ ಗಂಗಾಜಲವನ್ನು ಶಿವರಾತ್ರಿಯ ದಿನದಂದು ಪಾರ್ತಪುರದ ಶಿವಲಿಂಗಕ್ಕೆ ಅರ್ಪಿಸಲು ಲಕ್ಷ್ಮಿ ಯೋಜಿಸಿದ್ದಾಳೆ. ಅವಳ ಪ್ರೀತಿ ಮತ್ತು ಪ್ರಯತ್ನವು ಅನೇಕರ ಹೃದಯ ಗೆದ್ದಿದೆ.
ಈ ಸುದ್ದಿಯನ್ನೂ ಓಧಿ:Viral Video: ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮುಸ್ಲಿಂ ಮಹಿಳೆ; ಕೋಮು ಸಾಮರಸ್ಯಕ್ಕೆ ಇದಕ್ಕಿಂತ ಉದಾಹರಣೆ ಬೇಕೆ ಎಂದ ನೆಟ್ಟಿಗರು
ಹೆಂಡತಿಯ ಆರೈಕೆಗಾಗಿ ಕೆಲಸ ಬಿಟ್ಟ ಗಂಡ
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪತ್ನಿಯನ್ನು ಉಳಿಸಿಕೊಳ್ಳಲು ಪತಿಯೊಬ್ಬ ಆಕೆ ಮಲಗಿದ್ದ ಬೆಡ್ ಮುಂದೆ ಹಾಡು ಹಾಡಿ ಆಕೆಯನ್ನು ಕುಣಿಸಿದ್ದಾನೆ. ಅವರ ನಡುವಿನ ಪ್ರೀತಿಯ ಕ್ಷಣದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಮನಸ್ಸನ್ನು ಗೆದ್ದಿತ್ತು. ಡೆಂಗ್ ಎಂಬ ವ್ಯಕ್ತಿಯ ಪತ್ನಿ ಮೈದಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಳಂತೆ. ಹತಾಶೆಗೊಂಡಿದ್ದ ತನ್ನ ಪತ್ನಿಯನ್ನು ಸಮಾಧಾನಗೊಳಿಸುವುದಕ್ಕಾಗಿ ಆತ ಅವಳ ಹತ್ತಿರವೇ ಇದ್ದು ಆರೈಕೆ ಮಾಡುತ್ತಾನೆ. ತನ್ನ ಕೆಲಸಕ್ಕೂ ಸಹ ರಾಜೀನಾಮೆ ನೀಡಿ,ಅವಳ ಜೊತೆ ಕಾಲ ಕಳೆಯುತ್ತಿದ್ದಾನಂತೆ.ಹೆಂಡತಿಯ ಮನಸ್ಸನ್ನು ಸಮಾಧಾನಗೊಳಿಸಲು ಆತ ಆಕೆಗಾಗಿ ಹಾಡುವುದು ಜೊತೆಗೆ ಅವಳ ಬೆಡ್ ಎದುರು ಡ್ಯಾನ್ಸ್ ಮಾಡುವುದು ಹಾಗೇ ಆಕೆಯನ್ನು ಅಪ್ಪಿ ಮುದ್ದಾಡುತ್ತಾನೆ. ಇದರಿಂದ ಆಕೆಯ ಮನಸ್ಸು ಹಗುರವಾಗಿ ಕಾಯಿಲೆಯಿಂದ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ ಎಂಬುದು ಆತನ ನಂಬಿಕೆ!