ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maharaja Trophy Auction: ಅನ್‌ಸೋಲ್ಡ್‌ ಆದ ದ್ರಾವಿಡ್‌ ಪುತ್ರ ಸಮಿತ್

Maharaja Trophy KSCA T20 Auction: ಆರ್​ಸಿಬಿ ತಂಡದ ಐಪಿಎಲ್​ ಗೆಲುವಿಗೆ ಉಪಯುಕ್ತ ಕೊಡುಗೆ ನೀಡಿದ್ದ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್(Devdutt Padikkal)​, ಕಳೆದ ಆವೃತ್ತಿಯಲ್ಲಿ ಸಿಕ್ಸರ್​ ಮಳೆ ಸುರಿಸಿದ್ದ ಅಭಿನವ್​ ಮನೋಹರ್​, ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ ದೊಡ್ಡ ಮೊತ್ತವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅನ್‌ಸೋಲ್ಡ್‌ ಆದ ದ್ರಾವಿಡ್‌ ಪುತ್ರ ಸಮಿತ್

Profile Abhilash BC Jul 15, 2025 5:38 PM

ಬೆಂಗಳೂರು: ಟೀಮ್​ ಇಂಡಿಯಾದ ದಿಗ್ಗಜ ಕ್ರಿಕೆಟಿಗ, ಮಾಜಿ ಕೋಚ್​ ರಾಹುಲ್ ದ್ರಾವಿಡ್ (Rahul Dravid) ಅವರ ಪುತ್ರ ಸಮಿತ್​ ದ್ರಾವಿಡ್​ (Samith Dravid) ಈ ಬಾರಿಯ ಮಹಾರಾಜ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ(Maharaja Trophy Auction) ಅನ್‌ಸೋಲ್ಡ್‌ ಆಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಸಮಿತ್‌ ಅವರನ್ನು ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆ ಮಾಡಿತ್ತು.

ಮಂಗಳವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಮಿತ್​ ದ್ರಾವಿಡ್ ಹೆಸರು ಬಂದರೂ ಕೂಡ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿ ಮಾಡಲು ಮನಸ್ಸು ಮಾಡಲಿಲ್ಲ. 2024 ರ ಋತುವಿನಲ್ಲಿ ಸಮಿತ್ ಏಳು ಪಂದ್ಯಗಳನ್ನು ಆಡಿದರು. 11.71 ರ ಸರಾಸರಿಯಲ್ಲಿ ಕೇವಲ 82 ರನ್ ಗಳಿಸಿದರು. ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ 24 ಎಸೆತಗಳಲ್ಲಿ 33 ರನ್ ಗಳಿಸಿದ್ದು ಅತ್ಯಧಿಕ ಸ್ಕೋರ್ ಆಗಿತ್ತು.

ಆರ್​ಸಿಬಿ ತಂಡದ ಐಪಿಎಲ್​ ಗೆಲುವಿಗೆ ಉಪಯುಕ್ತ ಕೊಡುಗೆ ನೀಡಿದ್ದ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್(Devdutt Padikkal)​, ಕಳೆದ ಆವೃತ್ತಿಯಲ್ಲಿ ಸಿಕ್ಸರ್​ ಮಳೆ ಸುರಿಸಿದ್ದ ಅಭಿನವ್​ ಮನೋಹರ್​, ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ ದೊಡ್ಡ ಮೊತ್ತವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದೇವದತ್ ಪಡಿಕ್ಕಲ್ ಅವರನ್ನು 13.20 ಲಕ್ಷ ನೀಡಿ ಹುಬ್ಬಳ್ಳಿ ಟೈಗರ್ಸ್ ತಂಡ ಖರೋದಿ ಮಾಡಿತು.

ಇದನ್ನೂ ಓದಿ IND vs ENG: ಲಾರ್ಡ್ಸ್‌ ಟೆಸ್ಟ್‌ನಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್‌ ವಿರುದ್ಧ ಆರ್‌ ಅಶ್ವಿನ್‌ ಕಿಡಿ!

ಮನೀಷ್​ ಪಾಂಡೆ ಮತ್ತು ಅಭಿನವ್​ ಮನೋಹರ್ 12.20 ಲಕ್ಷ ಪಡೆದು ಅತ್ಯಧಿಕ ಮೊತ್ತ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ದ್ವಿತೀಯ ಸ್ಥಾನ ಪಡೆದರು. ಅಭಿನವ್ ಹುಬ್ಬಳ್ಳಿ ತಂಡದ ಪಾಲಾದರೆ, ಪಾಂಡೆ ಹಾಲಿ ಚಾಂಪಿಯನ್​ ಮೈಸೂರು ವಾರಿಯರ್ಸ್ ತಂಡಕ್ಕೆ ಮಾರಾಟವಾಗಿದ್ದಾರೆ. ಕೆ. ಗೌತಮ್(4.20) ಕೂಡ ಮೈಸೂರು ತಂಡದ ಪಾಲಾದರು.

ವಿದ್ವತ್ ಕಾವೇರಪ್ಪ 10.80 ಲಕ್ಷಕ್ಕೆ ಶಿವಮೊಗ್ಗ ಲಯನ್ಸ್‌ಗೆ ಸೇರಿದರು. ವಿದ್ಯಾಧರ್ ಪಾಟೀಲ್ ಬೆಂಗಳೂರು ಬ್ಲಾಸ್ಟರ್ಸ್‌ನಿಂದ 8.40 ಲಕ್ಷಗಳನ್ನು ಪಡೆದರು. ಆಟಗಾರರನ್ನು ಎ, ಬಿ, ಸಿ ಹಾಗೂ ಡಿ ಎಂಬ 4 ಕೆಟಗರಿಯಲ್ಲಿ ವಿಂಗಡಿಸಲಾಗಿತ್ತು. ಹುಬ್ಬಳ್ಳಿ ಟೈಗರ್ಸ್​ ತಂಡ ಗರಿಷ್ಠ ಮೊತ್ತದೊಂದಿಗೆ ಹರಾಜಿನಲ್ಲಿ ಭಾಗವಹಿಸಿತ್ತು. ಅದರಂತೆ ಭಾರೀ ಮೊತ್ತ ನೀಡಿ ಇಬ್ಬರು ಸ್ಟಾರ್‌ ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತು.