IPS transfer: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ, 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ
IPS transfer: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳು ಆರೋಪಿಸಿದ್ದವು. ಇದೀಗ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದ್ದು, ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿಯೂ ವರ್ಗ ನಡೆದಿದೆ.


ಬೆಂಗಳೂರು: ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ಮತ್ತೊಂದು ಮೇಜರ್ ಸರ್ಜರಿಯನ್ನು ಕರ್ನಾಟಕ ಪೊಲೀಸ್ (Karnataka Police) ಇಲಾಖೆಯಲ್ಲಿ ಮಾಡಲಾಗಿದೆ. 34 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ (IPS Officer transfer) ಆದೇಶ ಹೊರಡಿಸಲಾಗಿದೆ. ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ನಾಲ್ಕಾರು ಜಿಲ್ಲೆಗಳ ಐಪಿಎಸ್ ಅಧಿಕಾರಿಗಳನ್ನು (IPS transfer) ಬದಲಾಯಿಸಲಾಗಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳು ಆರೋಪಿಸಿದ್ದವು. ಇದೀಗ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದ್ದು, ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿಯೂ ವರ್ಗ ನಡೆದಿದೆ.
ಯಾವ ಐಪಿಎಸ್ ಅಧಿಕಾರಿ, ಯಾವ ಹುದ್ದೆಗೆ ವರ್ಗವಾಗಿದ್ದಾರೆ ಎಂಬ ವಿವರ ಇಲ್ಲಿದೆ:
ಅಕ್ಷಯ್ ಮಚೀಂದ್ರ – ಡಿಸಿಪಿ, ಬೆಂಗಳೂರೂ ಕೇಂದ್ರ ವಿಭಾಗ
ಅಜಯ್ ಹಿಲೋರಿ – ಜಂಟಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ
ಪರಶುರಾಮ್ – ಡಿಸಿಪಿ, ವೈಟ್ ಫೀಲ್ಡ್ ವಿಭಾಗ
ಕಾರ್ತಿಕ್ ರೆಡ್ಡಿ – ಜಂಟಿ ಪೊಲೀಸ್ ಆಯುಕ್ತ, ಸಂಚಾರ ವಿಭಾಗ
ಅನೂಪ್ ಶೆಟ್ಟಿ – ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ, ಸಂಚಾರ
ಶಿವಪ್ರಕಾಶ್ ದೇವರಾಜು – ಲೋಕಾಯುಕ್ತ ಎಸ್ಪಿ, ಬೆಂಗಳೂರು
ಜಯಪ್ರಕಾಶ್ – ಬೆಂಗಳೂರು ಉತ್ತರ ಸಂಚಾರ ವಿಭಾಗ, ಡಿಸಿಪಿ
ಎಂ.ನಾರಾಯಣ್ – ಎಲೆಕ್ಟ್ರಾನಿಕ್ ಸಿಟಿ ವಿಭಾಗ, ಡಿಸಿಪಿ
ಅನಿತಾ.ಬಿ ಹದ್ದಣ್ಣನವರ್ – ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ
ಸೈದಲು ಅಡಾವತ್ – ಸಿಐಡಿ, ಎಸ್ಪಿ
ಬಾಬಾ ಸಾಬ್ ನ್ಯಾಮಗೌಡ – ಬೆಂಗಳೂರು ಉತ್ತರ ವಿಭಾಗ, ಡಿಸಿಪಿ
ನಾಗೇಶ್ – ಬೆಂಗಳೂರು ವಾಯುವ್ಯ ವಿಭಾಗ, ಡಿಸಿಪಿ
ಶ್ರೀಹರಿ ಬಾಬು – ಬೆಂಗಳೂರು ಸಿಸಿಬಿ ಡಿಸಿಪಿ
ಸೌಮ್ಯಲತಾ – ಸಿಎಆರ್ ಹೆಡ್ ಕ್ವಾರ್ಟರ್ಸ್, ಡಿಸಿಪಿ
ಎಂ.ಎನ್.ಅನುಚೇತ್ – ಡಿಐಜಿ ನೇಮಕಾತಿ ವಿಭಾಗ
ವರ್ತಿಕಾ ಕಟೀಯಾರ್ – ಬಳ್ಳಾರಿ ವಲಯ, ಡಿಐಜಿ
ಶಾಂತರಾಜು – ಎಸ್ಪಿ, ಗುಪ್ತಚರ ಇಲಾಖೆ
ಸಿರಿಗೌರಿ – ಎಸ್ಪಿ, ರಾಜ್ಯ ಅಪರಾಧ ದಾಖಲೆ ವಿಭಾಗ
ಸುಮನ್.ಡಿ ಪೆನ್ನೆಕರ್ – ಡಿಸಿಪಿ, ಇಂಟಲಿಜೆನ್ಸ್
ಸಿಮಿ ಮರೀಯ ಜಾರ್ಜ್ – ಡಿಸಿಪಿ, ದಕ್ಷಿಣ ವಿಭಾಗ ಸಂಚಾರ
ವೈ.ಅಮರನಾಥ್ – ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ KSRP
ಯಶೋಧ ವಟ್ಟಗೋಡಿ – ಎಸ್ಪಿ, ಹಾವೇರಿ
ಗುಂಜನ್ ಅರ್ಯಾ – ಎಸ್ಪಿ, ಧಾರವಾಡ
ಎಂ.ಗೋಪಾಲ್ – ಜಂಟಿ ನಿರ್ದೇಶಕ, ಎಫ್ಎಸ್ಎಲ್ ಬೆಂಗಳೂರು
ಸಿದ್ಧಾರ್ಥ ಗೋಯಲ್ – ಎಸ್ಪಿ, ಬಾಗಲಕೋಟೆ
ರೋಹನ್ ಜಗದೀಶ್ – ಎಸ್ಪಿ, ಗದಗ
ಶಿವಾಂಶು ರಜಪೂತ – ಎಸ್ಪಿ, ಕೆಜಿಎಫ್
ಜಿತೇಂದ್ರ ಕುಮಾರ್ – ಡಿಸಿಪಿ ಕಾನೂನು ಸುವ್ಯವಸ್ಥೆ, ಮಂಗಳೂರು ನಗರ
ಎಂ.ಎನ್.ದೀಪನ್ – ಎಸ್ಪಿ, ಉತ್ತರ ಕನ್ನಡ
ಎಸ್.ಜಾನವಿ – ಎಸ್ಪಿ, ವಿಜಯನಗರ
ಇದನ್ನೂ ಓದಿ: IPS officers Transfer: ಐವರು ಐಪಿಎಸ್ ಅಧಿಕಾರಿಗಳ ವರ್ಗ; ಗುಪ್ತಚರ ವಿಭಾಗದ ಎಡಿಜಿಪಿಯಾಗಿ ಎಸ್.ರವಿ ವರ್ಗಾವಣೆ