ಕಠಿಣ ಹೋರಾಟದ ಹೊರತಾಗಿಯೂ ಸೋತಿದ್ದಕ್ಕೆ ಕಣ್ಣೀರಿಟ್ಟ ಮೊಹಮ್ಮದ್ ಸಿರಾಜ್!
ಮೂರನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ ಕೈ ಚೆಲ್ಲಿಕೊಂಡಿತು. ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮೈದಾನದಲ್ಲಿ ಗೆಲುವಿಗಾಗಿ ಹೋರಾಟ ನಡೆಸಿದರೂ, ಕೊನೆಗೆ ವಿಕೆಟ್ ಒಪ್ಪಿಸಿ ಕಣ್ಣೀರಾಕಿದರು. ಈ ವೇಳೆ ಇಂಗ್ಲೆಂಡ್ ಆಟಗಾರರಾದ ಹ್ಯಾರಿ ಬ್ರೂಕ್, ಜೋ ರೂಟ್, ಬೆನ್ ಸ್ಟೋಕ್ಸ್ ಅವರು ಮುಂದೆ ಬಂದು ಸಿರಾಜ್‌ನ್ನು ಸಮಾಧಾನಪಡಿಸಿದರು.

ಭಾರತ ತಂಡದ ಸೋಲಿನ ಬಳಿಕ ಕಣ್ನೀರಿಟ್ಟ ಮೊಹಮ್ಮದ್ ಸಿರಾಜ್.

ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ(IND vs ENG) ಭಾರತ ತಂಡ ಸೋಲು ಅನುಭವಿಸಿತು. ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಮೈದಾನದಲ್ಲಿ ಗೆಲುವಿಗಾಗಿ ಹೋರಾಟ ನಡೆಸಿದರೂ, ಕೊನೆಗೆ ವಿಕೆಟ್ ಒಪ್ಪಿಸಿ ಕಣ್ಣೀರಾಕುತ್ತಾ ಪೆವಿಲಿಯನತ್ತ ಹೆಜ್ಜೆ ಹಾಕಿದರು. ಸಿರಾಜ್ ವಿಕೆಟ್ ಪತನದಿಂದ ಇಂಗ್ಲೆಂಡ್ 22 ರನ್‌ಗಳಿಂದ ಗೆದ್ದು ಬೀಗಿತು. ಜಡೇಜಾ ಜೊತೆ ಕಠಿಣ ಹೋರಾಟ ನಡೆಸಿದ್ದ ಸಿರಾಜ್ ಕೊನೆಗೆ ಔಟಾಗಿದ್ದು, ಅಭಿಮಾನಗಳಿಗೆ ನಿರಾಸೆಯನ್ನುಂಟು ಮಾಡಿತು. ರವೀಂದ್ರ ಜಡೇಜಾ (Ravindra Jadeja) ಕೊನೆಯ ಹೋರಾಟ ನಡೆಸಿದರು. ಆದರೆ, ಮತ್ತೊಂದು ತುದಿಯಲ್ಲಿ ಯಾರೂ ಸಾಥ್ ನೀಡದ ಕಾರಣ ಭಾರತ ಕೊನೆಗೆ ಸೋಲು ಅನುಭವಿಸಬೇಕಾಯಿತು.
ಪಂದ್ಯ ಮುಗಿದ ಬಳಿಕ ಭಾರತದ ಮಾಜಿ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ 1999 ರ ಚೆನ್ನೈ ಟೆಸ್ಟ್‌ಗೆ ಈ ಪಂದ್ಯವನ್ನು ಹೋಲಿಸಿದರು, ಇದರಲ್ಲಿ ಅಂದು ಭಾರತ ತಂಡ 12 ರನ್‌ಗಳಿಂದ ಸೋಲು ಅನುಭವಿಸಿತ್ತು. ಚೆನ್ನೈನಲ್ಲಿ ನಡೆದಿದ್ದ ಈ ಟೆಸ್ಟ್‌ನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೋರಾಟ ನಡೆಸಿದ್ದರು. ಜಾವಗಲ್ ಶ್ರೀನಾಥ್ ಅವರನ್ನು ಸಕ್ಲೇನ್ ಮುಷ್ತಾಕ್ ಬೌಲ್ಡ್ ಮಾಡಿದ್ದರು. ಆ ಮೂಲಕ ಭಾರತ ತಂಡ ಗೆಲುವಿನ ಸನಿಹ ಬಂದು ಸೋಲು ಅನುಭವಿಸಿತ್ತು.
IND vs ENG: ಜಡೇಜಾ ಏಕಾಂಗಿ ಹೋರಾಟ ವ್ಯರ್ಥ, ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಮಣಿದ ಭಾರತ!
ಭಾರತ ತಂಡದ ಅಗ್ರ ಕ್ರಮಾಂಕ ಬ್ಯಾಟ್ಸ್‌ಮನ್‌ಗಳ ವೈಪಲ್ಯದಿಂದಾಗಿ 58 ರನ್‌ಗಳಿಗೆ 4 ಪ್ರಮುಖ ವಿಕೆಟ್ ಕಳೆದುಕೊಂಡಾಗಲೇ ಬಹುತೇಕ ಸೋಲಿನ ಸುಳಿಗೆ ಸಿಕ್ಕಿತ್ತು. ನಾಲ್ಕನೇ ದಿನದ ಮುಕ್ತಾಯದ ವೇಳೆಗೆ 33 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಕನ್ನಡಿಗ ರಾಹುಲ್ ಮೇಲೆ ಭರವಸೆ ಇತ್ತು. ಜೊತೆಗೆ ರಿಷಭ್ ಪಂತ್ ಕೂಡ ಮೈದಾನಕ್ಕಿಳಿದಿದ್ದರು. ಹಾಗಾಗಿ ಗೆಲುವಿನ ಆಸೆ ಚಿಗುರಿತ್ತು. ಆದರೆ ಇಂಗ್ಲೆಂಡ್ ಬೌಲಿಂಗ್ ದಾಳಿಯ ವಿರುದ್ದ ಹೋರಾಡಿ ತಂಡವನ್ನು ಗೆಲುವಿ ದಡ ಸೇರಿಸಲು ಈ ಇಬ್ಬರು ಆಟಗಾರರು ವಿಫಲರಾದರು.
IND vs ENG: ಲಾರ್ಡ್ಸ್ ಟೆಸ್ಟ್‌ನಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್ ವಿರುದ್ಧ ಆರ್ ಅಶ್ವಿನ್ ಕಿಡಿ!
ಇದಾದ ನಂತರ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಜೋಫ್ರಾ ಆರ್ಚರ್‌ಗೆ ಕ್ಯಾಚ್ ಕೊಟ್ಟರು. ಈ ಮೂಲಕ ಭಾರತ ತಂಡ 82ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಜಡೇಜಾ ಮತ್ತು ನಿತೀಶ್ ಕುಮಾರ್ 30 ರನ್‌ಗಳ ಜೊತೆಯಾಟವನ್ನು ಕ್ರಿಸ್ ವೋಕ್ಸ್ ಮರಿದು ಇಂಗ್ಲೆಂಡ್ ತಂಡಕ್ಕೆ ಗೆಲುವಿನ ಹಾದಿ ಸುಗಮವಾಗಿಸಿದರು. ಇನ್ನು ಎರಡನೇ ಸೆಷನ್ ಹೊತ್ತಿಗೆ ಭಾರತ ತಂಡ, 112 ರನಗಳಿಗೆ 8 ವಿಕೆಟ್ ಕಳೆದುಕೊಂಡು ಗೆಲುವಿನ ಆಸೆಯನ್ನು ಕಳೆದುಕೊಂಡಿತ್ತು. ನಂತರ ಬುಮ್ರಾ ಜೊತೆಗೆ ಜಡೇಜಾ 35 ರನ್ ಜೊತೆಯಾಟ ನಡೆಸಿದ್ದರು. ಆದರೆ ಬುಮ್ರಾ ಕೂಡ ಬೆನ್ ಸ್ಟೋಕ್ಸ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇದಾದ ಬಳಿಕ ಮೈದಾನಕ್ಕೆ ಬಂದ ಸಿರಾಜ್, 30ಎಸೆತಗಳನ್ನು ಎದುರಿಸಿ ಜಡೇಜಾಗೆ ಸಾಥ್ ನೀಡಿದರು. ಆದರೆ 75ನೇ ಓವರ್‌ನಲ್ಲಿ ಶೋಯೆಬ್ ಬಶೀರ್ ಎಸೆದ ಚೆಂಡು ಬ್ಯಾಟ್ ಸ್ಪರ್ಶಿಸಿ ಸ್ಟಂಪ್‌ಗೆ ಬಡಿದ ಪಾರಿಣಾಮ ಭಾರತ ಸೋಲು ಕಂಡಿತು.
Mohammed Siraj in Tears 😲 as England 🏴 beat India 🇮🇳 by 22 runs at Lord's 🏟️
— Richard Kettleborough (@RichKettle07) July 14, 2025
~ Now, tell me honestly, who is responsible for India's defeat today 🤔 #INDvsENG pic.twitter.com/5KHSyOUCQC
ಈ ವೇಳೆ ಭಾವುಕರಾದ ಸಿರಾಜ್ ಕಣ್ಣಲ್ಲಿ ನೀರು ಬಂತು. ಇಂಗ್ಲೆಂಡ್ ಆಟಗಾರರು ಹ್ಯಾರಿ ಬ್ರೂಕ್, ಜೋ ರೂಟ್, ಬೆನ್ ಸ್ಟೋಕ್ಸ್ ಅವರು ಮುಂದೆ ಬಂದು ಸಿರಾಜ್‌ನ್ನು ಸಮಾಧಾನಪಡಿಸಿದರು.
ರವೀಂದ್ರ ಜಡೇಜಾ ಏಕಾಂಗಿ ಹೋರಾಟ
ಭಾರತ ತಂಡದ ಪರ ಕೊನೆಯವರೆಗೂ ಕಠಿಣ ಹೋರಾಟ ನಡೆಸಿದ್ದ ರವೀಂದ್ರ ಜಡೇಜಾಗೆ ಇನ್ನೊಂದು ತುದಿಯಲ್ಲಿ ಬೇರೆ ಯಾರೂ ಸಾಥ್ ನೀಡಲಿಲ್ಲ. ಅವರು ಅಜೇಯ 61 ರನ್ ಗಳಿಸಿ ಭಾರತ ತಂಡಕ್ಕೆ ಗೆಲುವಿನ ಭರವಸೆಯನ್ನು ಮೂಡಿಸಿದ್ದರು. ಆದರೆ, ಮತ್ತೊಂದು ತುದಿಯಲ್ಲಿನ ಬೆಂಬಲದ ಕೊರತೆಯಿಂದ ಟೀಮ್ ಇಂಡಿಯಾ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿನ ಸೋಲಿನಿಂದ ಭಾರತ ತಂಡ ಮೂರು ಪಂದ್ಯಗಳ ಅಂತ್ಯಕ್ಕೆ ಟೆಸ್ಟ್ ಸರಣಿಯಲ್ಲಿ 1-2 ಹಿನ್ನಡೆ ಅನುಭವಿಸಿದೆ.