ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Colors Kannada: ಕಲರ್ಸ್ ಕನ್ನಡ ವಾಹಿನಿಗೆ ದಶಕದ ಸಂಭ್ರಮ: ಇದೇ ವಾರಾಂತ್ಯದಲ್ಲಿ ಭರ್ಜರಿ ರಸ ದೌತಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ದಶಕದ ಮಹೋತ್ಸವ ಕಾರ್ಯಕ್ರಮ ಜೂನ್ 7 ಮತ್ತು 8ರ ಸಂಜೆ 7 ಗಂಟೆಗೆ ಪ್ರಸಾರವಾಗಲಿದ್ದು ರಾತ್ರಿ 10:30ರ ವರೆಗೆ ಕನ್ನಡದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ. 25 ವರ್ಷಗಳ ಹಿಂದೆ ಆರಂಭವಾದ ಈ ಟಿವಿ ಕನ್ನಡ ಕಲರ್ಸ್‌ ಕನ್ನಡವಾಗಿ ಮಾರ್ಪಾಡುಗೊಂಡು 10ನೇ ವರ್ಷದ ಮೈಲಿಗಲ್ಲನ್ನು ಮುಟ್ಟಿದೆ.

ಕಲರ್ಸ್ ಕನ್ನಡಕ್ಕೆ ದಶಕದ ಸಂಭ್ರಮ

Dashakada Mahotsava

Profile Pushpa Kumari Jun 6, 2025 7:51 PM

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಗೆ ಇದೀಗ 10 ವರ್ಷಗಳು ತುಂಬಿದ ಸಂಭ್ರಮ. ಹೀಗಾಗಿ ಇದೇ ಶನಿವಾರ ಮತ್ತು ಭಾನುವಾರ (ಜೂನ್ 7 ಮತ್ತು 8) ಕಲರ್ಸ್ ಕನ್ನಡ ವಾಹಿನಿಯಲ್ಲಿ ದಶಕದ ಮಹೋತ್ಸವ ಕಾರ್ಯಕ್ರಮ (Dashakada Mahotsava) ಸಂಜೆ 7 ಗಂಟೆಗೆ ಪ್ರಸಾರವಾಗಲಿದ್ದು ರಾತ್ರಿ 10:30ರವರೆಗೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ. 25 ವರ್ಷಗಳ ಹಿಂದೆ ಆರಂಭವಾದ ಈ ಟಿವಿ ಕನ್ನಡ ಕಲರ್ಸ್‌ ಕನ್ನಡವಾಗಿ ಮಾರ್ಪಾಡುಗೊಂಡು10ನೇ ವರ್ಷದ ಮೈಲಿಗಲ್ಲನ್ನು ಮುಟ್ಟಿದೆ. ಕಳೆದ ಒಂದು ದಶಕದಿಂದ ಈ ವಾಹಿನಿ ತನ್ನ ವಿಭಿನ್ನ ಕತೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಾ ಬಂದಿದೆ.

ಇಂತಹ ಸಿಹಿ ಗಳಿಗೆಯಲ್ಲಿ ಹಲವು ಕಲಾವಿದರು ಮತ್ತು ಮಹನೀಯರನ್ನು ಸ್ಮರಿಸಿ ಗೌರವಿಸುವ ಕಾರ್ಯಕ್ರಮವೇ 'ದಶಕದ ಮಹೋತ್ಸವ'. ಅದೇ ಬೇರು, ಹೊಸ ಚಿಗುರು ಹೆಸರಿನಲ್ಲಿ ಹೊಸ ಆರಂಭಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಆಳವಾಗಿ ಬೇರೂರಿರುವ ಪರಂಪರೆಯನ್ನು ಗೌರವಿಸುವ ಕಾರ್ಯಕ್ರಮ ಇದಾಗಿದೆ.

ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿರುವ ಈ ಖುಷಿಯ ಸಂದರ್ಭದಲ್ಲಿ ಕಲರ್ಸ್‌ ಕನ್ನಡ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿದೆ. ದಶಕದ ಮಹೋತ್ಸವ ಎನ್ನುವ ಕಾರ್ಯಕ್ರಮದಲ್ಲಿ ಹಲವು ವಿಶೇಷತೆಗಳಿವೆ. ಮನರಂಜನೆಯ ಜತೆ ಜತೆಗೆ ಗೌರವ, ಸನ್ಮಾನಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಆಚರಣೆಯ ಸವಿನೆನಪಿಗಾಗಿ ಜನಪ್ರಿಯ ಧಾರಾವಾಹಿ ಮತ್ತು ಸೆಲೆಬ್ರಿಟಿ ಕಲಾವಿದರು ಮನರಂಜನಾ ಕಾರ್ಯಕ್ರಮಗಳನ್ನು ‌ನೀಡಲಿದ್ದಾರೆ.

ಇನ್ನೊಂದು ವಿಶಿಷ್ಟತೆ ಏನೆಂದರೆ ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಬಂದು 40 ವರ್ಷಗಳಾಗಿದೆ. ಈ ಸಂಭ್ರಮವನ್ನು 'ಶಿವಣ್ಣ 40' ಎಂದು ಕಲರ್ಸ್ ಕನ್ನಡ ವಾಹಿನಿ ಆಚರಿಸುತ್ತಿದ್ದು ಅವರನ್ನು ಆದರದಿಂದ ಗೌರವಿಸಲಿದೆ. ಈ ಮಹೋನ್ನತ ಕಾರ್ಯಕ್ರಮದಲ್ಲಿ ಶಿವಣ್ಣ ಅವರಿಗೆ ಅವರ ಕುಟುಂಬ, ಸ್ನೇಹಿತರು ಮತ್ತು ಚಿತ್ರರಂಗದ ಮಹನೀಯರಿಂದ ಹಲವಾರು ಅಚ್ಚರಿಗಳಿವೆ. ಈ ಹಬ್ಬದಂತ ಸಂಭ್ರಮದಲ್ಲಿ ಚಾನಲ್‌ನ ಹೊಸ ಕಾರ್ಯಕ್ರಮಗಳ ಘೋಷಣೆ ಆಗಲಿದೆ.

ಇದನ್ನು ಓದಿ: Nidradevi Next Door Movie: ‘ನಿದ್ರಾದೇವಿ Next Door’ ಚಿತ್ರದ ‘ಸ್ಲೀಪ್ ಲೆಸ್ ಆಂಥೆಮ್’ ಹಾಡಿಗೆ ಪ್ರೇಕ್ಷಕರು ಫಿದಾ

ಗೆಲುವಿನ ಹಾದಿಯಲ್ಲಿ ಸಾಗಿ ಬರುತ್ತಿರುವ ಕಲರ್ಸ್‌ ಕನ್ನಡ ಈ ದಶಕದ ಹಬ್ಬದಲ್ಲಿ ಅದೇ ಬೇರಿನ ಜತೆ ಹೊಸ ಚಿಗುರನ್ನು ಆಚರಿಸಲು ಸಂಭ್ರಮಿಸುತ್ತಿದೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಬ್ಲಾಕ್ ಕೋಬ್ರಾ ವಿಜಯ ಕುಮಾರ್, ಶ್ರೀ ಮುರಳಿ, ವಿಜಯ ರಾಘವೇಂದ್ರ, ಅನು ಪ್ರಭಾಕರ್, ಶ್ರುತಿ, ತಾರಾ ಅನುರಾಧಾ, ಸೃಜನ್ ಲೋಕೇಶ್, ಟಿ.ಎನ್. ಸೀತಾರಾಮ್, ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು ಮತ್ತು ಕಿರುತೆರೆಯ ಜನಪ್ರಿಯ ಕಲಾವಿದ ರಾದ ಶ್ವೇತಾ ಪ್ರಸಾದ್, ರಂಜನಿ ರಾಘವನ್, ಧನುಷ್, ಸುಷ್ಮಾ ನಾಣಯ್ಯ ಮುಂತಾದವರು 'ದಶಕದ ಮಹೋತ್ಸವ'ದ ಸಂಭ್ರಮ ಹೆಚ್ಚಿಸಲಿದ್ದಾರೆ.