ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake Currency: ₹500 ನೋಟುಗಳೇ ನಕಲಿ ನೋಟು ತಯಾರಕರ ಟಾರ್ಗೆಟ್!

2016ರ ನವೆಂಬರ್‌ನಲ್ಲಿ ಪರಿಚಯಿಸಲಾದ ಹೊಸ ₹500 ನೋಟು, ನಕಲಿ ನೋಟು ತಯಾರಕರ ಪ್ರಮುಖ ಟಾರ್ಗೆಟ್‌ ಆಗಿದೆ. 2024-25ರಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆಯಾದ ಒಟ್ಟು 2.17 ಲಕ್ಷ ನಕಲಿ ಭಾರತೀಯ ಕರೆನ್ಸಿ ನೋಟುಗಳ ಪೈಕಿ 54% (1.17 ಲಕ್ಷ) ಹೊಸ ಮಹಾತ್ಮ ಗಾಂಧಿ ಸರಣಿಯ ₹500 ನೋಟುಗಳಾಗಿವೆ ಎಂದು ಅಧಿಕೃತ ಡೇಟಾ ತಿಳಿಸಿದೆ.

₹500 ನೋಟುಗಳೇ ನಕಲಿ ನೋಟು ತಯಾರಕರ ಟಾರ್ಗೆಟ್!

Profile Sushmitha Jain Jul 14, 2025 2:31 PM

ನವದೆಹಲಿ: 2016ರ ನವೆಂಬರ್‌ನಲ್ಲಿ ಪರಿಚಯಿಸಲಾದ ಹೊಸ ₹500 ನೋಟು, ನಕಲಿ ನೋಟು (Fake Currency) ತಯಾರಕರ ಪ್ರಮುಖ ಟಾರ್ಗೆಟ್‌ ಆಗಿದೆ. 2024-25ರಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ (Banking System) ಪತ್ತೆಯಾದ ಒಟ್ಟು 2.17 ಲಕ್ಷ ನಕಲಿ ಭಾರತೀಯ ಕರೆನ್ಸಿ ನೋಟುಗಳ (FICN) ಪೈಕಿ 54% (1.17 ಲಕ್ಷ) ಹೊಸ ಮಹಾತ್ಮ ಗಾಂಧಿ ಸರಣಿಯ (Mahatma Gandhi Series) ₹500 ನೋಟುಗಳಾಗಿವೆ ಎಂದು ಅಧಿಕೃತ ಡೇಟಾ ತಿಳಿಸಿದೆ.

ಒಟ್ಟು ನಕಲಿ ನೋಟುಗಳ ಪೈಕಿ 4.7% (10,255) ರಿಸರ್ವ್ ಬ್ಯಾಂಕ್‌ನಲ್ಲಿ, 95.3% (2.07 ಲಕ್ಷ) ಇತರ ಬ್ಯಾಂಕುಗಳಲ್ಲಿ ಪತ್ತೆಯಾಗಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದತ್ತಾಂಶ ವಿಶ್ಲೇಷಣೆಯ ಪ್ರಕಾರ, ಪತ್ತೆಯಾದ ಹೊಸ ₹500 ನಕಲಿ ನೋಟುಗಳು ಮೊದಲ ಬಾರಿಗೆ ಒಂದು ಲಕ್ಷವನ್ನು ದಾಟಿವೆ. ಭಾರತದಲ್ಲಿ ಪ್ರಸ್ತುತ ₹10, ₹20, ₹50, ₹100, ₹200, ಮತ್ತು ₹500 ನೋಟುಗಳು ಚಲಾವಣೆಯಲ್ಲಿವೆ.

RBI ಡೇಟಾ ಪ್ರಕಾರ, 2024-25ರಲ್ಲಿ ₹10, ₹20, ₹50, ₹100, ಮತ್ತು ₹2,000 ನಕಲಿ ನೋಟುಗಳ ಪತ್ತೆ ಕಡಿಮೆಯಾಗಿದ್ದರೆ, ₹200 ಮತ್ತು ₹500 ನಕಲಿ ನೋಟುಗಳ ಪತ್ತೆ ಕ್ರಮವಾಗಿ 13.9% ಮತ್ತು 37.3% ಹೆಚ್ಚಾಗಿದೆ. 2016ರ ನೋಟು ಬ್ಯಾನ್‌ಗೆ ಮುನ್ನ ₹500ನಕಲಿ ನೋಟು ತಯಾರಿಕೆಯಲ್ಲಿ ಮುಂಚೂಣಿಯಲ್ಲಿತ್ತು. ನೋಟು ಬ್ಯಾನ್ ಬಳಿಕ ನಕಲಿ ನೋಟು ತಯಾರಕರು ಹೊಸ ₹500 ನೋಟಿನತ್ತ ಗಮನ ಹರಿಸಿದ್ದಾರೆ. 2016-17ರಲ್ಲಿ ಹಳೆಯ ₹500 ನಕಲಿ ನೋಟುಗಳ ಪತ್ತೆ 3.17 ಲಕ್ಷವಾಗಿತ್ತು, ಆದರೆ 2024-25ರಲ್ಲಿ ಹೊಸ ₹500 ನೋಟುಗಳದು 1.17 ಲಕ್ಷವಾಗಿದೆ.

ಈ ಸುದ್ದಿಯನ್ನು ಓದಿ: Viral Video: ವಿಮಾನದ ಎಂಜಿನ್ ಗೆ ಹಾರಿ ಆತ್ಮಹತ್ಯೆ.. ಇಲ್ಲಿದೆ ಭಯಾನಕ ವಿಡಿಯೊ

2016ರಲ್ಲಿ ₹500 ಮತ್ತು ₹1,000 ನೋಟುಗಳು ಬ್ಯಾನ್‌ ಆದವು. 2015-16ರಲ್ಲಿ 1.43 ಲಕ್ಷ ₹1,000 ನಕಲಿ ನೋಟುಗಳು ಪತ್ತೆಯಾಗಿದ್ದವು. 2016-17ರಲ್ಲಿ 2.56 ಲಕ್ಷ, ಮತ್ತು 2017-18ರಲ್ಲಿ 1.03 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದವು. 2018-19ರಿಂದ 2024-25ಕ್ಕೆ ₹500 ಮತ್ತು ₹2,000 ನಕಲಿ ನೋಟುಗಳ ಪತ್ತೆ 43,712 ರೂ. ನಿಂದ 1.21 ಲಕ್ಷಕ್ಕೆ ಏರಿದೆ, ಆದರೆ ಇತರನಕಲಿ ನೋಟುಗಳ ಪ್ರಮಾಣ 65% ಕಡಿಮೆಯಾಗಿದೆ.

2023ರ ಮೇ 19ರಂದು RBI ₹2,000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆದರೂ, ಅವು ಕಾನೂನುಬದ್ಧವಾಗಿವೆ. ಜೂನ್ 30, 2025ರ ವೇಳೆಗೆ ₹2,000 ನೋಟುಗಳ ಮೌಲ್ಯ ₹6,099 ಕೋಟಿಗೆ ಇಳಿದಿದೆ, 98.29% ನೋಟುಗಳು ಮರಳಿವೆ.