Ramachari Kannada serial: ಸೀರಿಯಲ್ ಪ್ರಿಯರಿಗೆ ಶಾಕ್ ಮೇಲೆ ಶಾಕ್: ರಾಮಾಚಾರಿ ಧಾರಾವಾಹಿ ಮುಕ್ತಾಯ?
Ramachari: ಖ್ಯಾತ ನಿರ್ದೇಶಕ ನಿರ್ಮಾಪಕ ಕೆ.ಎಸ್. ರಾಮ್ಜಿ ಅವರ ಗರಡಿಯಿಂದ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ ಸದ್ಯದಲ್ಲೇ ಕೊನೆಯಾಗಲಿದೆಯಂತೆ. ನಾಯಕ ರಿತ್ವಿಕ್ ಕೃಪಾಕರ್ ಹಾಗೂ ನಾಯಕಿ ಮೌನ ಗುಡ್ಡೆಮನೆಗೆ ಈ ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿತ್ತು.

Ramachari Kannada Serial

ಕಿರುತೆರೆ (Kannada Serial) ಅಭಿಮಾನಿಗಳಿಗೆ ಕಳೆದ ಕೆಲವು ತಿಂಗಳುಗಳಿಂದ ಒಂದಲ್ಲ ಒಂದು ಆಘಾತ ಆಗುತ್ತಲೇ ಇದೆ. ಒಂದರ ಹಿಂದೆ ಒಂದರಂತೆ ಧಾರಾವಾಹಿಗಳು ದಿಢೀರ್ ಮುಕ್ತಾಯವಾಗುತ್ತಿದೆ. ಈ ಪೈಕಿ ಕಲರ್ಸ್ ಕನ್ನಡದ ವಾಹಿನಿಯಲ್ಲಿ ದೊಡ್ಡ ಬದಲಾವಣೆ ಆಗುತ್ತಿದ್ದು, ಟಿಆರ್ಪಿ ಇಲ್ಲದ ಧಾರಾವಾಹಿಗೆ ಗೇಟ್ಪಾಸ್ ನೀಡಲಾಗುತ್ತಿದೆ. ಈ ವರ್ಷ ಮೊದಲಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತ್ಯಕಂಡಿತು. ಬಳಿಕ ಇತ್ತೀಚೆಗಷ್ಟೆ ವಧು ಧಾರಾವಾಹಿಯನ್ನು ಕೂಡ ಅರ್ಧಕ್ಕೆ ಕೊನೆಗೊಳಿಸಲಾಯಿತು. ಇದು ಸರಿಯಾಗಿ 100 ಸಂಚಿಕೆಗಳನ್ನೂ ಮುಟ್ಟಿರಲಿಲ್ಲ.
ಈ ಆಘಾತದಿಂದ ಹೊರಬರುವ ಮುನ್ನವೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮತ್ತಂದು ಧಾರಾವಾಹಿ ನೂರು ಜನ್ಮಕೂ ಸೀರಿಯಲ್ ಮುಕ್ತಾಯಕಂಡಿತು. ಹಾರರ್ - ಥ್ರಿಲ್ಲರ್ ಕಥಾಹಂದರ ಹೊಂದಿದ್ದ ನೂರು ಜನ್ಮಕೂ ಎಂಡ್ ಆಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಇದೀಗ ಕಲರ್ಸ್ ಮತ್ತೊಂದು ಧಾರಾವಾಹಿಯನ್ನು ಹೊರಗಟ್ಟಲು ತಯಾರು ಮಾಡಿದೆ. ಈ ಸಾಲಿನಲ್ಲಿ ಈ ಬಾರಿ ಇರುವುದು ರಾಮಾಚಾರಿ.
ಖ್ಯಾತ ನಿರ್ದೇಶಕ ನಿರ್ಮಾಪಕ ಕೆ.ಎಸ್. ರಾಮ್ಜಿ ಅವರ ಗರಡಿಯಿಂದ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ ಸದ್ಯದಲ್ಲೇ ಕೊನೆಯಾಗಲಿದೆಯಂತೆ. ನಾಯಕ ರಿತ್ವಿಕ್ ಕೃಪಾಕರ್ ಹಾಗೂ ನಾಯಕಿ ಮೌನ ಗುಡ್ಡೆಮನೆಗೆ ಈ ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿತ್ತು. ರಿತ್ವಿಕ್ ಧಾರಾವಾಹಿಗಾಗಿ ಜಿಮ್ನಲ್ಲಿ ಕಸರತ್ತು ಮಾಡಿ ಬರೋಬ್ಬರಿ 30 ಕೆಜಿ ತೂಕ ಇಳಿಸಿದ್ದರು. ಈ ಧಾರಾವಾಹಿಗೆ ಅದ್ಭುತವಾದ ರೆಸ್ಪಾನ್ಸ್ ಕೂಡ ಸಿಕ್ಕಿತು.
BBK 19: ಬಿಗ್ ಬಾಸ್ ಕಡೆಯಿಂದ ಬಿಗ್ ನ್ಯೂಸ್: ಈ ಬಾರಿ ಒಬ್ಬರಲ್ಲ ಇಬ್ಬರಲ್ಲ ಮೂವರು ನಿರೂಪಕರು
ಸಾಕಷ್ಟು ಕಲಾವಿದರಿಗೆ ರಾಮಾಚಾರಿ ಬ್ರೇಕ್ ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ಸ್ಟೋರಿ ಕೊಂಚ ಡಲ್ ಹೊಡಿತಿದೆ. ರೇಟಿಂಗ್ ಕೂಡ ಡೌನ್ ಆಗಿದ್ದು, ಟಾಪ್ ಸ್ಥಾನದಲ್ಲಿ ಧಾರಾವಾಹಿ ಟಿಆರ್ಪಿನಲ್ಲಿ ಕೊನೆ ಸ್ಥಾನ ತಲುಪಿದೆ. ಹೀಗಾಗಿ ರಾಮಾಚಾರಿಯನ್ನ ಮುಕ್ತಾಯ ಮಾಡೋ ಪ್ಲ್ಯಾನ್ನಲ್ಲಿದೆ ತಂಡ ಎನ್ನಲಾಗಿದೆ. ಅಲ್ಲದೆ ಈಗಾಗಲೇ ಹೊಸ ಧಾರಾವಾಹಿ ಶ್ರೀಗಂಧದ ಗುಡಿ ಟೈಟಲ್ ಅನೌನ್ಸ್ ಆಗಿದ್ದು, ರಾಮಾಚಾರಿ ಜಾಗಕ್ಕೆ ಈ ಧಾರಾವಾಹಿ ಬರಲಿದೆ ಎಂಬ ಮಾತು ಕೇಳಿಬರುತ್ತಿದೆ.