ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sudarshan Rangaprasad: ಹೊಸ ಮನೆಗೆ ಕಾಲಿಟ್ಟ ಭಾಗ್ಯ ಲಕ್ಷ್ಮೀ ನಟ ಸುದರ್ಶನ್ ರಂಗಪ್ರಸಾದ್

ನಟ ಸುದರ್ಶನ್ ರಂಗಪ್ರಸಾದ್ ಹಾಗೂ ಅವರ ಪತ್ನಿ ನಟಿ ಸಂಗೀತಾ ಭಟ್ ಗೃಹಪ್ರವೇಶ ಮಾಡಿದ್ದಾರೆ. ಈ ದಂಪತಿ ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಂಡಿದೆ. ಸ್ವಂತ ಮನೆಯೊಂದನ್ನು ಮಾಡಿಕೊಳ್ಳಬೇಕು ಎಂಬುದು ಇವರ ಕನಸಾಗಿತ್ತು. ಇದೀಗ ಆ ಕನಸನ್ನು ನನಸು ಮಾಡಿಕೊಂಡಿದೆ ಈ ಜೋಡಿ.

ಹೊಸ ಮನೆಗೆ ಕಾಲಿಟ್ಟ ಭಾಗ್ಯ ಲಕ್ಷ್ಮೀ ನಟ ಸುದರ್ಶನ್

Sudarshan rangaprasad and Sangeetha bhat

Profile Vinay Bhat Jul 15, 2025 3:25 PM

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಭಾಗ್ಯ ಲಕ್ಷ್ಮೀ (Bhagya Lakshmi) ಧಾರಾವಾಹಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಇದರಲ್ಲಿ ಭಾಗ್ಯ ಗಂಡನ ಪಾತ್ರ ಮಾಡುವ ತಾಂಡವ್ ಮಿಂಚುತ್ತಿದ್ದಾರೆ. ಸದ್ಯ ಭಾಗ್ಯನಿಂದ ದೂರ ಆಗಿರುವ ಇವರದ್ದು ಒಂದುರೀತಿಯ ನೆಗೆಟಿವ್ ಶೇಡ್. ಇವರ ನಿಜ ನಾಮ ಸುದರ್ಶನ್ ರಂಗಪ್ರಸಾದ್. ರಂಗಭೂಮಿ ಕಲಾವುದರೂ ಆಗಿರುವ ಇವರು ಧಾರಾವಾಹಿ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಆದರೀಗ ಸೀರಿಯಲ್​ನಿಂದ ಆಚೆ ಹೊಸ ಮನೆಗೆ ಕಾಲಿಟ್ಟು ಸುದ್ದಿಯಾಗಿದ್ದಾರೆ.

ಹೌದು, ನಟ ಸುದರ್ಶನ್ ರಂಗಪ್ರಸಾದ್ ಹಾಗೂ ಅವರ ಪತ್ನಿ ನಟಿ ಸಂಗೀತಾ ಭಟ್ ಗೃಹಪ್ರವೇಶ ಮಾಡಿದ್ದಾರೆ. ಸಂಗೀತಾ ಭಟ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಈ ದಂಪತಿ ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಂಡಿದೆ. ಸ್ವಂತ ಮನೆಯೊಂದನ್ನು ಮಾಡಿಕೊಳ್ಳಬೇಕು ಎಂಬುದು ಇವರ ಕನಸಾಗಿತ್ತು. ಇದೀಗ ಆ ಕನಸನ್ನು ನನಸು ಮಾಡಿಕೊಂಡಿದೆ ಈ ಜೋಡಿ.

ಹೊಸ ಮನೆಗೆ sukhasa ಎಂದು ಹೆಸರಿಟ್ಟಿದ್ದಾರೆ. #SukhaSa ನಮಗೆ ಕನಸಿನ ಮನೆ. Su-ಸುದರ್ಶನ, Sukha ಎಂದರೆ ಆನಂದ/ಸಂತೋಷ, ‘SuCasa’ ಎಂದರೆ ನಿಮ್ಮ ಮನೆ, ಖಾಸ ಎಂದರೆ ಗೃಹ, ಆಸ ಎಂದರೆ ಆಶ್ರಯ, Sa-ಸಂಗೀತಾ. ನಾವು ಭರವಸೆ ನೀಡಿದಂತೆ, ನಮ್ಮ ಜೀವನದ ಅತ್ಯಂತ ಸಂತೋಷದಾಯಕ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಇದು ಒಂದು ದಂಪತಿಯಾಗಿ ನಮ್ಮ ಜೀವನದ ಅತಿದೊಡ್ಡ ಮೈಲಿಗಲ್ಲು ಆಗಿದ್ದು ಒಂದು ಸಾಧನೆ ಎಂದಿದ್ದಾರೆ ಸಂಗೀತಾ.

ನಿಮ್ಮೊಂದಿಗೆ ಈ ವಿಷಯವನ್ನು ಹಂಚಿಕೊಳ್ಳುವುದು ನಮಗೆ ಖುಷಿ ಕೊಡುವುದು. ನಿಮ್ಮೆಲ್ಲರಿಗೂ ಕೃತಜ್ಞತೆ ಹೇಳುತ್ತೇವೆ. ಎಲ್ಲ ಪ್ರಾರ್ಥನೆಗಳಿಗೆ, ಆಶೀರ್ವಾದಗಳಿಗೆ ಧನ್ಯವಾದಗಳು. ನಾವು ಒಟ್ಟಿಗೆ ಅನುಭವಿಸಲು ಎಲ್ಲ ಅದ್ಭುತ ನೆನಪುಗಳ ಭಾಗವಾಗಿರುವ ನಮ್ಮ ಕುಟುಂಬ, ಸ್ನೇಹಿತರು, ಪೋಷಕರಿಗೆ ಧನ್ಯವಾದಗಳು ಎಂದಿದ್ದಾರೆ.



ಇವರ ಗೃಹಪ್ರವೇಶದ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಹೊಸ ಫೋಟೋಗಳನ್ನು ನೋಡಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಸುದರ್ಶನ್ ರಂಗಪ್ರಸಾದ್ ಮತ್ತು ಸಂಗೀತಾ ಭಟ್ ಅವರು ಮದುವೆಯಾಗಿ 9 ವರ್ಷಗಳು ತುಂಬಿವೆ. ಇವರಿಬ್ಬರು ಪ್ರೀತಿಸಿ, ಆನಂತರ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು. ಈಗ ನಟರಾಗಿ ಹೆಸರು ಸಂಪಾದಿಸಿರುವ ಸುದರ್ಶನ್ ರಂಗಪ್ರಸಾದ್ ಅವರು ಅರವಣಿಪುರಂ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಅಲ್ಲದೆ ಈ ಸಿನಿಮಾದ ಮೂಲಕ ಸಂಗೀತಾ ಭಟ್ ಅವರು ಬಹುದಿನಗಳ ನಂತರ ನಟನೆಗೆ ಮರಳಿದ್ದಾರೆ.

Bhagya Lakshmi Serial: ಭಾಗ್ಯಾಳ ಒಳ್ಳೆತನ ಕಂಡು ಕೊನೆಗೂ ಬದಲಾದ ಆದೀಶ್ವರ್ ಕಾಮತ್