ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗ್ರಾಹಕರಿಗೆ ಈಗ ಬ್ಯಾಂಕಿನ ' ಸೈಬರ್ನೆಟ್ ' ಪ್ಲಾಟ್ಫಾರ್ಮ್ ಮೂಲಕ ಪಾವತಿ ಮಾಡುವ ಅವಕಾಶ

ಕರ್ನಾಟಕ ರಾಜ್ಯ ತೆರಿಗೆಗಳಿಗೆ ಪಾವತಿಗಳನ್ನು ಈಗ ಸೌತ್ ಇಂಡಿಯನ್ ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಮೂಲಕ ಮಾಡಬಹುದಾಗಿದೆ. ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಪೋರ್ಟಲ್ ಆದ ಸೈಬರ್ನೆಟ್ (SIBerNet), ಈಗ ಕರ್ನಾಟಕ ರಾಜ್ಯ ಖಜಾನೆಯ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ, ಖಜಾನೆ 2 ನೊಂದಿಗೆ ಏಕೀಕತಿಸಲ್ಪಟ್ಟಿದೆ.

ಕರ್ನಾಟಕ ರಾಜ್ಯ ಖಜಾನೆಯೊಂದಿಗೆ ಸೌತ್ ಇಂಡಿಯನ್ ಬ್ಯಾಂಕ್ ಸಂಯೋಜನೆ

Profile Ashok Nayak Jun 13, 2025 10:15 PM

ಕರ್ನಾಟಕ ರಾಜ್ಯ ತೆರಿಗೆಗಳಿಗೆ ಪಾವತಿಗಳನ್ನು ಈಗ ಸೌತ್ ಇಂಡಿಯನ್ ಬ್ಯಾಂಕಿನ ನೆಟ್ ಬ್ಯಾಂಕಿಂ ಗ್ ಮೂಲಕ ಮಾಡಬಹುದಾಗಿದೆ. ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಪೋರ್ಟಲ್ ಆದ ಸೈಬರ್ನೆಟ್ (SIBerNet), ಈಗ ಕರ್ನಾಟಕ ರಾಜ್ಯ ಖಜಾನೆಯ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ, ಖಜಾನೆ 2 ನೊಂದಿಗೆ ಏಕೀಕತಿಸಲ್ಪಟ್ಟಿದೆ.

ಖಜಾನೆ 2 ಕರ್ನಾಟಕ ರಾಜ್ಯದ ಸಮಗ್ರ ಇ-ಆಡಳಿತ ಉಪಕ್ರಮವಾಗಿದ್ದು, ಖಜಾನೆ ಕಾರ್ಯಗಳನ್ನು ಸುಗಮಗೊಳಿಸಲು, ಪಾರದರ್ಶಕತೆಯನ್ನು ಸುಧಾರಿಸಲು ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಈ ಏಕೀಕರಣದೊಂದಿಗೆ, ಸೌತ್ ಇಂಡಿಯನ್ ಬ್ಯಾಂಕಿನ ಗ್ರಾಹಕರು ಈಗ ತೆರಿಗೆ, ಪರವಾನಗಿ ಶುಲ್ಕಗಳು, ಫೈನ್ಗಳು ಮತ್ತು ದಂಡಗಳು ಸೇರಿದಂತೆ ರಾಜ್ಯ ಲೆವಿಗಳಿಗಾಗಿ ಬ್ಯಾಂಕಿನ ಆನ್ಲೈನ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ ಆಗಿರುವ ಸೈಬರ್ನೆಟ್ ಮೂಲಕ ಕರ್ನಾಟಕ ರಾಜ್ಯ ಖಜಾನೆಗೆ ಸುಲಭವಾಗಿ ಪಾವತಿಗಳನ್ನು ಮಾಡಬಹುದಾಗಿದೆ.

ಖಜಾನೆ 2 ರೊಂದಿಗಿನ ಏಕೀಕರಣವು ಸಾರ್ವಜನಿಕರಿಗೆ ಅನೇಕ ಪ್ರಯೋಜನಗಳನ್ನು ನೀಡುವು ದರೊಂದಿಗೆ ಹಲವಾರು ಸರ್ಕಾರಿ ಹಣಕಾಸು ವಹಿವಾಟುಗಳನ್ನು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸುತ್ತದೆ.

ಇದನ್ನೂ ಓದಿ: Federal Bank Recruitment 2025: ಫೆಡರಲ್‌ ಬ್ಯಾಂಕ್‌ನಲ್ಲಿದೆ ವಿವಿಧ ಹುದ್ದೆ; ಅಪ್ಲೈ ಮಾಡುವ ವಿಧಾನ ಇಲ್ಲಿದೆ

ಪ್ರಮುಖ ಸೇವೆಗಳಲ್ಲಿ ಕೆಳಕಂಡವುಗಳು ಸೇರಿವೆ:

● ಆನ್ಲೈನ್ ಚಲನ್ ರಚನೆ: ನಾಗರಿಕರು ಭೂ ಕಂದಾಯ, ತೆರಿಗೆಗಳು ಮತ್ತು ದಂಡಗಳು ಸೇರಿದಂತೆ ಸರ್ಕಾರಿ ಸೇವೆಗಳಿಗೆ ಆನ್ಲೈನ್ನಲ್ಲಿ ಚಲನ್ಗಳನ್ನು ರಚಿಸಬಹುದು ಮತ್ತು ಪಾವತಿಸಬಹುದು. ಇದು ಖಜಾನೆ 2 ನಾಗರಿಕ ಪೋರ್ಟಲ್ನಲ್ಲಿ ಲಭ್ಯವಿದೆ.

● ಸರ್ಕಾರಿ ಶುಲ್ಕ ಮತ್ತು ತೆರಿಗೆಗಳ ಇ-ಪಾವತಿ: ಆಸ್ತಿ ತೆರಿಗೆ, ಅಬಕಾರಿ ಸುಂಕಗಳು ಮತ್ತು ಸಾರಿಗೆ ಶುಲ್ಕಗಳಂತಹ ಸೇವೆಗಳಿಗೆ ನೆಟ್ ಬ್ಯಾಂಕಿಂಗ್ ಬಳಸಿ ಸರ್ಕಾರಿ ಇಲಾಖೆಗಳಿಗೆ ನೇರ ಪಾವತಿ ಮಾಡ ಬಹುದಾಗಿದೆ.

● ಇಲಾಖಾ ಏಕೀಕರಣ: ಖಜಾನೆ 2 ಅನ್ನು ಸಾರಿಗೆ, ಕಂದಾಯ ಮತ್ತು ಶಿಕ್ಷಣದಂತಹ ಸರ್ಕಾರಿ ಇಲಾಖೆಗಳು ತಮ್ಮ ಶುಲ್ಕ ಸಂಗ್ರಹ ಮತ್ತು ವಹಿವಾಟುಗಳಿಗಾಗಿ ವ್ಯಾಪಕವಾಗಿ ಬಳಸುತ್ತವೆ.

ಖಜಾನೆ 2 ರೊಂದಿಗಿನ ಏಕೀಕರಣದ ಪ್ರಮುಖ ಪ್ರಯೋಜನಗಳು:

● ಆನ್ಲೈನ್ ಪಾವತಿ ವ್ಯವಸ್ಥೆ: ವಿವಿಧ ರಾಜ್ಯ ಸರ್ಕಾರಿ ವಹಿವಾಟುಗಳಿಗೆ ಇ-ಪಾವತಿಗಳನ್ನು ಸುಗಮ ಗೊಳಿಸುತ್ತದೆ.

● ಖಜಾನೆ ಕೆಲಸಗಳ ಯಾಂತ್ರೀಕರಣ: ಮನುಷ್ಯರ ಕೆಲಸಗಳು ಮತ್ತು ಕಾಗದಪತ್ರಗಳನ್ನು ಕಡಿಮೆ ಮಾಡುವುದು.

● ಬ್ಯಾಂಕ್ಗಳೊಂದಿಗೆ ಏಕೀಕರಣ: ನೈಜ-ಸಮಯದ ವಹಿವಾಟುಗಳು ಮತ್ತು ಸಮನ್ವಯವನ್ನು ಸಾಧ್ಯವಾಗಿಸುತ್ತದೆ.

“ಸೌತ್ ಇಂಡಿಯನ್ ಬ್ಯಾಂಕಿನ ಎಸ್ಜಿಎಂ ಮತ್ತು ಶಾಖಾ ಬ್ಯಾಂಕಿಂಗ್ ಮುಖ್ಯಸ್ಥೆ ಶ್ರೀಮತಿ ಬಿಜಿ ಎಸ್ ಎಸ್ ಅಭಿವೃದ್ಧಿಯ ಕುರಿತು ಇನ್ನಷ್ಟು ವಿವರಿಸುತ್ತಾ, "ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ನಮ್ಮ ಬ್ಯಾಂಕಿಂಗ್ ಅನುಭವಗಳ ಸುಧಾರಣೆಯೊಂದಿಗೆ ನಾವು ಕರ್ನಾಟಕ ರಾಜ್ಯ ಖಜಾನೆಯೊಂದಿಗೆ ಪಾಲುದಾರಿಕೆ ಹೊಂದಲು ಹರ್ಷಿಸುತ್ತೇವೆ. ಬಳಕೆದಾರರು ಈಗ 'ಸೈಬರ್ನೆಟ್' ಮೂಲಕ ಕರ್ನಾಟಕ ರಾಜ್ಯದ ಲೆವಿಗಳ ಪಾವತಿಗಳನ್ನು ಸುರಕ್ಷಿತ ಮತ್ತು ಜಂಜಾಟ-ರಹಿತವಾಗಿ ಮಾಡಬಹುದಾಗಿದೆ" ಎಂದು ಹೇಳಿದರು.