ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vladimir Putin: ರಷ್ಯಾ ಏಕೆ ಇರಾನ್‌ಗೆ ಬೆಂಬಲ ನೀಡುತ್ತಿಲ್ಲ? ಸತ್ಯ ಬಿಚ್ಚಿಟ್ಟ ಪುಟಿನ್

Israel-Iran conflict: ಅಮೆರಿಕವು ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿದರೂ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೆಹರಾನ್‌ಗೆ ನೇರವಾಗಿ ಸಹಾಯ ಮಾಡದೇ ತಟಸ್ಥವಾಗಿರಲು ಕಾರಣವನ್ನು ವಿವರಿಸಿದ್ದಾರೆ. ರಷ್ಯಾ ಮತ್ತು ಇರಾನ್‌ಗೆ ದಶಕಗಳಿಂದ ಆತ್ಮೀಯ ಸಂಬಂಧವಿದ್ದರೂ, ಇಸ್ರೇಲ್‌ನಲ್ಲಿ ರಷ್ಯನ್ ಭಾಷಿಕರ ಸಂಖ್ಯೆ ಹೆಚ್ಚಿರುವುದರಿಂದ ತಟಸ್ಥತೆ ಕಾಯ್ದುಕೊಂಡಿರುವುದಾಗಿ ಪುಟಿನ್ ಹೇಳಿದ್ದಾರೆ.

ರಷ್ಯಾ ಏಕೆ ಇರಾನ್‌ಗೆ ಬೆಂಬಲ ನೀಡುತ್ತಿಲ್ಲ? ಸತ್ಯ ಬಿಚ್ಚಿಟ್ಟ ಪುಟಿನ್

ವ್ಲಾಡಿಮಿರ್ ಪುಟಿನ್.

Profile Sushmitha Jain Jun 23, 2025 10:10 PM

ಮಾಸ್ಕೋ: ಅಮೆರಿಕವು ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿದರೂ ರಷ್ಯಾ ಅಧ್ಯಕ್ಷ (Russian President) ವ್ಲಾಡಿಮಿರ್ ಪುಟಿನ್ (Vladimir Putin) ಟೆಹರಾನ್‌ಗೆ ನೇರವಾಗಿ ಸಹಾಯ ಮಾಡದೇ ತಟಸ್ಥವಾಗಿರಲು ಕಾರಣವನ್ನು ವಿವರಿಸಿದ್ದಾರೆ. ರಷ್ಯಾ ಮತ್ತು ಇರಾನ್‌ಗೆ (Iran) ದಶಕಗಳಿಂದ ಆತ್ಮೀಯ ಸಂಬಂಧವಿದ್ದರೂ ಇಸ್ರೇಲ್‌ನಲ್ಲಿ (Israel) ರಷ್ಯನ್ ಭಾಷಿಕರ ಸಂಖ್ಯೆ ಹೆಚ್ಚಿರುವುದರಿಂದ ತಟಸ್ಥತೆ ಕಾಯ್ದುಕೊಂಡಿರುವುದಾಗಿ ಪುಟಿನ್ ಹೇಳಿದ್ದಾರೆ.

ಸೇಂಟ್ ಪೀಟರ್ಸ್‌ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಪುಟಿನ್, "ಇಸ್ರೇಲ್‌ನಲ್ಲಿ ಸುಮಾರು 20 ಲಕ್ಷ ಜನರು ಮಾಜ‍ಿ ಸೋವಿಯತ್ ಒಕ್ಕೂಟ ರಾಷ್ಟ್ರಗಳಿಂದ ಮತ್ತು ರಷ್ಯಾದಿಂದ ಬಂದವರಾಗಿದ್ದಾರೆ. ಇದು ರಷ್ಯನ್ ಭಾಷಿಕ ದೇಶವೆಂಬಂತೆ ಆಗಿದೆ. ರಷ್ಯಾದ ಇತಿಹಾಸದಲ್ಲಿ ಈ ಅಂಶವನ್ನು ನಾವು ಯಾವಾಗಲೂ ಗಣನೆಗೆ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Israel-Iran conflict: ಇಸ್ರೇಲ್‌ ದಾಳಿಯಲ್ಲಿ ಇರಾನ್‌ನ 3 ಪ್ರಮುಖ ಪರಮಾಣು ತಾಣಗಳು ಧ್ವಂಸ

ರಷ್ಯಾದ ಮಿತ್ರರ ಕಡೆಗೆ ನಿಷ್ಠೆ ಕಡಿಮೆ ಎಂದು ಟೀಕಿಸುವವರನ್ನು "ಪ್ರಚೋದಕರು" ಎಂದು ಕರೆದ ಪುಟಿನ್, ಅರಬ್ ರಾಷ್ಟ್ರಗಳು ಮತ್ತು ಇಸ್ಲಾಮಿಕ್ ದೇಶಗಳೊಂದಿಗೆ ರಷ್ಯಾಕ್ಕೆ ದೀರ್ಘಕಾಲದ ಸ್ನೇಹದ ಸಂಬಂಧವಿದೆ ಎಂದು ಒತ್ತಿ ಹೇಳಿದ್ದಾರೆ. ರಷ್ಯಾದ ಜನಸಂಖ್ಯೆಯ ಶೇ. 15ರಷ್ಟು ಮುಸ್ಲಿಮರಾಗಿದ್ದು, ರಷ್ಯಾ ಇಸ್ಲಾಮಿಕ್ ಸಹಕಾರ ಸಂಸ್ಥೆಯಲ್ಲಿ (OIC) ಪರಿವೀಕ್ಷಕನಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಮೆರಿಕವು 14,000 ಕೆಜಿಯ ಬಂಕರ್-ಬಸ್ಟರ್ ಬಾಂಬ್‌ಗಳನ್ನು ಬಳಸಿ, 'ಆಪರೇಷನ್ ಮಿಡ್‌ನೈಟ್ ಹ್ಯಾಮರ್' ಮೂಲಕ ಇರಾನ್‌ನ ಫೋರ್ಡೊ, ನತಾಂಜ್ ಮತ್ತು ಇಸ್ಫಹಾನ್ ಸೈಟ್‌ಗಳ ಮೇಲೆ ದಾಳಿ ನಡೆಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಯನ್ನು ಅದ್ಭುತ ಮಿಲಿಟರಿ ಯಶಸ್ಸು ಎಂದು ಬಣ್ಣಿಸಿ, ಇರಾನ್‌ನ ಪ್ರಮುಖ ಪರಮಾಣು ಸೌಲಭ್ಯಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್ ವಿರುದ್ಧ ಹಲವಾರು ಕ್ಷಿಪಣಿಗಳನ್ನು ಉಡಾಯಿಸಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಪ್ರತೀಕಾರ ತೆಗೆದುಕೊಳ್ಳದೆ ಶಾಂತಿ ಮಾತುಕತೆಗೆ ಮರಳುವುದಿಲ್ಲ ಎಂದಿದ್ದಾರೆ. ಇರಾನ್ ಈಗಾಗಲೇ ಮಾತುಕತೆಯಲ್ಲಿತ್ತು, ಆದರೆ ಅಮೆರಿಕ ಮತ್ತು ಇಸ್ರೇಲ್ ಮಾತುಕತೆಯನ್ನು ಭಗ್ನಗೊಳಿಸಿದವು ಎಂದು ಆರೋಪಿಸಿದ್ದಾರೆ. ಈ ಮೊದಲು ಪುಟಿನ್ ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದರು. ಆದರೆ ಟ್ರಂಪ್ ಈ ಪ್ರಸ್ತಾಪವನ್ನು ತಿರಸ್ಕರಿಸಿ, ಮೊದಲು ರಷ್ಯಾದ ಸಮಸ್ಯೆಯನ್ನು ಮಧ್ಯಸ್ಥಿಕೆ ಮಾಡಿ, ನಂತರ ಇದನ್ನು ಚಿಂತಿಸಿ ಎಂದಿದ್ದಾರೆ.