ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಜೈಲಿನಲ್ಲಿದ್ದುಕೊಂಡೇ ಬೋರ್ಡ್ ಪರೀಕ್ಷೆ ಬರೆದ ಐವರು ಕೈದಿಗಳು ಪಾಸ್

Uttar Pradesh Board Examinations: ಉತ್ತರ ಪ್ರದೇಶದ ಅಲಿಘರ್ ಜಿಲ್ಲಾ ಜೈಲಿನಲ್ಲಿ ಗಂಭೀರ ಅಪರಾಧಗಳ ಆರೋಪದಡಿ ಬಂಧನದಲ್ಲಿರುವ ಐವರು ಕೈದಿಗಳು ಈ ವರ್ಷ ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಜೈಲಿನಲ್ಲಿದ್ದುಕೊಂಡೇ ಬೋರ್ಡ್ ಪರೀಕ್ಷೆ ಬರೆದ ಕೈದಿಗಳು ಪಾಸ್

Profile Sushmitha Jain Apr 28, 2025 1:57 PM

ಅಲಿಘರ್: ಉತ್ತರ ಪ್ರದೇಶದ (Uttar Pradesh) ಅಲಿಘರ್ ಜಿಲ್ಲಾ ಜೈಲಿನಲ್ಲಿ (Aligarh district jail) ಗಂಭೀರ ಅಪರಾಧಗಳ ಆರೋಪದಡಿ ಬಂಧನದಲ್ಲಿರುವ ಐವರು ಕೈದಿಗಳು ಈ ವರ್ಷ ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯಲ್ಲಿ (Uttar Pradesh Board Examinations) ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಈ ಕೈದಿಗಳ ಫಲಿತಾಂಶವು ಇತರ ಕೈದಿಗಳಿಗೆ ಹೊಸ ಆಶಾಕಿರಣವನ್ನು ತೆರೆದಿದೆ ಎಂದು ಜೈಲು ಸೂಪರಿಂಟೆಂಡೆಂಟ್ ಬೃಜೇಂದ್ರ ಯಾದವ್ ಹೇಳಿದ್ದಾರೆ.

ಯಾದವ್ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಈ ಐವರು ಕೈದಿಗಳ ವಯಸ್ಸು 25 ರಿಂದ 28 ವರ್ಷಗಳ ನಡುವೆ ಇದೆ ಎಂದು ತಿಳಿಸಿದರು. ಇವರಲ್ಲಿ ಒಬ್ಬರು ಕೊಲೆ ಆರೋಪದಡಿ, ಮೂವರು ಪೋಕ್ಸೋ ಕಾಯ್ದೆಯಡಿ ಅಪ್ರಾಪ್ತರ ಮೇಲೆ ಅತ್ಯಾಚಾರ ಆರೋಪದಡಿ, ಮತ್ತು ಐದನೇ ವ್ಯಕ್ತಿ ಆಸಿಡ್ ದಾಳಿಯ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. "ಎಲ್ಲ ಕೈದಿಗಳು ಪ್ರಕರಣದ ವಿಚಾರಣೆಯ ಹಂತದಲ್ಲಿದ್ದಾರೆ" ಎಂದು ಯಾದವ್ ಹೇಳಿದರು. ಈ ವರ್ಷದ ಫಲಿತಾಂಶವು ಈ ಕೈದಿಗಳ ಜೀವನದಲ್ಲಿ ಒಂದು ಮಹತ್ವದ ತಿರುವು ತರಬಹುದು, ಏಕೆಂದರೆ ತಮ್ಮ ಶಿಕ್ಷೆಯ ಅವಧಿ ಮುಗಿದ ನಂತರ ಸಾಮಾನ್ಯ ಜೀವನ ನಡೆಸುವ ಆಶಾಕಿರಣವನ್ನು ಅವರು ಕಾಣುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ಉದ್ಯೋಗಾರ್ಥಿಗಳಲ್ಲಿ ಕನ್ನಡ ಬಯಸದ ಬೆಂಗಳೂರು ಕಂಪನಿ, ನೆಟ್ಟಿಗರ ಸಿಟ್ಟು

"ಈ ಕೈದಿಗಳು ಈಗ ದೂರಶಿಕ್ಷಣ ಕೋರ್ಸ್‌ಗಳ ಮೂಲಕ ತಮ್ಮ ಶಿಕ್ಷಣವನ್ನು ಮುಂದುವರಿಸಲು ಆಶಿಸುತ್ತಿದ್ದಾರೆ, ನಾವು ಅವರ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತೇವೆ" ಎಂದು ಯಾದವ್ ತಿಳಿಸಿದರು. ಉತ್ತರ ಪ್ರದೇಶ ಬೋರ್ಡ್ ಶುಕ್ರವಾರ 12ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿತು. ರಾಜ್ಯದ ವಿವಿಧ ಜೈಲುಗಳಿಂದ ಪರೀಕ್ಷೆಗೆ ಹಾಜರಾಗಿದ್ದ 94 ಕೈದಿಗಳಲ್ಲಿ 91 ಜನರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಗಮನಾರ್ಹ ಸಾಧನೆಯಾಗಿದೆ.

ಈ ಹಿಂದೆ ಕೂಡು ಉತ್ತರ ಪ್ರದೇಶದ ಬರೇಲಿಯ ಸೆಂಟ್ರಲ್​ ಜೈಲಿನಲ್ಲಿದ್ದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಜೀವಾವಧಿ ಶಿಕ್ಷೆಗೆ ತುತ್ತಾಗಿರುವ ಸೀತಾಪುರದ ನಿವಾಸಿ 50 ವರ್ಷದ ಪ್ರತಾಪ್​ ಸಿಂಗ್​ ಎಂಬಾತ ಹೈಸ್ಕೂಲ್ ವಿಭಾಗದಲ್ಲಿ ಜೈಲು ಪರೀಕ್ಷಾರ್ಥಿಗಳ ಪೈಕಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಅವರು ಶೇ 83.3 ಅಂಕ ಪಡೆದು ಅಚ್ಚರಿ ಮೂಡಿಸಿದ್ದರು. ಇಂಟರ್​ ಪರೀಕ್ಷೆ ಫಲಿತಾಂಶದಲ್ಲಿ ಅದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವರದಕ್ಷಿಣೆ ಸಾವು ಪ್ರಕರಣದ ಮತ್ತೊಬ್ಬ ಕೈದಿ 35 ವರ್ಷದ ಛೋಟೆ ಲಾಲ್ 61.1 ಪರ್ಸೆಂಟ್ ಅಂಕ ಪಡೆದು ಇಂಟರ್​ ವಿಭಾಗದ ಜೈಲು ಪರೀಕ್ಷಾರ್ಥಿಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು.