ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kerala film directors arrested: ಡ್ರಗ್ಸ್‌ ಕೇಸ್‌; ಇಬ್ಬರು ಮಲಯಾಳಂ ಸಿನಿಮಾ ನಿರ್ದೇಶಕರು ಸೇರಿ ಮೂವರು ಅರೆಸ್ಟ್‌

ಭಾನುವಾರ ಬೆಳಗಿನ ಜಾವ ಕೊಚ್ಚಿಯ ಅಪಾರ್ಟ್‌ಮೆಂಟ್‌ನಲ್ಲಿ ರೇಡ್‌ ನಡೆಸಿ ನಂತರ ನಿರ್ದೇಶಕರಾದ ಖಾಲಿದ್ ರೆಹಮಾನ್ ಮತ್ತು ಅಶ್ರಫ್ ಹಮ್ಜಾ ಹಾಗೂ ಇವರ ಜೊತೆಗಿದ್ದ ಶಾಲಿಹ್ ಮೊಹಮ್ಮದ್ ಎಂಬಾತನನ್ನು ಅರೆಸ್ಟ್‌ ಮಾಡಲಾಗಿದೆ. ಅವರ ಬಳಿ ಇದ್ದ 1.63 ಗ್ರಾಂ ಹೈಬ್ರಿಡ್ ಗಾಂಜಾ, ಒಂದು ಬಾಂಗ್ ಮತ್ತು ಗ್ರೈಂಡರ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಉಪ ಅಬಕಾರಿ ಆಯುಕ್ತ (ಎರ್ನಾಕುಲಂ) ಟಿಎಂ ಮಜು ಹೇಳಿದರು.

ಮಲಯಾಳಂ ಸಿನಿಮಾ ನಿರ್ದೇಶಕರು ಸೇರಿ ಮೂವರು ಅರೆಸ್ಟ್‌

Profile Rakshita Karkera Apr 28, 2025 9:03 AM

ತಿರುವನಂತಪುರಂ: ಹೈಬ್ರಿಡ್ ಗಾಂಜಾ ಹೊಂದಿದ್ದ ಆರೋಪದ ಮೇಲೆ ಕೇರಳದ ಅಬಕಾರಿ ಇಲಾಖೆ ಅಧಿಕಾರಿಗಳು ಭಾನುವಾರ ಇಬ್ಬರು ಮಲಯಾಳಂ ಚಲನಚಿತ್ರ ನಿರ್ದೇಶಕರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ(Kerala film directors arrested). ಭಾನುವಾರ ಬೆಳಗಿನ ಜಾವ ಕೊಚ್ಚಿಯ ಅಪಾರ್ಟ್‌ಮೆಂಟ್‌ನಲ್ಲಿ ರೇಡ್‌ ನಡೆಸಿ ನಂತರ ನಿರ್ದೇಶಕರಾದ ಖಾಲಿದ್ ರೆಹಮಾನ್ ಮತ್ತು ಅಶ್ರಫ್ ಹಮ್ಜಾ ಹಾಗೂ ಇವರ ಜೊತೆಗಿದ್ದ ಶಾಲಿಹ್ ಮೊಹಮ್ಮದ್ ಎಂಬಾತನನ್ನು ಅರೆಸ್ಟ್‌ ಮಾಡಲಾಗಿದೆ. ಅವರ ಬಳಿ ಇದ್ದ 1.63 ಗ್ರಾಂ ಹೈಬ್ರಿಡ್ ಗಾಂಜಾ, ಒಂದು ಬಾಂಗ್ ಮತ್ತು ಗ್ರೈಂಡರ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಉಪ ಅಬಕಾರಿ ಆಯುಕ್ತ (ಎರ್ನಾಕುಲಂ) ಟಿಎಂ ಮಜು ಹೇಳಿದರು.

ವಶಪಡಿಸಿಕೊಂಡ ಮೊತ್ತವು ವಾಣಿಜ್ಯ ಪ್ರಮಾಣಕ್ಕಿಂತ ಕಡಿಮೆಯಿರುವುದರಿಂದ, ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ 1985 ರ ಸೆಕ್ಷನ್ 20 (ಬಿ) (II) ಎ ಮತ್ತು 29 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ ನಂತರ ಮೂವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು

ಅಬಕಾರಿ ಇಲಾಖೆ, ಮಾದಕ ವಸ್ತುಗಳು ಪತ್ತೆಯಾದ ಕೊಚ್ಚಿ ಅಪಾರ್ಟ್‌ಮೆಂಟ್‌ನ ಮಾಲೀಕ, ಛಾಯಾಗ್ರಾಹಕ ಸಮೀರ್ ತಾಹಿರ್ ಅವರಿಗೂ ನೋಟಿಸ್ ಜಾರಿ ಮಾಡಿದೆ. ಇಬ್ಬರು ನಿರ್ದೇಶಕರು ಮುಂದಿನ ಸಿನಿಮಾದ ಬಗ್ಗೆ ಚರ್ಚೆ ನಡೆಸಲು ಅಪಾರ್ಟ್‌ಮೆಂಟ್‌ಗೆ ಬಂದಿದ್ದಾರೆ. ಆದಾಗ್ಯೂ ಸಮೀರ್ ತಾಹಿರ್‌ಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಮಾದಕ ವಸ್ತುಗಳ ಸೇವನೆಗೆ ಸ್ಥಳಾವಕಾಶ ನೀಡುವುದು ಸಹ NDPS ಕಾಯ್ದೆಯಡಿಯಲ್ಲಿ ಅಪರಾಧವಾಗಿದೆ ಎಂದು ಅಧಿಕಾರಿ ಹೇಳಿದರುಖಾಲಿದ್ ರೆಹಮಾನ್ ನಿರ್ದೇಶನದ ಅಲಪ್ಪುಳ ಜಿಮ್ಖಾನಾ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್‌ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ (FEFKA) ನ ನಿರ್ದೇಶಕರ ಒಕ್ಕೂಟದ ಮುಖ್ಯಸ್ಥ ಸಿಬಿ ಮಲಯಿಲ್, ಮಾದಕ ದ್ರವ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಇಬ್ಬರೂ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಹಿಂದೆ, ಮಾದಕ ದ್ರವ್ಯಗಳೊಂದಿಗೆ ಸಿಕ್ಕಿಬಿದ್ದ ನಂತರ ಮೇಕಪ್ ಮ್ಯಾನ್ ವಿರುದ್ಧವೂ ನಾವು ಕ್ರಮ ಕೈಗೊಂಡಿದ್ದೆವು. ನಾವು ಸಣ್ಣ ಮತ್ತು ದೊಡ್ಡ ಕಲಾವಿದರ ನಡುವೆ ತಾರತಮ್ಯ ಮಾಡುವುದಿಲ್ಲ. ನಾವು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಮಲಯಿಲ್ ಹೇಳಿದರು. ಮಲಯಿಲ್ ಹೇಳಿದರು.

ಈ ಸುದ್ದಿಯನ್ನೂ ಓದಿ: Shine Tom Chacko: ಡ್ರಗ್ಸ್‌ ಸೇವಿಸಿ ನಟಿಗೆ ಕಿರುಕುಳ ನೀಡಿ ನಿಜ ಜೀವನದಲ್ಲಿಯೂ ವಿಲನ್‌ ಆದ ಶೈನ್‌ ಟಾಮ್‌ ಚಾಕೊ; ಪೊಲೀಸ್‌ ದಾಳಿ ವೇಳೆ ಪರಾರಿ

ಕೆಲವು ದಿನಗಳ ಹಿಂದೆಯಷ್ಟೇ ಮಾದಕವಸ್ತು ಸೇವನೆ ಮತ್ತು ಸಹನಟಿಯರ ಜೊತೆ ಅಸಭ್ಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂನ ಖ್ಯಾತ ನಟ ಶೈನ್ ಟಾಮ್ ಚಾಕೊ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ ಇದೇ ಪ್ರಕರಣದಲ್ಲಿ ಅವರು ಅರೆಸ್ಟ್‌ ಕೂಡ ಆಗಿದ್ದರು.ನಟ ಶೈನ್ ಟಾಮ್ ಚಾಕೊ ಸಿನಿಮಾ ಸೆಟ್‌ನಲ್ಲಿ ಮಾದಕವಸ್ತು ಸೇವಿಸುತ್ತಾರೆ ಹಾಗೂ ಸಹನಟಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ’ ಎಂದು ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ಮಲಯಾಳಂ ಫಿಲ್ಮ್ ಚೇಂಬರ್‌ಗೆ ದೂರನ್ನು ನೀಡಿದ್ದರು. ಈ ಕುರಿತು ತನಿಖೆಗೂ ಆದೇಶಿಸಲಾಗಿತ್ತು. ಈ ನಿಟ್ಟಿನಲ್ಲಿ, ಶೈನ್ ಟಾಮ್ ಚಾಕೋ ಉಳಿದುಕೊಂಡಿದ್ದ ಹೋಟೆಲ್​ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಅವರು ಪೊಲೀಸರ ಕೈಗೆ ಸಿಗದೇ ಪರಾರಿ ಆಗಿದ್ದರು. ಆ ಬಳಿಕ ತನಿಖೆ ನಡೆಸಿ ನಟನನ್ನು ಬಂಧಿಸಲಾಗಿತ್ತು.

ಇದೀಗ ನಟನ ಡ್ರಗ್ಸ್ ವಿಚಾರವನ್ನು ‌ಮಲಯಾಳಂ ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಿದ್ದು ಅಂತಿಮ ಎಚ್ಚರಿಕೆ ನೀಡಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಫಿಲ್ಮ್ ಪ್ರಧಾನ ಕಾರ್ಯದರ್ಶಿ ಬಿ ಉಣ್ಣಿಕೃಷ್ಣನ್ ನಟನಿಗೆ ಈಗಾಗಲೇ ಕೊನೆಯ ಎಚ್ಚರಿಕೆ ನೀಡಲಾಗಿದೆ. ಅವರು ತಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಅವರು ಕೊನೆಯ ಬಾರಿ ಅವಕಾಶ ಕೊಡಿ ಎಂದು ಮನವಿ ಸಲ್ಲಿಸಿದ್ದಾರೆ. ಚಾಕೊಗೆ ಡ್ರಗ್ಸ್ ಸೇವನೆ ನಿಲ್ಲಿಸಲು ವೃತ್ತಿಪರ ನೆರವಿನ ಅಗತ್ಯವಿದೆ ಎಂದು ಸಂಘಟನೆಯ ಸದಸ್ಯರು ಅವರ ಕುಟುಂಬಕ್ಕೆ ತಿಳಿಸಿದ್ದಾರೆ ಎಂದು ಹೇಳಿದರು.