ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಕೊನೆಯುಸಿರು!

Road Accident: ಕಂಟೇನರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ನಂದಿಹಳ್ಳಿ ಹೆದ್ದಾರಿಯಲ್ಲಿ ಜರುಗಿದೆ. ವಾಚ್‌ಮನ್‌ಗಳಾಗಿ ಕೆಲಸ ಮಾಡುತ್ತಿದ್ದ ತುಮಕೂರು ಮೂಲದ ರಾಜೇಶ್ (25), ದನಂಜಯ್ (27), ಧನುಷ್ (23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಡೆಡ್ಲಿ ಆಕ್ಸಿಡೆಂಟ್‌- ಮೂವರು ಸ್ಥಳದಲ್ಲೇ ಸಾವು!

Profile Siddalinga Swamy Jun 6, 2025 4:24 PM

ತುಮಕೂರು: ಕಂಟೇನರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ‌ (Road Accident), ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ನಂದಿಹಳ್ಳಿ ಹೆದ್ದಾರಿಯಲ್ಲಿ ಜರುಗಿದೆ. ವಾಚ್‌ಮನ್‌ಗಳಾಗಿ ಕೆಲಸ ಮಾಡುತ್ತಿದ್ದ ತುಮಕೂರು ಮೂಲದ ರಾಜೇಶ್ (25), ದನಂಜಯ್ (27), ಧನುಷ್ (23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದಾಬಸಪೇಟೆಯ ಎಂ.ಇ. ಸೋಲಾರ್ ಪ್ಲಾಂಟ್‌ನಲ್ಲಿ ಕೆಲಸ ಮುಗಿಸಿ ಬರುವಾಗ ತುಮಕೂರು ತಾಲೂಕಿನ ನಂದಿಹಳ್ಳಿ ಹೆದ್ದಾರಿಯಲ್ಲಿ ಈ ದುರಂತ ನಡೆದಿದೆ. ಘಟನಾ ಸ್ಥಳಕ್ಕೆ ಎಎಸ್ಪಿ ನಾಗರಾಜ್, ಡಿವೈಎಸ್ಪಿ ಚಂದ್ರಶೇಖರ್, ಕ್ಯಾತ್ಸಂದ್ರ ಸಿಪಿಐ ರಾಮ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡೆಡ್ಲಿ ಆಕ್ಸಿಡೆಂಟ್‌; ಖ್ಯಾತ ನಟ, ಆತನ ತಾಯಿ ಸ್ಥಿತಿ ಗಂಭೀರ, ತಂದೆ ಸ್ಥಳದಲ್ಲಿಯೇ ಸಾವು

ಚೆನ್ನೈ: ಮಲಯಾಳಂ ನಟ ಶೈನ್ ಟಾಮ್ ಚಾಕೊ (Shine Tom Chacko) ಹಾಗೂ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ಬೆಳಿಗ್ಗೆ ತಮಿಳುನಾಡು ಬಳಿ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಚಾಕೊ ತಂದೆ ಸಿಪಿ ಚಾಕೊ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿಗೆ ಗಂಭೀರಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಪಘಾತದ ಸಮಯದಲ್ಲಿ, ಶೈನ್, ಹಾಗೂ ಅವರ ತಾಯಿ, ಸಹೋದರ, ತಂದೆ ಮತ್ತು ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಶೈನ್‌ ಮತ್ತು ಅವರ ತಾಯಿಯನ್ನು ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವರದಿಗಳ ಪ್ರಕಾರ, ಅವರ ಸಹೋದರ ಮತ್ತು ಕಾರು ಚಾಲಕ ಕೂಡ ಗಾಯಗೊಂಡಿದ್ದಾರೆ. ತಮಿಳುನಾಡಿನ ಧರ್ಮಪುರಿಯ ಪಾಲಕೊಟ್ಟೈ ಬಳಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಅವರ ಕಾರು ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಶೈನ್ ಟಾಮ್ ಚಾಕೊ ಇತ್ತೀಚೆಗೆ ಮಾದಕ ದ್ರವ್ಯ ಸೇವನೆಯ ಆರೋಪದ ಮೇರೆಗೆ ಸುದ್ದಿಯಲ್ಲಿದ್ದರು. ಬಂಧನದ ನಂತರ ನಟ ಪ್ರಸ್ತುತ ಪೊಲೀಸ್ ತನಿಖೆಯಲ್ಲಿದ್ದಾರೆ. ಅಲ್ಲದೆ, ಅವರ ಸಹನಟಿ ವಿನ್ಸಿ ಅಲೋಶಿಯಸ್ ಅವರು 'ಸೂತ್ರವಾಸ್ಯಂ' ಸೆಟ್‌ಗಳಲ್ಲಿ ಮಾದಕ ದ್ರವ್ಯಗಳನ್ನು ಬಳಸಿದ್ದಾರೆ ಮತ್ತು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | ತಂಬಾಕು ಉಗುಳಲೆಂದು ಕಾರಿನ ಬಾಗಿಲು ತೆಗೆದ ಚಾಲಕನಿಂದಾಗಿ ಭೀಕರ ಅಪಘಾತ