S Jaishankar: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿ ಮಾಡಿದ ಎಸ್. ಜೈಶಂಕರ್
ಪೂರ್ವ ಲಡಾಖ್‌ನಲ್ಲಿ ಉದ್ಭವವಾದ ಗಡಿ ಬಿಕ್ಕಟ್ಟಿನ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಸುಮಾರು ಐದು ವರ್ಷಗಳ ಬಳಿಕ ಚೀನಾಗೆ (China) ವಿದೇಶಾಂಗ ಸಚಿವ ಸಚಿವ ಎಸ್ ಜೈಶಂಕರ್ (External Affairs Minister S Jaishankar) ಮಂಗಳವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Chinese President Xi Jinping) ಅವರನ್ನು ಭೇಟಿ ಮಾಡಿದ್ದಾರೆ.


ಬೀಜಿಂಗ್: ಪೂರ್ವ ಲಡಾಖ್‌ನಲ್ಲಿ ಉದ್ಭವವಾದ ಗಡಿ ಬಿಕ್ಕಟ್ಟಿನ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಸುಮಾರು ಐದು ವರ್ಷಗಳ ಬಳಿಕ ಚೀನಾಗೆ (China) ವಿದೇಶಾಂಗ ಸಚಿವ ಸಚಿವ ಎಸ್ ಜೈಶಂಕರ್ (External Affairs Minister S Jaishankar) ಮಂಗಳವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Chinese President Xi Jinping) ಅವರನ್ನು ಭೇಟಿ ಮಾಡಿದ್ದಾರೆ. 2020ರ ಗಾಲ್ವಾನ್ ಘರ್ಷಣೆಯ ಬಳಿಕ ಎಸ್. ಜೈಶಂಕರ್ ಇದೇ ಮೊದಲ ಬಾರಿಗೆ ಚೀನಾದ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾಕ್ಕೆ ಭೇಟಿ ನೀಡಿರುವ ಎಸ್. ಜೈಶಂಕರ್ ಅವರು ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಡುವೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದ ಅವರು, ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿನ ಇತ್ತೀಚಿನ ಬೆಳವಣಿಗೆಯ ಬಗ್ಗೆ ಮಾತುಕತೆ ನಡೆಸಿದರು ಎನ್ನಲಾಗಿದೆ.
Called on President Xi Jinping this morning in Beijing along with my fellow SCO Foreign Ministers.
— Dr. S. Jaishankar (@DrSJaishankar) July 15, 2025
Conveyed the greetings of President Droupadi Murmu & Prime Minister @narendramodi.
Apprised President Xi of the recent development of our bilateral ties. Value the guidance of… pic.twitter.com/tNfmEzpJGl
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬೀಜಿಂಗ್‌ನಲ್ಲಿ ಮಂಗಳವಾರ ಬೆಳಗ್ಗೆ ಚೀನಾ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದೆ. ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯಗಳನ್ನು ಅವರಿಗೆ ತಿಳಿಸಿದೆ. ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳ ಇತ್ತೀಚಿನ ಬೆಳವಣಿಗೆಯ ಬಗ್ಗೆ ಕ್ಸಿ ಅವರಿಗೆ ಮಾಹಿತಿ ನೀಡಿದೆ. ಆ ನಿಟ್ಟಿನಲ್ಲಿ ನಮ್ಮ ನಾಯಕರ ಮಾರ್ಗದರ್ಶನವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.
2020ರ ಜೂನ್ ತಿಂಗಳಲ್ಲಿ ನಡೆದ ಗಾಲ್ವಾನ್ ಕಣಿವೆ ಘರ್ಷಣೆಯ ಬಳಿಕ ಎರಡು ರಾಷ್ಟ್ರಗಳ ನಾಯಕರ ನಡುವೆ ನಡೆದ ಮೊದಲ ಸಭೆ ಇದಾಗಿದೆ. ಗಾಲ್ವಾನ್ ಕಣಿವೆ ಘರ್ಷಣೆಯ ಬಳಿಕ ಎರಡು ರಾಷ್ಟ್ರಗಳ ನಡುವೆ 2024ರ ಅಕ್ಟೋಬರ್ ತಿಂಗಳಲ್ಲಿ ಘರ್ಷಣೆಯ ಪ್ರಮುಖ ಭಾಗಗಳಾದ ಡೆಮ್ಚೋಕ್ ಮತ್ತು ಡೆಪ್ಸಾಂಗ್ ಅನ್ನು ಒಳಗೊಂಡಂತೆ ಬೇರ್ಪಡಿಕೆ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಬಳಿಕ ದ್ವಿಪಕ್ಷೀಯ ಸಂವಾದ ಪುನರ್ ಪ್ರಾರಂಭವಾಗಿದೆ.
ಗಡಿಯಲ್ಲಿ ಉಲ್ಬಣ ಕಡಿಮೆಯಾಗಬೇಕು
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಸೋಮವಾರ ಜೈಶಂಕರ್ ಮಾತುಕತೆ ನಡೆಸಿದ್ದು, ಈ ವೇಳೆ ಅವರು ಎರಡು ದೇಶಗಳು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC) ಉಲ್ಬಣವನ್ನು ಕಡಿಮೆ ಮಾಡುವತ್ತ ಮುಂದುವರಿಯಬೇಕು ಎಂದು ಹೇಳಿದರು.
ಖನಿಜಗಳ ಮೇಲಿನ ಚೀನಾದ ರಫ್ತು ನಿರ್ಬಂಧಗಳ ಬಗ್ಗೆ ಮಾತನಾಡಿದ ಜೈಶಂಕರ್, ನಿರ್ಬಂಧಿತ ವ್ಯಾಪಾರ ಕ್ರಮಗಳು ಮತ್ತು ರಸ್ತೆ ತಡೆಗಳನ್ನು ತಪ್ಪಿಸಲು ಕೇಂದ್ರ ಸಚಿವರು ಚೀನಾವನ್ನು ಒತ್ತಾಯಿಸಿದರು.
ಎರಡು ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬದಲಾಗಬಾರದು ಮತ್ತು ಸ್ಪರ್ಧೆಯು ಸಂಘರ್ಷವಾಗಬಾರದು ಎಂದು ಅವರು ಹೇಳಿದರು.
ಇದನ್ನೂ ಓದಿ: ಮಹಾರಾಜ ಟ್ರೋಫಿ ಹರಾಜಿನಲ್ಲಿ ಎಲ್ಲ 6 ತಂಡಗಳು ಖರೀದಿಸಿದ ಆಟಗಾರರ ವಿವರ ಇಲ್ಲಿದೆ
ಪ್ರಧಾನಿ ಮೋದಿ ಭೇಟಿ ಸಾಧ್ಯತೆ
ಕಳೆದ ಜೂನ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಸ್ ಸಿಒ ರಕ್ಷಣಾ ಸಚಿವರ ಸಭೆಯಲ್ಲಿ ಭಾಗಿಯಾಗಲು ಕ್ವಿಂಗ್‌ಡಾವೊಗೆ ಭೇಟಿ ನೀಡಿದ್ದರು. ಇದಾದ ಬಳಿಕ ಇದೀಗ ವಿದೇಶಾಂಗ ಸಚಿವ ಜೈಶಂಕರ್ ಅವರು ಚೀನಾಕ್ಕೆ ಭೇಟಿ ನೀಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಸ್ ಸಿಒ ನಾಯಕರ ಶೃಂಗಸಭೆಗಾಗಿ ಚೀನಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಆತಂಕ ಏನು?
ಭಾರತ ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಬಯಸುತ್ತಿರುವಾಗಲೇ ಅನೇಕ ಆತಂಕದ ಸನ್ನಿವೇಶಗಳು ನಿರ್ಮಾಣವಾಗುತ್ತಿವೆ. ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ, ಈ ವೇಳೆ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ಚೀನಾ, ದಲೈ ಲಾಮಾ ಉತ್ತರಾಧಿಕಾರದ ಸಮಸ್ಯೆಗಳು ಸಂಬಂಧ ಸುಧಾರಣೆಗೆ ಅಡ್ಡಿಯಾಗಿ ಪರಿಣಮಿಸುತ್ತಿದೆ.