Bhagya Lakshmi Serial: ಭಾಗ್ಯಾಳ ಒಳ್ಳೆತನ ಕಂಡು ಕೊನೆಗೂ ಬದಲಾದ ಆದೀಶ್ವರ್ ಕಾಮತ್
ಭಾಗ್ಯ ಆಡಿದ ಒಂದೊಂದು ಮಾತು ಆದೀಗೆ ಆಘಾತ ತರಿಸಿದೆ. ನಾನು ಭಾಗ್ಯಾಳ ಬಗ್ಗೆ ಅಂದುಕೊಂಡಿದ್ದೇನು.. ಇಲ್ಲಿ ನಡೀತ ಇರೋದು ಏನು.. ಭಾಗ್ಯ ಇಷ್ಟೊಂದು ಒಳ್ಳೆಯವಳಾ? ನಾನೇ ಇವರ ಬಗ್ಗೆ ತಪ್ಪು ತಿಳಿದುಕೊಂಡಿದ್ದೇನಾ? ಅಂತ ಆದೀ ಮನಸ್ಸಲ್ಲಿ ಅಂದುಕೊಂಡಿದ್ದಾನೆ. ಸದ್ಯ ಆದೀಗೆ ಸತ್ಯದ ಅರಿವು ಆದಂತಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಸದ್ಯ ಭಾಗ್ಯಾ ತಂಗಿ ಪೂಜಾ ಕಲ್ಯಾಣೋತ್ಸವ ನಡೆಯುತ್ತಿದೆ. ತಂಗಿ ಪೂಜಾ ಮದುವೆಗಾಗಿ ಭಾಗ್ಯಾ ಸಿಕ್ಕಾಪಟ್ಟೆ ಕಷ್ಟಪಡ್ತಿದ್ದಾಳೆ. ಮತ್ತೊಂದೆಡೆ ಈ ಮದುವೆ ನಿಲ್ಲಿಸಲು ಮೀನಾಕ್ಷಿ ಹಾಗೂ ಕನ್ನಿಕಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಈ ಸಾಲಿಗೆ ಭಾಗ್ಯ ಪತಿ ತಾಂಡವ್ ಕೂಡ ಸೇರಿದ್ದಾನೆ. ಆದರೆ, ಆದೀಶ್ವರ್ ಕಾಮತ್ ಬದಲಾದಂತೆ ಕಾಣುತ್ತಿದ್ದಾನೆ. ಈ ಹಿಂದೆ ಭಾಗ್ಯ ಮನೆಯವರು ಕೆಟ್ಟವರು.. ಈ ಮದುವೆಯನ್ನು ಅವರು ಆಸ್ತಿಗೋಸ್ಕರ ಮಾಡುತ್ತಿದ್ದಾರೆ ಎಂದು ಹೇಳುತ್ತದ್ದ ಆದೀಶ್ವರ್ಗೆ ಈಗ ಜ್ಞಾನೋದಯ ಆದಂತಿದೆ.
ಎಂಗೇಜ್‌ಮೆಂಟ್‌ನಲ್ಲೇ ಈ ಮದುವೆ ನಿಲ್ಲಿಸಬೇಕು ಎಂದು ಆದೀಶ್ವರ್- ಕನ್ನಿಕಾ-ಮೀನಾಕ್ಷಿ ಅಂದುಕೊಂಡಿದ್ದರು. ಅದು ಸಾಧ್ಯವಾಗದ ಕಾರಣ ಹೇಗಾದರೂ ಮಾಡಿ ಈ ಮದುವೆ ನಿಲ್ಲಿಸಬೇಕು. ಇಲ್ಲಾಂದ್ರೆ ಪೂಜಾ ಸೊಸೆಯಾಗಿ ಬಂದುಬಿಡ್ತಾಳೆ ಎಂದು ಮಾತನಾಡಿಕೊಂಡಿದ್ದಾರೆ. ಏನಾದರೂ ಪ್ಲಾನ್ ಮಾಡು ಆದಿ ಅಂತ ಮೀನಾಕ್ಷಿ ಕೇಳಿದಾಗ ಆದೀಶ್ವರ್, ಭಾಗ್ಯಳನ್ನ ಜಡ್ಜ್ ಮಾಡೋಕೆ ಆಗ್ತಿಲ್ಲ. ದುಡ್ಡಿಗೆ ಭಾಗ್ಯ ಆಸೆ ಪಡುವ ಹಾಗಿದ್ದರೆ, ಆಸ್ತಿಯಲ್ಲಿ ಪಾಲು ಸಿಗೋದಿಲ್ಲ ಅಂದಾಗಲೇ ಮದುವೆ ಕ್ಯಾನ್ಸಲ್ ಆಗಬೇಕಿತ್ತು. ಆದರೆ, ಹಾಗಾಲಿಲ್ಲ ಅಂತ ಆದೀಶ್ವರ್ ಹೇಳಿದ್ದಾನೆ.
ಆದೀಯ ಮಾತು ಕೇಳಿ ಕನ್ನಿಕಾ, ಇದೆಲ್ಲಾ ಅವಳ ಪ್ಲಾನ್. ಮದುವೆಯಾದ್ಮೇಲೆ ಹೇಗಾದರೂ ಮಾಡಿ ಆಸ್ತಿಯನ್ನ ನಮ್ಮಿಂದ ಕಿತ್ತುಕೊಳ್ತಾಳೆ. ನಮ್ಮ ಫ್ಯಾಮಿಲಿಯನ್ನ ಒಡೆಯುತ್ತಾಳೆ ಎಂದಿದ್ದಾಳೆ. ಆದರೆ, ಆದೀಶ್ವರ್, ನನಗೆ ಹಾಗನಿಸುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ, ಕನ್ನಿಕಾ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿ ಮತ್ತೆ ಆದೀಯ ತಲೆ ಹಾಳು ಮಾಡುತ್ತಾಳೆ. ಅವಳ ಸುಳ್ಳನ್ನು ನಂಬಿ ಯಾವುದೇ ಕಾರಣಕ್ಕೂ ಈ ಮದುವೆ ಆಗಲೇ ಕೂಡದು ಎಂದು ಅಂದುಕೊಳ್ಳುತ್ತಾನೆ.
ಆದರೆ, ಆದೀ ಏನೇ ಮಾಡಿದರು ಅದರಲ್ಲೆಲ್ಲ ಆತನಿಗೆ ಭಾಗ್ಯಾಳ ಒಳ್ಳೆತನವೇ ಕಾಣುತ್ತಿದೆ. ಅಷ್ಟೇ ಅಲ್ಲದೆ ಭಾಗ್ಯಾಳ ಅತ್ತೆ ಕುಸುಮಾ ಅವರು ಆದೀಶ್ವರ್ನನ್ನು ಕರೆದು, ಭಾಗ್ಯ ಬಗ್ಗೆ ನೀವು ಅಂದುಕೊಂಡಿರುವುದು ಸಂಪೂರ್ಣ ತಪ್ಪು.. ಆಕೆ ಬಂಗಾರದಂತಹ ವ್ಯಕ್ತಿತ್ವ ಹೊಂದಿರುವವಳು.. ನನ್ನ ಸೊಸೆ ನನಗೆ ಮಗನಿಗಿಂತ ಹೆಚ್ಚು.. ನನಗೆ ನನ್ನ ಮಗ ಮುಖ್ಯನಾ ಅಥವಾ ಸೊಸೆ ಮುಖ್ಯನ ಅಂತ ಆಯ್ಕೆ ಬಂದಾಗ ನಾನು ನನ್ನ ಸೊಸೆಯನ್ನ ಆಯ್ಕೆ ಮಾಡಿಕೊಂಡೆ.. ನನ್ನ ಸ್ವಂತ ಮಗ ಮನೆಯನ್ನ ಭಾಗ ಮಾಡಿದ.. ಅವಾಗ ನಮ್ಮ ಜೊತೆ ನಿಂತಿದ್ದು ನನ್ನ ಸೊಸೆ.. ಎಂತಾ ಸಂದರ್ಭ ಬಂದರೂ ಆಕೆ ನಮ್ಮನ್ನ ಬಿಟ್ಟು ಹೋಗೇ ಇಲ್ಲ.. ಏನೇ ಸಂದರ್ಭ ಬಂದರೂ ಆಕೆ ಕೈಚಾಚಲ್ಲ.. ನಾಲ್ಕು ದಿವನ ಆಕೆನಾ ನೋಡಿದ ಮಾತ್ರಕ್ಕೆ ಅವಳ ಬಗ್ಗೆ ಎಲ್ಲ ತಿಳಿದುಕೊಂಡಿದ್ದೇನೆ ಅಂತ ಅಂದುಕೊಳ್ಳಬೇಡಿ.. ಸುಮ್ ಸುಮ್ನೆ ಅವಳ ಮೇಲೆ ಅನುಮಾನ ಪಟ್ಟರೆ ನಿಮಗೆ ಒಳ್ಳೆಯದಾಗಲ್ಲ ಎಂದು ಹೇಳಿದ್ದಾರೆ.
ಕುಸುಮಾ ಹೇಳಿದ ಈ ಮಾತು ಆದೀಶ್ವರ್ನ ಕಣ್ಣು ತೆರೆಸಿದೆ. ಇದಕ್ಕೆ ಪುಷ್ಠಿ ಎಂಬಂತಹ ಮತ್ತೊಂದು ಘಟನೆ ಕೂಡ ಆದೀ ಕಣ್ಣೆದುರು ನಡೆದಿದೆ. ಮದುವೆ ಸಂಭ್ರಮದಲ್ಲಿ ಎಲ್ಲರೂ ನೃತ್ಯ ಮಾಡುತ್ತಿರುವಾಗ ಭಾಗ್ಯಾಗೆ ಒಂದು ಕರೆ ಬಂದಿದೆ. ಕಾಲ್ ಬಂತೆಂದು ಭಾಗ್ಯ ಫೋನ್ ಹಿಡಿದುಕೊಂಡು ದೂರ ಹೋಗಿ ಮಾತನಾಡಲು ಬಂದಿದ್ದಾಳೆ. ಇದನ್ನು ಆದೀಶ್ವರ್ ಗಮನಿಸುತ್ತಾನೆ. ಏನಿರಬಹುದು ಎಂದು ಆದೀ ಭಾಗ್ಯಾಳನ್ನು ಪಾಲೋ ಮಾಡುತ್ತಾನೆ.
ಭಾಗ್ಯಾಗೆ ಕಾಲ್ ಬಂದಿರುವುದು ಮನೆ ಬ್ರೋಕರ್ನದ್ದು. ಪೂಜಾ-ಕಿಶನ್ ಮದುವೆಯಾದ ಬಳಿಕ ಅವರಿಗೆ ಉಳಿದುಕೊಳ್ಳಲು ಭಾಗ್ಯ ಬಾಡಿಗೆ ಮನೆ ಹುಡುಕಿದ್ದಾಳೆ. ಹೀಗೆ ಮನೆ ಸೆಟ್ ಆಗಿದೆ ಎಂದು ಬ್ರೋಕರ್ ಕಾಲ್ ಮಾಡಿ ಹೇಳಿದ್ದಾನೆ. ಇದೇವೇಳೆ ಅಲ್ಲಿಗೆ ಕಿಶನ್ ಬಂದಿದ್ದಾನೆ. ಭಾಗ್ಯ ಮನೆ ನೋಡಿರುವ ವಿಷಯ ಕಿಶನ್ ಬಳಿ ಹೇಳುತ್ತಾಳೆ. ಇದೆಲ್ಲ ನೀವು ಯಾಕೆ ಮಾಡೋಕೆ ಹೊರಟ್ರಿ ಎಂದು ಕಿಶನ್ ಕೇಳುತ್ತಾನೆ. ಅದಕ್ಕೆ ಭಾಗ್ಯ, ನೀವು ಅವತ್ತು ಹೇಳಿದ್ರಿ ನಾನು ಮದುವೆಯಾದ ಬಳಿಕ ಭಾಗ್ಯ ಅವರ ಮನೆಯಲ್ಲೇ ಇರುತ್ತೇನೆ ಎಂದು.. ಆದ್ರೆ ನನ್ಗೆ ಅದು ಸರಿ ಕಾಣಿಸುತ್ತಿಲ್ಲ.. ದೊಡ್ಡ ವ್ಯಕ್ತಿ ರಾಮ್ದಾಸ್ ಕಾಮತ್ ಅವರ ಮಗ ಮನೆ ಅಳಿಯನಾಗಿ ಇದ್ದಾನೆ ಎಂದು ಹೊರಗಿನ ಜನ ಮಾತಾಡಿದ್ರೆ ಅದು ಬೇರೆ ತರನೇ ಆಗಿ ಬಿಡುತ್ತೆ.. ಈ ವಿಷಯ ಎಲ್ಲ ಹೊರಹೋದ್ರೆ ನಿಮ್ಮ ಮನೆತನಕ್ಕೆ ಮುಜುಗರ ತರಿಸುತ್ತೆ.. ಅದಕ್ಕಾಗಿ ಈ ವ್ಯವಸ್ಥೆ ಮಾಡಿದ್ದೇನೆ ಎಂದು ಭಾಗ್ಯ ಹೇಳುತ್ತಾಳೆ.
ಈ ಮಾತುಕತೆಯನ್ನೆಲ್ಲ ಆದೀ ದೂರದಲ್ಲಿ ನಿಂತು ಕೇಳಿಸುತ್ತ ಇರುತ್ತಾನೆ. ಭಾಗ್ಯ ಆಡಿದ ಒಂದೊಂದು ಮಾತು ಆದೀಗೆ ಆಘಾತ ತರಿಸಿದೆ. ನಾನು ಭಾಗ್ಯಾಳ ಬಗ್ಗೆ ಅಂದುಕೊಂಡಿದ್ದೇನು.. ಇಲ್ಲಿ ನಡೀತ ಇರೋದು ಏನು.. ಭಾಗ್ಯ ಇಷ್ಟೊಂದು ಒಳ್ಳೆಯವಳಾ? ನಾನೇ ಇವರ ಬಗ್ಗೆ ತಪ್ಪು ತಿಳಿದುಕೊಂಡಿದ್ದೇನಾ? ಅಂತ ಆದೀ ಮನಸ್ಸಲ್ಲಿ ಅಂದುಕೊಂಡಿದ್ದಾನೆ. ಸದ್ಯ ಆದೀಗೆ ಸತ್ಯದ ಅರಿವು ಆದಂತಿದೆ. ಈ ಮದುವೆಗೆ ಆದೀಶ್ವರ್ ಒಪ್ಪಿಗೆ ಬಹುತೇಕ ಸಿಕ್ಕಂತಾಗಿದೆ. ಆದರೆ, ಅತ್ತ ಮೀನಾಕ್ಷಿ-ಕನ್ನಿಕಾ ಹಾಗೂ ತಾಂಡವ್ ಈ ಮದುವೆ ನಿಲ್ಲಿಸಲು ಏನು ಮಾಡುತ್ತಾರೆ ಎಂಬುದು ನೋಡಬೇಕಿದೆ.
Ramachari Kannada serial: ಸೀರಿಯಲ್ ಪ್ರಿಯರಿಗೆ ಶಾಕ್ ಮೇಲೆ ಶಾಕ್: ರಾಮಾಚಾರಿ ಧಾರಾವಾಹಿ ಮುಕ್ತಾಯ?