ಇಎಸ್ಐಸಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ
ಡಾ ಬಿ ಸಿ ರಾಯ್ ರವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಹಾಗೂ ಮಹಾತ್ಮ ಗಾಂಧೀಜಿ ಯವರಿಗೆ ವೈದ್ಯಕೀಯ ಸಲಹೆಗಾರರಾಗಿದ್ದರು. 16 ವರ್ಷಗಳ ಕಾಲ ಬೆಂಗಾಳದ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಇವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರಕಾರವು ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.


ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ಇಎಸ್ಐಸಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇಎಸ್ಐಸಿ ಆಸ್ಪತ್ರೆಯ ರೋಗಿಗಳಿಗೆ ವೈದ್ಯರ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ಡಾ ಬಿ ಸಿ ರಾಯ್ ರವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಹಾಗೂ ಮಹಾತ್ಮ ಗಾಂಧೀಜಿಯವರಿಗೆ ವೈದ್ಯಕೀಯ ಸಲಹೆಗಾರರಾಗಿದ್ದರು. 16 ವರ್ಷಗಳ ಕಾಲ ಬೆಂಗಾಳದ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಇವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರಕಾರವು ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇದನ್ನೂ ಓದಿ: Bengaluru Stampede: ಬೆಂಗಳೂರು ಕಾಲ್ತುಳಿತ: ಐಪಿಎಸ್ ವಿಕಾಸ್ ಕುಮಾರ್ ಅಮಾನತು ರದ್ದುಗೊಳಿಸಿದ ಸಿಎಟಿ
ನಮ್ಮ ಜನನದ ದಿನವಾದ ಜುಲೈ ಒಂದರಂದೇ ತಮ್ಮನ್ನಗಲಿ ರುವ ಇವರ ನೆನಪಿಗಾಗಿ ಪ್ರತೀ ವರ್ಷ ಜುಲೈ ಒಂದರಂದು "ಭಾರತದ ವೈದ್ಯರ ದಿನವಾಗಿ ಆಚರಿಸಲಾಗುತ್ತದೆ.

ಇಎಸ್ಐಸಿ ವೈದ್ಯಕೀಯ ಕಾಲೇಜಿನ ಡೀನ್ ಡಾ ಸಂಧ್ಯಾ ಆರ್, ವೈದ್ಯಕೀಯ ಅಧೀಕ್ಷಕರಾದ ಡಾ ಸಿಜಿಎಸ್ ಪ್ರಸಾದ್, ನಿರ್ದೇಶಕರಾದ ಮೆರಿಲ್ ಜಾರ್ಜ್, ಡಿಎಂಎಸ್ ಡಾ.ಶಾಂತಿನಿ, ಡಿಎಂಎಸ್ 2 ಸ್ವಪ್ನತಾಯಿ, ಮುಖ್ಯ ಅತಿಥಿಗಯಾಗಿ ಡಾ.ಸುಧಾಮಣಿ, ಡಾ.ಗಿರೀಶ್ ಎಂ ಎಸ್, ಡಾ.ದೀಪ್ತಿ ಕಿರಣ್, ಡಾ.ರೂಪ ಶ್ರೀ, ಡಾ.ಮಾಲಿನಿ, ಡಾ.ಸತೀಶ್ ಪ್ರಸಾದ್, ಡಾ.ಉಮಾ, ಡಾ.ಪ್ರಹ್ಲಾದ್, ಡಾ.ವೀರಶೆಟ್ಟಿ, ಡಾ.ಶಾಲಿನಿ, ಡಾ.ಚೇತನ್, ಡಾ ಅಶ್ವಿನಿ ಮತ್ತಿತರ ವೈದ್ಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.