ಮಹಾರಾಜ ಟ್ರೋಫಿ ಹರಾಜಿನಲ್ಲಿ ಎಲ್ಲ 6 ತಂಡಗಳು ಖರೀದಿಸಿದ ಆಟಗಾರರ ವಿವರ ಇಲ್ಲಿದೆ
Maharaja Trophy 2025: ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅನ್‌ಸೋಲ್ಡ್ ಆದರು.ಮೈಸೂರು ವಾರಿಯರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಸಮಿತ್ ಏಳು ಪಂದ್ಯಗಳನ್ನು ಆಡಿ 11.71 ರ ಸರಾಸರಿಯಲ್ಲಿ ಕೇವಲ 82 ರನ್ ಗಳಿಸಿದರು. ಹೀಗಾಗಿ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿ ಮಾಡಲು ಮನಸ್ಸು ಮಾಡಲಿಲ್ಲ.


ಬೆಂಗಳೂರು: ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿ(Maharaja Trophy 2025) ಕೆಎಸ್ಸಿಎ ಟಿ20 ಟೂರ್ನಿಗೆ ಪೂರ್ವಭಾವಿಯಾಗಿ ಆಟಗಾರರ ಹರಾಜು ಪ್ರಕ್ರಿಯೆ(Maharaja Trophy Auction) ಮಂಗಳವಾರ ಖಾಸಗಿ ಹೋಟೆಲ್ ನಡೆಯಿತು. ಎಲ್ಲಾ 6 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿ ತಮ್ಮ ತಂಡಗಳನ್ನು ಭದ್ರಗೊಳಿಸಿವೆ. ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ 13.20 ಲಕ್ಷ ಮೊತ್ತ ಪಡೆದು ಹುಬ್ಬಳ್ಳಿ ಟೈಗರ್ಸ್ ತಂಡದ ಪಾಲಾದರು. ಅಭಿನವ್ ಮನೋಹರ್, ಅನುಭವಿ ಬ್ಯಾಟರ್ ಮನೀಷ್ ಪಾಂಡೆ ತಲಾ 12.20 ಲಕ್ಷ ಪಡೆದರು. ವಿದ್ವತ್ ಕಾವೇರಪ್ಪ 10.80 ಲಕ್ಷಕ್ಕೆ ಶಿವಮೊಗ್ಗ ಲಯನ್ಸ್, ವಿದ್ಯಾಧರ್ ಪಾಟೀಲ್ ಬೆಂಗಳೂರು ಬ್ಲಾಸ್ಟರ್ಸ್‌ನಿಂದ 8.40 ಲಕ್ಷಗಳನ್ನು ಪಡೆದರು.
ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಬಿಕರಿಯಾಗದೆ ನಿರಾಸೆ ಅನುಭವಿಸಿದರು. ಕಳೆದ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಸಮಿತ್ ಏಳು ಪಂದ್ಯಗಳನ್ನು ಆಡಿ 11.71 ರ ಸರಾಸರಿಯಲ್ಲಿ ಕೇವಲ 82 ರನ್ ಗಳಿಸಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಹೀಗಾಗಿ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿ ಮಾಡಲು ಮನಸ್ಸು ಮಾಡಲಿಲ್ಲ.
ಗರಿಷ್ಠ ಮೊತ್ತ ಪಡೆದ ಟಾಪ್-5 ಆಟಗಾರರು
ದೇವದತ್ ಪಡಿಕ್ಕಲ್-13.20 ಲಕ್ಷ
ಅಭಿನವ್ ಮನೋಹರ್-12.20 ಲಕ್ಷ
ಮನೀಷ್ ಪಾಂಡೆ-12.20 ಲಕ್ಷ
ವಿದ್ವತ್ ಕಾವೇರಪ್ಪ- 10.80 ಲಕ್ಷ
ವಿದ್ಯಾಧರ್ ಪಾಟೀಲ್-8.40 ಲಕ್ಷ
ಹರಾಜಿನ ಬಳಿಕ ಎಲ್ಲಾ ತಂಡಗಳು ಹೀಗಿವೆ
ಶಿವಮೊಗ್ಗ ಲಯನ್ಸ್: ಕೌಶಿಕ್ ವಿ, ಹಾರ್ದಿಕ್ ರಾಜ್, ಅವಿನಾಶ್ ಬಿ, ನಿಹಾಲ್ ಉಳ್ಳಾಲ್, ವಿದ್ವತ್ ಕಾವೇರಪ್ಪ, ಅನಿರುಧಾ ಜೋಶಿ, ಅನೀಶ್ವರ್ ಗೌತಮ್, ಧ್ರುವ ಪ್ರಭಾಕರ್, ಸಂಜಯ್ ಸಿ, ಆನಂದ್ ದೊಡ್ಡಮನಿ, ಸಾಹಿಲ್ ಶರ್ಮಾ, ಭರತ್ ಧುರಿ, ದೀಪಕ್ ದೇವಾಡಿಗ, ರೋಹಿತ್ ಕುಮಾರ್ ಕೆ, ತುಷಾರ್ ಸಿಂಗ್, ದರ್ಶನ್ ಎಂ.ಬಿ., ಮರಿಬಸವ ಸಿ.ಗೌಡ, ಸಿರೀಶ್ ಬಳಗಾರ.
ಮೈಸೂರು ವಾರಿಯರ್ಸ್: ಕರುಣ್ ನಾಯರ್, ಕಾರ್ತಿಕ್ ಸಿಎ, ಪ್ರಸಿದ್ಧ್ ಕೃಷ್ಣ, ಕಾರ್ತಿಕ್ ಎಸ್‌ಯು, ಮನೀಶ್ ಪಾಂಡೆ, ಗೌತಮ್ ಕೆ, ಯಶೋವರ್ಧನ್ ಪರಂತಪ್, ವೆಂಕಟೇಶ್ ಎಂ, ಹರ್ಷಿಲ್ ಧರ್ಮಾನಿ, ಲಂಕೇಶ್ ಕೆಎಸ್, ಕುಮಾರ್ ಎಲ್ ಆರ್, ಗೌತಮ್ ಮಿಶ್ರಾ, ಶಿಖರ್ ಶೆಟ್ಟಿ, ಸುಮಿತ್ ಕುಮಾರ್, ಧನುಷ್ ಗೌಡ, ಕುಶಾಲ್ ಎಂ ವಾಧ್ವಾನಿ, ಶರತ್ ಶ್ರೀನಿವಾಸ್, ಶರತ್.
ಮಂಗಳೂರು ಡ್ರಾಗನ್ಸ್: ಅಭಿಲಾಷ್ ಶೆಟ್ಟಿ, ಮ್ಯಾಕ್ನೀಲ್ ನೊರೊನ್ಹಾ, ಲೋಚನ್ ಎಸ್ ಗೌಡ, ಪಾರಸ್ ಗುರ್ಬಕ್ಸ್ ಆರ್ಯ, ಶರತ್ ಬಿಆರ್, ರೋನಿ ಮೋರ್, ಶ್ರೇಯಸ್ ಗೋಪಾಲ್, ಮೇಲು ಕ್ರಾಂತಿ ಕುಮಾರ್, ಸಚಿನ್ ಶಿಂಧೆ, ಅನೀಶ್ ಕೆವಿ, ತಿಪ್ಪಾ ರೆಡ್ಡಿ, ಆದಿತ್ಯ ನಾಯರ್, ಆದರ್ಶ್ ಪ್ರಜ್ವಲ್, ಅಭಿಷೇಕ್ ಪ್ರಭಾಕರ್, ಶಿವರಾಜ್ ಎಸ್.
ಹುಬ್ಬಳ್ಳಿ ಟೈಗರ್ಸ್: ಕೆ.ಸಿ.ಕಾರಿಯಪ್ಪ, ಶ್ರೀಜಿತ್ ಕೆ.ಎಲ್., ಕಾರ್ತಿಕೇಯ ಕೆ.ಪಿ., ಮಾನ್ವತ್ ಕುಮಾರ್ ಎಲ್., ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಮೊಹಮ್ಮದ್ ತಾಹಾ, ವಿಜಯರಾಜ್ ಬಿ, ಪ್ರಖರ್ ಚತುರ್ವೇದಿ, ಸಂಕಲ್ಪ್ ಎಸ್.ಎಸ್, ಸಮರ್ಥ್ ನಾಗರಾಜ್, ರಕ್ಷಿತ್ ಎಸ್, ನಿತಿನ್ ಎಸ್ ನಾಗರಾಜ, ಯಶ್ ರಾಜ್ ಪುಂಜಾ, ರಿತೇಶ್ ಎಲ್.
ಗುಲ್ಬರ್ಗಾ ಮಿಸ್ಟಿಕ್ಸ್: ವೈಶಾಕ್ ವಿಜಯ್‌ಕುಮಾರ್, ಲುವ್ನಿತ್ ಸಿಸೋಡಿಯಾ, ಪ್ರವಿಣ್ ದುಬೆ, ಸ್ಮರಣ್ ಆರ್, ಸಿದ್ಧತ್ ಕೆವಿ, ಮೋನಿಶ್ ರೆಡ್ಡಿ, ಹರ್ಷ ವರ್ಧನ್ ಖೂಬಾ, ಪೃಥ್ವಿರಾಜ್, ಲವಿಶ್ ಕೌಶಲ್, ಶೀತಲ್ ಕುಮಾರ್, ಜಾಸ್ಪರ್ ಇಜೆ, ಮೋಹಿತ್ ಬಿಎ, ಫೈಜಾನ್ ರೈಜ್, ಸೌರಬ್ ಎಂ ಮುತ್ತೂರ್, ಎಸ್‌ಜೆ ನಿಕಿನ್ ಬವನ್, ಯೂಸ್‌ನಿತ್ ಪವನ್, ಪ್ರಜ್ನಿತ್.
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್, ಶುಭಾಂಗ್ ಹೆಗ್ಡೆ, ನವೀನ್ ಎಂಜಿ, ಸೂರಜ್ ಅಹುಜಾ, ಎ ರೋಹನ್ ಪಾಟೀಲ್, ಚೇತನ್ ಎಲ್ಆರ್, ಮೊಹ್ಸಿನ್ ಖಾನ್, ವಿದ್ಯಾಧರ್ ಪಾಟೀಲ್, ಸಿದ್ಧಾರ್ಥ್ ಅಖಿಲ್. ಮಾಧವ್ ಪ್ರಕಾಶ್ ಬಜಾಜ್, ರೋಹನ್ ನವೀನ್, ಕೃತಿಕ್ ಕೃಷ್ಣ, ಅದ್ವಿತ್ ಎಂ ಶೆಟ್ಟಿ, ಭುವನ್ ಮೋಹನ್ ರಾಜು, ರೋಹನ್ ಎಂ ರಾಜು, ನಿರಂಜನ್ ನಾಯಕ್, ಪ್ರತೀಕ್ ಜೈನ್, ಇಶಾನ್ ಎಸ್.
ಇದನ್ನೂ ಓದಿ ಮಹಾರಾಜ ಟ್ರೋಫಿ ಆಟಗಾರರ ಹರಾಜು; ಭಾರೀ ಮೊತ್ತ ಪಡೆದ ಪಡಿಕ್ಕಲ್, ಅಭಿನವ್