ಬಾರ್ನ್ ಎಲೆಕ್ಟ್ರಿಕ್ ಸ್ಕೂಟರ್: ಟೂ-ವೀಲರ್ ಉದ್ಯಮ ವಿಸ್ತರಿಸುವುದಾಗಿ ಘೋಷಿಸಿದ ಕೈನೆಟಿಕ್ ಗ್ರೀನ್
ಇ-ಲೂನಾದ ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ಕೈನೆಟಿಕ್ ಗ್ರೀನ್ ಮುಂದಿನ 18 ತಿಂಗಳು ಗಳಲ್ಲಿ ಮೂರು ಬಾರ್ನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ, ಈ ಹಬ್ಬದ ಋತುವಿನಲ್ಲಿ ಸೊಗಸಾದ ಫ್ಯಾಮಿಲಿ ಸ್ಕೂಟರ್ ಅನ್ನು ಅನಾವರಣ ಮಾಡಲಿದೆ


ಬೆಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ರಾದ ಕೈನೆಟಿಕ್ ಗ್ರೀನ್ ಇಂದು ತನ್ನ ಎಲೆಕ್ಟ್ರಿಕ್ ದ್ವಿಚಕ್ರ ಉದ್ಯಮವನ್ನು ದೊಡ್ಡ ಮಟ್ಟ ದಲ್ಲಿ ವಿಸ್ತರಿಸುವುದಾಗಿ ಘೋಷಿಸಿದೆ. ಒಂದು ವರ್ಷದ ಹಿಂದೆ ಬಿಡುಗಡೆಯಾದ ತನ್ನ ಇ-ಲೂನಾದ ಭರ್ಜರಿ ಯಶಸ್ಸಿನಿಂದ ಸ್ಫೂರ್ತಿ ಹೊಂದಿರುವ ಕಂಪನಿಯು ಮುಂದಿನ 18 ತಿಂಗಳುಗಳಲ್ಲಿ ಜಾಗತಿಕ ವಿನ್ಯಾಸದ ಸ್ಟೈಲ್ ಅನ್ನು ಭಾರತೀಯ ಎಂಜಿನಿಯರಿಂಗ್ ಜೊತೆಗೆ ಮಿಳಿತಗೊಳಿಸಿ ತಯಾರಿಸಿರುವ ಮೂರು ಉನ್ನತ ಕಾರ್ಯಕ್ಷಮತೆಯ ಬಾರ್ನ್- ಇಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.
ಈ ಸರಣಿಯ ಆರಂಭದಲ್ಲಿ ಪ್ರೀಮಿಯಂ, ಸೊಗಸಾದ ಮತ್ತು ತಂತ್ರಜ್ಞಾನ ಪ್ರಧಾನ ಫ್ಯಾಮಿ ಸ್ಕೂಟರ್ ಬಿಡುಗಡೆಯಾಗಲಿದ್ದು, ಇದು 2025 ರ ಹಬ್ಬದ ಋತುವಿಗಿಂತ ಮೊದಲೇ ಬಿಡುಗಡೆಯಾಗಲಿದೆ. ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ಈ ಇ-ಟೂವೀಲರ್ ಅನ್ನು ರೆಟ್ರೋ-ಸೌಂದರ್ಯ ಮತ್ತು ಅನುಕೂಲತೆ ಒದಗಿಸುವಂತೆ ವಿನ್ಯಾಸಗೊಳಿಸ ಲಾಗಿದೆ. ಇದು ಅತ್ಯುತ್ತಮ ಟಿ ಎಫ್ ಟಿ ಡಿಸ್‌ಪ್ಲೇ, ಅತ್ಯಾಧುನಿಕ ಐಓಟಿ ಸಾಮರ್ಥ್ಯಗಳು ಮತ್ತು ಜಿಯೋ ಥಿಂಗ್ಸ್ ನೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ಸ್ಮಾರ್ಟ್ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಸುಗಮವಾಗಿ ರೈಡ್ ಮಾಡಲು ಅನುವು ಮಾಡಿಕೊಡುತ್ತದೆ. ಬಹು ಬ್ಯಾಟರಿ ವೇರಿಯೆಂಟ್ ಗಳಲ್ಲಿ ಲಭ್ಯವಿರುವ ಮತ್ತು ಫಾಸ್ಟ್-ಚಾರ್ಜಿಂಗ್ ತಂತ್ರಜ್ಞಾನದಿಂದ ಬೆಂಬಲಿತವಾದ ಈ ಇ-ಸ್ಕೂಟರ್ ಅನ್ನು ಗ್ರಾಹಕರ ವಿವಿಧ ಆದ್ಯತೆಗಳು ಮತ್ತು ಬಜೆಟ್ ವಿಭಾಗಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: Commercial Tax: ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್ ಬಂದಿದ್ದೇಕೆ?; ಸ್ಪಷ್ಟನೆ ನೀಡಿದ ವಾಣಿಜ್ಯ ತೆರಿಗೆ ಇಲಾಖೆ
ತನ್ನ ವಿನ್ಯಾಸದ ಗುಣಮಟ್ಟವನ್ನು ಒಂದು ಹೆಜ್ಜೆ ಮೇಲಕ್ಕೆ ತೆಗೆದುಕೊಂಡು ಹೋಗಲು ಉದ್ದೇಶಿಸಿರುವ ಕೈನೆಟಿಕ್ ಗ್ರೀನ್ ಸಂಸ್ಥೆಯು ಒಂದು ಪ್ರಸಿದ್ಧ ಜಾಗತಿಕ ವಿನ್ಯಾಸ ಸಂಸ್ಥೆ ಯಾದ ಇಟಲಿಯ ಟೊರಿನೊ ಡಿಸೈನ್ ನೊಂದಿಗೆ ಅಲ್ಟ್ರಾ-ಫ್ಯೂಚರಿಸ್ಟಿಕ್ ಸ್ಕೂಟರ್ ಗಳ ಶ್ರೇಣಿಯನ್ನು ಜಂಟಿಯಾಗಿ ಅಭಿವೃದ್ಧಿ ಪಡಿಸಲು ಒಡಂಬಡಿಕೆ ಮಾಡಿಕೊಂಡಿದೆ. ಈ ಮುಂದಿನ ಪೀಳಿಗೆಯ ಮಾದರಿಗಳು ಬಾರ್ನ್ ಇಲೆಕ್ಟ್ರಿಕ್ ವಿನ್ಯಾಸ ತತ್ವಶಾಸ್ತ್ರವನ್ನು ಆಧರಿಸಿದ ರಾಡಿಕಲ್ ಸ್ಟೈಲಿಂಗ್ ಜೊತೆಗೆ, ಆಕರ್ಷಕ ವಿನ್ಯಾಸ ಹೊಂದಿದೆ. ಸೊಗಸಾಗಿ ಕಾಣಿಸಲು ಮತ್ತು ಟ್ರೆಂಡ್-ಸೆಟ್ಟಿಂಗ್ ಮತ್ತು ಯೌವನದ ಹುಮ್ಮಸ್ಸನ್ನು ಹೊಂದಿರುವಂತೆ ವಿನ್ಯಾಸದ ಭಾಷೆಯನ್ನು ರೂಪಿಸಲು ಉದ್ದೇಶಿಸಲಾಗಿದೆ.
ಜೊತೆಗೆ ಕಂಪನಿಯಿಂದಲೇ ರೂಪಿಸಲಾದ “ಚಿಂತನಶೀಲ ಎಂಜಿನಿಯರಿಂಗ್” ಎಂಬ ವಿಶಿಷ್ಟ ಸಿದ್ಧಾಂತವನ್ನು ಆಧರಿಸಿ ವೆಹಿಕಲ್ ಎಂಜಿನಿಯರಿಂಗ್ ಮತ್ತು ಡೀಟೇಲಿಂಗ್ ಮಾಡಲಾಗುತ್ತಿದೆ. ಈ ಸಿದ್ಧಾಂತವು ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಐಓಟಿ- ಆಧಾರಿತ ಕನೆಕ್ಟಿವಿಟಿ ಮತ್ತು ಅನುಕೂಲತೆ ಹಾಗೂ ಸುರಕ್ಷತೆಯನ್ನು ಒದಗಿಸುವ ವಿವಿಧ ಫೀಚರ್ ಗಳನ್ನು ಒದಗಿಸುತ್ತದೆ. ಇದರಿಂದ ಎಲೆಕ್ಟ್ರಿಕ್ ಸಾರಿಗೆ ವಿಭಾಗದಲ್ಲಿ ಹೊಸ ಮಾನದಂಡ ವನ್ನು ಹಾಕಿಕೊಡಲಿದೆ.

ಕೈನೆಟಿಕ್ ಗ್ರೂಪ್ ನ ಪರಂಪರೆಯ ಆಧಾರದಲ್ಲಿ ಈ ಹೊಸ ದೃಷ್ಟಿಯನ್ನು ರೂಪಿಸ ಲಾಗಿದ್ದು, ಸಂಸ್ಥೆಯು ದಶಕಗಳಿಂದ ಭಾರತದಲ್ಲಿ ಸ್ಕೂಟರ್ ಗಳ ವಿಕಾಸವನ್ನು ರೂಪಿಸು ತ್ತಾ ಬಂದಿದೆ. ಕೈನೆಟಿಕ್ ಗ್ರೀನ್ ತನ್ನ ಶ್ರೀಮಂತ ಪರಂಪರೆ ಮತ್ತು ಗ್ರಾಹಕರ ಒಳನೋಟ ಗಳನ್ನು ಆಧರಿಸಿಕೊಂಡು ಆಕರ್ಷಕ ವಿನ್ಯಾಸವೇ ಕೇಂದ್ರದಲ್ಲಿರುವ ಉತ್ಪನ್ನ ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮಾತ್ರವಲ್ಲದೇ ಎಲೆಕ್ಟ್ರಿಕ್ ಸಾರಿಗೆ ಯುಗದಲ್ಲಿ ಉಪಯು ಕ್ತತೆ ಮತ್ತು ಕಾರ್ಯಕ್ಷಮತೆಯನ್ನು ಮರು ವ್ಯಾಖ್ಯಾನಿಸುತ್ತಿದೆ. ಟೊರಿನೊ ಡಿಸೈನ್ ಜೊತೆಗಿನ ಸಹಭಾಗಿತ್ವದಲ್ಲಿ ವಿನ್ಯಾಸಗೊಳಿಸಲಾದ ಇ- ಸ್ಕೂಟರ್‌ಗಳು ಮುಂದಿನ ವರ್ಷ ಮಾರುಕಟ್ಟೆಗೆ ಬರಲಿವೆ.
ಈ ಸಂದರ್ಭದಲ್ಲಿ ಮಾತನಾಡಿರುವ ಕೈನೆಟಿಕ್ ಗ್ರೀನ್‌ನ ಸಂಸ್ಥಾಪಕ ಮತ್ತು ಸಿಇಓ ಡಾ. ಸುಲಜ್ಜಾ ಫಿರೋಡಿಯಾ ಮೋಟ್ವಾನಿ ಅವರು, “ಕೈನೆಟಿಕ್ ಗ್ರೀನ್ ನಿಂದ ಹೊರಬರಲಿರುವ ಬಾರ್ನ್- ಇಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯ ಬಗ್ಗೆ ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ. ಒಂದು ದಶಕಕ್ಕೂ ಹೆಚ್ಚಿನ ಇವಿ ಅನುಭವದ ಜೊತೆಗೆ, ಎಲೆಕ್ಟ್ರಿಕ್ ಸಾರಿಗೆ ವಿನ್ಯಾಸ ಮತ್ತು ಎಂಜಿನಿಯರಿಂಗ್ ನಲ್ಲಿ ನಾವು ಬಹಳ ಪರಿಣತಿಯನ್ನು ಗಳಿಸಿದ್ದೇವೆ.
ಜೊತೆಗೆ ಫಾಸ್ಟ್ ಚಾರ್ಜಿಂಗ್, ಬ್ಯಾಟರಿ ಸ್ವಾಪಿಂಗ್ ಮತ್ತು ಸ್ವಂತ ಸ್ವಾಮ್ಯದ ಸಾಫ್ಟ್ ವೇರ್-ಚಾಲಿತ ಪ್ಲಾಟ್ ಫಾರ್ಮ್ ಗಾಗಿ ಉತ್ತಮವಾದ ಇವಿ ಆರ್&ಡಿ ಹೊಂದಲಾಗಿದೆ ಮತ್ತು ಸಹಯೋಗ ಮಾಡಿಕೊಳ್ಳಲಾಗಿದೆ. ಇ-ಲೂನಾ ಮತ್ತು ಇ-ಸ್ಕೂಟರ್ ಗಳ ಇತ್ತೀಚಿನ ಯಶಸ್ಸಿನಿಂದ ನಾವು ಬಹಳವಾಗಿ ಪ್ರೇರಣೆ ಪಡೆದಿದ್ದೇವೆ. ಆರಂಭಿಕ ಹಂತದಲ್ಲಿ 80,000 ಇ-ಟೂವೀಲರ್‌ಗಳನ್ನು ಮಾರಾಟ ಮಾಡಿದ್ದೇವೆ. ಬಲವಾದ ಉತ್ಪಾದನಾ ಮೂಲ ಸೌಕರ್ಯವನ್ನು ರಚಿಸಿದ್ದೇವೆ ಮತ್ತು ದೇಶದಾದ್ಯಂತ ಇ-ಟೂ-ವ್ಹೀಲರ್‌ಗಾಗಿ 400 ವಿಶೇಷ ಡೀಲರ್‌ಗಳ ಜಾಲವನ್ನು ರಚಿಸಿದ್ದೇವೆ. ಈಗ ನಾವು ನಮ್ಮ ಇ-ಟೂವೀಲರ್ ವ್ಯವಹಾರ ವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಸಿದ್ಧರಾಗಿದ್ದೇವೆ. ಈಗ ವಿನ್ಯಾಸ ಮತ್ತು ಎಂಜಿನಿಯ ರಿಂಗ್‌ನಲ್ಲಿ ಜಾಗತಿಕ ನಾಯಕರಾಗಿರುವ ಇಟಲಿಯ ಟೊರಿನೊ ಡಿಸೈನ್‌ನೊಂದಿಗಿನ ನಮ್ಮ ವಿನ್ಯಾಸ ಸಹಭಾಗಿತ್ವದ ಮೂಲಕ ನಾವು, ಮುಂಬರುವ ತಿಂಗಳುಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮರು ವ್ಯಾಖ್ಯಾನಿಸುವ ಗುರಿಯನ್ನು ಹೊಂದಿದ್ದೇವೆ. ‘ಚಿಂತನಶೀಲ ಎಂಜಿನಿಯರಿಂಗ್’ ತತ್ವದ ಆಧಾರದ ಮೇಲೆ, ನಮ್ಮ ಮುಂಬರುವ ಸ್ಕೂಟರ್ ಗಳು ತಾಜಾ ಮತ್ತು ಭವಿಷ್ಯದ ಸ್ಟೈಲಿಂಗ್ ಭಾಷೆಯನ್ನು ಹೊಂದಿರುತ್ತವೆ. ಈ ಮೂಲಕ ನಾವು ನಮ್ಮ ಗ್ರಾಹಕರಿಗೆ ಆನಂದದಾಯಕ ಮಾಲೀಕತ್ವದ ಅನುಭವವನ್ನು ನೀಡುವ ಉದ್ದೇಶವನ್ನು ಹೊಂದಿದ್ದೇವೆ” ಎಂದು ಹೇಳಿದರು.
ಕೈನೆಟಿಕ್ ಗ್ರೀನ್ ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ಇದು 2016 ರಲ್ಲಿ “ಮೇಕ್ ಇನ್ ಇಂಡಿಯಾ” ಎಲೆಕ್ಟ್ರಿಕ್ ಥ್ರೀ-ವೀಲರ್‌ಗಳ ಶ್ರೇಣಿಯನ್ನು ಬಿಡುಗಡೆ ಮಾಡುವ ಮೂಲಕ ತನ್ನ ಇವಿ ಪಯಣವನ್ನು ಪ್ರಾರಂಭಿಸಿತು. 2022 ರಲ್ಲಿ ಕೈನೆಟಿಕ್ ಗ್ರೀನ್ ಟೂ-ವ್ಹೀಲರ್ ವಿಭಾಗಕ್ಕೆ ಪ್ರವೇಶಿಸಿತು ಮತ್ತು 2024 ರಲ್ಲಿ ತನ್ನ ಜನಪ್ರಸಿದ್ಧ ಇ-ಲೂನಾವನ್ನು ಬಿಡುಗಡೆ ಮಾಡಿತು. ಇ-ಲೂನಾ ಬಿ2ಸಿ ಮತ್ತು ಬಿ2ಬಿ ವಿಭಾಗಗಳಲ್ಲಿ ಗಮನಾರ್ಹ ಯಶಸ್ಸನ್ನು ಕಂಡಿದೆ. ನಗರ ಮತ್ತು ಗ್ರಾಮೀಣ ಭಾರತದಾದ್ಯಂತ ವೈಯಕ್ತಿಕ ಮತ್ತು ವಾಣಿಜ್ಯ ಬಳಕೆಗೆ ಸೂಕ್ತವಾದ ಏಕೈಕ ಇವಿ ಆಗಿ ಎದ್ದುಕಾಣುತ್ತದೆ. ಈ ಪ್ರತಿಕ್ರಿಯೆ ಯಿಂದ ಉತ್ತೇಜಿತವಾಗಿರುವ ಕೈನೆಟಿಕ್ ಗ್ರೀನ್ ಈಗ ತನ್ನ ಶ್ರೀಮಂತ ಪರಂಪರೆಯನ್ನು ಭವಿಷ್ಯಕ್ಕೆ ಸಲ್ಲುವ ಹೊಸತನ, ವಿನ್ಯಾಸ ಮತ್ತು ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ತನ್ನ ಎಲೆಕ್ಟ್ರಿಕ್ ಟೂ-ವ್ಹೀಲರ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಿದೆ.
ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಮಯದ ಸರಿಯಾದ ಕಾಲಕ್ಕೆ ಕೈನೆಟಿಕ್ ಗ್ರೀನ್ ತನ್ನ ಇ-ಟೂ-ವೀಲರ್ ವ್ಯವಹಾರದ ವಿಸ್ತರಣೆಯ ಕ್ರಮಕ್ಕೆ ಮುಂದಾಗಿದೆ. 2024-25 ರಲ್ಲಿ ಭಾರತದಲ್ಲಿ 1.15 ಮಿಲಿಯನ್ ಇ-ಟೂ-ವ್ಹೀಲರ್‌ಗಳು ಮಾರಾಟವಾಗಿವೆ, ಇವುಗಳಲ್ಲಿ 1.03 ಮಿಲಿಯನ್ (ಶೇ.90) ಇ-ಸ್ಕೂಟರ್‌ಗಳಾಗಿವೆ. ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಇ-ಸ್ಕೂಟರ್ ಮಾರುಕಟ್ಟೆಯು ತೀವ್ರವಾಗಿ ಬೆಳೆಯುವ ನಿರೀಕ್ಷೆಯಿದ್ದು, ಇ-ಸ್ಕೂಟರ್‌ಗಳ ಬಿಡುಗಡೆಯು ಶೇ.15 ರಿಂದ ಶೇ.70 ಕ್ಕೆ* ಬೆಳೆಯುವ ನಿರೀಕ್ಷೆಯಿದೆ. 2030ರ ವೇಳೆಗೆ, ಭಾರತದ ಇ-ಸ್ಕೂಟರ್ ಮಾರುಕಟ್ಟೆಯ ಗಾತ್ರವು 40,000 ಕೋಟಿ ರೂಪಾಯಿಗಳಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೈನೆಟಿಕ್ ಗ್ರೀನ್ ತನ್ನ ಇವಿ ಆರ್&ಡಿ ಮತ್ತು ಎಂಜಿನಿಯರಿಂಗ್ ಪರಿಣತಿಯೊಂದಿಗೆ ಭಾರತೀಯ ಇವಿ ಗ್ರಾಹಕರ ಕುರಿತು ಒಳನೋಟಗಳು, ದೃಢ ಉತ್ಪಾದನಾ ವ್ಯವಸ್ಥೆ ಮತ್ತು ಅತ್ಯುತ್ತಮ ಪೂರೈಕೆ ಸರಪಳಿ ವ್ಯವಸ್ಥೆ ಹೊಂದುವ ಮೂಲಕ ಮತ್ತು ರಾಷ್ಟ್ರವ್ಯಾಪಿ ಡೀಲರ್‌ಶಿಪ್ ಜಾಲ ಹೊಂದಿರುವ ಕೈನೆಟಿಕ್ ಗ್ರೀನ್ ಸಂಸ್ಥೆಯು ಅಭಿವೃದ್ಧಿ ಹೊಂದುವ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಿದ್ಧವಾಗಿದೆ. ವಿಶಿಷ್ಟ ಇ-ಲೂನಾ ಮತ್ತು ಇ-ಸ್ಕೂಟರ್‌ಗಳ ಶ್ರೇಣಿಯು ಕಂಪನಿಯನ್ನು ಗೆಲುವಿನಲ್ಲಿ ಮುಂಚೂಣಿಯ ಸ್ಥಾನದಲ್ಲಿ ಇಡಲಿವೆ.