ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಬೇಸತ್ತ ಉದ್ಯಮಿಯಿಂದ 1 ಕೋಟಿ ರೂ. ಆಫರ್‌! ಪೋಸ್ಟ್‌ ವೈರಲ್‌

ಈಸ್‌ ಮೈ ಟ್ರಿಪ್‌ನ ಸಹ-ಸಂಸ್ಥಾಪಕ ಪ್ರಶಾಂತ್ ಪಿಟ್ಟಿ, ಬೆಂಗಳೂರಿನ ಟ್ರಾಫಿಕ್ ಜಾಮ್‌ ಸಮಸ್ಯೆಗಳನ್ನು ಪರಿಹರಿಸಲು 1 ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.ನೆಟ್ಟಿಗರು ಅವರನ್ನು ಹೊಗಳಿದ್ದಾರೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಬೇಸತ್ತ ಉದ್ಯಮಿಯಿಂದ 1 ಕೋಟಿ ರೂ. ಆಫರ್‌!

Profile pavithra Jul 15, 2025 4:38 PM

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಅಲ್ಲಿನ ನಿವಾಸಿಗಳಿಗೆ ಒಂದು ತಲೆನೋವಾಗಿದೆ. ದಿನೇ ದಿನೇ ಟ್ರಾಫಿಕ್ ಹೆಚ್ಚಾಗುತ್ತಿದ್ದರಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ಹೋಗುವ ಉದ್ಯೋಗಸ್ಥರು ಪರದಾಡುವಂತಾಗಿದೆ. ಹೀಗಿರುವಾಗ ಇತ್ತೀಚೆಗೆ ಉದ್ಯಮಿ ಒಬ್ಬರು ಈ ಟ್ರಾಫಿಕ್ ಸಮಸ್ಯೆಗಳನ್ನು ಸರಿಪಡಿಸಲು ಒಂದು ಘೋಷಣೆಯನ್ನು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಈಸ್‌ಮೈಟ್ರಿಪ್‌ನ ಸಹ-ಸಂಸ್ಥಾಪಕ ಪ್ರಶಾಂತ್ ಪಿಟ್ಟಿ, ಬೆಂಗಳೂರಿನ ಟ್ರಾಫಿಕ್ ಜಾಮ್‌ ಸಮಸ್ಯೆಗಳನ್ನು ಪರಿಹರಿಸಲು 1 ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.

ಕೃತಕ ಬುದ್ಧಿಮತ್ತೆ(ಎಐ), ಗೂಗಲ್ ನಕ್ಷೆಗಳ ಡೇಟಾ ಮತ್ತು ಸೆಟಲೈಟ್‌ ಚಿತ್ರಣವನ್ನು ಬಳಸಿಕೊಂಡು ಬೆಂಗಳೂರಿನ ಪ್ರಮುಖ ಟ್ರಾಫಿಕ್ ಪಾಯಿಂಟ್‌ಗಳನ್ನು ಗುರುತಿಸಿ ಪರಿಹರಿಸಲು 1 ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರ ಗಮನಸೆಳೆದು ವೈರಲ್(Viral Video) ಆಗಿದೆ.

ಶನಿವಾರ(ಜುಲೈ 12) ರಾತ್ರಿ ಕೇವಲ 11 ಕಿಲೋಮೀಟರ್ ಕ್ರಮಿಸಲು ಎರಡು ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿಕೊಂಡ ನಂತರ ಪಿಟ್ಟಿ ಈ ಯೋಜನೆಯನ್ನು ಕೈಗೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ, ಪಿಟ್ಟಿ ಟ್ರಾಫಿಕ್ ಜಾಮ್‍ ನಡುವೆ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕಳೆದಾಗ ತಮಗಾದ ಅನುಭವವನ್ನು ವಿವರಿಸಿದ್ದಾರೆ.



ತಮ್ಮ ಉಪಕ್ರಮ ಮತ್ತು ಯೋಜನೆಯನ್ನು ಹಂಚಿಕೊಂಡ ಪಿಟ್ಟಿ, ಏಪ್ರಿಲ್ 2025 ರಲ್ಲಿ, ಗೂಗಲ್ ನಕ್ಷೆಗಳು "ರಸ್ತೆ ನಿರ್ವಹಣಾ ಒಳನೋಟ"ವನ್ನು ಹಂಚಿಕೊಳ್ಳಲು ಶುರುಮಾಡಿದವು. ಇದು ಬಿಗ್‍ಕ್ವರಿ ಮೂಲಕ ನಗರ ಮಟ್ಟದ ಸಂಚಾರ ಡೇಟಾವನ್ನು ಒದಗಿಸುತ್ತದೆ. ಈ ಡೇಟಾವನ್ನು ಬಳಸಿಕೊಂಡು, ಬೆಂಗಳೂರಿನ ಎಲ್ಲಾ ದಟ್ಟಣೆಯ ಸ್ಥಳಗಳನ್ನು ನಕ್ಷೆ ಮಾಡಲು ಮತ್ತು ಅವು ಅಡಚಣೆಗಳಾಗುವ ನಿರ್ದಿಷ್ಟ ಸಮಯವನ್ನು ಗುರುತಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಇದು ಸಂಚಾರ ಇಲಾಖೆಯು ಆ ಪ್ರದೇಶಗಳಲ್ಲಿ ನಿರ್ದಿಷ್ಟವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಹಾಗಾಗಿ ಈ ಯೋಜನೆಗೆ 1-2 ಹಿರಿಯ ML/AI ಎಂಜಿನಿಯರ್‌ಗಳಿಗೆ ಹಣಕಾಸು ಒದಗಿಸುವ ಮೂಲಕ 1 ಕೋಟಿ ರೂ. ಖರ್ಚು ಮಾಡಲು ತಾನು ಸಿದ್ಧನಿದ್ದೇನೆ. ಮತ್ತು Google Maps API ಕರೆಗಳು, ಉಪಗ್ರಹ ಚಿತ್ರಣ ಮತ್ತು GPU ಗಳನ್ನು ಬಳಸಲು ಬಜೆಟ್ ಒದಗಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಆದರೆ ಈ ಯೋಜನಯು ಯಶಸ್ವಿಯಾಗಲು ಅಧಿಕಾರಿಗಳ ಸಹಕಾರ ಬೇಕಾಗಿದೆ. ಹಾಗಾಗಿ ಪಿಟ್ಟಿ ಅವರು ಬೆಂಗಳೂರು ಸಂಚಾರ ಪೊಲೀಸರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಮ್ಮ ಕಚ್ಚಾ ಡೇಟಾ ಫೀಡ್‌ಗಳು ಅಥವಾ API ಗಳನ್ನು ತೆರೆಯಲು ಮತ್ತು ಯೋಜನೆಯಿಂದ ಸಿಗುವ ಒಳನೋಟಗಳ ಮೇಲೆ ಕಾರ್ಯನಿರ್ವಹಿಸಲು ಅಧಿಕೃತ ತಂಡವನ್ನು ನೇಮಿಸಲು ಕರೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಆನೆ ಮರಿ ಡೆಲಿವರಿಗೆ 2 ಗಂಟೆ ರೈಲು ಸಂಚಾರ ಬಂದ್; ಇಲ್ಲಿದೆ ವೈರಲ್ ವಿಡಿಯೋ!

ಬೆಂಗಳೂರಿನ ಟ್ರಾಫಿಕ್ ಜಾಮ್ ಬಗ್ಗೆ ಪಿಟ್ಟಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದ್ದು, ಈ ಪೋಸ್ಟ್ 4,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು ನೂರಾರು ಕಾಮೆಂಟ್‌ಗಳನ್ನು ಗಳಿಸಿದೆ. ಹೆಚ್ಚಿನವರು ಈ ಉಪಕ್ರಮವನ್ನು ಹೊಗಳಿದರೆ, ಇತರರು ಅದನ್ನು ಕಾರ್ಯಗತಗೊಳಿಸುವ ಪ್ರಾಯೋಗಿಕ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ.