ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assault case: ರಸ್ತೆಯ ಮೇಲೆ ಕಸ ಎಸೆಯಬೇಡಿ ಎಂದ ಪ್ರಾಧ್ಯಾಪಕರ ಮೇಲೆ ಹಲ್ಲೆ, ಮೂವರ ಸೆರೆ

ಆಟೋದಲ್ಲಿ ತೆರಳುತ್ತಿದ್ದ ಮೂವರು ಯುವಕರು, ತಿಂಡಿ ತಿಂದು ಕಸವನ್ನು ರಸ್ತೆ ಮೇಲೆಯೇ ಬಿಸಾಡಿದ್ದರು. ಆ ವೇಳೆ, ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಇದನ್ನು ಪ್ರಶ್ನಿಸಿದ್ದರು. ಕಸ ರಸ್ತೆ ಮೇಲೆ ಕಸ ಬಿಸಾಡಬೇಡಿ ಎಂದಿದ್ದರು. ಇದರಿಂದ ಕೋಪಗೊಂಡ ಯುವಕರು ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಸಿದ್ದರು.

ರಸ್ತೆಯ ಮೇಲೆ ಕಸ ಎಸೆಯಬೇಡಿ ಎಂದ ಪ್ರಾಧ್ಯಾಪಕರ ಮೇಲೆ ಹಲ್ಲೆ, ಮೂವರ ಸೆರೆ

ಹಲ್ಲೆಗೊಳಗಾದ ಪ್ರಾಧ್ಯಾಪಕ

ಹರೀಶ್‌ ಕೇರ ಹರೀಶ್‌ ಕೇರ Apr 28, 2025 8:02 AM

ಬೆಂಗಳೂರು: ರಸ್ತೆಯ ಮೇಲೆ ಕಸ (waste) ಬಿಸಾಡಬೇಡಿ ಎಂದು ಹೇಳಿದ್ದಕ್ಕೆ ಖಾಸಗಿ ಕಾಲೇಜು ಪ್ರಾಧ್ಯಾಪಕರೊಬ್ಬರ (Lecturer) ಮೇಲೆ ಮೂವರು ಯುವಕರು ಮಾರಣಾಂತಿಕವಾಗಿ ಹಲ್ಲೆ (Assault case) ನಡೆಸಿದ ಘಟನೆ ಬೆಂಗಳೂರಿನ (Bengaluru Crime News) ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದೆ. ಹಲ್ಲೆ ಆರೋಪಿಗಳಾದ ಮೂವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕುಮಾರಸ್ವಾಮಿ ಲೇಔಟ್‌ ಸಮೀಪದ ಜೆಹೆಚ್‌ಬಿಸಿ ಲೇಔಟ್​ನಲ್ಲಿ ಕಾಲೇಜು ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಎಂಬವರ ಮೇಲೆ ಯುವಕರು ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಿಂಗ್ ಕಮಾಂಡರ್ ರೋಡ್ ರೇಜ್ ಪ್ರಕರಣ (Bengaluru Road Rage Case) ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ ಈ ಘಟನೆಯೂ ನಡೆದಿದೆ.

ಏಪ್ರಿಲ್ 21ರಂದು ಸಂಜೆ 6ರಿಂದ 7 ಗಂಟೆಯ ಸಮಯದಲ್ಲಿ ಕುಮಾರಸ್ವಾಮಿ ಲೇಔಟ್​ನ ಜೆಹೆಚ್‌ಬಿಸಿ ಲೇಔಟ್​ನಲ್ಲಿ ಖಾಸಗಿ ಕಾಲೇಜು ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಆಟೋದಲ್ಲಿ ತೆರಳುತ್ತಿದ್ದ ಮೂವರು ಯುವಕರು, ತಿಂಡಿ ತಿಂದು ಕಸವನ್ನು ರಸ್ತೆ ಮೇಲೆಯೇ ಬಿಸಾಡಿದ್ದರು. ಆ ವೇಳೆ, ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಇದನ್ನು ಪ್ರಶ್ನಿಸಿದ್ದರು. ಕಸ ರಸ್ತೆ ಮೇಲೆ ಕಸ ಬಿಸಾಡಬೇಡಿ ಎಂದಿದ್ದರು. ಇದರಿಂದ ಕೋಪಗೊಂಡ ಯುವಕರು ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಸಿದ್ದರು.

ಘಟನೆಯ ವೀಡಿಯೋ ಮಾಡಿದ್ದ ಅರಬಿಂದ್ ಗುಪ್ತಾ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ್ದರು. ಬೈಯಪ್ಪನಹಳ್ಳಿಯಲ್ಲಿ ನಡೆದಿದ್ದ ರೋಡ್​ ರೇಜ್ ಬಳಿಕ (ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಪ್ರಕರಣ) ಇದು ಕೂಡ ಸಾಕಷ್ಟು ಸದ್ದು ಮಾಡಿತ್ತು. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಕೆಎಸ್ ಲೇಔಟ್ ಪೊಲೀಸರು ಮೂವರು ಆರೋಪಿಗಳಾದ ಭಾನುಪ್ರಸಾದ್, ಶರತ್, ಅಮೃತ್ ಕುಮಾರ್​​ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಲಾಗಿದೆ.

ಬಾರ್‌ನಲ್ಲಿ ಜೋರಾಗಿ ಮಾತನಾಡಬೇಡಿ ಎಂದದ್ದಕ್ಕೆ ಹಲ್ಲೆ

ಆನೇಕಲ್: ಬಾರ್​ನಲ್ಲಿ ಜೋರಾಗಿ ಮಾತನಾಡಬೇಡಿ (talking loud) ಎಂದು ಹೇಳಿದ ಯುವಕನ ಮನೆಗೇ ನುಗ್ಗಿ ಇರಿದು ಕೊಂದಿದ್ದಾರೆ ಪಾಪಿಗಳು. ಘಟನೆ ಬನ್ನೇರುಘಟ್ಟ ಶ್ಯಾನುಭೋಗನಹಳ್ಳಿಯಲ್ಲಿ ನಡೆದಿದೆ. ಯುವಕನ ಕೊಲೆ (Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬನ್ನೇರುಘಟ್ಟ ಪೊಲೀಸರು (Bengaluru crime news) ಬಂಧಿಸಿದ್ದಾರೆ. ಕೆಂಚಗಯ್ಯನದೊಡ್ಡಿ ವಾಸಿ ಕಾಂತಿಕುಮಾರ್ ಅಲಿಯಾಸ್​ ಸೈಕೋ ಕಾಂತಿ (27), ಗೋಪಾಲ್ ಅಲಿಯಾಸ್​ ಗೊಬ್ಬು ರಾಜ (40), ಕಿರಣ್ ಕುಮಾರ್ ಅಲಿಯಾಸ್​ ಸಫೀನ್ಸ್ (28) ಮತ್ತು ಓರ್ವ ಬಾಲಕ ಬಂಧಿತರು. ಮತ್ತೊಬ್ಬ ಆರೋಪಿ ವಿನೋದ್ (30) ಗಾಗಿ ಪೊಲೀಸರು ಹುಡುಗಾಟ ನಡೆಸಿದ್ದಾರೆ.

ಶ್ಯಾನುಬೋಗನಹಳ್ಳಿ ತರಂಗಿಣಿ ಬಾರ್​ನಲ್ಲಿ ಮೃತ ಸುರೇಶ್ ಜೋರಾಗಿ ಮಾತನಾಡಬೇಡಿ, ಸೈಲೆಂಟ್​ ಆಗಿ ಇರಿ ಎಂದಿದ್ದಾರೆ. ಇಷ್ಟಕ್ಕೆ ಸುರೇಶ್ ಅವರ ಮನೆಗೆ ನುಗ್ಗಿದ್ದ ಆರೋಪಿಗಳು, ಆತನ ಹೆಂಡತಿ ಮಕ್ಕಳ ಮುಂದೆಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬನ್ನೇರುಘಟ್ಟ ಪೊಲೀಸರು ಕೊಲೆ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಒಬ್ಬ ಪರಾರಿಯಾಗಿದ್ದು, ಆತನಿಗಾಗಿ ತಲಾಶೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Murder Case: ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಕೇಸ್‌ ಆರೋಪಿ ಹತ್ಯೆ; ಮೂವರು‌ ಎಸ್‌ಡಿಪಿಐ ಕಾರ್ಯಕರ್ತರ ಬಂಧನ