Viral Video: 36 ವರ್ಷಗಳಿಂದ ಈತನ ಹೊಟ್ಟೆಯಲ್ಲಿ ಎರಡು ಮಕ್ಕಳು! ಏನಿದು ವಿಲಕ್ಷಣ ಘಟನೆ?
ಮಹಾರಾಷ್ಟ್ರದ ನಾಗ್ಪುರದ ಸಂಜು ಭಗತ್ ಎಂಬ ವ್ಯಕ್ತಿಯ ಹೊಟ್ಟೆ ಹುಟ್ಟಿದಾಗಿನಿಂದ ಊದಿಕೊಂಡಿದ್ದು, 36 ವರ್ಷಗಳ ನಂತರ ಹೊಟ್ಟೆ ಮತ್ತಷ್ಟು ದೊಡ್ಡದಾಗಿದೆ. ಇದರಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದಾಗ ವೈದ್ಯರು ಆತನ ಹೊಟ್ಟೆಯಲ್ಲಿ ಮಾನವ ಭ್ರೂಣವಿರುವುದನ್ನು ಕಂಡು ಶಾಕ್ ಆಗಿದ್ದಾರೆ.ಇದು ಒಂದು ಅಪರೂಪದ ವೈದ್ಯಕೀಯ ಸ್ಥಿತಿಯಾಗಿದ್ದು, ಇದಕ್ಕೆ ‘ಭ್ರೂಣದಲ್ಲಿ ಭ್ರೂಣ’ ಎಂದು ಕರೆಯಲಾಗುತ್ತದೆ. ಈ ಸುದ್ದಿ ಈಗ ವೈರಲ್ (Viral News)ಆಗಿದೆ.


ಮುಂಬೈ: ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವಿಚಿತ್ರ ಹಾಗೂ ಅಪರೂಪವೆನ್ನುವ ಘಟನೆಗಳು ವೈರಲ್ ಆಗುತ್ತಿರುತ್ತವೆ. ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂತಹ ಅಪರೂಪದ ಮತ್ತು ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.ವ್ಯಕ್ತಿಯೊಬ್ಬ 36 ವರ್ಷಗಳಿಗೂ ಹೆಚ್ಚು ಕಾಲ ಹೊಟ್ಟೆಯಲ್ಲಿ ಮಗುವನ್ನು ಹೊತ್ತುಕೊಂಡಿದ್ದ ಪ್ರಕರಣ ಈಗ ವೈರಲ್(Viral Video) ಆಗಿದ್ದು ವೈದ್ಯರು ಕೂಡ ಶಾಕ್ ಆಗಿದ್ದಾರೆ. ಈ ಅಪರೂಪದ ವೈದ್ಯಕೀಯ ಸ್ಥಿತಿಯನ್ನು ‘ಭ್ರೂಣದಲ್ಲಿ ಭ್ರೂಣ’ ಎಂದು ಕರೆಯಲಾಗುತ್ತದೆ.
ನಾಗ್ಪುರದ ಸಂಜು ಭಗತ್ ಎಂಬಾತ ಇಂತಹ ವಿಚಿತ್ರವಾದ ಗರ್ಭ ಧರಿಸಿದ ವ್ಯಕ್ತಿ. 1963 ರಲ್ಲಿ ನಾಗ್ಪುರದಲ್ಲಿ ಜನಿಸಿದ ಈತನ ಹೊಟ್ಟೆ ಬಾಲ್ಯದಿಂದಲೂ ಸಾಮಾನ್ಯ ಮಕ್ಕಳಿಗಿಂತ ಸ್ವಲ್ಪ ಊದಿಕೊಂಡಿತ್ತು. ಶುರುವಿನಲ್ಲಿ ಕುಟುಂಬದವರು ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಆದರೆ ಸಂಜು ಬೆಳೆದಂತೆ, ಅವನ ಹೊಟ್ಟೆ ಅಸಹಜವಾಗಿ ಬೆಳೆಯಿತು. ಅವನ ಹೊಟ್ಟೆ ತುಂಬಾ ದೊಡ್ಡದಾಗಿತ್ತು. ಜನರು ಅವನನ್ನು ಗರ್ಭಿಣಿ ಎಂದು ಕರೆಯಲು ಶುರುಮಾಡಿದ್ದರು.
1999ರ ಹೊತ್ತಿಗೆ , ಸಂಜು ಅವರ ಸ್ಥಿತಿ ಹದಗೆಡಲು ಶುರುವಾಯಿತು. ಅವನ ಹೊಟ್ಟೆಯ ಗಾತ್ರ ಹೆಚ್ಚಾದಂತೆ ಅವನ ಡಯಾಫ್ರಾಮ್ ಮೇಲೆ ಒತ್ತಡ ಬೀಳಲು ಶುರುವಾಯ್ತು. ಇದರಿಂದಾಗಿ ಅವನಿಗೆ ತೀವ್ರ ಉಸಿರಾಟದ ತೊಂದರೆ ಉಂಟಾಯಿತು. ಕೊನೆಗೆ ಅವನನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಯಿತು.
ವೈದ್ಯರು ಫುಲ್ ಶಾಕ್!
ಶುರುವಿನಲ್ಲಿ ಸಂಜವಿನ ಹೊಟ್ಟೆಯಲ್ಲಿ ದೊಡ್ಡ ಗೆಡ್ಡೆ ಇದೆ ಎಂದು ವೈದ್ಯರು ಭಾವಿಸಿದ್ದರು. ಅದು ವೇಗವಾಗಿ ಬೆಳೆಯುತ್ತಿದೆ ಎಂದುಕೊಂಡ ಅವರು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದ್ದರು. ಡಾ. ಅಜಯ್ ಮೆಹ್ತಾ ಮತ್ತು ಅವರ ತಂಡ ಸಂಜು ಅವನ ಶಸ್ತ್ರಚಿಕಿತ್ಸೆಯನ್ನು ಶುರುಮಾಡಿದಾಗ, ಒಳಗಿನ ದೃಶ್ಯವನ್ನು ನೋಡಿ ಶಾಕ್ ಆಗಿದ್ದಾರೆ. ಯಾಕೆಂದರೆ ಹೊಟ್ಟೆಯೊಳಗೆ ಯಾವುದೇ ಗೆಡ್ಡೆ ಇರಲಿಲ್ಲ, ಆದರೆ ಭಾಗಶಃ ಅಭಿವೃದ್ಧಿ ಹೊಂದಿದ ಮಾನವ ಭ್ರೂಣವಿತ್ತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಅವರು ಮೂಳೆಗಳು, ಕೂದಲು, ದವಡೆಗಳು ಮತ್ತು ಇತರ ದೇಹದ ಭಾಗಗಳನ್ನು ಒಳಗೊಂಡಂತೆ ಮಾನವ ದೇಹದ ಹಲವು ಭಾಗಗಳನ್ನು ಒಂದೊಂದಾಗಿ ತೆಗೆದುಹಾಕಿದರು. ಈ ದೃಶ್ಯವು ತುಂಬಾ ಅಸಾಮಾನ್ಯವಾಗಿದ್ದ ಕಾರಣ ವೈದ್ಯರು ಸಹ ಶಾಕ್ ಆಗಿದ್ದಾರೆ.
ಭ್ರೂಣದಲ್ಲಿ ಭ್ರೂಣ ಎಂದರೇನು?
ಭ್ರೂಣದಲ್ಲಿನ ಭ್ರೂಣವು ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿಯಾಗಿದೆ. ಏಕಜೈಗೋಟಿಕ್ ಅವಳಿ ಗರ್ಭಾವಸ್ಥೆಯಲ್ಲಿ, ಒಂದು ಭ್ರೂಣವು ಸಂಪೂರ್ಣವಾಗಿ ಬೆಳವಣಿಗೆಯಾಗುತ್ತದೆ. ಆದರೆ ಇನ್ನೊಂದು ಭ್ರೂಣವು ಬೆಳವಣಿಗೆಯಾಗದೆ ಉಳಿದು ಅದು ಬೆಳೆಯುತ್ತಿರುವ ಇನ್ನೊಂದು ಅವಳಿಯ ದೇಹದೊಳಗೆ ಸೇರಿಕೊಳ್ಳುತ್ತದೆ. ಈ ಬೆಳವಣಿಗೆಯಾಗದ ಭ್ರೂಣವು ಸಾಮಾನ್ಯವಾಗಿ ಬದುಕುಳಿದ ಮಗುವಿನ ಹೊಟ್ಟೆಯಲ್ಲಿ ಅಥವಾ ಕೆಲವೊಮ್ಮೆ ದೇಹದ ಇನ್ನೊಂದು ಭಾಗದಲ್ಲಿ ಕಂಡುಬರುತ್ತದೆ. ಹಾಗೂ ಇದು ತನ್ನದೇ ಆದ ಮೆದುಳು, ಹೃದಯ ಅಥವಾ ಇತರ ಪ್ರಮುಖ ಅಂಗಗಳನ್ನು ಹೊಂದಿರುವುದಿಲ್ಲ.
ಈ ಸುದ್ದಿಯನ್ನೂ ಓದಿ:Viral Video: ಪ್ಯಾರಾಗ್ಲೈಡಿಂಗ್ ವೇಳೆ ಭಾರೀ ಅವಘಡ; ಮೋಜಿನ ಆಟ ಪ್ರಾಣಕ್ಕೆ ಕುತ್ತಾಯ್ತು! ಶಾಕಿಂಗ್ ವಿಡಿಯೊ ಇಲ್ಲಿದೆ
36 ವರ್ಷಗಳ ಕಾಲ ಈ ಸ್ಥಿತಿಯೊಂದಿಗೆ ಬದುಕುಳಿದ ಸಂಜು ಭಗತ್ ಅವನ ಈ ಪ್ರಕರಣವು ವೈದ್ಯಕೀಯ ಜಗತ್ತನ್ನೇ ಬೆರಗಾಗುವಂತೆ ಮಾಡಿತು. ಈ ವಿದ್ಯಮಾನವು ವಿಜ್ಞಾನದ ನಿಗೂಢತೆಗಳಲ್ಲಿ ಒಂದು ಎಂದೇ ಹೇಳಬಹುದು. ಹೀಗಾಗಿ ಇದು ಮಾನವ ದೇಹ ಮತ್ತು ಅದರ ಸಂಕೀರ್ಣತೆಗಳ ಬಗ್ಗೆ ವಿಜ್ಞಾನಿಗಳಲ್ಲಿ ಕುತೂಹಲವನ್ನು ಮೂಡುವಂತೆ ಮಾಡಿದೆ. ಸಂಜುಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವನು ಚೇತರಿಸಿಕೊಂಡಿದ್ದಾನೆ ಎನ್ನಲಾಗಿದೆ.